Breaking

Wednesday, 6 October 2021

05 October 2021 Detailed daily Current Affairs in Kannada for All Competitive Exams

 

05 October 2021 Detailed daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ‌.

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 

ವೈದ್ಯಕೀಯ ನೊಬೆಲ್ ಪ್ರಶಸ್ತಿ ಪ್ರಕಟ

 

ಅಮೇರಿಕದ ಸಂಶೋಧಕರಾದ “ಡೇವಿಡ್ ಜೂಲಿ ಯಸ್” & ಪ್ರೊ, ಅರ್ಡೆಮ್ ಪಟಪೋಟಿಯನ್ ಅವರಿಗೆ ಜಂಟಿಯಾಗಿ 2021ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.

Ø  ಚಿಲಿಯ ಕಾಳುಮೆಣಸಿನಲ್ಲಿ ಕಂಡುಬರುವ “ಕ್ಯಾಪ್‌ಸೈಸಿನ್" ಚುರುಕಾದ ಕಣವನ್ನು ಬಳಸಿಕೊಂಡು ವಿಜ್ಞಾನಿ ಜೂಲಿಯಸ್ ಅವರು ತಾಪಮಾನ ಏರಿಕೆಗೆ ಚರ್ಮದಲ್ಲಿ ಸ್ಪಂದನೆ ತೋರುವ ನರಕಣಗಳನ್ನು ಪತ್ತೆ ಮಾಡಿದ್ದಾರೆ.

Ø  ಪಟಪೆಟಿಯನ್ ಅವರು ಭೌತಿಕ ಚಟುವಟಿಕೆಗಳಿಂದ ಉಂಟಾಗುವ ಒತ್ತಡಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಚರ್ಮದ ಗ್ರಹಣ ಕಣಗಳನ್ನು ಸಂಶೋಧಿಸಿದ್ದಾರೆ. 

 

ಡೇವಿಡ್ ಜೂಲಿಯಸ್

* ಜನನ ನವೆಂಬರ್ 04, 1955

* ಜನ್ಮಸ್ಥಳ - ಅಮೇರಿಕಾ

 

ಪ್ರಶಸ್ತಿಗಳು

1.    2000 ರಲ್ಲಿ “ಕ್ಯಾಪೈಸಿಸ್ ರಿಸೆಪ್ಟರ್” ನ್ನು ಕ್ಲೀನಿಂಗ್ ಮಾಡುವ ಕೆಲಸಕ್ಕಾಗಿ ಜೂಲಿಯಸ್‌ಗೆ ಮೊದಲ ಪರ್ಲ್ ಯುಎನ್ಸಿ ನರ ವಿಜ್ಞಾನ ಪ್ರಶಸ್ತಿ ಸಂದಿದೆ.

2.      2014 ರಲ್ಲಿ ಜಾನ್ಸನ್ & ಜಾನ್ಸನ್ ಜೊತೆ ವೈದ್ಯಕೀಯ ಸಂಶೋಧನಾ ಡಾ|| ಪಾಲ್ ಜಾನ್ಸನ್ ಪ್ರಶಸ್ತಿ ಲಭಿಸಿದೆ.

3.      2010 ರಲ್ಲಿ “ಫ್ರಾನ್ಸ್ ಆಫ್ ಅಸ್ಟೋರಿಯಸ್ ಪ್ರಶಸ್ತಿ ಲಭಿಸಿದೆ.

4.      2020 ರಲ್ಲಿ ನರ ವಿಜ್ಞಾನದಲ್ಲಿ “ಕಾವಲಿ ಪ್ರಶಸ್ತಿ ಲಭಿಸಿದೆ.

5.      2021 ರಲ್ಲಿ “ವೈದ್ಯಕೀಯ ನೊಬೆಲ್” 

 

ಅರ್ಡೇಮ್ ಪಟಪೋಟಿಯನ್

 

* ಜನನ - 1967 ಅಣ್ಣಿಕ ಜೀವಶಾಸ್ತ್ರ & ನರವಿಜ್ಞಾನಿ

* 2021ರ ವೈದ್ಯಕೀಯ ನೊಬೆಲ್‌ಗೆ ಭಾಜನರಾಗಿದ್ದಾರೆ.

 

ನೊಬೆಲ್ ಪ್ರಶಸ್ತಿ (ವೈದ್ಯಕೀಯ) ಶರೀರ ವಿಜ್ಞಾನ ಅಥವಾ ಔಷಧದಲ್ಲಿ ಆವಿಷ್ಕಾರಗಳು ಹಾಗೂ ಮನುಕುಲಕ್ಕೆ ಪ್ರಯೋಜನವಾಗುವ ಸಂಶೋಧನೆಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ.

 

* ಮೊದಲ ಪ್ರಧಾನ - 1901

* 2020 ರ ವೈದ್ಯಕೀಯ ನೊಬೆಲ್ ವಿಜೇತರು:

1.      ಮೈಕಲ್ ಹೌಟನ್

2.      ಚಾರ್ಲ್ಸ್ ಎಂ ರೈಸ್

3.      3, ಹಾರ್ವೆ ಜೆ ಅಲ್ಟರ್

 

ವಿಶ್ವ ಮಹಿಳೆಯರ ಟೆನಿಸ್ ಬ್ಯಾಂಕಿಂಗ್ ಪ್ರಕಟ

 

ಇತ್ತೀಚೆಗೆ ಬಿಡುಗಡೆಯಾದ ವಿಶ್ವ ಮಹಿಳೆಯರ ಟೆನಿಸ್ ಬ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಅಗ್ರಸ್ಥಾನದಲ್ಲಿದ್ದರೆ, ಜಪಾನ್‌ನ ನವೋಮಿ ಒಸಾಕ ಅಗ್ರ 10 ಆಟಗಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ.

 

ರ್ಯಾಕಿಂಗ್ ಪಟ್ಟಿ ಹೀಗಿದೆ

ಬ್ಯಾಂಕ್            | ಆಟಗಾರ್ತಿ |                            ದೇಶ

1                        ಆ್ಯಶ್ಲಿ ಬಾರ್ಟಿ                     ಆಸ್ಟ್ರೇಲಿಯಾ

2                    ಅರಿನಾ ಸಬಲೆಂಕಾ                 ಬೆಲಾರಸ್

3.                    ಕರೊಲಿನಾ ಪ್ಲಿಸ್ಕೋವಾ          ಜೆಕ್ ಗಣರಾಜ್ಯ

4.                         ಇಗಾ ಸ್ವಾಟೆಕ್                ಪೊಲೆಂಡ್

5.                  ಬಾರ್ಬೋರಾ ಕ್ರಿಸಿಕೋವಾ         ಜೆಕ್ ಗಣರಾಜ್ಯ

6.                     ಗಾರ್ಬೈನ್ ಮುಗುರುಜಾ           ಸ್ಪೇನ್

7                       ಎಲಿನಾ ಸ್ವಿಟೋಲಿನ್             ಉಕ್ರೇನ್

8.                       ಸೋಫಿಯಾ ಕೆನಿನ್             ಅಮೇರಿಕ

9.                     ಮರಿಯಾ ಸಕ್ಕರಿ                   ಬ್ರಿಟನ್

10                         ಬೆಲಿಂಡಾ ಬೆನ್ನಿಕ್            ಸ್ವಿಟ್ಜರ್ಲೆಂಡ್

 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 

ವಿಶ್ವ ಶಿಕ್ಷಕರ ದಿನ - ಅಕ್ಟೋಬರ್ 05

 

1994 ರಿಂದ ಅಕ್ಟೋಬರ್ 5 ರಂದು ವಿಶ್ವ ಶಿಕ್ಷಕರ ದಿನ' ವನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಕರಿಗೆ ಬೆಂಬಲ ನೀಡುವುದೇ ಇದರಹಿಂದಿನ ಉದ್ದೇಶ ಹಾಗೂ ಭವಿಷ್ಯದ ಪೀಳಿಗೆಗೆ ಕೂಡ ಶಿಕ್ಷಕರ ಅಗತ್ಯ ವಿರುವುದನ್ನು ತಿಳಿಯಪಡಿಸುವುದಕ್ಕಾಗಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ಯುನೆಸ್ಕೋ ಪ್ರಕಾರ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಟ್ಟು ಅವರ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಕರ ಈ ಸೇವೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ವಿಶ್ವ ಶಿಕ್ಷಕರ ದಿನದ ಆಚರಣೆಯ ಉದ್ದೇಶವಾಗಿದೆ.

ವಿಶ್ವ ಶಿಕ್ಷಕರ ದಿನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗುತ್ತದೆ ಹಾಗೂ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಶಿಕ್ಷಕರ ದಿನಾಚರಣೆಯ ಬಗ್ಗೆ ಎಜುಕೇಷನ್ ಇಂಟರ್‌ನ್ಯಾಷನಲ್‌ಗೆ ಬಲವಾದ ನಂಬಿಕೆ ಇದೆ. ಶಿಕ್ಷಕರ ದಿನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡಬೇಕು ಹಾಗೂ ಜಗತ್ತಿನಾದ್ಯಂತ ಆಚರಣೆ ಮಾಡಬೇಕು ಎಂದು ಎಜುಕೇಷನ್ ಇಂಟರ್‌ನ್ಯಾಷನಲ್ ಬಯಕೆಯಾಗಿದೆ. ಭವಿಷ್ಯದ ಪೀಳಿಗೆಗೆ ಶಿಕ್ಷಣ ನೀಡುವ ಜವಾಬ್ದಾರಿಯು ಸಾಮಾನ್ಯವಾದುದಲ್ಲ. ಆದ್ದರಿಂದ ಇಂಥ ಜವಾಬ್ದಾರಿಯುತ ಕೆಲಸವನ್ನು ಮಾಡುತ್ತಿರುವ ಶಿಕ್ಷಕರನ್ನು ವಿಶ್ವ ಶಿಕ್ಷಕರ ದಿನಾಚರಣೆಯಂದು ಮಾತ್ರ ಸ್ಮರಿಸುವುದಲ್ಲ. ವರ್ಷ ಪೂರ್ತಿ ನೆನಪಿಸಿಕೊಳ್ಳಬೇಕು.

 

2021 ರ ಥೀಮ್: Teachers at the heart of education recovery

 

ಇಥಿಯೋಪಿಯಾ ಪ್ರಧಾನಿಯಾಗಿ ಅಹ್ಮದ್ ಪ್ರಮಾಣವಚನ ಸ್ವೀಕಾರ

 

ಎರಡನೇ ಅವಧಿಗೆ ಇಥಿಯೋಪಿಯಾದ ಪ್ರಧಾನಿಯಾಗಿ ಅಬಿಮ್ ಅಹ್ಮದ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಅಹ್ಮದ್‌ಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ಸಂಸತ್ತಿನ ಕೆಳಮನೆಯ ಸ್ಪೀಕರ್‌ ಮತ್ತು ಉಪ ಸ್ಪೀಕರ್ ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆ.

Ø  ವರ್ಷಾರಂಭದಲ್ಲಿ ನಡೆದಿದ್ದ ಸಂಸದೀಯ ಚುನಾವಣೆಯಲ್ಲಿ ಅಹ್ಮದ್ ಅವರ ಪ್ರಾಸ್ಪಾರಿಟಿ ಪಕ್ಷ ಗೆದ್ದಿರುವುದಾಗಿ ಘೋಷಿಸಲಾಗಿತ್ತು. ಚುನಾವಣೆಯನ್ನು ವಿಪಕ್ಷಗಳು ಬಹಿಷ್ಕರಿಸಿದ್ದರೂ, ಈ ಹಿಂದಿಗಿಂತ ಈ ಚುನಾವಣೆ ಉತ್ತಮ ರೀತಿಯಲ್ಲಿ ನಡೆದಿದೆ ಎಂದು ಹೊರ ದೇಶದ ಚುನಾವಣಾ ವೀಕ್ಷಕರು ಅಭಿಪ್ರಾಯಪಟ್ಟಿದ್ದರು. 436 ಸಂಸತ್ ಸ್ಥಾನಗಳಲ್ಲಿ ಗೆದ್ದಿದೆ. ಉತ್ತರದ ಟಿಗ್ರೆ ಪ್ರಾಂತ ಇಥಿಯೋಪಿಯಾ ಸರಕಾರವನ್ನು ವಿರೋಧಿಸುತ್ತಿರುವ ಪ್ರಾಂತೀಯ ಪಡೆಗಳ ನಿಯಂತ್ರಣದಲ್ಲಿದ್ದು ಅಲ್ಲಿ ಚುನಾವಣೆ ನಡೆದಿಲ್ಲ.

Ø  2018 ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಅಹ್ಮದ್ ನೆರೆಯ ಎರಿಟ್ರಿಯಾ ದೇಶದೊಂದಿಗೆ ಸಂಬಂಧ ಸುಧಾರಣೆಗೆ ಮತ್ತು ವ್ಯಾಪಕ ರಾಜಕೀಯ ಸುಧಾರಣೆಗೆ ಶ್ರಮಿಸಿದ್ದ ಕಾರಣಕ್ಕೆ 2019 ರ ಶಾಂತಿ ನೊಬೆಲ್ ಪುರಸ್ಕಾರ ಪಡೆದಿದ್ದಾರೆ. ದೇಶದ ಭದ್ರತೆಯನ್ನು ಸುಧಾರಿಸಲು ಪ್ರಧಾನಿ ಆದ್ಯತೆ ನೀಡಬೇಕು ಎಂದು ಜನತೆ ಬಯಸುತ್ತಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ.

 

ಇಥಿಯೋಪಿಯಾ ದೇಶದ ಕುರಿತಾದ ಹೆಚ್ಚಿನ ಮಾಹಿತಿ

 

v  ಇಥಿಯೋಪಿಯಾವು ಆಫ್ರಿಕಾ ಖಂಡದ ಉತ್ತರಕ್ಕಿರುವ ಒಂದು ಪ್ರಾಚೀನ ದೇಶವಾಗಿದೆ.

v  ರಾಜಧಾನಿ - ಆಡಿಸ್ ಅಬಾಬಾ

v  ಕರೆನ್ಸಿ - “ಬಿರ್'

v  ಹೆಚ್‌ಡಿಐ ಸ್ಥಾನ - 173

v  ರಾಷ್ಟ್ರಪತಿ - ಗಿರ್ಮವೊಲ್ಪೆ ಜಿಯೊರ್ಗಿಸ್

 

ಅದಾನಿ ತೆಕ್ಕೆಗೆ ಎನರ್ಜಿ ಇಂಡಿಯಾ ಕಂಪನಿ

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (ಎಜಿಇಎಲ್) ಕಂಪನಿಯು 26 ಸಾವಿರ ಕೋಟಿ ರೂ. ಗೆ ಎಸ್‌ಬಿ ಎನರ್ಜಿ ಇಂಡಿಯಾ ಕಂಪನಿ ಯನ್ನು ಖರೀದಿಸಿದೆ. ಎಸ್‌ಬಿ ಎನರ್ಜಿ ಇಂಡಿಯಾ ಕಂಪನಿಯು ಅದಾನಿ ಕಂಪನಿಯ ಶೇ. 100 ರಷ್ಟು ಸಹೋದರ ಕಂಪನಿಯಾಗಿದೆ. ಈ ಹಿಂದೆ ಇದು ಜಪಾನ್ ಮೂಲದ ಗ್ರೂಪ್ ಕಾರ್ಪ್ ಮತ್ತು ಭಾರ್ತಿ ಗ್ರೂಪ್‌ಗಳ 80:20 ಪಾಲುದಾರಿಕೆಯ ಕಂಪನಿಯಾಗಿತ್ತು. ಮುಂದಿನ ಹತ್ತು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 20 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಅದಾನಿ ಗುಂಪಿನ ಅಧ್ಯಕ್ಷ ಗೌತಮ್ ಅದಾನಿ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

 ಇವುಗಳನ್ನೂ ಓದಿ 












No comments:

Post a Comment

Important Notes

Random Posts

Important Notes

Popular Posts

Top-50 General Knowledge (GK) Question Answers in Kannada for All Competitive Exams-08

Top-50 General Knowledge (GK) Question Answers in  Kannada for All Competitive Exams-08 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's El...

19th January 2025 Daily Current Affairs Quiz in Kannada for All Competitive Exams

          19th January 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-19th January 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

18th January 2025 Daily Current Affairs Quiz in Kannada for All Competitive Exams

          18th January 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-18th January 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Best General Knowledge MCQs in Kannada for All Competitive Exams-01

Best General Knowledge MCQs in  Kannada for All Competitive Exams-01 1. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ Show Answer ಎ) ಮಿಚೆಲ್ಲಿ 2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ ಡಿ) ನಾಲ್ಕನೇ ಸೋಮೇಶ್ವರ Show Answer ಸಿ) ಎರಡನೇ ದೇವರಾಯ 4. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ ಸಿ) ಕೊಲಂಬಿಯಾ  ಡಿ) ಚೀನಾ Show Answer ಬಿ) ಬಲ್ಗೇರಿಯಾ 5. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ Show Answer ಎ) ಸೋಡಿಯಂ 6. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ Show Answer ಬಿ) ಸೋಡಿಯಂ ಹೈಡ್ರಾಕ್ಸೆಡ್ 7. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ ಸಿ) ಪಟಿಯಾಲ ಡಿ) ವಿಜಯವಾಡ Show Answer ಬಿ) ಡಾರ್ಜಿಲಿಂಗ್ 8, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ)...