Breaking

Saturday, 6 November 2021

Top-10 Geography Question Answers in Kannada for All Competitive Exams-01

Top-10 Geography Question Answers in Kannada for All Competitive Exams-01

Today Top-10 Geography Question Answers in Kannada for All Competitive Exams-01



ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಭೂಗೋಳಶಾಸ್ತ್ರದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಕರ್ನಾಟಕದಲ್ಲಿ ಕೆಳಗಿನ ಸ್ಥಳಗಳಲ್ಲಿ ಯಾವುದನ್ನು ವರ್ಲ್ಡ್ ಹರಿಟೇಜ್ ನಿವೇಶನವೆಂದು ಘೋಷಿಸಲಾಗಿದೆ ?
ಎ) ಶ್ರೀರಂಗಪಟ್ಟಣ
ಬಿ) ಹಳೇಬೀಡು
ಸಿ) ಬಿಜಾಪುರ
ಡಿ) ಹಂಪೆ 

ಸರಿಯಾದ ಉತ್ತರ:ಡಿ) ಹಂಪೆ  



2. ಭಾರತದ ಒಕ್ಕೂಟದಲ್ಲಿರುವ ರಾಜ್ಯಗಳ ಸಂಖ್ಯೆ
ಎ) ಇಪ್ಪತ್ತೆರಡು
ಬಿ) ಇಪ್ಪತ್ತೆಂಟು
ಸಿ) ಇಪ್ಪತ್ತೂರು
ಡಿ) ಇಪ್ಪತ್ತನಾಲ್ಕು


ಸರಿಯಾದ ಉತ್ತರ: ಬಿ) ಇಪ್ಪತ್ತೆಂಟು 



3. ಇವುಗಳಲ್ಲಿ ಸೌರವ್ಯೂಹದಲ್ಲಿ ಸೂರ್ಯನಿಗೆ ಹತ್ತಿರದಲ್ಲಿರುವ ಗ್ರಹಗಳ ಸರಿಯಾದ ಅನುಕ್ರಮಣಿ ಯಾವುದು ?
ಎ) ಬುಧ, ಶುಕ್ರ, ಪೃಥ್ವಿ, ಗುರು 
ಬಿ) ಬುಧ, ಶುಕ್ರ, ಪೃಥ್ವಿ, ಮಂಗಳ
ಸಿ) ಬುಧ, ಮಂಗಳ, ಶುಕ್ರ, ಪೃಥ್ವಿ 
ಡಿ) ಬುಧ, ಪೃಥ್ವಿ, ಶುಕ್ರ, ಗುರು

ಸರಿಯಾದ ಉತ್ತರ: ಬಿ) ಬುಧ, ಶುಕ್ರ, ಪೃಥ್ವಿ, ಮಂಗಳ 




4. ಭಾರತದಲ್ಲಿನ “ಅಪರೇಷನ್ ಫ್ಲಡ್” ಕಾರ್ಯಕ್ರಮ ಇದಕ್ಕೆ ಸಂಬಂಧಿಸಿದೆ.
ಎ) ಪ್ರವಾಹ ನಿಯಂತ್ರಣ 
ಬಿ) ತೈಲೋತ್ಪಾದನೆ
ಸಿ) ಕ್ಷೀರೋತ್ಪಾದನೆ
ಡಿ) ನೀರಾವರಿ

ಸರಿಯಾದ ಉತ್ತರ: ಸಿ) ಕ್ಷೀರೋತ್ಪಾದನೆ 




5. ಇವುಗಳಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ತಂಬಾಕು (ಹೊಗೆಸೊಪ್ಪು) ಬೆಳೆಯುವ ದೇಶ ಯಾವುದು ?
ಎ) ಯು.ಎಸ್.ಎ
ಬಿ) ಚೀನಾ
ಸಿ) ಭಾರತ
ಡಿ) ಬ್ರೆಜಿಲ್


ಸರಿಯಾದ ಉತ್ತರ: ಬಿ) ಚೀನಾ  



6. ಕೈಗಾ ಸ್ಥಾವರ ಒಂದು
ಎ) ಜಲವಿದ್ಯುತ್ ಸ್ಥಾವರ 
ಬಿ) ಶಾಖೋತ್ಪನ್ನ ವಿದ್ಯುತ್ ಸ್ಥಾವರ
ಸಿ) ಸೌರಶಕ್ತಿ ವಿದ್ಯುತ್ ಸ್ಥಾವರ 
ಡಿ) ಅಣು ವಿದ್ಯುತ್ ಸ್ಥಾವರ  


ಸರಿಯಾದ ಉತ್ತರ: ಡಿ) ಅಣು ವಿದ್ಯುತ್ ಸ್ಥಾವರ 



7. ಪುರುಷರಿಗಿಂತ ಮಹಿಳೆಯರನ್ನು ಅಧಿಕ ಸಂಖ್ಯೆಯಲ್ಲಿ ಹೊಂದಿರುವ ರಾಜ್ಯ
ಎ) ಪಶ್ಚಿಮ ಬಂಗಾಳ 
ಬಿ) ಆಂಧ್ರಪ್ರದೇಶ
ಸಿ) ಮಹಾರಾಷ್ಟ್ರ
ಡಿ) ಕೇರಳ 

ಸರಿಯಾದ ಉತ್ತರ: ಡಿ) ಕೇರಳ  



8. ಇವುಗಳನ್ನು ವಿಷ್ಣವ (ಈಕ್ಟಿನಾಕ್ಸ್) ದಿನಗಳೆಂದು ಕರೆಯಲಾಗಿದೆ.
ಎ) ಭಾರತದಲ್ಲಿ ಹಗಲು ಮತ್ತು ರಾತ್ರಿಗಳೆರಡೂ ಸಮ ಅವಧಿಯನ್ನು ಹೊಂದಿರುವ ದಿನಗಳು
ಬಿ) ಪ್ರಪಂಚದಾದ್ಯಂತ ಹಗಲು ಮತ್ತು ರಾತ್ರಿಗಳೆರಡೂ ಸಮ ಅವಧಿಯಲ್ಲಿ ಹೊಂದಿರುವ ದಿನಗಳು
ಸಿ) ಹಗಲು ರಾತ್ರಿಗಿಂತ ಧೀರ್ಘವಾದ ಅವಧಿಯನ್ನು ಹೊಂದಿರುವ ದಿನಗಳು
ಡಿ) ರಾತ್ರಿ ಹಗಲಿಗಿಂತ ಧೀರ್ಘವಾದ ಅವಧಿಯನ್ನು ಹೊಂದಿರುವ ದಿನಗಳು

ಸರಿಯಾದ ಉತ್ತರ: ಬಿ) ಪ್ರಪಂಚದಾದ್ಯಂತ ಹಗಲು ಮತ್ತು ರಾತ್ರಿಗಳೆರಡೂ ಸಮ ಅವಧಿಯಲ್ಲಿ ಹೊಂದಿರುವ ದಿನಗಳು  


9. ಕೆಳಗಿನ ನಗರಗಳಲ್ಲಿ ಯಾವುದನ್ನು 'ಭಾರತದ ಸಿಲಿಕಾನ್ ಕಣಿವೆ' ಎಂದು ಕರೆಯಲಾಗಿದೆ ?
ಎ) ಬೆಂಗಳೂರು
ಬಿ) ಚೆನ್ನೈ
ಸಿ) ಹೈದ್ರಾಬಾದ್
ಡಿ) ಮುಂಬೈ 


ಸರಿಯಾದ ಉತ್ತರ: ಎ) ಬೆಂಗಳೂರು 



10. ಕೆಳಗೆ ಎರಡು ಹೇಳಿಕೆಗಳನ್ನು ಕೊಟ್ಟಿದ್ದು, ಒಂದನ್ನು ಪ್ರತಿಪಾದನೆ (ಎ) ಎಂದೂ ಮತ್ತೊಂದನ್ನು ಕಾರಣ (ಆರ್) ಎಂದು ಹೆಸರಿಸಲಾಗಿದೆ.
ಪ್ರತಿಪಾದನೆ (ಎ): ಹಿಮಾಲಯದ ನದಿಗಳು ಸದಾಕಾಲ ತುಂಬಿ ಹರಿಯುತ್ತವೆ.
ಕಾರಣ (ಎ): ಆ ಪ್ರದೇಶ ನೈರುತ್ಯ ಮುಂಗಾರಿನಿಂದ ಮಳೆಯನ್ನು ಪಡೆಯುತ್ತದೆ.
ಮೇಲಿನ ಎರಡು ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ?
ಎ) ಎ ಮತ್ತು ಆರ್ ಗಳೆರಡೂ ಸರಿ ಮತ್ತು ಆರ್.ಎ. ಯ ಸರಿಯಾದ ವಿವರಣೆಯಾಗಿದೆ.
ಬಿ) ಎ ಮತ್ತು ಆರ್ ಗಳೆರಡೂ ಸರಿ ಮತ್ತು ಆರ್. ಎ ಯ ಸರಿಯಾದ ವಿವರಣೆಯಲ್ಲ
ಸಿ) ಎ ಸರಿ, ಆದರೆ ಆರ್ ತಪ್ಪು
ಡಿ) ಎ ತಪ್ಪು ಆದರೆ ಆರ್ ಸರಿ

ಸರಿಯಾದ ಉತ್ತರ : ಸಿ) ಎ ಸರಿ, ಆದರೆ ಆರ್ ತಪ್ಪು  


























No comments:

Post a Comment

Important Notes

Random Posts

Important Notes

Popular Posts

Best General Knowledge MCQs in Kannada for All Competitive Exams-01

Best General Knowledge MCQs in  Kannada for All Competitive Exams-01 1. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ Show Answer ಎ) ಮಿಚೆಲ್ಲಿ 2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ ಡಿ) ನಾಲ್ಕನೇ ಸೋಮೇಶ್ವರ Show Answer ಸಿ) ಎರಡನೇ ದೇವರಾಯ 4. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ ಸಿ) ಕೊಲಂಬಿಯಾ  ಡಿ) ಚೀನಾ Show Answer ಬಿ) ಬಲ್ಗೇರಿಯಾ 5. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ Show Answer ಎ) ಸೋಡಿಯಂ 6. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ Show Answer ಬಿ) ಸೋಡಿಯಂ ಹೈಡ್ರಾಕ್ಸೆಡ್ 7. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ ಸಿ) ಪಟಿಯಾಲ ಡಿ) ವಿಜಯವಾಡ Show Answer ಬಿ) ಡಾರ್ಜಿಲಿಂಗ್ 8, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ)...

Best General Knowledge MCQs in Kannada for All Competitive Exams

  Best General Knowledge MCQs in  Kannada for All Competitive Exams 01. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲಿಗರು ಯಾರು? ಎ) ದೇವಿಕಾ ರಾಣಿ ರೋರಿಚ್ 👈👍👍 ಬಿ) ರಾಜ್ ಕಪೂರ್ ಸಿ) ಸತ್ಯಜಿತ್ ರೇ ಡಿ) ಶಿವಾಜಿ ಗಣೇಶನ್ 02. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ 👈👍👍 ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ 03. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ 👈👍👍 ಡಿ) ನಾಲ್ಕನೇ ಸೋಮೇಶ್ವರ 04. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ 👈👍👍 ಸಿ) ಕೊಲಂಬಿಯಾ  ಡಿ) ಚೀನಾ 05. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ 👈👍👍 ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ 06. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ 👈👍👍 ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ 07. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ 👈👍👍 ಸಿ) ಪಟಿಯಾಲ ಡಿ) ವಿಜಯವಾಡ 08, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ) ಕೃಷ್ಣದೇವರಾಯ 👈👍👍 ಸಿ) ಅಕ್ಟ...