Type Here to Get Search Results !

Indian Constitution Most Important Question Answers in Kannada For All Competitive Exams

ಭಾರತದ ಸಂವಿಧಾನದ ಪ್ರಶ್ನೋತ್ತರಗಳು




ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತದ ಸಂವಿಧಾನದ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಭಾರತೀಯ ಸಂವಿಧಾನದ ಜ್ಞಾನ ಇರಬೇಕಾದದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯ ಸಂವಿಧಾನದ ಹಲವಾರು ಮಹತ್ವದ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇವುಗಳು ನಿಮ್ಮ ಅಧ್ಯಯನಕ್ಕೆ ಸಹಕಾರಿಯಾಬಹುದೆಂಬುದು ನಮ್ಮ ಮಹದಾಶಯ..!!

1. ಸಂವಿಧಾನ ಎಂದರೇನು?
> ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಮೂಲ ನಿಯಮಗಳ ದಾಖಲೆಗಳು

2. ಸಂವಿಧಾನ ಎಂಬ ಪದದ ಮೂಲ ಯಾವುದು?
> ಕಾನ್ಸ್ಟಿಟ್ಯೂಟ್

3. ‘ಕಾನ್ಸ್ಟಿಟ್ಯೂಟ್’ ಅರ್ಥವೇನು?
> ನಿಯೋಜಿಸು, ಸಂಯೋಜಿಸು ಮತ್ತು ವಿಧಿವತ್ತಾಗಿ ಸ್ಥಾಪಿಸು ಎಂದರ್ಥ

4. ಸಂವಿಧಾನಾತ್ಮಕ ಆಡಳಿತವು ಮೊಟ್ಟ ಮೊದಲಿಗೆ ಯಾವ ರಾಷ್ಟ್ರದಲ್ಲಿ ಎಷ್ಟ್ರರಲ್ಲಿ ಜಾರಿಗೆ ಬಂದಿತು?
> 1815 ರಲ್ಲಿ ಇಂಗ್ಲೆಂಡಿನಲ್ಲಿ( ಯು.ಕೆ)

5. ಸಂವಿಧಾನವಿಲ್ಲದ ರಾಷ್ಟ್ರ ರಾಷ್ಟ್ರವೇ ಅಲ್ಲ ಅದೊಂದು ಅರಾಜಕತೆಯ ಪ್ರಭುತ್ವವೆಂದು ಹೇಳಿದ ಮಹಾಶಯ ಯಾರು..?
> ಜೆನಿಲಿಕ್

6. ಸಂವಿಧಾನದ ರಕ್ಷಕ ಯಾರು?
> ನ್ಯಾಯಾಂಗ

7. ಪ್ರಪಂಚದಲ್ಲಿಯೇ ಅತ್ಯಂತ ವಿಸ್ತಾರವಾದ ಬೃಹತ್ ಸಂವಿಧಾನ ಯಾವುದು?
> ಭಾರತ ಸಂವಿಧಾನ

8. ಭಾರತದ ಸಂವಿಧಾನದ ರಚನಾ ಸಭೆಯ ಮೊದಲ ಹಂಗಾಮಿ ಅಧ್ಯಕ್ಷರು ಯಾರು?
> ಡಾ. ಸಚ್ಚಿದಾನಂದ ಸಿನ್ಹ

9. ಭಾರತದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
> ಡಾ. ಬಿ. ಆರ್. ಅಂಬೇಡ್ಕರ್

10. ಭಾರತದ ಸಂವಿಧಾನವನ್ನು ಯಾವಾಗ ಅಧಿಕೃತವಾಗಿ ಜಾರಿಗೆ ತರಲಾಯಿತು?
> 1950 ಜನವರಿ 26


11. ಭಾರತದ ಸಂವಿಧಾನವನ್ನು ರಚಿಸಲು ಯಾವ ರಾಷ್ಟ್ರದ ಪದ್ಧತಿಯನ್ನು ಅನುಸರಿಸಲಾಯಿತ?
> ಇಂಗ್ಲೆಂಡ್, ಅಮೇರಿಕಾ, ಕೆನಡಾ, ಐರ್ಲ್ಯಾಂಡ್

12. ಯಾವ ಕಾಯ್ದೆಯನ್ನು ಭಾರತ ಸಂವಿಧಾನದ ಅಡಿಗಲ್ಲು ಎಂದು ಕರೆಯಲಾಗಿದೆ?
> 1935 ರ ಭಾರತ ಸರ್ಕಾರದ ಕಾಯ್ದೆ

13. ಭಾರತದ ಸಂವಿಧಾನದಲ್ಲಿರುವ 3 ಬಗೆಯ ತುರ್ತು ಪರಿಸ್ಥಿತಿಗಳು ಯಾವುವು?
> ಎ. ರಾಷ್ಟ್ರೀಯ ತುರ್ತು ಪರಿಸ್ಥಿತಿ
ಬಿ. ರಾಜ್ಯ ತುರ್ತು ಪರಿಸ್ಥಿತಿ
ಸಿ. ಆರ್ಥಿಕ ತುರ್ತು ಪರಿಸ್ಥಿತಿ

14. ಸ್ವತಂತ್ರ್ತ ಭಾರತದಲ್ಲಿ ಸಂಸ್ಥಾನಗಳ ವಿಲೀನಿಕರಣ ಮಾಡಿದವರು ಯಾರು?
> ಸರ್ದಾರ್ ವಲ್ಲಭಾಯ್ ಪಟೇಲ್

15. ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾದಾಗ ಆಳ್ವಿಕೆ ಮಾಡುತ್ತಿದ್ದ ಕಾಶ್ಮೀರದ ದೊರೆ ಯಾರು?
> ರಾಜ ಹರಿಸಿಂಗ್

16. ಭಾರತ ಸಂವಿಧಾನದಲ್ಲಿ ಯಾವ ಮಸೂದೆ ಅತ್ಯಂತ ವ್ಯಾಪಕ ತಿದ್ದುಪಡಿಯೆಂದು ಖ್ಯಾತಿಗಳಿಸಿದೆ?
> 42 ನೆ ತಿದ್ದುಪಡಿ

17. ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ಎಂತಹ ಪೌರತ್ವ ನೀಡಿದೆ?
> ಏಕಪೌರತ್ವ

18. ಸಂವಿಧಾನ ರಚನಾ ಸಭೆ ರಾಷ್ಟ್ರಧ್ವಜದ ವಿನ್ಯಾಸವನ್ನು ಯಾವಾಗ ಒಪ್ಪಿಕೊಂಡರು?
>  1947 ಜುಲೈ 22

19. ರಾಷ್ಟ್ರಧ್ವಜದ ವಿನ್ಯಾಸವನ್ನು ಮಾಡಿದವರು ಯಾರು?
  >  ಪಿಂಗಾಲಿ ವೆಂಕಯ್ಯ

20. ಪಾರ್ಲಿಮೆಂಟ್‍ನ ಮೂಲ ಪದ ಯಾವುದು?
> ಫ್ರೆಂಚ್ ಭಾಷೆಯ ಪಾರ್ಲರ್ ಮತ್ತು ಲ್ಯಾಟಿನ್ ಭಾಷೆಯ ‘ ಪಾರ್ಲಿಮೆಂಟಮ್’



21. ಪ್ರಜಾಪ್ರಭುತ್ದ ಹೃದಯ ಅಥವಾ ರಕ್ಷಾಕವಚ ಯಾವುದು?
> ಸಂಸತ್

22. ಅಮರಿಕಾದ ಸಂಸತ್ತನ್ನು ಏನೆಂದು ಕರೆಯುತ್ತಾರೆ?
>  ಕಾಂಗ್ರೆಸ್

23. ಅಮೇರಿಕಾದ ಕಾಂಗ್ರೆಸ್‍ನ ಮೇಲ್ಮನೆ ಯಾವುದು?
> ಸೆನೆಟ್

24. ಇಂಗ್ಲೆಂಡ್‍ನ ಸಂಸತ್ತನ್ನು ಏನೆಂದು ಕರೆಯುತ್ತಾರೆ?
> ಪಾರ್ಲಿಮೆಂಟ್

25. ಜಪಾನಿನ ಸಂಸತ್ತನ್ನು ಏನೆಂದು ಕರೆಯುತ್ತಾರೆ?
> ಡಯಟ್

26. ಭಾರತದಲ್ಲಿ ಸೇನಾ ಪಡೆಗಳ ಮಹಾದಂಡನಾಯಕನಾರು?
>  ರಾಷ್ಟ್ರಪತಿಗಳು

27. ಭಾರತವು ಯಾವ ಮಾದರೀಯ ಕಾರ್ಯಾಂಗವನ್ನು ಹೊಂದಿದೆ?
>  ಸಂಸದೀಯ ಕಾರ್ಯಾಂಗ

28. ಭಾರತದಲ್ಲಿ ರಾಷ್ಟ್ರಪತಿಯಾದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಯಾರು?
> ಎ. ಪಿ. ಜೆ. ಅಬ್ದುಲ್ ಕಲಾಮ್

29. ಭಾರತದಲ್ಲಿರುವ ರಾಷ್ಟ್ರಪತಿಯವರ ಅಧಿಕೃತ ನಿವಾಸ ಯಾವುದು?
> ರಾಷ್ಟ್ರಪತಿ ಭವನ

30. ರಾಷ್ಟ್ರಪತಿ ಭವನವನ್ನು ನಿರ್ಮಿಸಿದವರು ಯಾರು?
> ಬ್ರಿಟಿಷ್ ಅಧಿಕಾರಿ ಎಡ್ವಿನ್ ಲೂಬಿ ಎನ್ಸ್

31. ಅಮೇರಿಕಾದ ರಾಷ್ಟ್ರಾಧ್ಯಕ್ಷರ ನಿವಾಸವನ್ನು ಏನೆಂದು ಕರೆಯುತ್ತಾರೆ?
> ಶ್ವೇತ ಭವನ

32. ಸಂವಿಧಾನದ 352 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ?
> ರಾಷ್ಟ್ರೀಯ ತುರ್ತು ಪರಿಸ್ಥಿತಿ

33. ಸಂವಿಧಾನದ 356 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ?
> ರಾಜ್ಯ ತುರ್ತು ಪರಿಸ್ಥಿತಿ

34. ಸಂವಿಧಾನದ 360 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ?
>  ಆರ್ಥಿಕ ತುರ್ತು ಪರಿಸ್ಥಿತಿ

35. ಯಾರನ್ನು ಭಾರತದ ದ್ವಿತೀಯ ಪ್ರಜೆ ಎಂದು ಕರೆಯಲಾಗುತ್ತದೆ?
> ಉಪರಾಷ್ಟ್ರಪತಿ

36. ಸ್ವತಂತ್ರ್ಯ ಭಾರತದ ಪ್ರಥಮ ಶಿಕ್ಷಣ ಮಂತ್ರಿ ಯಾರು?
> ಮೌಲಾನ್ ಅಬ್ದಿಲ್ ಕಲಾಂ ಆಜಾದ್

37. ಭಾರತದಲ್ಲಿ ಯಾವ ಪ್ರಧಾನಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದರು?
> ಇಂದಿರಾಗಾಂಧಿ

38. ರಾಮಜನ್ಮಭೂಮಿ ನ್ಯಾಸದ ನೂತನ ಅಧ್ಯಕ್ಷ ಯಾರು?
> ಗೋಪಾಲ್‍ದಾಸ್

39. ರಾಜ್ಯದ ಪ್ರಥಮ ಪ್ರಜೆ ಯಾರು?
>  ರಾಜ್ಯಪಾಲರು

40. ರಾಜ್ಯಪಾಲರ ಹುದ್ದೆಯನ್ನು ಸೃಷ್ಟಿಸಿದ ರಾಷ್ಟ್ರ ಯಾವುದು?
> ಇಂಗ್ಲೆಂಡ್

41. ರಾಜ್ಯಪಾಲರನ್ನು ಯಾರು ನೇಮಕ ಮಾಡುತ್ತಾರೆ?
>  ರಾಷ್ಟ್ರಪತಿಗಳು

42. ರಾಜ್ಯಪಾಲರಿಗೆ ಯಾರು ಪ್ರಮಾಣ ವಚನ ಬೋಧಿಸುತ್ತಾರೆ?
> ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು

43. ಭಾರತದಲ್ಲಿ ಯಾವ ಪ್ರಧಾನಮಂತ್ರಿಯ ಅಧಿಕಾರಾವಧಿಯಲ್ಲಿ ಕಾರ್ಗಿಲ್ ಕದನ ಸಂಭವಿಸಿತು?
> ಎ. ಬಿ. ವಾಜಪೇಯಿ

44. ಭಾರತ ಕಂಡ ಅತಿ ವೃಧ್ಧ ವಯಸ್ಸಿನ ಪ್ರಧಾನಿ ಯಾರು?
>  ಮುರಾರ್ಜಿ ದೇಸಾಯಿ (80 ವರ್ಷ)

45. ಸ್ನೇಹ ಸಂಬಂಧಕ್ಕಾಗಿ ಚೀನಾಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಯಾರು?
>  ಜವಹರಲಾಲ್ ನೆಹರು

46. ಭಾರತದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು?
>  ಸುಚೇತಾ ಕೃಪಲಾನಿ

47. ಯಾವ ಮುಖ್ಯಮಂತ್ರಿಯ ಕಾಲದಲ್ಲಿ ಕರ್ನಾಟಕದಲ್ಲಿ ವಿಧಾನಸೌಧವನ್ನು ಕಟ್ಟಲಾಯಿತು?
> ಕೆಂಗಲ್ ಹನುಮಂತಯ್ಯ

48. ಮೂಲಭೂತ ಹಕ್ಕುಗಳು ಅಥವಾ ಸಂವಿಧಾನದ ರಕ್ಷಕನಾರು?
> ಸರ್ವೋಚ್ಛ ನ್ಯಾಯಾಲಯ

49. ಸರ್ವೋಚ್ಚ ನ್ಯಾಯಾಲಯ ಯಾವಾಗ ಅಸ್ತಿತ್ವಕ್ಕೆ ಬಂದಿತು?
> 1950 ಜನವರಿ 26

50. ಭಾರತದಲ್ಲಿ ಸವೋಚ್ಛ ನ್ಯಾಯಾಲಯದ ನ್ಯಾಯಪೀಠ ಎಲ್ಲಿದೆ?
> ನವದೆಹಲಿ



51. ಸಂವಿಧಾನದ ಅ0ತಿಮ ವ್ಯಾಖ್ಯಾನಕಾರರು ಯಾರು?
> ಸುಪ್ರೀಂ ಕೋರ್ಟ್

52. ಭಾರತದ ಯಾವ 3 ರಾಜ್ಯಗಳಿಗೆ ಒಂದೇ ಹೈಕೋರ್ಟ್‍ಗಳಿವೆ?
> ಪಂಜಾಬ್, ಹರಿಯಾಣ, ಚಂಡೀಗಢ

53. ಸುಪ್ರೀಂಕೋರ್ಟ್‍ನ ಪ್ರಥಮ ನ್ಯಾಯಾಧೀಶರು ಯಾರಾಗಿದ್ದರು?
> ಹರಿಲಾಲ್- ಜೆ- ಕನಿಯಾ

54. ಸುಪ್ರೀಂಕೋರ್ಟ್‍ನ ನ್ಯಾಯಾಧೀಶರನ್ನು ಅಧಿಕಾರದಿಂದ ಪದಚ್ಯುತಗೊಳಿಸುವ ವಿಧಾನ ಯಾವುದು?
>  ಮಹಾಭಿಯೋಗ

55. ಭಾರತದ ಪ್ರಥಮ ಮಹಿಳಾ ರಾಜ್ಯಪಾಲರು ಯಾರು?
> ಸರೋಜಿನಿ ನಾಯ್ಡು

56. ಸ್ವತಂತ್ರ ಭಾರತದ ಪ್ರಥಮ ವಿದೇಶಾಂಗ ಮಂತ್ರಿ ಯಾರು?
> ಜವಹರಲಾಲ್ ನೆಹರು

57. ಯಾವ ಪ್ರಧಾನಮಂತ್ರಿಯ ನಾಯಕತ್ವದಲ್ಲಿ 1986 ರಲ್ಲಿ ಬೆಂಗಳೂರಿನಲ್ಲಿ 2 ನೇ ಸಾರ್ಕ್ ಸಮ್ಮೇಳನ ನಡೆಯಿತು?
> ರಾಜೀವ್‍ಗಾಂಧಿ

58. ಸ್ವತಂತ್ರ ಭಾರತದ ಪ್ರಥಮ ಹಣಕಾಸು ಸಚಿವರು ಯಾರು?
> ಆರ್. ಕೆ. ಷಣ್ಮುಗಂ ಚಟ್ಟಿ

59. ಅಮೇರಿಕಾ ಯಾವ ಮಾದರಿಯ ಕಾರ್ಯಾಂಗವನ್ನು ಹೊಂದಿದೆ?
> ಅಧ್ಯಕ್ಷೀಯ ಕಾರ್ಯಾಂಗ

60. ರಾಷ್ಟ್ರಪತಿ ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ನೀಡುತ್ತಾರೆ?
> ಉಪರಾಷ್ಟ್ರಪತಿ


61. ನೀತಿ ಆಯೋಗದ ಮೊದಲ ಉಪಾಧ್ಯಕ್ಷರು ಯಾರು?
> ಅರವಿಂದ್ ಪನಗರಿಯಾ

62. ರಾಜ್ಯಸಭೆಗೆ ಎಷ್ಟು ಸದಸ್ಯರನ್ನು ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡುತ್ತಾರೆ?
> 12

63. ಮಂತ್ರಿಗಳ ವೇತನ ಮತ್ತು ಭತ್ಯೆಯನ್ನು ಯಾರು
ನಿರ್ಧರಿಸುತ್ತಾರೆ?
> ಸಂಸತ್ತು 

64. ಭಾರತದ ರಾಷ್ಟ್ರಪತಿಯ ದೋಷಾರೋಪಣೆಗೆ ಎಷ್ಟು ದಿನಗಳ ಪೂರ್ವ ಸೂಚನೆ ಬೇಕು?
>14ದಿನಗಳು

65. ಪಂಚಾಯತ್ ರಾಜ್‌ನ ಮೂರು ಹಂತದ ವ್ಯವಸ್ಥೆಯನ್ನು ಎರಡು ಹಂತದ ವ್ಯವಸ್ಥೆಯಿಂದ ಬದಲಾಯಿಸಬೇಕು ಎಂದು ಯಾವ ಸಮಿತಿಯು ಶಿಫಾರಸು ಮಾಡಿದೆ?
> ಅಶೋಕ್ ಮೆಹ್ತಾ ಸಮಿತಿ

66. ಯಾವ ವಿಧಿಯು ನಾಗಾಲ್ಯಾಂಡ್ ರಾಜ್ಯಕ್ಕೆ ವಿಶೇಷ ಸವಲತ್ತುಗಳನ್ನು ನೀಡುತ್ತದೆ ?
> 371 ಎ 

67. ಚುನಾವಣಾ ಮುಖ್ಯ ಆಯುಕ್ತಕರು ಅಧಿಕಾರಾವಧಿಯನ್ನು ಯಾರು ನಿರ್ಧರಿಸುತ್ತಾರೆ?
> ಭಾರತದ ರಾಷ್ಟ್ರಪತಿಗಳು

68. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ಅಧಿಕಾರ ಅವಧಿ ಎಷ್ಟು ವರ್ಷ?
> 65

69. ಕನಿಷ್ಠ ವೇತನ ಕಾಯ್ದೆಯನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು?
> 1948

70. ರಾಜ್ಯಸಭೆಯು ಹಣಕಾಸು ಮಸೂದೆಗೆ ತನ್ನ ಒಪ್ಪಿಗೆಯನ್ನು ಎಷ್ಟು ದಿನಗಳವರೆಗೆ ತಡೆಹಿಡಿಯಬಹುದು?
> 14 ದಿನಗಳು

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section