Type Here to Get Search Results !

Today Top-10 General Knowledge Question Answers in Kannada for All Competitive Exams-14

Today Top-10 General Knowledge Question Answers in Kannada for All Competitive Exams-14

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಈ ಕೆಳಕಂಡ ಯಾವ ರಾಷ್ಟ್ರದಲ್ಲಿ ನಡೆದ ಶೃಂಗಸಭೆಯಲ್ಲಿ BRICS ಅಭಿವೃದ್ಧಿ ಬ್ಯಾಂಕನ್ನು ಪ್ರಾರಂಭಿಸಲು ನಿರ್ಧರಿಸಲಾಯಿತು?
1) ರಷ್ಯಾ
2) ದಕ್ಷಿಣ ಆಫ್ರಿಕಾ
3) ಚೀನಾ
4) ಬ್ರೆಜಿಲ್ 


ಸರಿಯಾದ ಉತ್ತರ : 4) ಬ್ರೆಜಿಲ್  

2. ಡೀಸೆಲ್ ಮತ್ತು ಅಡುಗೆ ಇಂಧನದ ಬೆಲೆ ನಿಗದಿ ಮಾಡುವ ಕ್ರಮವನ್ನು ಸಲಹೆ ಮಾಡಲು ಯಾವ ಸಮಿತಿಯನ್ನು ರಚಿಸಲಾಯಿತು?
1) ಕಿರೀಟ್ ಪಾರಿಖ್ ಸಮಿತಿ
2) ಹನುಮಂತರಾವ್ ಸಮಿತಿ
3) ನರೇಶ್‌ಚಂದ್ರ ಸಮಿತಿ
4) ಆತ್ರೇಯ ಸಮಿತಿ


ಸರಿಯಾದ ಉತ್ತರ: 1) ಕಿರೀಟ್ ಪಾರಿಖ್ ಸಮಿತಿ  

3. ಯಾವ ವಿದೇಶೀ ವ್ಯಾಪಾರ ನೀತಿಯಲ್ಲಿ ರಫ್ತು ಉತ್ತೇಜಕ ಬಂಡವಾಳ ಸರಕುಗಳನ್ನು (Export Promotion Capital Goods -EPCG) ಪರಿಚಯಿಸಲಾಯಿತು?
1) ವಿದೇಶಿ ವ್ಯಾಪಾರ ನೀತಿ, 2014-19
2) ವಿದೇಶಿ ವ್ಯಾಪಾರ ನೀತಿ, 2004-09
3) ವಿದೇಶಿ ವ್ಯಾಪಾರ ನೀತಿ, 2009-14
4) ವಿದೇಶಿ ವ್ಯಾಪಾರ ನೀತಿ, 2008-09


ಸರಿಯಾದ ಉತ್ತರ : 3) ವಿದೇಶಿ ವ್ಯಾಪಾರ ನೀತಿ, 2009-14   

4. ಈ ಕೆಳಗಿನ ಯಾವ ಎರಡು ದೇಶಗಳು 2003- 2004ರಲ್ಲಿ BIMSTEC ಅನ್ನು ಸೇರಿದವು?
1) ಬಾಂಗ್ಲಾದೇಶ ಮತ್ತು ಮಾಲೀವ್
2) ಮಾಲೀವ್ ಮತ್ತು ಭೂತಾನ್
3) ಚೀನಾ ಮತ್ತು ನೇಪಾಳ
4) ನೇಪಾಳ ಮತ್ತು ಭೂತಾನ್


ಸರಿಯಾದ ಉತ್ತರ : 4) ನೇಪಾಳ ಮತ್ತು ಭೂತಾನ್  

5. ಇಯಾನ್ ಪಿಯಾಂಗ್ ದ್ವೀಪವು ಯಾವ ಎರಡು ರಾಷ್ಟ್ರಗಳ ನಡುವಿನ ವಿವಾದಕ್ಕೆ ಮೂಲವಾಗಿದೆ?
1) ಜಪಾನ್ ಮತ್ತು ಚೀನಾ
2) ಜಪಾನ್ ಮತ್ತು ದಕ್ಷಿಣ ಕೊರಿಯಾ
3) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ
4) ಉತ್ತರ ಕೊರಿಯಾ ಮತ್ತು ರಷ್ಯಾ

ಸರಿಯಾದ ಉತ್ತರ: 3) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ   

6. ಅಮೀರ್ ಖುಸ್ರು ದೆಹಲಿ ಸುಲ್ತಾನರ ಕಾಲದಶ್ರೇಷ್ಠ ಪರ್ಷಿಯನ್ ಕವಿಯೆಂದು ಗೌರವಿಸಲ್ಪಟ್ಟಿದ್ದಾನೆ. ಈ ಕೆಳಗಿನ ಯಾವ ಕೃತಿಯನ್ನು ಅವನು ಬರೆದಿಲ್ಲ?
1) ತಾರೀಕ್-ಇ-ಫಿರೋಜ್ ಷಾಹಿ
2) ಆಶಿಖಾ
3) ಖಿರಾನ್-ಉಸ್-ಸದೇನ್
4) ಮಿಫ್ರಾ-ಉಲ್‌ಫುತುಹ್ 

ಸರಿಯಾದ ಉತ್ತರ : 4) ಮಿಫ್ರಾ-ಉಲ್‌ಫುತುಹ್ 

7 ಕರ್ನಾಟಕ ಪೊಲೀಸ್ ಅಕಾಡೆಮಿಯು ಯಾವ ಊರಿನಲ್ಲಿ ಇದೆ?
1) ಮೈಸೂರು
2) ಬೆಂಗಳೂರು
3) ಕಲಬುರ್ಗಿ
4) ಬೆಳಗಾವಿ

ಸರಿಯಾದ ಉತ್ತರ: 1) ಮೈಸೂರು 

8. ಬೋಕೊ ಹರಾಂ ಈ ಮುಂದಿನ ದೇಶದ ಒಂದು ಭಯೋತ್ಪಾದಕ ಗುಂಪಾಗಿದೆ?
1) ಕೀನ್ಯಾ
2) ಸೂಡಾನ್
3) ನೈಜೀರಿಯಾ
4) ಉಗಾಂಡ

ಸರಿಯಾದ ಉತ್ತರ: 3) ನೈಜೀರಿಯಾ 

9. 2014ರ ಸೆಪ್ಟೆಂಬರ್‌ನ ಮಾಂಟ್ರಿಯಲ್ ನಿಯಮಾವಳಿ ಯಾವುದಕ್ಕೆ ಸಂಬಂಧಿಸಿದ್ದಾಗಿದೆ?
1) ಕಾರ್ಬನ್ ಮಾನಾಕ್ಸೆಡ್
2) ಕಾರ್ಬನ್ ಡೈ ಆಕ್ಸೆಡ್
3) ಹೈಡೋಫ್ಲೋರೊಕಾರ್ಬನ್
4) ಪೊಟ್ಯಾಷಿಯಂ

ಸರಿಯಾದ ಉತ್ತರ: 3) ಹೈಡೋಫ್ಲೋರೊಕಾರ್ಬನ್   

10. ಭಾರತದಲ್ಲಿ ಈ ಕೆಳಗಿನ ಯಾವ ಸ್ಥಳಗಳನ್ನು ಜಾಗತಿಕ ಜೀವವೈವಿಧ್ಯದ ಹಾಟ್‌ಸ್ಪಾಟ್‌ಗಳೆಂದು ಹೇಳಲಾಗಿದೆ?
1) ಹಿಮಾಲಯ
2) ಇಂಡೋ-ಬರ್ಮಾ
3) ಸುಂಡಾಲ್ಯಾಂಡ್ಸ್
4) ಪೂರ್ವಘಟ್ಟಗಳು
5) ಪಶ್ಚಿಮ ಘಟ್ಟಗಳು
ಎ) 1, 4 ಮತ್ತು 5
ಬಿ) 1, 2, 3 ಮತ್ತು 4
ಸಿ) 1, 2, 3 ಮತ್ತು 5
ಡಿ) ಮೇಲಿನ ಎಲ್ಲವೂ

ಸರಿಯಾದ ಉತ್ತರ : ಸಿ) 1, 2, 3 ಮತ್ತು 5   



 ಇವುಗಳನ್ನೂ ಓದಿ 

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section