Type Here to Get Search Results !

03-11-2021 Today Top-10 General Knowledge Question Answers in Kannada for All Competitive Exams

03-11-2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1) ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಭಾರತ ಸರ್ಕಾರವು ಕಲ್ಲಿದ್ದಲು ಕ್ಷೇತ್ರವನ್ನು ರಾಷ್ಟ್ರೀಕರಿಸಲಾಯಿತು
2) ಈಗ ಕಲ್ಲಿದ್ದಲು ಬ್ಲಾಕ್‌ಗಳನ್ನು ಲಾಟರಿ ಆಧಾರದ ಮೇಲೆ ಹಂಚಲಾಗುತ್ತಿದೆ
3) ಭಾರತವು ತನ್ನ ದೇಶೀಯ ಪೂರೈಕೆಯಲ್ಲಿನ ಕೊರತೆಯನ್ನು ಸರಿದೂಗಿಸಲು ಇತ್ತೀಚಿನವರೆಗೂ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಗ ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಿದೆ
4) ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
ಎ) 1 ಮಾತ್ರ 
ಬಿ) 2 ಮತ್ತು 3
ಸಿ) 3 ಮಾತ್ರ 
ಡಿ) 1, 2 ಮತ್ತು 3  

ಸರಿಯಾದ ಉತ್ತರ: ಡಿ) 1, 2 ಮತ್ತು 3



2. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1) ಸಂಸತ್ತಿನ (ಅನರ್ಹತೆ, ನಿಷೇಧ) ಕಾಯ್ದೆ 1959 ಇದು ಲಾಭದಾಯಕ ಕಛೇರಿ ಆಧಾರದ ಮೇಲೆ ಮಾಡುವ ಅನರ್ಹತೆಯಿಂದ ಕೆಲವು ಹುದ್ದೆಗಳಿಗೆ ರಿಯಾಯಿತಿ ನೀಡಿದೆ
2) ಈ ಮೇಲೆ ಹೇಳಲಾದ ಕಾಯ್ದೆಯು 5 ಸಲ ತಿದ್ದುಪಡಿಯಾಗಿದೆ
3) ಭಾರತದ ಸಂವಿಧಾನದಲ್ಲಿ ಲಾಭದಾಯಕ ಹುದ್ದೆ' ಎಂಬುದನ್ನು ಸರಿಯಾಗಿ ವ್ಯಾಖ್ಯಾನಿಸಲಾಗಿದೆ
ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
ಎ) 1 ಮತ್ತು 2 ಮಾತ್ರ
ಬಿ) 3 ಮಾತ್ರ
ಸಿ) 2 ಮತ್ತು 3
ಡಿ) 1, 2 ಮತ್ತು 3


ಸರಿಯಾದ ಉತ್ತರ: ಎ) 1 ಮತ್ತು 2 ಮಾತ್ರ



3. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1) ಭಾರತದ ಸಂವಿಧಾನಕ್ಕೆ ಮಾಡಲಾದ 44ನೇ ತಿದ್ದುಪಡಿಯು ಪ್ರಧಾನಮಂತ್ರಿಯ ಆಯ್ಕೆಯನ್ನು ನ್ಯಾಯಾಂಗದ ಪುನರ್‌ವಿಮರ್ಶೆಯ ಹೊರಗಿಡಲು ಒಂದು ಹೊಸ ವಿಧಿಯನ್ನು ಅಳವಡಿಸಿತು
2) ಭಾರತದ ಸರ್ವೋಚ್ಚ ನ್ಯಾಯಾಲಯ 99ನೇ ಸಂವಿಧಾನದ ತಿದ್ದುಪಡಿ ಕಾಯ್ದೆಯನ್ನು ನ್ಯಾಯಾಂಗದ ಸ್ವಾತಂತ್ರ್ಯ ಹರಣ ಮಾಡುತ್ತಿದೆ ಎಂಬ ಕಾರಣಕ್ಕೆ ರದ್ದುಗೊಳಿಸಿತು.
ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
ಎ) 1 ಮಾತ್ರ
ಬಿ) 2 ಮಾತ್ರ
ಸಿ) 1 ಮತ್ತು 2 ಮಾತ್ರ
ಡಿ ) ಯಾವುದೂ ಅಲ್ಲ 


ಸರಿಯಾದ ಉತ್ತರ: ಬಿ) 2 ಮಾತ್ರ 




4. ಬ್ರಿಟಿಷ್ ಭಾರತದಲ್ಲಿ ಕೋಮು ಪ್ರಾತಿನಿಧ್ಯ ಪದ್ಧತಿ ಈ ಕೆಳಗಿನ ಯಾವ ಕಾಯ್ದೆ ಒದಗಿಸಲಾಗಿದೆ?
ಎ) ಇಂಡಿಯನ್ ಕೌನ್ಸಿಲ್ ಆಕ್ಟ್-1892
ಬಿ) ಮಿಂಟೋ-ಮಾಗ್ಗೆ ಸುಧಾರಣೆಗಳು-1909
ಸಿ) ಮಾಂಟೆಗೋ-ಚೆಲ್ಸ್ಮ್ ಫರ್ಡ್ ಸುಧಾರಣೆಗಳು-1919
ಡಿ) ಭಾರತ ಸರ್ಕಾರ ಕಾಯ್ದೆ-1935


ಸರಿಯಾದ ಉತ್ತರ: ಬಿ) ಮಿಂಟೋ-ಮಾಗ್ಗೆ ಸುಧಾರಣೆಗಳು-1909 




5. ಈ ಕೆಳಗಿನ ಯಾವ ಜೀವಕೋಶಗಳಲ್ಲಿ ಡಿಎನ್‌ಎ(DNA) ಇರುವುದಿಲ್ಲ?
ಎ) ನ್ಯೂಕ್ಲಿಯಸ್
ಬಿ) ಕ್ಲೋರೋಪ್ಲಾಸ್ಟ್
ಸಿ) ಲೈಸೋಸೋಮ್ಸ್
ಡಿ) ಮೈಟೋಕಾಂಡ್ರಿಯಾ

ಸರಿಯಾದ ಉತ್ತರ: ಸಿ) ಲೈಸೋಸೋಮ್ಸ್  



6. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಯಾವ ಅಧಿವೇಶನದಲ್ಲಿ ಅಸಹಕಾರ ಚಳುವಳಿಯನ್ನು ಅಂಗೀಕರಿಸಲಾಯಿತು.?
ಎ) ಖಾನ್ಪುರ
ಬಿ) ಬಾಂಬೆ
ಸಿ) ನಾಗಪುರ
ಡಿ) ಕಲ್ಕತ್ತಾ

ಸರಿಯಾದ ಉತ್ತರ: ಸಿ) ನಾಗಪುರ 



7. ಈ ಕೆಳಗಿನ ಹೇಳಿಕೆಗಳಲ್ಲಿ ಹಣಕಾಸು ನೀತಿ ಸಮಿತಿಯ ಕುರಿತು ಯಾವುದು ಸರಿಯಾಗಿದೆ/ ವೆ?
ಎ) ಆರ್‌ಬಿಐ ಗವರ್ನ‌್ರರವರು ಈ ಸಮಿತಿಯ ಪದನಿಮಿತ್ಯ ಅಧ್ಯಕ್ಷರಾಗಿರುತ್ತಾರೆ.
ಬಿ) ಅಧ್ಯಕ್ಷರನ್ನೊಳಗೊಂಡ ಈ ಸಮಿತಿಯು 6 ಸದಸ್ಯರನ್ನು ಹೊಂದಿರುತ್ತದೆ
ಸಿ) ಎರಡೂ ತಪ್ಪಾಗಿವೆ
ಡಿ) ಎರಡೂ ಸರಿಯಾಗಿವೆ

ಸರಿಯಾದ ಉತ್ತರ: ಡಿ) ಎರಡೂ ಸರಿಯಾಗಿವೆ  



8. ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾದ ಜೋಡಣೆಯಾಗಿದೆ?
ಎರವಲು ಪಡೆಯಲಾಗಿದ್ದು  ಮೂಲಗಳು
ಎ) ಶೇಷಾಧಿಕಾರಗಳು - ಫ್ರಾನ್ಸ್
ಬಿ) ನ್ಯಾಯಿಕ ವಿಮರ್ಶೆ - ಅಮೆರಿಕಾ
ಸಿ) ರಾಜನೀತಿ ನಿರ್ದೇಶಕ ತತ್ವಗಳು - ಐರೌಂಡ್ 
ಡಿ) ಏಕಪೌರತ್ವ - ಬ್ರಿಟಿಷ್


ಸರಿಯಾದ ಉತ್ತರ: ಎ) ಶೇಷಾಧಿಕಾರಗಳು - ಫ್ರಾನ್ಸ್ 


9. “ಗರೀಬಿ ಹಟಾವೊ” (ಬಡತನ ನಿರ್ಮೂಲನೆ) ಎಂಬ ಪ್ರಸಿದ್ಧ ಘೋಷವಾಕ್ಯವನ್ನು ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಾರಂಭಿಸಲಾಯಿತು?
ಎ) 3ನೇ
ಸಿ) 4ನೇ
ಬಿ) 1ನೇ
ಡಿ) 5ನೇ 

ಸರಿಯಾದ ಉತ್ತರ: ಡಿ) 5ನೇ



10. ಬ್ಯಾಂಕ್ ಆಫ್ ಬರೋಡಾದ ಕೇಂದ್ರ ಕಚೇರಿ ಎಲ್ಲಿದೆ?
ಎ) ಅಹಮ್ಮದಾಬಾದ್ 
ಬಿ) ಗಾಂಧಿನಗರ
ಸಿ) ವಡೋದ್ರಾ
ಡಿ) ಕಾಂಡ್ಲಾ

ಸರಿಯಾದ ಉತ್ತರ : ಸಿ) ವಡೋದ್ರಾ     



 ಇವುಗಳನ್ನೂ ಓದಿ 

 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section