Breaking

Thursday, 30 September 2021

Important Inscriptions of India : Complete details of Inscriptions of India

ಭಾರತದ ಮಹತ್ವದ ಶಾಸನಗಳು



ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಾಸನಗಳ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಾಸನಗಳ ಮಾಹಿತಿ ಇರಬೇಕಾದದ್ದು ಅಗತ್ಯವೂ ಅನಿವಾರ್ಯವೂ ಆಗಿದೆ. ಆದ್ದರಿಂದ ಈ ಮುಂದೆ ಪ್ರಮುಖ ಶಾಸನಗಳು, ಶಾಸನಗಳ ಅರ್ಥ, ಶಾಸನಗಳ ಮಹತ್ವ ಹಾಗೂ ಶಾಸನಗಳ ಕುರಿತಾದ ಎಲ್ಲ ಪ್ರಮುಖ ಅಂಶಗಳನ್ನು ಚರ್ಚಿಸಲಾಗಿದೆ. ಹಾಗೂ ಎಲ್ಲ ಶಾಸನಗಳ ಕುರಿತಾದ ಪ್ರಮುಖ ಅಂಶಗಳನ್ನು ಒಂದೆಡೆ ಚರ್ಚಿಸಲಾಗಿದೆ‌.


ಪೀಠಿಕೆ : 

ಶಾಸನಗಳು (Inscriptions) : ಪುರಾತತ್ವಶಾಸ್ತ್ರದ ಒಂದು ಶಾಖೆಯಾಗಿರುವ ಶಾಸನಶಾಸ್ತ್ರವು ಶಾಸನಗಳ ಅಧ್ಯಯನವಾಗಿದೆ. 

ಶಾಸನಗಳ ಅಧ್ಯಯನವನ್ನು Epigraphy ಎಂದು ಕರೆಯಲಾಗುತ್ತದೆ.

Stduy of Inscriptions is called as Epigraphy.

ಇದು ಪ್ರಾಚೀನ ಭಾರತದಇ ತಿಹಾಸದ ಅತ್ಯಂತ ಮಹತ್ವದ ಮೂಲಾಧಾರವಾಗಿದೆ. ಶಿಲಾಫಲಕ, ಬಂಡೆಗಲ್ಲು, ಶಿಲಾಸ್ಥಂಭ, ಶಿಲಾಗುಹ ಮತ್ತು ದೇವಾಲಯ ಗೋಡೆಗಳ ಮೇಲೆ, ತಾಮ್ರಪಟ, ಕಂಚು ಮುಂತಾದ ಲೋಹಪಟಗಳ ಮೇಲಿನ ಬರಹಗಳನ್ನು ಶಾಸನಗಳೆಂದು ಕರೆಯಲಾಗಿದೆ.


ಪ್ರಾಚೀನ ಭಾರತದ ಶಾಸನಗಳು ಪಾಲಿ, ಸಂಸ್ಕೃತ, ತಮಿಳು, ಕನ್ನಡ, ಮಲೆಯಾಳಂ, ತೆಲುಗು ಮುಂತಾದ ಭಾಷೆಗಳಲ್ಲಿವೆ. ಕೆಲವು ಶಾಸನಗಳು ಸಾಹಿತ್ಯಕ ಮೌಲ್ಯವನ್ನು ಪಡೆದಿವೆ. ಬಹುಪಾಲು ಶಾಸನಗಳು ಬ್ರಾಹ್ಮಿ ಲಿಪಿಯಲ್ಲಿವೆ. ಕೆಲವು ಶಾಸನಗಳು ಖರೋಷ್ಠಿ ಲಿಪಿಯಲ್ಲಿವೆ. 


ನಿಮಗೆ ಗೊತ್ತೇ : ಖರೋಷ್ಟಿ ಲಿಪಿಯನ್ನು ಅರೇಬಿಕ್ ಲಿಪಿಯಂತೆ ಬಲದಿಂದ ಎಡಕ್ಕೆ ಬರೆಯಲಾಗುತ್ತಿತ್ತು. 




ಶಾಸನಗಳ ಮಹತ್ವ :


ಶಾಸನಗಳಿಂದ ಆಯಾ ಕಾಲದ ಲಿಪಿ, ಭಾಷೆ, ಶೈಲಿ, ಬರವಣಿಗೆಯ ಸಾಧನಗಳ ಬಗ್ಗೆ ಮಾಹಿತಿ ದೊರಕುತ್ತದೆ. ಅಲ್ಲದೇ ಆಯಾ ಕಾಲಘಟ್ಟದ ಮಹತ್ವದ ವಿಚಾರಗಳು ಇದರಿಂದ ಅರ್ಥವಾಗುತ್ತವೆ. ಶಾಸನಗಳು ವ್ಯಕ್ತಿಯೊಬ್ಬನ ಅಥವಾ ರಾಜ ಮನೆತನವೊಂದರ ಸಮಗ್ರ ಮಾಹಿತಿ ಒದಗಿಸುವಲ್ಲಿ ಹಾಗೂ ಆ ಕಾಲಘಟ್ಟದ ಸಮಗ್ರ ಸಾಮಾಜಿಕ, ಧಾರ್ಮಿಕ ರಾಜಕೀಯ ಸ್ಥಿತಿಗತಿಗಳ ನಿರೂಪಣೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ.


ಶಾಸನಗಳ ವಿಂಗಡನೆ : 


ಪ್ರಾಚೀನ ಭಾರತದ ಶಾಸನಗಳನ್ನು ನಾಲ್ಕು ಪ್ರಕಾರಗಳಾಗಿ ವಿಂಗಡಿಸಬಹುದು : 

1. ದತ್ತಿ ಶಾಸನಗಳು (Donative records) 

2. ಧಾರ್ಮಿಕ ಶಾಸನಗಳು

3. ಆಡಳಿತಾತ್ಮಕ ಶಾಸನಗಳು (Administrative records) 

4. ಜ್ಞಾಪನಾ (ಸ್ಮರಣ) ಶಾಸನಗಳು (Commemorative records)


ನಿಮಗೆ ನೆನಪಿರಲಿ, ಭಾರತದ ಬಹುಪಾಲು ಶಾಸನಗಳು ದತ್ತಿ ಸ್ವರೂಪದ್ದಾಗಿವೆ. ಸಹಸ್ರಾರು ಶಾಸನಗಳಲ್ಲಿ ಮತ್ತು ತಾಮ್ರಪಟಗಳಲ್ಲಿ ದೊರೆಗಳು ವಿದ್ವಾಂಸರಿಗೆ, ದೇವಾಲಯಗಳಿಗೆ ಮತ್ತು ವಿದ್ಯಾಸಂಸ್ಥೆಗಳಿಗೆ ನೀಡಿರುವ ಭೂದತ್ತಿಗಳ ಬಗ್ಗೆ ಮಾಹಿತಿ ದೊರಕುತ್ತದೆ. 


ಹಲವು ಪ್ರಶಸ್ತಿಗಳು ಅಂದರೆ ಶಾಸನಗಳು ದೊರೆಗಳ ಗುಣವಿಶೇಷಗಳನ್ನು ಮತ್ತು ಸೈನಿಕ ಸಾಧನೆಗಳನ್ನು ಉಲ್ಲೇಖಿಸಿವೆ. ಇದಕ್ಕೆ ಉತ್ತಮ ನಿದರ್ಶನಗಳಂದರೆ ಸಮುದ್ರಗುಪ್ತನ ಅಲಹಾಬಾದ್ ಸ್ತಂಭಶಾಸನ, ಯಶೋಧರ್ಮನ್‌ನ ಮಂಡಸೋರ್ ಶಿಲಾಸ್ತಂಭ ಶಾಸನ, ಇಮ್ಮಡಿ ಪುಲಿಕೇಶಿಯ ಐಹೊಳೆ ಶಾಸನ ಇತ್ಯಾದಿ. 



ನಿಮಗೆ ತಿಳಿದಿರಲಿ : 


ಅಶೋಕನ ಶಾಸನಗಳು ಧಾರ್ಮಿಕ ಹಾಗೂ ಆಡಳಿತಾತ್ಮಕ ಸ್ವರೂಪದ್ದಾಗಿವೆ. ಅತ್ಯಂತ ಮಹತ್ವದ ಶಾಸನಗಳು ಭಾರತದ ಪ್ರಾಚೀನತಮ ಶಾಸನಗಳೆಂದರೆ ಅಶೋಕನ ಶಾಸನಗಳು, ಬಲೂಚಿಸ್ಥಾನದಿಂದ ಅಸ್ಸಾಮ್ ವರಗೆ, ನೇಪಾಳದಿಂದ ಕರ್ನಾಟಕದ ವರೆಗಿನ ವಿಶಾಲ ಪ್ರದೇಶದಲ್ಲಿ ಸುಮಾರು 150 ಅಶೋಕನ ಶಾಸನಗಳು ದೊರೆತಿವೆ. ಬ್ರಾಹ್ಮಲಿಪಿ ಮತ್ತು ಪಾಲಿ ಭಾಷೆಯಲ್ಲಿರುವ ಈ ಶಾಸನಗಳನ್ನು ಬಂಡೆಗಲ್ಲುಗಳ ಮತ್ತು ಶಿಲಾಸ್ಥಂಭಗಳ ಮೇಲೆ ಕೆತ್ತಲಾಗಿದೆ. ಅದ್ವಿತೀಯವಾದ ಈ ಶಿಲಾಶಾಸನಗಳು ಅಶೋಕ ಚಕ್ರವರ್ತಿಯ (ಕ್ರಿ. ಪೂ. 273-232) ಮಹಾನ್ ವ್ಯಕ್ತಿತ್ವ ಸಾಧನೆಗಳು, ಧರ್ಮ ಹಾಗೂ ಆಡಳಿತದ ಬಗ್ಗೆ ಅಮೂಲ್ಯವಾದ ಮಾಹಿತಿ ನೀಡುತ್ತವೆ. ಇವುಗಳು ಅಶೋಕನ ಸಾಮ್ರಾಜ್ಯದ ಮೇರೆಗಳನ್ನು ನಿರ್ಧರಿಸಲು ನೆರವಾಗುತ್ತವೆ.


ಅಶೋಕನ ಶಾಸನಗಳು ದೊರೆತಿದ್ದು :


ಕರ್ನಾಟಕದ ಬಳ್ಳಾರಿ, ರಾಯಚೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಒಟ್ಟು ಹತ್ತು ಅಶೋಕನ ಶಾಸನಗಳು ದೊರೆತಿವೆ. 


ಹಾಥಿಗುಂಪಾ ಶಾಸನ :


ಒರಿಸ್ಸಾದಲ್ಲಿ ಕಟಕ್ ಬಳಿಯ ಉದಯಗಿರಿ ಬೆಟ್ಟಗಳಲ್ಲಿನ ಹಾಥಿಗುಂಫಾ (ಹತಿಗುಂಫ ) ಎಂಬ ಗುಹೆಯಲ್ಲಿನ ಶಾಸನವು ಕಳಿಂಗದ ದೊರೆ ಖಾರವೇಲನ ಸೈನಿಕ ಸಾಧನೆಗಳ ಮತ್ತು ಆಡಳಿತದ ಬಗ್ಗೆ ತುಂಬ ಉಪಯುಕ್ತವಾದ ಮಾಹಿತಿ ಕೊಡುತ್ತದೆ. ಖಾರವೇಲನ ಚರಿತ್ರೆಯನ್ನು ಅರಿತುಕೊಳ್ಳಲು ಇದು ಏಕೈಕ ಮೂಲಾಧಾರವಾಗಿದೆ. ಇದು ಪ್ರಾಕೃತ ಭಾಷೆಯಲ್ಲಿ, ಬ್ರಾಡ್ಮಿ ಲಿಪಿಯಲ್ಲಿ ಬರೆಯಲ್ಪಟ್ಟಿದೆ.


ಜುನಾಗಡ್ ಶಾಸನ :


ಮಹಾಕ್ಷತ್ರಪ ರುದ್ರದಾಮನ್ ಕೆತ್ತಿಸಿದ ಜುನಾಗಡ (ಗಿರ್ನಾರ್) ಬಂಡೆಗಲ್ಲಿನ ಶಾಸನವು ಆತನ ಆಳ್ವಿಕೆಯ ಸಾಧನೆಗಳನ್ನು ತಿಳಿಸುತ್ತದೆ ಅಲ್ಲದೇ ಗಿರ್ನಾರ್ ಬಳಿಯಿದ್ದ ಸುದರ್ಶನ ಎಂಬ ಕೆರೆಯ ಚರಿತ್ರೆಯನ್ನು ಮತ್ತು ಆ ಕಾಲದ ರಾಜಕೀಯ ಸ್ಥಿತಿಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿದೆ. ಈ ಗಿರ್ನಾರ್ ಬಂಡೆಗಲ್ಲಿನ ಶಾಸನದ ಕೆಳಭಾಗದಲ್ಲಿ ಗುಪ್ತ ವಂಶದ ಸ್ಕಂದಗುಪ್ತನ ಶಾಸನವಿದೆ. ರುದ್ರದಾಮನ್ ದುರಸ್ತಿಪಡಿಸಿದ್ದ ಸುದರ್ಶನ ಕರೆಯು ಸ್ಕಂದಗುಪ್ತನ ಕಾಲದಲ್ಲಿ ಪುನಃ ದುರವಸ್ಥೆಗೀಡಾಗಿದ್ದುದರಿಂದ ಅದನ್ನು ಪುನಃ ಸರಿಪಡಿಸಲಾದ ವಿಷಯವನ್ನು ಮತ್ತು ಕೆಲವು ಚಾರಿತ್ರಿಕ ವಿವರಗಳನ್ನು ಸ್ಕಂದಗುಪ್ತನ ಗಿರ್ನಾರ್ ಶಾಸನ ಒಳಗೊಂಡಿದೆ.


ಸಮುದ್ರಗುಪ್ತನ ಅಲಹಾಬಾದ್ ಸ್ಥಂಭ ಶಾಸನ :


ಸಮುದ್ರಗುಪ್ತನ ಅಲಹಾಬಾದ್ ಸ್ತಂಭಶಾಸನವು ಪ್ರಮಾಣಭೂತವಾದ ಐತಿಹಾಸಿಕ ದಾಖಲೆಯಾಗಿದೆ. ಇದು ಮಹಾದಂಡನಾಯಕ ಹರಿಷೇಣನಿಂದ ಪ್ರಾಚೀನ ಸಂಸ್ಕೃತ ಭಾಷೆಯಲ್ಲಿ ರಚಿಸಲ್ಪಟ್ಟಿದೆ. ಈ ಪ್ರಶಸ್ತಿ ಲೇಖನವು ಸಾಹಿತ್ಯಕ ಮೌಲ್ಯದಿಂದ ಕೂಡಿದ ಒಂದೇ ದೊಡ್ಡ ವಾಕ್ಯವಾಗಿದ್ದು, 33 ಸಾಲುಗಳಲ್ಲಿ ಕೆತ್ತಲ್ಪಟ್ಟಿದೆ. ಸಮುದ್ರಗುಪ್ತನ ಬಗ್ಗೆ ಇತರ ಮೂಲಾಧಾರಗಳಿಲ್ಲ ಆದ್ದರಿಂದ ಈ ಮಹಾನ್ ಸಾಮ್ರಾಟನ ಖ್ಯಾತಿಯು ಈ ಅಮೂಲ್ಯವಾದ ಐತಿಹಾಸಿಕ ದಾಖಲೆಯನ್ನು ಆಧರಿಸಿದೆ.


ಅಲಹಾಬಾದ್ ಶಾಸನವು ಸಮುದ್ರಗುಪ್ತನ ದಿವ್ಯ ಚಾರಿತ್ರ್ಯ, ಸೈನಿಕ ಸಾಧನೆಗಳು, ಪರಾಕ್ರಮ, ಪಾಂಡಿತ್ಯ, ಕವಿತಾ ಸಾಮರ್ಥ್ಯ ಮುಂತಾದವುಗಳನ್ನು ಉಲ್ಲೇಖಿಸಿದೆ.


ಕರ್ನಾಟಕದ ಕುರಿತಾದ ಮಹತ್ವದ ಶಾಸನಗಳು :


ಪ್ರಾಚೀನ ಕರ್ನಾಟಕದ ರಾಜವಂಶಗಳ ಬಗ್ಗೆ ಲಭ್ಯವಿರುವ ಮಹತ್ವದ ಶಾಸನಗಳೆಂದರೆ

1. ಗೌತಮಿಪುತ್ರ ಶಾತಕರ್ಣಿಯ ನಾಸಿಕದ ಗುಹಾಶಾಸನ

2. ಹಲ್ಮಿಡಿ ಶಾಸನ, 

3. ಕಾಕುಸ್ಥವರ್ಮನ ತಾಳಗುಂದ ಶಾಸನ, 

4. ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನ ಮತ್ತು

5. ಮಯೂರವರ್ಮನ ಚಂದ್ರವಳ್ಳಿ ಶಾಸನ.


ಐಹೊಳೆ ಶಾಸನ : 


ಬಾದಾಮಿ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿಯ ಐಹೊಳೆ ಶಿಲಾಶಾಸನವು ಆತನ ದಿಗ್ವಿಜಯಗಳನ್ನು ಮನೋಹರವಾಗಿ ವರ್ಣಿಸುತ್ತದೆ. ಪುಲಕೇಶಿಯ ಆಸ್ಥಾನದ ಖ್ಯಾತ ಸಂಸ್ಕೃತ ಕವಿ ರವಿಕೀರ್ತಿ ಈ ಶಾಸನವನ್ನು ರಚಿಸಿದನು. ನರ್ಮದಾ ತೀರದಲ್ಲಿ ನಡೆದ ಯುದ್ಧದಲ್ಲಿ ಚಾಳುಕ್ಕ ನಡೆಯ ತೊಡೆತಗಳಿಂದ ಉರುಳಿ ಬೀಳುರುವ ತನ್ನ ಗಜದಳವನ್ನು ಕಂಡಾಗ ಹರ್ಷನ ಹರ್ಷವು ಆತನನ್ನು ತ್ಯಜಿಸಿತೆಂದು ರವಿಕೀರ್ತಿಯು ಐಹೊಳೆ ಪ್ರಶಸ್ತಿಯಲ್ಲಿ ಬಣ್ಣಿಸಿದ್ದಾನೆ. ಐಹೋಳೆಯ ಮೇಗುತಿ ದೇವಾಲಯದಲ್ಲಿ ಈ ಶಿಲಾಶಾಸನ ದೊರೆತಿದೆ. ಈ ಶಾಸನದಲ್ಲಿ ಉಕ್ತವಾದ ಶಾಲಿವಾಹನ ಶಕೆ 556 (ಅಂದರೆ ಕ್ರಿ. ಶಕ 634) ಎಂಬ ಕಾಲ ನಿರ್ದೆಶನವು ಇತಿಹಾಸದ ದೃಷ್ಟಿಯಿಂದ ತುಂಬ ಮಹತ್ವದ್ದಾಗಿದೆ.


ಉತ್ತರ ಮೇರೂರ್ ಶಾಸನ :


ಚೋಳ ದೊರೆ ಒಂದನೆಯ ಪರಾಂತಕನ ಉತ್ತರ ಮೇರೂರ್ ಶಾಸನವು ಚೋಳ ಸಾಮ್ರಾಜ್ಯದಲ್ಲಿನ ಸ್ಥಾನಿಕ ಆಡಳಿತಕ್ರಮದ (ಗ್ರಾಮ ಆಡಳಿತದ) ಮೇಲೆ ಬೆಳಕು ಚೆಲ್ಲುತ್ತದೆ. ದಕ್ಷಿಣ ಭಾರತದಲ್ಲಿ ದೊರೆತಿರುವ ಶಾಸನಗಳು ತಮಿಳು ರಾಜ್ಯಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತವೆ.


ವಿದೇಶೀ ಶಾಸನಗಳು 


ಕೆಲವು ವಿದೇಶಿ ಶಾಸನಗಳು ಉಪಯುಕ್ತವಾದ ಮಾಹಿತಿ ಒದಗಿಸುತ್ತವೆ. ಏಷ್ಯಾ ಮೈನರ್‌ನಲ್ಲಿನ ಬೊಘ ಜ್-ಕೊಯಿ ಶಾಸನಗಳಲ್ಲಿ ವೇದಕಾಲ ದೇವತೆಗಳ ಉಲ್ಲೇಖವಿದೆ. ಈ ಶಾಸನಗಳು ಆರ್ಯ ಪಂಗಡಗಳ ಚಲನವಲನಗಳನ್ನು ಗುರುತಿಸಲು ನೆರವಾಗಬಹುದು. 


ಇರಾನ್ ನಲ್ಲಿಯ ರ್ಪಪೊಲಿಸ್ ಮತ್ತು ನಕ್ಷ-ಇ-ರುಸ್ತಂಗಳಲ್ಲಿ ದೊರೆತಿರುವ ಶಾಸನಗಳು ಪ್ರಾಚೀನ ಭಾರತ ಮತ್ತು ಪರ್ಶಿಯಾ (ಇರಾನ್) ಗಳ ನಡುವಣ ರಾಜಕೀಯ ಸಂಬಂಧಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಒದಗಿಸುತ್ತವೆ.


ಶಾಸನಾಧಾರದಿಂದ ಪ್ರಾಚೀನ ಹಿಂದುಗಳು ಆಸ್ಟ್ರೇಯ ಏಷ್ಯದಲ್ಲಿ ನಡೆಸಿದ ವಸಾಹತುಗಾರಿಕೆಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ತಿಳಿದುಕೊಳ್ಳುವದು ಸಾಧ್ಯವಾಗಿದೆ. ದಕ್ಷಿಣ ಭಾರತದ ಅನೇಕ ಪ್ರಾಚೀನ ರಾಜವಂಶಗಳ ಇತಿಹಾಸ ರಚನೆಗೆ ಅಧಿಕ ಸಂಖ್ಯೆಯಲ್ಲಿ ಲಭ್ಯವಿರುವ ಮಹತ್ವದ ಮೂಲಾಧಾರಗಳೆಂದರೆ ಶಾಸನಗಳು.



ಶಾಸನಗಳ ಮಹತ್ವ:-


• ಶಾಸನಗಳು ಅತ್ಯಂತ ಮಹತ್ವದ ಹಾಗೂ ನಂಬಲರ್ಹವಾದ ಮೂಲಾಧಾರವಾಗಿವೆ. 

• ಪ್ರಾಚೀನ ಭಾರತದ ರಾಜಕೀಯ ಇತಿಹಾಸದ ರಚನೆಗೆ ಶಾಸನಗಳು ನೀಡಿರುವ ನೆರವು ಗಣನೀಯವಾಗಿದೆ.

• ಶಾಸನಗಳು ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಆಡಳಿತಾತ್ಮಕ ಹಾಗೂ ಸಾಂಸ್ಕೃತಿಕ ಸ್ಥಿತಿಗತಿಗಳ ಬಗ್ಗೆ ಪ್ರಮಾಣಭೂತವಾದ ಮಾಹಿತಿಯನ್ನು ಒದಗಿಸುತ್ತವೆ.


ಇವುಗಳನ್ನೂ ಓದಿ 













ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಶಾಸನಗಳ ಕುರಿತಾದ ಮಾಹಿತಿ ಇಲ್ಲಿದೆ :-


ಅಶೋಕನನ್ನು ಭಾರತದ ಶಿಲಾಶಾಸನಗಳ ಪಿತಾಮಹ ಶಿಲಾಶಾಸನಗಳ ರಾಜ, ಸ್ವಕಥನಗಾರ, ಶಾಸನಗಳ ಜನಕ ಎಂದು ಕರೆಯುತ್ತಾರೆ.

ಹೆಚ್.ಜಿ. ವೇಲ್ಸ್ ಎಂಬ ಇತಿಹಾಸಕಾರನ ಪ್ರಕಾರ ಅಶೋಕನು ವಿಶ್ವದ ಗಣ್ಯ ಚಕ್ರವರ್ತಿ, ಪ್ರೀತಿಯ ಮೂಲಕ ವಿಜಯ ಸಾಧಿಸಿದ ನವಯುಗದ ಪ್ರವರ್ತಕ. ಇತಿಹಾಸ ಎಂಬ ದಿಗಂತದಲ್ಲಿನ ಧೃವತಾರೆ 

ಕರ್ನಾಟಕದ ಶಾಸನಗಳ ಪಿತಾಮಹ ಬಿ. ಎಲ್. ರೈಸ್

• ಅಶೋಕನ ಶಾಸನಗಳು ಬ್ರಾಹ್ಮ, ಖರೋಷ್ಠಿ, ಗ್ರೀಕ್, ಅರಾಮಿಕ ಮತ್ತು ದೇವನಾಗರಿ ಲಿಪಿಯಲ್ಲಿವೆ.

• ಅಶೋಕನ ಶಾಸನಗಳು ಪ್ರಾಕೃತ, ಪಾಳಿ ಭಾಷೆಯಲ್ಲಿವೆ. 

• ಅಶೋಕನ ಶಾಸನಗಳು ಹೆಚ್ಚಾಗಿ ಬ್ರಾಹ್ಮಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿ ಕಂಡು ಬಂದಿವೆ.

• ಇಲ್ಲಿಯವರೆಗೆ ದೊರೆತ ಒಟ್ಟು ಶಾಸನಗಳ ಸಂಖ್ಯೆ 53

ಅಶೋಕನ ಶಾಸನವನ್ನು ಮೊಟ್ಟ ಮೊದಲ ಬಾರಿಗೆ ಅಧ್ಯಯನ ಮಾಡಿದವರು ಜೇಮ್ಸ್ ಪ್ರಿನ್ಸೆಪ್ 

ಜೇಮ್ಸ್ ಪ್ರಿನ್ಸೆಪ್ 1837 ದೆಹಲಿಯಲ್ಲಿರುವ ತೋಪ್ರಾ ಶಾಸನವನ್ನು ಮೊದಲಿಗೆ ಓದಿದರು.

ಅಶೋಕನ ಶಾಸನಗಳನ್ನು ಕೆತ್ತಿದ ಶಿಲ್ಪಿಯ ಹೆಸರು ಕಂಡುಬಂದ ಶಾಸನ ಬ್ರಹ್ಮಗಿರಿ ಶಾಸನ [ಶಿಲ್ಪಿ - ಚಪಡ]

• ಅಶೋಕನ ಹೆಸರು ಕಂಡು ಬಂದ ಶಾಸನ- ಮಸ್ಕಿ ಶಾಸನ ಮತ್ತು ಗುಜರಾ ಶಾಸನ.

ಮಸ್ಕಿ ಶಾಸನವನ್ನು 1915 ರಲ್ಲಿ ಸಿ. ಬ್ರಿಡೆನ್ ಎಂಬುವವರು ಸಂಶೋಧನೆ ಮಾಡಿದರು.

ಮಸ್ಕಿ ಶಾಸನದಲ್ಲಿ ಅಶೋಕನ ಹೆಸರು - ದೇವನಾಂಪ್ರಿಯ ಪ್ರಿಯದರ್ಶಿ ಅಶೋಕ ಎಂದು ಓದಿದವರು - ಡಾ|| ಶ್ರೀನಿವಾಸಚಾರ್ಯ.

• ಅಶೋಕ ಬೌದ್ಧ ಧರ್ಮ ಸ್ವೀಕರಿಸಿದರ ಬಗ್ಗೆ ತಿಳಿಸುವ ಶಾಸನ – ಬಾಬ್ರೂ ಶಾಸನ [ಕಲ್ಕತ್ತಾ]

• ಅಶೋಕನು ವೈಯಕ್ತಿಕವಾಗಿ ಬೌದ್ಧಧರ್ಮ ಸ್ವೀಕಾರ ಮಾಡಿದ್ದನೆಂದು ತಿಳಿಸುವ ಶಾಸನ - ಬಾಬ್ರೂ ಶಾಸನ.

• ಬುದ್ದಂ ಶರಣಂ ಗಚ್ಛಾಮಿ ಎಂದು ತಿಳಿಸುವ ಶಾಸನ ಬಾಬ್ರೂ ಶಾಸನ.

• ಅಶೋಕನು ಪ್ರಾಣಿ ಹತ್ಯೆಯನ್ನು ನಿಷೇಧ ಮಾಡಿದನೆಂದು ತಿಳಿಸುವ ಶಾಸನ -1ನೇ ಬಂಡೆಗಲ್ಲು ಶಾಸನ.

• ಅಶೋಕನು ಧರ್ಮಮಹಾಮಾತ್ರರನ್ನು ನೇಮಕ ಮಾಡಿಕೊಂಡಿದ್ದನೆಂದು ತಿಳಿಸುವ ಶಾಸನ - 3 ನೇ ಬಂಡೆಗಲ್ಲು ಶಾಸನ.

• ಅಶೋಕನ ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ - 13 ನೇ ಬಂಡೆಗಲ್ಲು ಶಾಸನ.

• ಕಳಿಂಗ ಯುದ್ಧದ ಬಗ್ಗೆ ಮತ್ತು ಅತ್ಯಂತ ದೊಡ್ಡದಾದ ಶಾಸನ - 13ನೇ ಬಂಡೆಗಲ್ಲು (ಗೌಣ) ಶಾಸನ.

• ಅಶೋಕನ ಕಂದಾಯ ವ್ಯವಸ್ಥೆಯ ಬಗ್ಗೆ ತಿಳಿಸುವ ಏಕೈಕ ಶಾಸನ - ರುಮಿಂಡೈ ಶಾಸನ [ನೇಪಾಳ]

• ಅಶೋಕನ ಖರೋಷ್ಠಿ ಲಿಪಿ ಹೊಂದಿರುವ ಶಾಸನಗಳು - ಶಬಾಜಗಿರಿ ಮತ್ತು ಮನ್ನೀರ್ [ಪಾಕಿಸ್ತಾನ]

• ಅಶೋಕನ ಗ್ರೀಕ್ & ಅರಾಮಿಕ್ ಲಿಪಿಯಲ್ಲಿರುವ ಶಾಸನ ಕಂದಹಾರ ಶಾಸನ ಇದರಲ್ಲಿ ಅಶೋಕನನ್ನು ಸಮಸ್ತ ಪೃಥ್ವಿಪತಿ ಎಂದು ಉಲ್ಲೇಖಿಸಲಾಗಿದೆ. [ಅಪಘಾನಿಸ್ತಾನ]

• ಕರ್ನಾಟಕದಲ್ಲಿ ದೊರೆತ ಅಶೋಕನ ಒಟ್ಟು ಶಾಸನಗಳು 14

• ಅವುಗಳಲ್ಲಿ ಪ್ರಮುಖವಾದವುಗಳೆಂದರೆ

01. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ

02. ಸಿದ್ದಾಪುರ ಮತ್ತು ಜಟ್ಟಿಂಗರಾಮೇಶ್ವರ

03, ಕೊಪ್ಪಳ ಜಿಲ್ಲೆಯ ಗವಿಮಠ ಮತ್ತು ಪಾಲ್ಕಿಗುಂಡ

04, ರಾಯಚೂರು ಜಿಲ್ಲೆಯ ಮಸ್ಕಿ

05, ಬಳ್ಳಾರಿ ಜಿಲ್ಲೆಯ ನಿಟ್ಟೂರು & ಉದಯಗೋಳ

06, ಕಲಬುರಗಿ ಜಿಲ್ಲೆಯ ಸನ್ನತಿ


• ಕರ್ನಾಟಕದಲ್ಲಿ ದೊರೆತ ಅಶೋಕನ ಮೊಟ್ಟ ಮೊದಲ

ಶಾಸನ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಶಾಸನ

• ಕರ್ನಾಟಕದಲ್ಲಿರುವ ಅಶೋಕನ ದೊಡ್ಡ ಶಾಸನ ಸನ್ನತಿ ಶಾಸನ

ಅಶೋಕನ ಎಲ್ಲಾ ಶಾಸನಗಳನ್ನು ಕೆತ್ತಿದ ವ್ಯಕ್ತಿ - ಚಪಡ.

ಚಪಡನೇ ಅಶೋಕನ ಎಲ್ಲ ಶಾಸನಗಳನ್ನು ಕೆತ್ತಿದವ ಎಂದು ತಿಳಿಸುವ ಶಾಸನ ಬ್ರಹ್ಮಗಿರಿ ಶಾಸನ

• ಕರ್ನಾಟಕದ ಮೊದಲ ಶಾಸನವಾದ ಬ್ರಹ್ಮಗಿರಿ ಶಾಸನ ಚಿತ್ರದುರ್ಗ ಜಿಲ್ಲೆಯಲ್ಲಿದೆ

• ಬ್ರಹ್ಮಗಿರಿ ಶಾಸನದ ಸಂಶೋಧಕ ಬಿ.ಎಲ್. ರೈಸ್ (1897).

• ಕರ್ನಾಟಕದ ಶಾಸನಗಳ ಪಿತಾಮಹ ಬಿ.ಎಲ್. ರೈಸ್.


ಇವುಗಳನ್ನೂ ಓದಿ 












No comments:

Post a Comment

Important Notes

Random Posts

Important Notes

Popular Posts

ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-04

 ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-04  Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams Educational psychology involves  the study of how people learn, including teaching methods, instructional processes, and individual differences in learning . The field of educational psychology incorporates a number of other disciplines, including developmental psychology, behavioral psychology, and cognitive psychology. Educational Psychology is the study of the Learning and Teaching Process. Educational Psychology includes the Development of Child and also it deals with the Pedagogy of Child learning. Child Development and Pedagogy are one of the major subjects in the field of Teachers Education. Like D.ed, B.ed and also in the recruitment of Teachers.  Child Development and Pedagogy are very useful For Teachers Eligibility Test (TE...

09 ಮಾರ್ಚ್ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು/ಕ್ವಿಜ್

09 ಮಾರ್ಚ್ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು/ಕ್ವಿಜ್ 🌺 09 ಮಾರ್ಚ್ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು/ಕ್ವಿಜ್  🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ General Knowledge Kannada Question Answers 2022 Series Free Online Mock Test and Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2022, Best Mock Test Series for Success in PSI PC 2022,   Kannada GK Online Free Mock Tests for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

09 ಮಾರ್ಚ್ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು

          09 ಮಾರ್ಚ್ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು 🌺 09 ಮಾರ್ಚ್ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2021 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams

 Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams  Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams Educational psychology involves  the study of how people learn, including teaching methods, instructional processes, and individual differences in learning . The field of educational psychology incorporates a number of other disciplines, including developmental psychology, behavioral psychology, and cognitive psychology. Educational Psychology is the study of the Learning and Teaching Process. Educational Psychology includes the Development of Child and also it deals with the Pedagogy of Child learning. Child Development and Pedagogy are one of the major subjects in the field of Teachers Education. Like D.ed, B.ed an...

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-22

 ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-22 Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams

Indian Constitution Most Important Question Answers in Kannada For All Competitive Exams

ಭಾರತದ ಸಂವಿಧಾನದ ಪ್ರಶ್ನೋತ್ತರಗಳು ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತದ ಸಂವಿಧಾನ ದ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಭಾರತೀಯ ಸಂವಿಧಾನದ ಜ್ಞಾನ ಇರಬೇಕಾದದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯ ಸಂವಿಧಾನ ದ ಹಲವಾರು ಮಹತ್ವದ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇವುಗಳು ನಿಮ್ಮ ಅಧ್ಯಯನಕ್ಕೆ ಸಹಕಾರಿಯಾಬಹುದೆಂಬುದು ನಮ್ಮ ಮಹದಾಶಯ..!! 1. ಸಂವಿಧಾನ ಎಂದರೇನು? > ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಮೂಲ ನಿಯಮಗಳ ದಾಖಲೆಗಳು 2. ಸಂವಿಧಾನ ಎಂಬ ಪದದ ಮೂಲ ಯಾವುದು? > ಕಾನ್ಸ್ಟಿಟ್ಯೂಟ್ 3. ‘ಕಾನ್ಸ್ಟಿಟ್ಯೂಟ್’ ಅರ್ಥವೇನು? > ನಿಯೋಜಿಸು, ಸಂಯೋಜಿಸು ಮತ್ತು ವಿಧಿವತ್ತಾಗಿ ಸ್ಥಾಪಿಸು ಎಂದರ್ಥ 4. ಸಂವಿಧಾನಾತ್ಮಕ ಆಡಳಿತವು ಮೊಟ್ಟ ...