Type Here to Get Search Results !

06 November 2021 Detailed Daily Current Affairs in Kannada for All Competitive Exams

             

06 November 2021 Detailed Daily Current Affairs in Kannada for All Competitive Exams


Daily Detailed Current Affairs in Kannada for All Competitive Exams www.kpscnotesmcqs.in



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ.

💥 Click here to Read Daily Current Affairs in Kannada  

ಸುದ್ದಿಯಲ್ಲಿರುವ ಹಸಿರು ಪಟಾಕಿ


ಹಸಿರು ಪಟಾಕಿ ಎಂಬುದು ರಾಷ್ಟ್ರೀಯ ಪರಿಸರ ಎಂಜಿನೀಯರಿಂಗ್ ಸಂಶೋಧನಾ ಸಂಸ್ಥೆಯ ಪರಿಕಲ್ಪನೆ. ಪರಿಸರ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ, 'ಹಸಿರು ಪಟಾಕಿ' ಬಳಕೆಗೆ ಅನುಮತಿ ನೀಡಲಾಗಿದೆ. ಹಸಿರು ಪಟಾಕಿಗಳು ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಇದರರ್ಥ ಕಡಿಮೆ ಮಾಲಿನ್ಯ ಹೊರಸೂಸುವಿಕೆಯಿಂದಾಗಿ ವಾಯು ಮಾಲಿನ್ಯದ ಪ್ರಮಾಣ ಕಡಿಮೆಯಾಗುತ್ತದೆ.


ಸಾಮಾನ್ಯ ಪಟಾಕಿಗಳಿಗಿಂತ ಹಸಿರುಪಟಾಕಿಗಳು ಭಿನ್ನ. ಅಲ್ಯೂಮಿನಿಯಂ, ಲಿಥಿಯಂ, ಬೇರಿಯಂ, ಸೀಸ, ಅರ್ಸೆನಿಕ್, ಪೊಟ್ಯಾಷಿಯಂ ನೈಟ್ರೇಟ್ ಅಥವಾ ಕಾರ್ಬನ್ ಮೊದಲಾದ ರಾಸಾಯನಿಕಗಳನ್ನು ಹಸಿರು ಪಟಾಕಿಗಳು ಹೊಂದಿರುವುದಿಲ್ಲ. ಹೀಗಾಗಿ ಇವು ಪರಿಸರದ ಮೇಲೆ ಹಾನಿ ಮಾಡಬಹುದಾದ ಹಾನಿಯ ಪ್ರಮಾಣ ಕಡಿಮೆ.


* ಹಸಿರು ಪಟಾಕಿಗಳು ಪರಿಸರ & ಮನುಷ್ಯನ ಆರೋಗ್ಯದ ಮೇಲೆ ಕಡಿಮೆ ಅಪಾಯ ಉಂಟುಮಾಡುತ್ತವೆ. ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಸಾಂಪ್ರದಾಯಿಕ ಪಟಾಕಿಗಳಿಗೆ ಬಳಸುವ ಕಚ್ಚಾವಸ್ತುಗಳಿಗೆ ಬದಲಾಗಿ, ಪರ್ಯಾಯ ಕಚ್ಚಾ ವಸ್ತುಗಳಿಂದ ಇವುಗಳನ್ನು ತಯಾರಿಸಲಾಗುತ್ತದೆ.

* ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಶೇ. 30ರಷ್ಟು ಕಡಿಮೆ ಮಾಲಿನ್ಯ ಉಂಟು ಮಾಡುತ್ತವೆ.


* ಬೇರಿಯಂ ನೈಟ್ರೇಟ್ ರಾಸಾಯನಿಕವು ಭಾರೀ ಹೊಗೆ ಹೊರಸೂಸುತ್ತದೆ. ಆದರೆ, ಹಸಿರು ಪಟಾಕಿಗಳಿಗೆ ಬೇರಿಯಂ ನೈಟ್ರೇಟ್‌ನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ ಅಥವಾ ಈ ರಾಸಾಯನಿಕ ಇಲ್ಲದೆಯೇ ಪಟಾಕಿ ತಯಾರಿಸುವುದರಿಂದ ಹೊಗೆ ಹೊರಸೂಸುವಿಕೆ ಇರುವುದಿಲ್ಲ.

 ಇವುಗಳನ್ನೂ ಓದಿ 




* ಹಸಿರು ಪಟಾಕಿಗಳು ವಾಯುಮಾಲಿನ್ಯವನ್ನು ಕಡಿಮೆ ಮಾಡುವುದು ಮಾತ್ರವಲ್ಲ. ಶಬ್ದ ಉತ್ಪತ್ತಿ ಶಬ್ದ ಉತ್ಪತ್ತಿ ಪ್ರಮಾಣದಲ್ಲೂ ಗಮನಾರ್ಹ ಎನಿಸಿವೆ. ಸಾಮಾನ್ಯ ಪಟಾಕಿಗಳು ಸುಮಾರು 160 ಡೆಸಿಬಲ್ ಶಬ್ದ ಹೊರಸೂಸುತ್ತವೆ. ಆದರೆ, ಹಸಿರು ಪಟಾಕಿಗಳು 110ರಿಂದ 125 ಡೆಸಿಬಲ್ ಶಬ್ದ ಮಾಡುತ್ತವೆ. ಹೀಗಾಗಿ ಕಿವಿಗಳಿಗೆ ಪಟಾಕಿ ಸದ್ದಿನಿಂದ ಆಗುವ ಅಪಾಯ ಕೊಂಚ ಕಡಿಮೆಯಾಗುತ್ತದೆ.

* ಹಸಿರು ಪಟಾಕಿಗಳಲ್ಲಿ ಮೂರು ವಿಧಗಳಿವೆ. ಸೇಫ್ ವಾಟರ್ ರಿಲೀಸರ್‌, ಸೇಫ್ ಥರ್ಮ್ಮೇಟ್ ಕ್ರ್ಯಾಕರಿ & ಸೇಫ್ ಮಿನಿಮಲ್ ಅಲ್ಯೂಮಿನಿಯಂ ಕ್ಯಾಕರ್ಸ್, ಹಸಿರು ಪಟಾಕಿ ತಯಾರಕರು ಸಿಎಸ್‌ಐಆರ್‌ ಎನ್‌ಇಇಆರ್‌ಐ ಮಾನದಂಡಗಳ ಪ್ರಕಾರ ಉತ್ಪಾದನೆ ಮಾಡುಬೇಕಾಗುತ್ತದೆ.

* ಸರ್ಕಾರದಿಂದ ನೋಂದಣಿಯಾಗಿರುವ ಮಾರಾಟಗಾರರಿಂದ ಅಥವಾ ಆನ್‌ಲೈನ್‌ನಲ್ಲಿ ಹಸಿರು ಪಟಾಕಿ ಖರೀದಿಸಬಹುದು. ಮಾರಕಟ್ಟೆಯಲ್ಲಿರುವ ಯಾವುದು 'ಹಸಿರು ಪಟಾಕಿ' ಎಂದು ಗುರುತಿಸಲು ಜನರಿಗೆ ಅನುಕೂಲವಾಗಲಿ ಎಂದು ಪೊಟ್ಟಣಗಳ ಮೇಲೆ ಲೋಗೊ ಮುದ್ರಿಸಲಾಗಿರುತ್ತದೆ.ಜೊತೆಗೆ ಕ್ಯೂಆರ್ ಕೋಡ್ ಸಹ ಇದ್ದು, ಜನರು ಅವುಗಳನ್ನು ಸ್ಕ್ಯಾನ್ ಮಾಡಿ ಗುರುತಿಸಬಹುದು.

* ಹಸಿರು ಪಟಾಕಿಗಳು ಮಾಲಿನ್ಯ ತಗ್ಗಿಸುತ್ತವೆ ಎಂಬ ವಾದವನ್ನು ಪರಿಸರವಾದಿಗಳು ಒಪ್ಪುವುದಿಲ್ಲ. 'ಶೇ. 30ರಷ್ಟು ಮಾಲಿನ್ಯ ತಗ್ಗುತ್ತದೆ ಎಂಬುದು ಗಮನಾರ್ಹ ವಿಷಯವಲ್ಲ. ಪಟಾಕಿಗಳು ವಾಯು ಮಾಲಿನ್ಯಕ್ಕೆ ಕಾರಣವೆಂದು ತಿಳಿದಿದ್ದರೂ ಅವುಗಳನ್ನು ಸಿಡಿಸಲು ಏಕೆ ಅವಕಾಶ ನೀಡಲಾಗುತ್ತಿದೆ ಎಂದು ಅವರು ಪ್ರಶ್ನಿಸುತ್ತಾರೆ.

'ಕೃತಕ ಬುದ್ಧಿವಂತಿಕೆ, ರೋಬೋಟಿಕ್ಸ್ ತಂತ್ರಜ್ಞಾನ ಬಲಪಡಿಸಲು ಒಪ್ಪಂದ'


'ರಾಜ್ಯದಲ್ಲಿ ಕೃತಕ ಬುದ್ಧಿವಂತಿಕೆ, ರೋಬೋಟಿಕ್ಸ್ ತಂತ್ರಜ್ಞಾನವನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಬೆಂಗಳೂರು ಮೂಲದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ & ರೋಬೋಟಿಕ್ ಟೆಕ್ನಾಲಜೀಸ್ ಪಾರ್ಕ್ (ಆರ್ಟ್ ಪಾರ್ಕ್) ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.


ಕೋವಿಡ್ ಸಾಂಕ್ರಾಮಿಕವು ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಮತ್ತೊಮ್ಮೆ ತೋರಿಸಿದೆ ಮಾನವೀಯತೆಗೆ ಸಹಾಯ ಮಾಡುವ ಮಾರ್ಗಗಳತ್ತ ಗಮನಹರಿಸುವಂತೆ ಜಗತ್ತನ್ನು ನಿರ್ದೇಶಿಸಿದೆ. ನಮ್ಮ ದೇಶದ ಪ್ರದೇಶಗಳಿಗೆ ಉತ್ತಮ & ಕೈಗೆಟುಕುವ ಸೇವೆಗಳನ್ನು ಒದಗಿಸಲು ತಂತ್ರಜ್ಞಾನದ ಸಹಾಯದಿಂದ ಆರೋಗ್ಯ, ಕೃಷಿ, ಶಿಕ್ಷಣ ಮುಂತಾದ ಎಲ್ಲ ನಿರ್ಣಾಯಕ ಕ್ಷೇತ್ರಗಳನ್ನು ಪರಿವರ್ತಿಸಬಹುದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.


ಆತ್ಮ ನಿರ್ಭರ ಭವಿಷ್ಯಕ್ಕಾಗಿ ಭಾರತಕ್ಕೆ ನಿರ್ದಿಷ್ಟವಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಾವು ಎದುರು ನೋಡುತ್ತಿದ್ದೇವೆ. ಕೃತಕ ಬುದ್ಧಿವಂತಿಕೆ, ರೋಬೋಟಿಕ್ಸ್ & ಸ್ವಾಯತ್ತ ವ್ಯವಸ್ಥೆಗಳು ಡಿಜಿಟಲ್ ಆರ್ಥಿಕತೆಯ ಚಕ್ರಗಳನ್ನು ಚಾಲನೆ ಮಾಡುವ ಭವಿಷ್ಯದ ತಂತ್ರಜ್ಞಾನಗಳಾಗಿರಲಿವೆ. ಈ ಸೌಲಭ್ಯಗಳು ಹೊಸ ಸ್ಪಾರ್ಟ್ ಅಪ್‌ಗಳನ್ನು ರಚಿಸಲು & ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸಲು ಪ್ರಮುಖ ಸಾಧನಗಳಾಗುತ್ತದೆ ಎಂದು ಅವರು ಹೇಳಿದರು.


ರಾಜ್ಯ ಸರಕಾರ & ವಿಜ್ಞಾನ & ತಂತ್ರಜ್ಞಾನ ಇಲಾಖೆ, ಸರಕಾರದಿಂದ 60 ಕೋಟಿ ರೂ. ಅನುದಾನವನ್ನು ಸ್ವೀಕರಿಸಲು ನಾವು ಸಂತೋಷ ಪಡುತ್ತೇವೆ. 5 ವರ್ಷಗಳಲ್ಲಿ ಆರ್ಟ್ಪಾರ್ಕ್‌ಗೆ ಹೆಚ್ಚುವರಿ 170 ಕೋಟಿ ರೂ.ಗಳನ್ನು ಒದಗಿಸಲು ಬದ್ಧವಾಗಿರುವ ಭಾರತ ಎಂದು ಆರ್ಟ್ಪಾರ್ಕ್‌ನ ಸಿಇಒ & ಸಹ ಸಂಸ್ಥಾಪಕ ಉಮಾಕಾಂತ್ ಸೋನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುನೀತ್‌ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ


ಚಿತ್ರದುರ್ಗ ಬಸವ ಕೇಂದ್ರ ಮುರುಘಾಮಠದಿಂದ ಕೊಡಮಾಡುವ 2021-22ನೇ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಇತ್ತೀಚೆಗೆ ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಐದು ಲಕ್ಷ ರೂ. ನಗದು ಹಾಗೂ ಫಲಕ ಒಳಗೊಂಡಿದೆ.


ಪುನೀತ್ ರಾಜ್‌ಕುಮಾರ್ ಅವರ ಸೇವೆ, ಕನ್ನಡ ಬಗೆಗಿನ ಕಾಳಜಿಯನ್ನು ಪರಿಗಣಿಸಿ ಮರಣೋತ್ತರ ಬಸವಶ್ರೀ ಘೋಷಿಸಲಾಗಿದೆ. ಈ ಮೊದಲು ಡಾ. ಎಂ. ಎಂ. ಕಲಬುರ್ಗಿ, ರೈತ ಸಂಘದ ನಾಯಕ ಪ್ರೊ. ನಂಜುಂಡಸ್ವಾಮಿ ಅವರಿಗೆ ಮರಣೋತ್ತರ ಬಸವಶ್ರೀ ಕೊಡಲಾಗಿತ್ತು. ಇದೀಗ ಪುನೀತ್ ರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.


ಬಸವಶ್ರೀ ಪ್ರತಿಷ್ಠಿತ ಪ್ರಶಸ್ತಿ


ಬಸವಶ್ರೀ ರಾಜ್ಯದಲ್ಲಿಯೇ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಈ ಮೊದಲು ಆಂಧ್ರದ ಕ್ರಾಂತಿಕಾರಿ ಕವಿ ಗದ್ದರ್‌, ನಟಿ ಶಬಾನಾ ಅಜ್ಜಿ, ನರ್ಮದಾ ಆಂದೋಲನದ ಹೋರಾಟಗಾರ್ತಿ ವಂದನಾ ಶಿವಾ, ಅಂತರರಾಷ್ಟ್ರೀಯ ಮಹಿಳಾ ಹೋರಾಟಗಾರ್ತಿ ಮಲಾಲ, ಬೌದ್ಧ ಗುರು ದಲೈಲಾಮಾ, ಸಾಹಿತಿ ಚಂದ್ರಶೇಖರ ಪಾಟೀಲ, ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕಾರ್, ಪ್ರಕೃತಿ ಪ್ರೇಮಿ ಮಳವಳ್ಳಿಯ ಕಾಮೇಗೌಡ, ಶ್ರೀಲಂಕಾದ ಡಾ. ಹರಿಯರತ್ನ, ಬೀದರ್‌ನ ಶಿವಶರಣ ಬೆಲ್ದಾಳ ಸೇರಿದಂತೆ 20 ಮಂದಿಗೆ ಬಸವಶ್ರೀ ನೀಡಲಾಗಿತ್ತು. ಇದೀಗ 21ನೇ ಬಸವಶ್ರೀ ಪ್ರಶಸ್ತಿಗೆ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಹದಿನೈದು ದಿನಗಳ ಹಿಂದೆಯಷ್ಟೇ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಸರೋದ್ ಮಾಂತ್ರಿಕ ಪಂಡಿತ್ ರಾಜೀವ ತಾರಾನಾಥ್ ಹಾಗೂ ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಲಾಗಿತ್ತು.


ಡೇಮರ್‌ ಅವರ 'ದಿ ಪ್ರಾಮಿಸ್' ಕೃತಿಗೆ ಬೂಕರ್


ದಕ್ಷಿಣ ಆಫ್ರಿಕಾದ ಡೇಮನ್ ಗಾಲ್ಗಟ್ ಅವರ ಕಾದಂಬರಿ 'ದಿ ಪ್ರಾಮಿಸ್' ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದ ನೀತಿ & ಬಿಳಿಯ ವರ್ಣದ ಕುಟುಂಬದ ಕಥೆಯನ್ನು ಕಾದಂಬರಿ ಒಳಗೊಂಡಿದೆ. ಸಂಕಷ್ಟದಲ್ಲಿರುವ ಆಫ್ರಿಕನ್ ಕುಟುಂಬ ಹಾಗೂ ಕಪ್ಪುವರ್ಣದ ವ್ಯಕ್ತಿಗೆ ಉದ್ಯೋಗ ನೀಡುವ ಭರವಸೆ ಸುಳ್ಳಾಗುವುದು-ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಸುತ್ತಲಿನ ಕಥೆಯನ್ನು ಅಡಕವಾಗಿಸಿಕೊಂಡಿರುವ 'ದಿ ಪ್ರಾಮಿಸ್' ಕೃತಿಗೆ ಬ್ರಿಟನ್‌ನ ಬೂಕರ್ ಪ್ರಶಸ್ತಿ ಸಂದಿದೆ. ಪ್ರಶಸ್ತಿಯು 50,000 ಪೌಂಡ್ (ಸುಮಾರು 50 ಲಕ್ಷ ರೂ.) ಬಹುಮಾನವನ್ನು ಒಳಗೊಂಡಿದೆ.


* ಡೇಮನ್ ಗಾಲ್ಗಟ್ ಅವರ ಕಾದಂಬರಿಯು ಬೂಕರ್ ಪ್ರಶಸ್ತಿಯ ಆಯ್ಕೆ ಪಟ್ಟಿಗೆ ಈ ಹಿಂದೆಯೂ ಎರಡು ಬಾರಿ ಸೇರ್ಪಡೆಯಾಗಿತ್ತು. ಆದರೆ, ಮೂರನೇ ಬಾರಿಗೆ ಪ್ರಶಸ್ತಿ ಒಲಿದಿದೆ.

* 2003ರಲ್ಲಿ 'ದಿ ಗುಡ್ ಡಾಕ್ಟರ್' ಹಾಗೂ 2010ರಲ್ಲಿ 'ಇನ್ ಎ ಸ್ಟ್ರೇಂಜ್‌ ರೂಂ' ಕೃತಿಗಳು ಆಯ್ಕೆ ಪಟ್ಟಿಗೆ ಸೇರ್ಪಡೆಯಾಗಿದ್ದವು.

* 2021ರ ನೊಬೆಲ್ ಸಾಹಿತ್ಯ ಪುರಸ್ಕಾರ ಪಡೆದ ಸಾಹಿತಿ ಅಬ್ದುಲ್ ರಜಾಕ್ ಗುರ್ನಾ ಸಹ ಆಫ್ರಿಕಾದವರು ಎಂಬುದನ್ನು ಡೇಮನ್ ಗಾಲ್ಗಟ್ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. 1969 ರಿಂದ ಇಂಗ್ಲಿಷ್‌ನಲ್ಲಿ ಪ್ರಕಟವಾಗಿರುವ ಕೃತಿಗಳಿಗೆ ಬೂಕರ್ ಪ್ರಶಸ್ತಿ ನೀಡಲಾಗುತ್ತಿದೆ.

 ಇವುಗಳನ್ನೂ ಓದಿ 



 ಇವುಗಳನ್ನೂ ಓದಿ 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Also Read: 12 October 2021 Detailed daily Current Affairs in Kannada for All Competitive Exams  

💥 Also Read: 13 October 2021 Detailed daily Current Affairs in Kannada for All Competitive Exams  

💥 Also Read: 14, 15,  16 and 17 October 2021 Detailed daily Current Affairs in Kannada for All Competitive Exams  

💥 Also Read: 18 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 














Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section