Breaking

Friday, 24 September 2021

Today Top-10 General Knowledge Question Answers with Explanation in Kannada for All Competitive Exams-07

Today Top-10 General Knowledge Question Answers with Explanation in  Kannada for All Competitive Exams-07

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1.  ಕೆಳಗಿನವುಗಳಲ್ಲಿ ಪಳೆಯುಳಿಕೆಗಳ ಮತ್ತು ಪ್ರಾಚೀನ ವಸ್ತುಗಳ ಕಾಲ ನಿರ್ಣಯ ಮಾಡಲು ಉಪಯೋಗಿಸುವ ವಿಧಾನ ಯಾವುದು?
ಎ. ರೇಡಿಯೊಕಾರ್ಬನ್ ಪರೀಕ್ಷೆ
ಬಿ. ತೂಕ ಮತ್ತು ಗಾತ್ರಗಳ ಅನುಪಾತ
ಸಿ. ರಾಸಾಯನಿಕ ವಿಶ್ಲೇಷಣೆ
ಡಿ. ಅವುಗಳಲ್ಲಿರುವ ಕ್ಯಾಲ್ಸಿಯಂನ ಪ್ರಮಾಣ


ಸರಿಯಾದ ಉತ್ತರ : ಎ. ರೇಡಿಯೊಕಾರ್ಬನ್ ಪರೀಕ್ಷೆ 

ವಿವರಣೆ : ರೇಡಿಯೋ ಕಾರ್ಬನ್ ಡೇಟಿಂಗ್ ವಿಧಾನವನ್ನು ಫ್ರೆಂಚ್ ವಿಜ್ಞಾನಿ ಲಿಬ್ಬೆ, ಅಮೇರಿಕಾದ ವಿಜ್ಞಾನಿಗಳಾದ ಎ. ಬಿ. ನೈರ್, ಡಾ|| ಫ್ರಾಂಕ್ ವಿಲಾರ್ಡ್ 1950ರ ದಶಕದಲ್ಲಿ ಶೋಧಿಸಿದರು. ಕಾರ್ಬನ್-14 ಎನ್ನುವುದು ಕಾರ್ಬನ್‌ನ ಒಂದು ಐಸೋಟೋಪ್ ಇದು ವಿಕಿರಣಪಟುವಾಗಿರುತ್ತದೆ. ಇದು  ಅಲ್ಪ ಪ್ರಮಾಣದಲ್ಲಿ ಎಲ್ಲಾ ವಸ್ತು ಪ್ರಾಣಿ, ಸಸ್ಯ ಮತ್ತು ಅವುಗಳ ಉಳಿಕೆಗಳಲ್ಲಿ ಇರುತ್ತವೆ. ಪ್ರಾಣಿಗಳು ಸತ್ತಾಗ, ಮರಗಳು ಒಣಗಿದಾಗ ಅವುಗಳಲ್ಲಿನ ಕಾರ್ಬನ್-14ರ ಪ್ರಮಾಣ ತುಂಬಾ ನಿಧಾನವಾಗಿ ಕರಗುತ್ತಾ ಹೋಗುತ್ತದೆ. ಅದು ತನ್ನ ಅರ್ಧದಷ್ಟಾಗಲು 5730 ವರ್ಷಗಳು ಬೇಕು. ಇದರ ಆಧಾರದ ಮೇಲೆ ಪಳೆಯುಳಿಕೆಗಳ ಆಯಸ್ಸನ್ನು ಪತ್ತೆ ಹಚ್ಚಬಹುದು.

2.  ಕೆಳಗಿನವುಗಳಲ್ಲಿ ಯಾವುದನ್ನು ರಕ್ತದ ಒತ್ತಡ ಅಳೆಯಲು ಬಳಸಲಾಗುವುದು?
ಎ. ಸ್ವಿಗೊಮಾನೋಮೀಟರ್ 
ಬಿ. ಸ್ವಿಗೊಮೀಟರ್
ಸಿ. ಸ್ಟೆತೊಸ್ಕೋಪ್ 
ಡಿ. ಎಂಡೊಸ್ಕೋಪ್


ಸರಿಯಾದ ಉತ್ತರ: ಎ. ಸ್ವಿಗೊಮಾನೋಮೀಟರ್ 

ವಿವರಣೆ : 

ಸ್ಪಿಗ್ಮೊಮಾನೋಮೀಟರ್ ಮಾನವರ ರಕ್ತದೊತ್ತಡವನ್ನು ಅಳೆಯಲು ಬಳಸುವ ಸಾಧನ. ಆರೋಗ್ಯವಂತ ಮನುಷ್ಯನ ರಕ್ತದೊತ್ತಡ 120/80 ಇದನ್ನು ಸುಮ್ಮೆಲ್ ಸಿಗ್ ಪ್ರೈಡ್ ಕಾರ್ಲ್ ರಿಟ್ಟರ್ ವಾನ್‌ಬೋಸ್‌ಚ್ 1881ರಲ್ಲಿ ಕಂಡುಹಿಡಿದನು. 

ಸ್ಟೆತೋಸ್ಕೋಪ್‌ನ್ನು ರೇನ್ ಲೆನೆಕ್ ಎಂಬ ವಿಜ್ಞಾನಿ ಕಂಡುಹಿಡಿದನು. ಇದನ್ನು ಹೃದಯದ ಬಡಿತ ಪರೀಕ್ಷಿಸಲು ಉಪಯೋಗಿಸುತ್ತಾರೆ.

ಎಂಡೋಸ್ಕೋಪಿ ಎನ್ನುವುದು ಮಾನವನ ಜೀರ್ಣಾಂಗವ್ಯೂಹದ ಒಳಚಿತ್ರಣ ಪಡೆಯಲು, ಹಾಗೂ ವೀಕ್ಷಿಸಲು ಬಳಸುವ ಒಂದು ಸಾಧನವಾಗಿದೆ.

3. ಅರ್ಕ್‌ಟಿಕ್‌ನ ಕೆಲವು ತೀರಗಳನ್ನು ಹಿಮಮುಕ್ತವಾಗಿರಿಸುವ ಪ್ರವಾಸ ಯಾವುದು ?
ಎ. ಕುರೋಷಿಯೋ
ಬಿ. ಉತ್ತರ ಅಟ್ಲಾಂಟಿಕ್ ಡ್ರಿಫ್ಟ್
ಸಿ. ಲ್ಯಾಬ್ರಡಾರ್‌ಪ್ರವಾಹ
ಡಿ. ಕ್ಯಾಲಿಫೋರ್ನಿಯಾ ಪ್ರವಾಹ


ಸರಿಯಾದ ಉತ್ತರ : ಡಿ. ಕ್ಯಾಲಿಫೋರ್ನಿಯಾ ಪ್ರವಾಹ

ವಿವರಣೆ : ಸಾಗರಗಳಲ್ಲಿರುವ ನೀರು ಒಂದು  ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹರಿಯುವುದನ್ನು ಸಾಗರ ಪ್ರವಾಹಗಳು ಎನ್ನುವರು. ಸಾಗರ ಪ್ರವಾಹಗಳನ್ನು ಈ ಕೆಳಗಿನ ಅಂಶಗಳು ಪ್ರಾರಂಭಿಸುತ್ತವೆ. ಭೂಮಿಯ ಭ್ರಮಣೆ, ಗಾಳಿಯದಿಕ್ಕು, ತಾಪ, ಲವಣತೆಯ ವ್ಯತ್ಯಾಸ, ಚಂದ್ರ ಮತ್ತು ಸೂರ್ಯನ ಗುರುತ್ವಾಕರ್ಷಣೆಯಿಂದ ಉಂಟಾಗುವ ಉಬ್ಬರ ಇಳಿತಗಳು ಇತ್ಯಾದಿ.

4, ಬುಡಕಟ್ಟು ಸಮಾಜಗಳಲ್ಲಿ ಪ್ರಚಲಿತವಿರುವ ಪ್ರಾಣಿ ಸಾಕಣೆ ಯಾವ ರೀತಿಯದು ?
(ಎ) ಬೇಟೆಗಾರಿಕೆ
(ಬಿ) ಅಲೆಮಾರಿ ಪಶುಗಾಹೀ ವೃತ್ತಿ
(ಸಿ) ಹೈನು ಗಾರಿಕೆ
(ಡಿ) ದನ ಸಾಕಣೆ


ಸರಿಯಾದ ಉತ್ತರ : (ಬಿ) ಅಲೆಮಾರಿ ಪಶುಗಾಹೀ ವೃತ್ತಿ

ವಿವರಣೆ : ಮೂಲತಃ ಬುಡಕಟ್ಟು ಜನಾಂಗವು ಅಲೆಮಾರಿ ಜನಾಂಗ ಅವರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲೆಮಾರಿಗಳಾಗಿ ಅಲೆಯುತ್ತಾ ಹೋಗುತ್ತಿರುತ್ತಾರೆ. ಹಾಗೆ ಹೋಗುವಾಗ ತಮ್ಮ ಜೊತೆಯಲ್ಲಿರುವ ದನಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಮೇಯಿಸುತ್ತಾ ಸಾಗುತ್ತಿರುತ್ತಾರೆ.

5, ಮಿಚಿಗನ್ ಸರೋವರದ ತಯಾರಿಕಾ ಕೈಗಾರಿಕೆಗಳು ಬಹುತೇಕವಾಗಿ ಈ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ.
(ಎ) ಒಟ್ಟಾವ
(ಬಿ) ಬಫಲೋ
(ಸಿ) ಚಿಕಾಗೊ
(ಡಿ) ಡ್ಯುಲರ್


ಸರಿಯಾದ ಉತ್ತರ : (ಸಿ) ಚಿಕಾಗೊ

ವಿವರಣೆ :  ಚಿಕಾಗೋ ಅಮೇರಿಕಾದ ಪ್ರಮುಖ ಕೈಗಾರಿಕಾ ಕೇಂದ್ರ ಇಲ್ಲಿ ಸುಮಾರು 1 ಮಿಲಿಯನ್‌ಗಿಂತಲೂ ಹೆಚ್ಚಿನ ಕಾರ್ಮಿಕರು ದುಡಿಯುತ್ತಿದ್ದಾರೆ. ಇಲ್ಲಿ ವಿವಿಧ ತಯಾರಿಕಾ ಕಾರ್ಖನೆಗಳು, ಬಯೋ ಟೆಕ್ನಾಲಾಜಿ ಮಾಹಿತಿ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಕೈಗಾರಿಕೆಗಳಿವೆ.

6, 1959 ರಲ್ಲಿ ಪ್ರಧಾನಮಂತ್ರಿ ನೆಹರೂ ಅವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇಲ್ಲಿ ಉದ್ಘಾಟಿಸಿದರು.
(ಎ) ನಾಗೋರ್ 
(ಬಿ) ಚಂಪಾರಣ್
(ಸಿ) ಬಿಲಾಸ್‌ಪುರ್
(ಡಿ) ಸಾಂಗ್ಲಿ


ಸರಿಯಾದ ಉತ್ತರ : (ಎ) ನಾಗೋರ್ 

ವಿವರಣೆ : ಸ್ವಾತಂತ್ರ್ಯ ನಂತರ ಸಮುದಾಯ ಅಭಿವೃದ್ಧಿ ಯೋಜನೆಯನ್ನು ಪುನರ್ ವಿಮರ್ಶಿಸಲು ಬಲವಂತರಾಯ್ ಮೆಹತಾ ಆಯೋಗವನ್ನು ಸರ್ಕಾರ ನೇಮಿಸಿತು. ಜನವರಿ 1957ರಲ್ಲಿ ಈ ಆಯೋಗ ತನ್ನ ವರದಿಯನ್ನು ಸಲ್ಲಿಸಿ ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು, ಮೂರು ಹಂತದ ಹಳ್ಳಿಯಿಂದ ಜಿಲ್ಲೆಯವರೆಗಿನ ಸ್ಥಳೀಯ ಸ್ವಾಯತ್ತ ಸರಕಾರಗಳ ರಚನೆಯನ್ನು ಶಿಫಾರಸ್ಸು ಮಾಡಿತು. ಭಾರತದಲ್ಲಿ 1959ರಲ್ಲಿ ಮೊದಲ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ರಾಜಸ್ತಾನದ ನಾಗೋರ್ ಜಿಲ್ಲೆಯಲ್ಲಿ ಜಾರಿಗೊಳಿಸಿತು.

7,  ಕರ್ನಾಟಕದಲ್ಲಿ ನಡೆದ ಸತ್ಯಾಗ್ರಹದಲ್ಲಿ “ಕರ್ನಾಟಕದ ಬಾರ್ಡೋಲಿ” ಎಂದು ಜನಪ್ರಿಯವಾಗಿದ್ದ ಕೇಂದ್ರ
(ಎ) ಶಿವಪುರ
(ಬಿ) ಸಿರ್ಸಿ
(ಸಿ) ಅಂಕೋಲ
(ಡಿ) ಹೊನ್ನಾವರ


ಸರಿಯಾದ ಉತ್ತರ : (ಸಿ) ಅಂಕೋಲ

ವಿವರಣೆ : ಗುಜರಾತಿನ ಬಾರ್ಡೋಲಿಯಲ್ಲಿ ಸರ್ಧಾರ್ ವಲ್ಲಭ ಬಾಯಿ ಪಟೇಲರ ನೇತೃತ್ವದಲ್ಲಿ ರೈತರು ಕರನಿರಾಕರಣೆ ಚಳುವಳಿ ನಡೆಸಿದ ಹಾಗೆಯೇ ಕರ್ನಾಟಕದ ನಾಲ್ಕು ತಾಲೂಕುಗಳು-ಹಿರೇಕೆರೂರು, ಅಂಕೋಲ, ಶಿರಸಿ ಮತ್ತು ಸಿದ್ಧಾಪುರಗಳಲ್ಲಿ ವೀರಣ್ಣಗೌಡ ಪಾಟೀಲ, ಟಿ.ಆರ್. ನೆಸ್ಟಿ, ಕೆ.ಎಸ್. ಪಾಟೀಲ್ ಮತ್ತು ಹಳ್ಳಿಕೇರಿ ಯವರ ನೇತೃತ್ವದಲ್ಲಿ ಕರನಿರಾಕರಣ ಚಳುವಳಿ ಪ್ರಾರಂಭವಾಯಿತು. ಈ ಚಳುವಳಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಬ್ರಿಟೀಷರು ಅವರನ್ನು ಬಂದಿಸಿ, ಸೆರೆ ಮನೆಯಲ್ಲಿಟ್ಟು ಹಿಂಸೆ ನೀಡಿದರು. ಕರನಿರಾಕರಣಿ ಮಾಡಿದವರ ಮನೆಗಳನ್ನು ಬ್ರಿಟೀಷ್ ಸರ್ಕಾರ ಜಪ್ತಿ ಮಾಡಿಸಿ, ಚರ-ಸ್ಥಿರ ಆಸ್ತಿಗಳನ್ನು ಬಹಿರಂಗ ಹರಾಜಿಗಿಟ್ಟಿತು. ಕೆಲವೊಮ್ಮೆ ತೆರಿಗೆ ನಿರಾಕರಿಸಿದ ಕುಟುಂಬದ ಎಲ್ಲರನ್ನು ಸೆರೆಮನೆಗೆ ತಳ್ಳಿ ಆಸ್ತಿಯನ್ನು ಮುಟ್ಟು ಗೋಲು ಹಾಕಿಕೊಂಡರು. ಅಂತಿಮವಾಗಿ 1937-38 ರಲ್ಲಿ ರೈತರಿಗೆ ಜಯ ಸಿಕ್ಕಿತು.

8,  'ಶತಮಾನದ ತಂತ್ರಜ್ಞಾನ' ಎಂದು ಯಾವುದನ್ನು ಭಾವಿಸಲಾಗಿದೆ?
(ಎ) ಜೈವಿಕ ತಂತ್ರಜ್ಞಾನ
(ಬಿ) ಮಾಹಿತಿ ತಂತ್ರಜ್ಞಾನ
(ಸಿ) ನ್ಯೂಕ್ಲಿಯರ್ ಚಿಕಿತ್ಸೆ 
(ಡಿ) ದೂರ ಸಂಪರ್ಕ


ಸರಿಯಾದ ಉತ್ತರ : (ಬಿ) ಮಾಹಿತಿ ತಂತ್ರಜ್ಞಾನ

ವಿವರಣೆ : 20ನೇ ಶತಮಾನದ ಅಂತ್ಯದಲ್ಲಿ ಹಾಗೂ 21ನೇ ಶತಮಾನದಲ್ಲಿ ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿರುವ ವಿಜ್ಞಾನದ ಅನ್ವಯಿಕ ಶಾಖೆ ಮಾಹಿತಿ ತಂತ್ರಜ್ಞಾನ, ಹಿಂದೆ ಮಾಹಿತಿಯನ್ನು / ಸುದ್ದಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತಲುಪಿಸಲು ಬಹಳ ಶ್ರಮಪಡಬೇಕಾದ ಕಾಲವೊಂದಿತ್ತು. ಆದರೆ ಇಂದು ಬೆರಳ ತುದಿಯಲ್ಲಿ ಕಣ್ರೆಪ್ಪೆ ಮುಚ್ಚಿ ತೆಗೆಯುವುದರಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸುದ್ದಿಯನ್ನು ಕ್ಷಿಪ್ರವಾಗಿ ಕಳುಹಿಸಬಹುದಾಗಿದೆ. ಕಂಪ್ಯೂಟರ್‌ಗಳ ಬೆಳವಣಿಗೆಯಿಂದ ಇಂದು ಎಲ್ಲವೂ ಸಾಧ್ಯವಾಗಿದೆ.

 9,  ಜ್ಞಾನಪೀಠ ಪ್ರಶಸ್ತಿಗಳಿಸಿದ ಕರ್ನಾಟಕದ ಮೊದಲ ಸಾಹಿತಿ,
(ಎ) ದ.ರಾ.ಬೇಂದ್ರೆ
(ಬಿ) ಮಾಸ್ತಿ ವೆಂಕಟೇಶ ಅಯ್ಯಂಗಾರ್
(ಸಿ) ಕೆ.ವಿ. ಪುಟ್ಟಪ್ಪ
(ಡಿ) ಕೆ. ಶಿವರಾಮ ಕಾರಂತ


ಸರಿಯಾದ ಉತ್ತರ : (ಸಿ) ಕೆ.ವಿ. ಪುಟ್ಟಪ್ಪ

ವಿವರಣೆ : ಜ್ಞಾನಪೀಠ ಪ್ರಶಸ್ತಿಯನ್ನು 1966ರಿಂದ ನೀಡಲು ಪ್ರಾರಂಭಿಸಲಾಯಿತು. ಇಲ್ಲಿಯವರೆಗೂ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡ ಭಾಷೆಗೆ ನೀಡಲಾಗಿದೆ. ಕನ್ನಡದ 8 ಕವಿಗಳು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ.

10, ಗಂಗರ ಮೊದಲ ರಾಜಧಾನಿ
(ಎ) ತಲಕಾಡು
(ಬಿ) ಕೋಲಾರ
(ಸಿ) ಮಣ್ಣೆ
(ಡಿ) ಶ್ರವಣಬೆಳಗೊಳ


ಸರಿಯಾದ ಉತ್ತರ : (ಬಿ) ಕೋಲಾರ

ವಿವರಣೆ : ಗಂಗರ ರಾಜ್ಯವು ಗಂಗವಾಡಿ ಎಂದು ಪ್ರಸಿದ್ಧವಾಗಿತ್ತು. ಇವರ ಆಡಳಿತಕ್ಕೆ ಈಗಿನ ಕೋಲಾರ, ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಚಾಮರಾಜನಗರ ಸೇರಿದ್ದವು. ಇವರ ಲಾಂಛನ ಗಜ (ಆನೆ) ಇವರ ಮೊದಲ ರಾಜಧಾನಿ ಕುವಲಾಲ (ಇಂದಿನ ಕೋಲಾರ) ನಂತರ ಇವರು ತಮ್ಮ ರಾಜಧಾನಿಯನ್ನು ತಲಕಾಡು, ಮನಕುಂದ (ಚನ್ನಪಟ್ಟಣ ಬಳಿ) ಹಾಗೂ ಮಣ್ಣೆ (ನೆಲಮಂಗಲ ತಾಟ) ಬದಲಾಯಿಸಿದರು.

No comments:

Post a Comment

Important Notes

Random Posts

Important Notes

Popular Posts

Top-50 General Knowledge (GK) Question Answers in Kannada for All Competitive Exams-08

Top-50 General Knowledge (GK) Question Answers in  Kannada for All Competitive Exams-08 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's El...

18th January 2025 Daily Current Affairs Quiz in Kannada for All Competitive Exams

          18th January 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-18th January 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs