Breaking

Sunday, 12 September 2021

Today Top-10 General Knowledge Question Answers with Explanation in Kannada for All Competitive Exams-02

Today Top-10 General Knowledge Question Answers with Explanation in  Kannada for All Competitive Exams-02

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ದಕ್ಷಿಣ ಭಾರತದ ಮೊದಲ ಸ್ವತಂತ್ರ ರಾಜವಂಶ
ಎ, ಚೋಳರು
ಬಿ. ಚೇರರು
ಸಿ. ಪಾಂಡ್ಯರು
ಡಿ, ಶಾತವಾಹನರು


ಸರಿಯಾದ ಉತ್ತರ : ಡಿ. ಶಾತವಾಹನರು 

ವಿವರಣೆ : ಶಾತವಾಹನರು ದಕ್ಷಿಣ ಭಾರತ ದಖನ್‌ನ ಮೊದಲ ರಾಜವಂಶವಾಗಿದೆ. ಇವರು ಚಂದ್ರಗುಪ್ತಮೌರ್ಯನ ಕಾಲದಲ್ಲಿ ಗೋದಾವರಿ, ಕೃಷ್ಣ ನದಿಗಳ ಮಧ್ಯೆ ನೆಲೆಸಿದ್ದು ಸಾಮಂತವಾಗಿ ಕಪ್ಪಕಾಣಿಕೆಯನ್ನು ಸಲ್ಲಿಸುತ್ತಿದ್ದರು. ಕ್ರಿ.ಪೂ. 220ರ ವೇಳೆಗೆ ಈ ವಂಶದ ಸಿಮುಖನು ಸ್ವತಂತ್ರನಾಗಿ ಶ್ರೀಕಾಕುಲಂನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು. ಶಾತವಾಹನ ವಂಶದ ಪ್ರಮುಖ ದೊರೆ ಗೌತಮಿಪುತ್ರ ಶಾತಕರ್ಣಿ, ಇವನಿಂದ ಶಾಲಿವಾಹನ ಶಕೆಯು ಪ್ರಾರಂಭಗೊಂಡಿತೆಂದು ನಂಬಲಾಗಿದೆ. ಈ ವಂಶದ ಕೊನೆಯ ಅರಸ ಯಜ್ಞಶ್ರೀ ಶಾತಕರ್ಣಿ.

2. ತಲಕಾಡಿನ ಗಂಗರ ರಾಜ ಲಾಂಛನ
ಎ. ಗಜ
ಬಿ. ಸಿಂಹ
ಸಿ. ವರಾಹ
ಡಿ. ನಂದಿ


ಸರಿಯಾದ ಉತ್ತರ: ಎ. ಗಜ

ವಿವರಣೆ : ಗಂಗರ ಕಾಲಾವಧಿ ಕ್ರಿ.ಶ. 350 ರಿಂದ ಕ್ರಿಶ. 1004-ಗಂಗ ವಂಶದ ಸ್ಥಾಪಕ ದಡಿಗ, ಈ ವಂಶವನ್ನು ಸುಮಾರು 27 ಮಂದಿ ರಾಜರು ಆಳಲ್ಪಟ್ಟರು. ಗಂಗರ ಪ್ರಸಿದ್ಧ ರಾಜ ದುರ್ವಿನೀತ ಇವರ ರಾಜಧಾನಿ ಕುವಲಾಲ, (ಈಗಿನ ಕೋಲಾರ) ತಲಕಾಡು ಮತ್ತು ಮಾನ್ಯಮರ ಆಗಿದ್ದವು. ಗಂಗರು ಜೈನ ಮತಾವಲಂಬಿಗಳಾಗಿದ್ದರು. ಆದ್ದರಿಂದ ಇವರ ಕಾಲದಲ್ಲಿ ಜೈನ ಮತವು ಹೆಚ್ಚು ಅಭಿವೃದ್ಧಿಗೆ ಬಂದಿತು. ಇವರು ಶ್ರವಣಬೆಳಗೊಳದಲ್ಲಿ 58 ಅಡಿ ಏಕಶಿಲಾ ಗೋಮ್ಮಟೇಶ್ವರ ಪ್ರತಿಮೆಯನ್ನು ಪ್ರತಿಷ್ಠಾಪನೆಗೊಳಿಸಿ, ಅದನ್ನು ಅತ್ಯಂತ ಪ್ರಸಿದ್ಧ ಕೇಂದ್ರವನ್ನಾಗಿ ಮಾರ್ಪಡಿಸಿದರು.

3. ಎಲ್ಲೋರದ ಏಕಶಿಲಾ ಕೈಲಾಸ ದೇವಾಲಯ ಈತನ ಆಳ್ವಿಕೆಯಲ್ಲಿ ಕೆತ್ತಲ್ಪಟ್ಟಿತು.
ಎ. ಅಮೋಘವರ್ಷ ನೃಪತುಂಗ
ಬಿ. ಮಂಗಳೇಶ
ಸಿ. ಮೊದಲನೆಯ ಕೃಷ್ಣ
ಡಿ. ಇಮ್ಮಡಿ ಪುಲಿಕೇಶಿ


ಸರಿಯಾದ ಉತ್ತರ : ಸಿ. ಮೊದಲನೆಯ ಕೃಷ್ಣ

ವಿವರಣೆ : ಮೊದಲನೆಯ ಕೃಷ್ಣ ರಾಷ್ಟ್ರಕೂಟರ ಅರಸ. ಬಾದಾಮಿ ಚಾಲುಕ್ಯರ ನಂತರ ಮಳಖೇಡದ ರಾಷ್ಟ್ರಕೂಟರು ವಿಶಾಲ ಸಾಮ್ರಾಜ್ಯವನ್ನು ಕಟ್ಟಿ ದಕ್ಷಿಣ ಭಾರತದ ಇತಿಹಾಸದಲ್ಲಿ ಸ್ಮರಣೀಯರಾಗಿದ್ದಾರೆ. ಈ ವಂಶದ ಮೂಲ ದೊರೆ ಒಂದನೇ ಕರ್ಕನಾಗಿದ್ದು, ಈ ವಂಶದ ದಂತಿದುರ್ಗನು ಚಾಲುಕ್ಯರನ್ನು ಸೋಲಿಸಿ ಬಾದಾಮಿಯನ್ನು ಗೆದ್ದನು. ಇವನ ಚಿಕ್ಕಪ್ಪ ಮೊದಲನೆಯ ಕೃಷ್ಣ ಎಲ್ಲೋರದ ಕೈಲಾಸ ದೇವಾಲಯವನ್ನು ಕಟ್ಟಿಸಿದನು. ಇದು ಏಕಶಿಲೆಯ ಅದ್ಭುತವಾದ ರಚನೆ 100 ಅಡಿ ಎತ್ತರದ ಬೃಹತ್ ಕಲ್ಲಿನ ಬಂಡೆಯನ್ನು ಕೊರೆದು ದೇವಾಲಯವನ್ನು ಕಟ್ಟಲಾಗಿದೆ. ಇದು ಈಗ ಮಹಾರಾಷ್ಟ್ರದಲ್ಲಿದೆ. ರಾಷ್ಟ್ರಕೂಟರ ಇತರ ಐತಿಹಾಸಿಕ ಹೆಗ್ಗುರುತುಗಳೆಂದರೆ ಕನ್ನಡದ ಮೊದಲ ಸಾಹಿತ್ಯ ಕೃತಿ 'ಕವಿರಾಜ ಮಾರ್ಗ' ಇವರ ಕಾಲದಲ್ಲಿಯೇ ರಚನೆಯಾಯಿತು. ತ್ರಿವಿಕ್ರಮನ 'ನಳಚಂಪು' ಎಂಬ ಸಂಸ್ಕೃತ ಚಂಪೂ ಕಾವ್ಯ, ಹಲಾಯುಧನ 'ಕವಿ ಕವಿ ರಹಸ್ಯ', ಮಹಾವೀರಚಾರ್ಯನ ಗಣಿತ ಸಾರಸಂಗ್ರಹ' ಎಂಬ ಗಣಿತ ಗ್ರಂಥ, ಪಂಪನ ಆದಿಪುರಾಣ' ಮತ್ತು 'ವಿಕ್ರಮಾರ್ಜುನ ವಿಜಯ' ಮೊನ್ನನ 'ಶಾಂತಿಪುರಾಣ' ಇವರ ಕಾಲದಲ್ಲಿಯೇ ರಚಿತವಾದವು.

4. ಚಹಲ್ಗಾನಿಯನ್ನು ನಾಶಮಾಡಿದ ದೆಹಲಿಯ ಸುಲ್ತಾನ.
ಎ. ಇಲ್ತಮಶ್
ಬಿ. ಅಲಾವುದ್ದೀನ್ ಖಿಲ್ಲಿ
ಸಿ. ಕುಪ್ಪುದ್ದೀನ್ ಐಬಕ್ 
ಡಿ. ಬಲ್ಬನ್


ಸರಿಯಾದ ಉತ್ತರ : ಡಿ. ಬಲ್ಬನ್

ವಿವರಣೆ : ಚಹಲ್ಗಾನಿಯನ್ನು ಜಾರಿಗೆ ತಂದವನು ಇಲ್ತಮಶ್. ಇವನು ದೆಹಲಿ ಸುಲ್ತಾನರ ದೊರೆ ಕುತ್ತುದ್ದೀನ್ ಐಬಕ್ನ ಗುಲಾಮನಾಗಿದ್ದು, ಗ್ವಾಲಿಯರ್‌ನ ಆಡಳಿತಗಾರನಾಗಿದ್ದನು. ಐಬಕ್‌ನ ಮರಣ ನಂತರ ಇವನು ರಾಜನಾಗಿದನು. ಇವನು ಆಡಳಿತದ ನಿರ್ವಹಣೆಗಾಗಿ ಟರ್ಕನ್-ಇ-ಚಹಲ್ಗಾನಿ ಅಥವಾ ಚಾಲೀಸ ಎಂಬ 40 ಗಣ್ಯರ ಕೂಟವನ್ನು ರಚಿಸಿದನು. ಇಲ್ತಮಶ್‌ನ ಮರಣ ನಂತರ ಅವನ ಮಗಳು ರಜಿಯಾ ಅಧಿಕಾರಕ್ಕೆ ಬಂದಳು. ಅವಳ ನಂತರ ಇಲ್ಲಮಶ್‌ನ ಕಿರಿಯ ಮಗ ನಾಸಿರ್-ಉದ್-ದೀನ್‌ನನ್ನು ಅಧಿಕಾರಕ್ಕೆ ತರಲು ನಾಗೌರನ ಪ್ರಾಂತಾಧಿಕಾರಿಯಾಗಿದ್ದ ಬಲ್ಬನ್ ಪ್ರಯತ್ನಿಸಿ ಯಶಸ್ವಿಯಾದನು. ಇವನ ಮರಣ ನಂತರ ಬಲ್ಬನ್ ಸ್ವತಃ ಪಟ್ಟಕ್ಕೆ ಬಂದನು. ಬಲ್ಬನ್ ಇಲ್ತಮಷ್‌ನು ಜಾರಿಗೆ ತಂದಿದ್ದ ಚಹಲ್ಗಾನಿ ಪದ್ಧತಿಯನ್ನು ತೆಗೆದುಹಾಕಿದನು.

5. ಪಂಚಪ್ರಧಾನರೆಂಬ ಮಂತ್ರಿಮಂಡಲ ಇವರ ಆಳ್ವಿಕೆಯಲ್ಲಿತ್ತು,
ಎ. ದ್ವಾರಸಮುದ್ರದ ಹೊಯ್ಸಳರು
ಬಿ. ಮಾನ್ಯಖೇಟದ ರಾಷ್ಟ್ರಕೂಟರು
ಸಿ. ವಿಜಯನಗರದ ರಾಯರು
ಡಿ. ಮೈಸೂರಿನ ಒಡೆಯರು


ಸರಿಯಾದ ಉತ್ತರ : ಎ. ದ್ವಾರಸಮುದ್ರದ ಹೊಯ್ಸಳರು

ವಿವರಣೆ : ದ್ವಾರಸಮುದ್ರದ ಹೊಯ್ಸಳನ್ನು ಕನ್ನಡ ನಾಡನ್ನು ಆಳಿದ ಪ್ರಸಿದ್ಧ ಅರಸರು. ಈ ವಂಶದ ಸ್ಥಾಪಕ ಸಳ, ತನ್ನ ಜೈನ ಗುರು ಸುದತ್ತಾಚಾರ್ಯರು 'ಹೊಯ್ ಸಳ' ಎಂದು ಆದೇಶಿಸಲು ಸಳನು ಒಂದು ಹುಲಿಯನ್ನು ಹೊಡೆದು ಕೊಂದನು. ಗುರುವಿನ ಆಶೀರ್ವಾದದಂತೆ ಸಳನು ಹೊಯ್ಸಳ ವಂಶದ ಸ್ಥಾಪಕನಾದನೆಂದು ಹೇಳಿದೆ. ಸಳನು ಹುಲಿಯನ್ನು ಕೊಲ್ಲುವ ಚಿತ್ರವೇ ಇವರ ರಾಜ ಲಾಂಛನ, ವಿಷ್ಣುವರ್ಧನ ಈ ವಂಶದ ಪ್ರಸಿದ್ಧ ದೊರೆ. ಇವರು ನೂರಾರು ಕೆರೆಗಳನ್ನು ಕಟ್ಟಿಸಿ ಹೆಚ್ಚು ಪ್ರಸಿದ್ಧರಾದರು. ಇವರ ಕಾಲದಲ್ಲಿ ಅನೇಕ ಸಾಹಿತ್ಯ ಕೃತಿಗಳು ರಚನೆಯಾದವು. ರುದ್ರಭಟ್ಟನು 'ಜಗನ್ನಾಥ ವಿಜಯ; ಜನ್ನನು 'ಯಶೋಧರ ಚರಿತ', ಹರಿಹರನು 'ಗಿರಿಜಾ ಕಲ್ಯಾಣ', ರಾಘವಾಂಕನು "ಹರಿಶ್ಚಂದ್ರ ಕಾವ್ಯ', ಕೇಶಿರಾಜನು 'ಶಬ್ದಮಣಿ ದರ್ಪಣ'ವನ್ನು ರಚಿಸಿದನು. ರಾಮಾನುಜಾಚಾರ್ಯರೂ, ಮಧ್ವಾಚಾರ್ಯರೂ ಇದೇ ಕಾಲದಲ್ಲಿ ಅನೇಕ ಕೃತಿ ರಚನೆ ಮಾಡಿದರು.

6. ಭಾರತೀಯ ಸಿವಿಲ್ ಸೇವೆಯನ್ನು ಪ್ರಾರಂಭಿಸಿದವರು
ಎ. ವಾರನ್ ಹೇಸ್ಟಿಂಗ್ಸ್
ಬಿ. ವಿಲಿಯಂ ಬೆಂಟಿಂಕ್
ಸಿ. ಕಾರ್ನ್‍ವಾಲಿಸ್
ಡಿ. ಡಾಲ್‌ಹೌಸಿ


ಸರಿಯಾದ ಉತ್ತರ : ಸಿ. ಕಾರ್ನ್‍ವಾಲಿಸ್

ವಿವರಣೆ : ವಾರನ್ ಹೇಸ್ಟಿಂಗ್ಸ್‌ನ ನಂತರ ಕಾರ್ನ್‌ವಾಲೀಸ್ (1786-93) ಭಾರತದ ಗವರ್ನರ್ ಜನರಲ್ ಆಗಿ ನೇಮಿಸಲ್ಪಟ್ಟನು. 

ಇವನ ಆಡಳಿತದ ಪ್ರಮುಖ ಸುಧಾರಣೆಗಳೆಂದರೆ.

* ಕಂಪನಿಯ ನೌಕರರು ಲಂಚ ಸ್ವೀಕಾರ ಅಥವಾ ಕಾಣಿಕೆ ಸ್ವೀಕರಿಸುವುದು ಮತ್ತು ಖಾಸಗಿ ವ್ಯಾಪಾರವನ್ನ ಕೈಗೊಳ್ಳುವುದನ್ನು ರದ್ದುಗೊಳಿಸಿದನು.

* ನೌಕರರ ಸಂಬಳವನ್ನು ಏರಿಸಿದನು.

*ಭಾರತೀಯ ಸಿವಿಲ್ ಸೇವೆಗಳನ್ನು ಪ್ರಾರಂಭಿಸಿದನು.

* ಬಂಗಾಳದಲ್ಲಿ ಜಿಲ್ಲೆಗಳ ಸಂಖ್ಯೆಯನ್ನು 25 ರಿಂದ  23ಕ್ಕೆ ಇಳಿಸಿದನು.

*ನ್ಯಾಯಾಂಗವನ್ನು ಕಾರ್ಯಾಂಗದಿಂದ ಬೇರ್ಪಡಿಸಿದನು.

*ಶ್ರೇಣಿಕೃತ ಕೋರ್ಟ್ ವ್ಯವಸ್ಥೆಯನ್ನು ಜಾರಿಗೆ ತಂದನು.

7. ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯ ಕಾಲದಲ್ಲಿ ಭಾರತದ ವೈಸ್‌ರಾಯ್
ಎ. ರಿಪ್ಪನ್
ಬಿ. ಕರ್ಜನ್
ಸಿ. ಲಾರ್ಡ್ ಡೌನ್ಸ್
ಡಿ. ಡಫರಿನ್


ಸರಿಯಾದ ಉತ್ತರ : ಡಿ. ಡಫರಿನ್

ವಿವರಣೆ : ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಕ್ರಿಶ. 1885ರಲ್ಲಿ ಸ್ಥಾಪನೆಯಾಯಿತು. ನಿವೃತ್ತ ಸಿವಿಲ್ ಸರ್ವಿಸ್ ಅಧಿಕಾರಿ ಹಾಗೂ ಥಿಯೋಸೋಫಿಸ್ಟ್ ಆಗಿದ್ದ ಎ. ಓ. ಹ್ಯೂಮ್‌ರವರು ರಾಷ್ಟ್ರೀಯ ಅಭಿವೃದ್ಧಿಗಾಗಿ ಸಂಘಟಿತರಾಗಲು ವಿದ್ಯಾವಂತ ಭಾರತೀಯರಿಗೆ ಕರೆಕೊಟ್ಟರು. ಈ ಉದ್ದೇಶಕ್ಕಾಗಿ ಭಾರತ ರಾಷ್ಟ್ರೀಯ ಯೂನಿಯನ್‌ನ್ನು 1884 ರಲ್ಲಿ ಸ್ಥಾಪಿಸಿದರು. ಇದು ಭಾರತ ರಾಷ್ಟ್ರೀಯ ಕಾಂಗ್ರೇಸ್ ಆಗಿ ಕ್ರಿ.ಶ. 1885ರಲ್ಲಿ ಪರಿವರ್ತನೆಗೊಂಡಿತು. ಕಾಂಗ್ರೆಸ್‌ನ ಮೊದಲ ಅಧೀವೇಶನ ಮುಂಬೈನಲ್ಲಿ ನಡೆಯಿತು. ಇದರ ಮೊದಲ ಅಧ್ಯಕ್ಷರು. ಡಬ್ಲ್ಯುಸಿ. ಬ್ಯಾನರ್ಜಿ, ಆಗ ಭಾರತದ ವೈಸ್‌ರಾಯ್ ಆಗಿದ್ದವರು ಡಫರಿನ್.

8. ನವರಾತ್ರಿ ಹಬ್ಬದ ಆಚರಣೆಯನ್ನು ಪ್ರಾರಂಭಿಸಿದ ಮೈಸೂರಿನ ಅರಸ 
ಎ. ರಾಜ ಒಡೆಯರ್
ಬಿ. ಕಂಠೀರವ ನರಸರಾಜ ಒಡೆಯರ್
ಸಿ. ಚಿಕ್ಕದೇವರಾಜ ಒಡೆಯರ್
ಡಿ. ದೊಡ್ಡದೇವರಾಜ ಒಡೆಯರ್


ಸರಿಯಾದ ಉತ್ತರ : ಎ. ರಾಜ ಒಡೆಯರ್

ವಿವರಣೆ : ರಾಜ ಒಡೆಯರ್ ಮೈಸೂರು ಒಡೆಯರ್ ಸಂಸ್ಥಾನದ ಒಬ್ಬ ಪ್ರಮುಖ ರಾಜ. ಇವರ ಕಾಲ 1578- 1616, ಇವರು ನವರಾತ್ರಿ ಹಬ್ಬವನ್ನು ಪ್ರಾರಂಭಿಸಿದನು. ಕಂಠೀರವ ನರಸರಾಜ ಒಡೆಯರ ಪ್ರಮುಖ ಸಾಧನೆಗಳೆಂದರೆ:- ಇವರು ಕುಸ್ತಿ ಪಟುವಾಗಿದ್ದರು. ಇವರು ನಂಜನಗೂಡಿನಲ್ಲಿ ಶಿವಾಲಯವೊಂದನ್ನು ಕಟ್ಟಿಸಿದರು. ಚಿಕ್ಕದೇವರಾಜ ಒಡೆಯರ್‌ರವರ ಪ್ರಮುಖ ಸಾಧನೆಗಳೆಂದರೆ - ಶಿವಾಜಿಯನ್ನು ಸೋಲಿಸಿದರು. ಬೆಂಗಳೂರು ಕೋಟೆ, ಕಾವೇರಿನದಿಗೆ ಅಣೆಕಟ್ಟು ನಿರ್ಮಾಣ, ಅಠಾರ ಕಛೇರಿ ಮತ್ತು ಅಂಚೆ ಇಲಾಖೆಯನ್ನು ಪ್ರಾರಂಭಿಸಿದನು. ದೊಡ್ಡ ದೇವರಾಜ ಒಡೆಯರ್ ಚಾಮುಂಡಿ  ಬೆಟ್ಟಕ್ಕೆ ಮೆಟ್ಟಿಲು ಹಾಕಿಸಿ ಅರ್ಧದಾರಿಯಲ್ಲಿ ನಂದಿಯ ಮೂರ್ತಿಯನ್ನು ಸ್ಥಾಪಿಸಿದರು. 

9. ಬ್ರಿಟಿಷ್ ದ್ವೀಪಗಳು ಈ ವರ್ಗಕ್ಕೆ ಸೇರಿವೆ
ಎ. ಹವಳ ದ್ವೀಪಗಳು
ಬಿ. ಖಂಡಾಂತರ ದ್ವೀಪಗಳು
ಸಿ. ಸಾಗರದ ದ್ವೀಪಗಳು
ಡಿ. ವಿವರ್ತನಿಕ (ಟೆಕ್ಟಾನಿಕ್) ದ್ವೀಪಗಳು.


ಸರಿಯಾದ ಉತ್ತರ : ಬಿ. ಖಂಡಾಂತರ ದ್ವೀಪಗಳು

ವಿವರಣೆ : ಬ್ರಿಟೀಷ್ ದ್ವೀಪಗಳು ಯುನೈಟೆಡ್ ಕಿಂಗಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರದ ಐರ್‌ಲ್ಯಾಂಡ್‌ಗಳನ್ನು ಒಳಗೊಂಡಿದೆ. ಇವು ಖಂಡಾಂತರ ದ್ವೀಪಗಳು.

10. ಉಷ್ಣವಲಯದ ಚಂಡಮಾರುತಗಳಿಂದ ಮತ್ತೆ ಮತ್ತೆ ನಷ್ಟಕ್ಕೊಳಗಾಗುತ್ತಿರುವ ಪ್ರದೇಶ
ಎ. ಗುಜರಾತ್‌ ತೀರ ಪ್ರದೇಶ
ಬಿ. ಕೊಂಕಣ ತೀರ ಪ್ರದೇಶ
ಸಿ. ಕೋರಮಂಡಲ ತೀರ ಪ್ರದೇಶ
ಡಿ. ಮಲಬಾರ್ ತೀರ ಪ್ರದೇಶ


ಸರಿಯಾದ ಉತ್ತರ : ಸಿ. ಕೋರಮಂಡಲ ತೀರ ಪ್ರದೇಶ

ವಿವರಣೆ : ಭಾರತದ ಆಗ್ನೇಯ ದಿಕ್ಕಿನ ಸಮುದ್ರ ತೀರವನ್ನು ಕೋರಮಂಡಲ ತೀರ ಪ್ರದೇಶ ಎನ್ನುವರು. ಇದು ಅರಬ್ಬಿ ಸಮುದ್ರಕ್ಕೆ ಅಂಟಿಕೊಂಡಿದೆ. ಉಷ್ಣವಲಯದ ಚಂಡಮಾರುತಗಳಿಗೆ ಪದೇ ಪದೇ ಒಳಗಾಗಿ ಅತ್ಯಂತ ಹೆಚ್ಚು ಸಾವು ನೋವುಗಳನ್ನು ನಷ್ಟವನ್ನು ಅನುಭವಿಸುತ್ತಿರುವುದು ಕೋರಮಂಡಲ ತೀರ ಪ್ರದೇಶಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಸ್ಸಾ ರಾಜ್ಯಗಳು. ಇತ್ತೀಚೆಗೆ (2014ರಲ್ಲಿ) ಇಂತಹ ಒಂದು ಚಂಡಮಾರುತಕ್ಕೆ ಸಿಕ್ಕಿ ಆಂಧ್ರಪ್ರದೇಶ ವಿಶಾಖಪಟ್ಟಣ ಭಾರಿ ನಷ್ಟವನ್ನು ಅನುಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

No comments:

Post a Comment

Important Notes

Random Posts

Important Notes

Popular Posts

Top-100 General Knowledge (GK) Question Answers in Kannada for All Competitive Exams-01

Top-100 General Knowledge (GK) Question Answers in  Kannada for All Competitive Exams-01 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's E...

ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು

ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು ಕರ್ನಾಟಕದ 180 ಕ್ಕೂ ಅಧಿಕ ವಚನಕಾರರು ಮತ್ತು ಅವರ ಅಂಕಿತನಾಮಗಳು , ಕರ್ನಾಟಕದ ಪ್ರಮುಖ ವಚನಕಾರರ ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ನೇಹಿತರೇಈ ಮಾಹಿತಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಕರ್ನಾಟಕದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೂ ಈ ಮಾಹಿತಿ ಉಪಯುಕ್ತವಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಶೇರ್ ಮಾಡಿ.. ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು: ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು 1 ಬಸವಣ್ಣ ಕೂಡಲ ಸಂಗಮದೇವ 2 ಅಲ್ಲಮ ಪ್ರಭು ಗುಹೇಶ್ವರ 3 ಚನ್ನಬಸವಣ್ಣ ಚನ್ನಕೂಡಲ ಸಂಗಮದೇವ 4 ಸಿದ್ದರಾಮ ಕಪಿಲಸಿದ್ದಮಲ್ಲಿಕಾರ್ಜುನ 5 ಅಜಗಣ್ಣ ಮಹಾಘನ ಸೋಮೇಶ್ವರ 6 ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ 7 ಅಮುಗಿ ದೇವಯ್ಯ ಸಿದ್ದಸೋಮೇಶ್ವರ 8 ಆದಯ್ಯ ಸೌರಾಷ್ಟ್ರ ಸೋಮೇಶ್ವರ 9 ಅರಿವಿನ ಮಾರಿತಂದೆ ಸದಾಶಿವಮೂರ್ತಿ 10 ಅಂಗಸೋಂಕಿನ ಲಿಂಗತಂದೆ ಭೋಗಬಂಕೇಶ್ವರಲಿಂಗ 11 ಅಗ್ಘಾವಣಿ ಹಂಪಯ್ಯ ಹಂಪೆಯ ವಿರುಪಾ 12 ಅಗ್ಘಾವಣಿ ಹೊನ್...

16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು

          16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು  🌺 16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2021 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Indian Constitution Most Important Question Answers in Kannada For All Competitive Exams

ಭಾರತದ ಸಂವಿಧಾನದ ಪ್ರಶ್ನೋತ್ತರಗಳು ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತದ ಸಂವಿಧಾನ ದ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಭಾರತೀಯ ಸಂವಿಧಾನದ ಜ್ಞಾನ ಇರಬೇಕಾದದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯ ಸಂವಿಧಾನ ದ ಹಲವಾರು ಮಹತ್ವದ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇವುಗಳು ನಿಮ್ಮ ಅಧ್ಯಯನಕ್ಕೆ ಸಹಕಾರಿಯಾಬಹುದೆಂಬುದು ನಮ್ಮ ಮಹದಾಶಯ..!! 1. ಸಂವಿಧಾನ ಎಂದರೇನು? > ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಮೂಲ ನಿಯಮಗಳ ದಾಖಲೆಗಳು 2. ಸಂವಿಧಾನ ಎಂಬ ಪದದ ಮೂಲ ಯಾವುದು? > ಕಾನ್ಸ್ಟಿಟ್ಯೂಟ್ 3. ‘ಕಾನ್ಸ್ಟಿಟ್ಯೂಟ್’ ಅರ್ಥವೇನು? > ನಿಯೋಜಿಸು, ಸಂಯೋಜಿಸು ಮತ್ತು ವಿಧಿವತ್ತಾಗಿ ಸ್ಥಾಪಿಸು ಎಂದರ್ಥ 4. ಸಂವಿಧಾನಾತ್ಮಕ ಆಡಳಿತವು ಮೊಟ್ಟ ...

06th April 2025 Daily Current Affairs Quiz in Kannada for All Competitive Exams

          06th April 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-06th April 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

19-10-2021 Daily Top-20 General Knowledge Question Answers Quiz for All Competitive Exams

  19-10-2021 Daily Top-20 General Knowledge Question Answers Quiz for All Competitive Exams 🌺 Latest KPSC All Competitive Exams (Quiz) Mock Test-2021 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Current Affairs 2021 Series Mock Test-01 Quiz  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Today Top-10 General Knowledge Question Answers in Kannada for All Competitive Exams-23

Today Top-10 General Knowledge Question Answers in Kannada for All Competitive Exams-23 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teache...

Top-10 General Knowledge Question Answers Quiz for All Competitive Exams-02

  Top-10 General Knowledge Question Answers Quiz for All Competitive Exams-02 🌺 Latest KPSC All Competitive Exams (Quiz) Mock Test-2021 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ General Knowledge 2021 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

24th March 2025 Daily Current Affairs Quiz in Kannada for All Competitive Exams

          24th March 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-24th March 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

17 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

17 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher'...