Type Here to Get Search Results !

09 October 2021 Detailed Daily Current Affairs in Kannada for All Competitive Exams

  

09 October 2021 Detailed Daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams www.kpscnotesmcqs.in



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ‌.

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 


ವಿಶ್ವ ಅಂಚೆ ದಿನಾಚರಣೆ : ಅಕ್ಟೋಬರ್ 9


ವಿಶ್ವ ಅಂಚೆ ದಿನವನ್ನು ಜಗತ್ತಿನಾದ್ಯಂತ ಅಕ್ಟೋಬರ್ 9 ರಂದು  ಆಚರಿಸಲಾಗುತ್ತದೆ. ಮನುಷ್ಯನ ಅತ್ಯಗತ್ಯ ಅವಶ್ಯಕತೆಗಳಲ್ಲಿ ಒಂದಾದ ಸಂವಹನದ ಸಾಧನಗಳಲ್ಲಿ ಅಂಚೆಯು ಪ್ರಮುಖ ಸಾಧನವಾಗಿದೆ.

ಅಂಚೆ ದಿನಾಚರಣೆ ಇತಿಹಾಸ


ಪ್ರತಿವರ್ಷ ಅಕ್ಟೋಬರ್ 9 ನೇ ತಾರೀಖಿನಂದು ವಿಶ್ವ ಅಂಚೆ ದಿನವನ್ನಾಗಿ ಆಚರಿಸಲಾಗುತ್ತದೆ. 1874 ಅಕ್ಟೋಬರ್ 9 ರಂದು ಸ್ವಿಟ್ಜರ್ ಲ್ಯಾಂಡ್ ನ ಬ್ರೇನ್ ನಗರದಲ್ಲಿ ಯುನಿವರ್ಸಲ್ ಪೋಸ್ಟಲ್ ಯೂನಿಯನ್ (UPU) ಸ್ಥಾಪನೆಯಾಗಿತ್ತು. ಈ ಸಂಸ್ಥೆಯು ಜಾಗತಿಕ ಸಂವಹನದ ಕ್ರಾಂತಿಗೆ ದೊಡ್ಡ ಕೊಡುಗೆಯನ್ನು ನೀಡಿದೆ. ಅದರ ಜ್ಞಾಪಕಾರ್ಥವಾಗಿ ವಿಶ್ವ ಅಂಚೆ ದಿನ ಆಚರಿಸಲಾಗುತ್ತದೆ.

  • 1970 ರಲ್ಲಿ ಜಪಾನ್ ದೇಶದ ಟೋಕಿಯೋ ನಗರದಲ್ಲಿ ನಡೆದ *UPU' ಸಮ್ಮೇಳನದಲ್ಲಿ ಅಕ್ಟೋಬರ್ 9 ರಂದು ಮೊಟ್ಟ ಮೊದಲ ಅಂಚೆ ದಿನವೆಂದು ಘೋಷಿಸಲಾಯಿತು.
  • UPU-Universal Postal Union
  • ಯುನೈಟೆಡ್ ನೇಷನ್ಸ್‌ನ ಒಂದು ಅಂಗ ಸಂಸ್ಥೆಯಾಗಿದೆ

UPU-Universal Postal Union

  • ಸ್ಥಾಪನೆ : 1874 [ಬರ್ನ್ ಒಪ್ಪಂದದ ಅನ್ವಯ]
  • ಸ್ಥಾಪಕ : ಹೆನ್ರಿ ವೂನ್ ಸ್ಪೆಷನ್
  • ಪ್ರಧಾನ ಕಛೇರಿ : ಬರ್ನ್, ಸ್ವಿಟ್ಟರ್‌ಲ್ಯಾಂಡ್
  • ಪ್ರಸ್ತುತ ಮುಖ್ಯಸ್ಥ : ಬಿಶಾರ್ ಅಬ್ದಿ ರೆಹಮಾನ್ ಹುಸೇನ್
  • ಮಾತೃ ಸಂಸ್ಥೆ : ವಿಶ್ವಸಂಸ್ಥೆಯ ಆರ್ಥಿಕ & ಸಾಮಾಜಿಕ ಮಂಡಳಿ
  • ಇದು ಪ್ರಪಂಚದಾದ್ಯಂತ ಅಂಚೆ ಜಾಲವನ್ನು ಹೊಂದಿದೆ
  • ಇದು ವಿಶ್ವದ ಅತ್ಯಂತ ಹಳೆಯ ಅಂತರರಾಷ್ಟ್ರೀಯ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಇದು 192 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಅಂತರರಾಷ್ಟ್ರೀಯ ಅಂಚೆ ಸಂವಹನದ ನಿಯಮಗಳನ್ನು ಸಹ ಈ ಸಂಸ್ಥೆ ನಿರ್ವಹಿಸುತ್ತದೆ.

ಭಾರತೀಯ ವಾಯುಸೇನೆ ದಿನಾಚರಣೆ


ಅಕ್ಟೋಬರ್ 8 ರಂದು ಭಾರತೀಯ ವಾಯುಸೇನೆ ದಿನವನ್ನು ಆಚರಿಸಲಾಗುತ್ತದೆ. 2021 ರಲ್ಲಿ ಭಾರತವು 89 ನೇ ಭಾರತೀಯ ವಾಯುಸೇನೆ ದಿನವನ್ನು ಆಚರಿಸುತ್ತಿದೆ. ರಾಷ್ಟ್ರೀಯ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತೀಯ ವಾಯುಸೇನೆಯ ಕುರಿತು ಪರಿಚಯ ಹಾಗೂ ಜಾಗೃತಿ ಮೂಡಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತೀಯ ವಾಯುಸೇನೆ ದಿನಾಚರಣೆಯನ್ನು “ಗಾಜಿಯಬಾದ್ ಹಿಂಡನ್' ವಾಯುನೆಲೆಯಲ್ಲಿ ಪ್ರತಿವರ್ಷ ಆಚರಿಸುತ್ತಾರೆ.

ಭಾರತೀಯ ವಾಯುಸೇನೆಯ ಇತಿಹಾಸ:


ಭಾರತೀಯ ವಾಯುಸೇನೆಯನ್ನು ಅಧಿಕೃತವಾಗಿ ಅಕ್ಟೋಬರ್ 8 1932 ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಭಾರತೀಯ ವಾಯುಸೇನೆಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಆರಂಭದಲ್ಲಿ IAF ಕಾಯ್ದೆ-1932 ರ ಅನುಸಾರವಾಗಿ ಭಾರತೀಯ ಸೇನೆಯ ಬ್ರಿಟೀಷ್ ಸಾಮ್ರಾಜ್ಯದ ಸಹಾಯಕ ಪಡೆಯಾಗಿ ಹೊರಹೊಮ್ಮಿತು. ಇದರ ಸ್ಮರಣಾರ್ಥವಾಗಿ ಆಚರಿಸಿಕೊಂಡು ಬರುತ್ತಿದ್ದು, ಈ ದಿನದಂದು ದೇಶಸೇವೆಯ ವೇಳೆ ಹುತಾತ್ಮರಾದ ವಾಯುಪಡೆಯ ಸೈನಿಕರನ್ನು ಸ್ಮರಿಸಿ ಅವರಿಗೆ ಗೌರವ ನೀಡುವ ಕಾರ್ಯಕ್ರಮ ಈ ದಿನದ ವೈಶಿಷ್ಟ್ಯವಾಗಿದೆ.

IAF Act 1932: (Indian Airforce Act)


ಇದು ಭಾರತೀಯ ವಾಯುಪಡೆಯ ಆಡಳಿತ ಮತ್ತು ಶಿಸ್ತು ಒದಗಿಸುವ ಒಂದು ಕಾಯ್ದೆಯಾಗಿದೆ. ಭಾರತೀಯ ವಾಯುಸೇನೆ 1933 ಏಪ್ರಿಲ್‌ನಲ್ಲಿ ಮೊದಲ ಸ್ಯಾಡಾನ್ ರೂಪುಗೊಂಡಿತು. ನಾಲ್ಕು ವೆಸ್ಟ್‌ಲ್ಯಾಂಡ್ ವಾಪಿಟಿ, ಬೈ ಪ್ಲೇನ್‌ಗಳು 5 ಪೈಲಟ್‌ಗಳನ್ನು ಒಳಗೊಂಡು ಅಂದು ಕಾರ್ಯಾಚರಣೆ ಆರಂಭ, ಬ್ರಿಟೀಷ್ ಸರ್ಕಾರದಿಂದ ಆರಂಭವಾದ ಭಾರತೀಯ ವಾಯುಸೇನೆ ಇಂದು ವಿಶ್ವದಲ್ಲಿಯೇ ನಾಲ್ಕನೇಯ ಅತ್ಯುತ್ತಮ ಸೇನೆಯಾಗಿ ಹೆಸರು ಪಡೆದಿದೆ.

  • ಸ್ಥಾಪನೆ : ಅಕ್ಟೋಬರ್ 8, 1932
  • ಪ್ರಧಾನ ಕಛೇರಿ : ನವದೆಹಲಿ
  • ಧೈಯವಾಕ್ಯ : Touching the sky with Glory
  •  ಪ್ರಸ್ತುತ ಏರ್‌ಚೀಫ್ ಮಾರ್ಷಲ್ : ವಿವೇಕ ರಾಮ್ ಚೌಧರಿ
  • ರಾಷ್ಟ್ರಪತಿಯವರು ಎರಡು ಸೇನಾ ಪಡೆಯಂತೆಯೇ ಇಲ್ಲಿಯೂ ಸಹ ಮಹಾದಂಡನಾಯಕರಾಗಿರುತ್ತಾರೆ.
  • ಚೀಪ್ ಆಫ್ ಏರ್ ಸ್ಟಾಫ್ & ಏರ್ ಚೀಫ್ ಮಾರ್ಷಲ್ ವಾಯುಸೇನೆಯ ಕಾರ್ಯಗಳನ್ನು ನಿರ್ವಹಿಸುತ್ತಾರೆ.

ರಾಯಲ್ ಏರ್‌ಫೋರ್ಸ್


  • ಎರಡನೆಯ ಮಹಾಯುದ್ಧದಲ್ಲಿ ಭಾರತೀಯ ವಾಯುಸೇನೆ ತೋರಿದ ಸಾಮರ್ಥ್ಯ ಗುರುತಿಸಿ ರಾಯಲ್ ಎನ್ನುವ ಹೆಸರನ್ನು ವಾಯುಪಡೆಗೆ ಸೇರಿಸಲಾಯಿತು.
  • 1947 ರಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರ ವಾಯುಸೇನೆಯನ್ನು ರಾಯಲ್ ಇಂಡಿಯನ್ ಏರ್‌ಫೋರ್ಸ್‌ ಎನ್ನುವ ಹೆಸರಿನಲ್ಲಿ ಗುರುತಿಸಲಾಯಿತು.
  • 1950 ರಲ್ಲಿ ಸಂವಿಧಾನ ರಚನೆಯಾದ ನಂತರ ರಾಯಲ್ ಹೆಸರನ್ನು ಕೈ ಬಿಟ್ಟು, 'ಇಂಡಿಯನ್ ಏರ್ ಫೋರ್ಸ್' ಎಂದು ಕರೆಯಲಾಯಿತು.

ವಾಯುಸೇನೆಯ ಸಾಮರ್ಥ್ಯ


  • ಭಾರತೀಯ ವಾಯುಸೇನೆಯು ವಿಶ್ವದಲ್ಲಿಯೇ 4 ನೇ ಅತ್ಯುತ್ತಮ ಸೇನೆಯಾಗಿದೆ.
  • 1.4 ಲಕ್ಷಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
  • 1700 ಕ್ಕೂ ಅಧಿಕ ಏರ್ ಕ್ರಾಫ್ಟ್ಗಳನ್ನು ಹೊಂದಿದೆ.
  • *ನೆರೆ ದೇಶಗಳಾದ ಚೀನಾ, ಪಾಕಿಸ್ತಾನದೊಂದಿಗೆ ನಾಲ್ಕು ಪ್ರಮುಖ ಯುದ್ಧಗಳಲ್ಲಿ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.
  • 5 ಕಾರ್ಯಕಾರಿ ಕಮಾಂಡ್‌ಗಳು ಮತ್ತು 2 ಕ್ರಿಯಾತ್ಮಕ ಕಮಾಂಡ್‌ ಗಳನ್ನು ಹೊಂದಿದೆ. 
  • ರಷ್ಯಾ, ಫ್ರಾನ್ಸ್, ಬಾಂಗ್ಲಾದೇಶ, ಜಪಾನ್, ಅಮೇರಿಕಾ ಸೇರಿ 20 ಕ್ಕೂ ಅಧಿಕ ದೇಶಗಳೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಳ್ಳಲಾಗಿದೆ.

ಗರುಡ ಪಡೆ


ಭಾರತೀಯ ವಾಯುಸೇನೆಯ ವಿಶೇಷ ಕಾರ್ಯಾಚರಣೆಗಾಗಿ 2004 ರಲ್ಲಿ ಗರುಡಪಡೆಯನ್ನು ಸ್ಥಾಪಿಸಿತು. ವಾಯುಸೇನೆಯು ಮಹತ್ವದ ತಾಣಗಳ ರಕ್ಷಣೆ, ಶೋಧನೆ & ವಿಪತ್ತು ಕಾರ್ಯಗಳಿಗೆ ಈ ಪಡೆಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗುತ್ತದೆ. ಈ ಪಡೆ ವಿಶೇಷ ಪರಿಣಿತಿ ಹೊಂದಿದ 1500 ಸಿಬ್ಬಂದಿಯನ್ನು ಹೊಂದಿದೆ.

ವಾಯುಪಡೆಯ ಶಸ್ತ್ರಾಸ್ತ್ರಗಳು:


1) ರಫೇಲ್ ಯುದ್ಧ ವಿಮಾನ
2) ಮಿಗ್ ಸರಣಿ [ಮಿಗ್-21, ಮಿಗ್-29, ಮಿಗ್-65]
3) ಸುಖೋಯ್ [ಸುಖೋಯ್-30, ಸುಖೋಯ್-5]
4) HAL ತೇಜಸ್ [ತೇಜಸ್-54]
5) ಬೋಯಿಂಗ್ -707
6) ಇಲ್ಯುಶಿಯನ್ ಸರಣಿ
7) ಮಿರಾಜ್
8) ಜಾಗ್ವರ್
9) ವಿಚಕ್ಷಣ & ಕಣ್ಣಾವಲಿಗಾಗಿ HAL ಧ್ರುವ್ ಮಾನವರಹಿತ ವೈಮಾನಿಕ ವಾಹನಗಳಂತಹ ಹೆಲಿಕಾಪ್ಟರ್‌ಗಳು
10) ಕ್ಷಿಪಣಿಗಳು

ವಾಯುಪಡೆಯ ತರಬೇತಿ ಶಾಲೆಗಳು


ಎ) ಏರ್‌ಫೋರ್ಸ್ ಅಕಾಡೆಮಿ - ದಿಂಡಿಗಲ್
ಬಿ) ಪೈಲಟ್ ತರಬೇತಿ ಸಂಸ್ಥೆ - ಅಲಹಾಬಾದ್
‌ಸಿ) ಇನ್ಸಿಟ್ಯೂಟ್‌ ಆಫ್‌ ಏರೋಸ್ಪೇಸ್ ಮೆಡಿಸಿನ್ - ಬೆಂಗಳೂರು
ಡಿ) ವಾಯುಪಡೆಯ ಆಡಳಿತ ಕಾಲೇಜು - ಕೋಯಮತ್ತೂರು
ಇ) ಪ್ಯಾರಾ ಟ್ರೂಪರ್ಸ್ ತರಬೇತಿ ಶಾಲೆ - ಆಡ್ರಿ
ಎಫ್) ತಂತ್ರಗಳು ಮತ್ತು ವಾಯು ಯುದ್ಧ & ರಕ್ಷಣಾ ಸಂಸ್ಥೆ - ಗ್ವಾಲಿಯರ್

ವಾಯುಪಡೆಯ 'ಹಿಂಡನ್ ವಾಯುನಿಲ್ದಾಣ' ಏಷ್ಯಾದಲ್ಲಿಯೇ ಅತೀ ದೊಡ್ಡ ವಾಯುನೆಲೆ, ಗಾಜಿಯಾಬಾದ್ ನಲ್ಲಿ ಇರುವ ಇದು ವೆಸ್ಟರ್ನ್ ಏರ್‌ಕಮಾಂಡ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. 9 ಸಾವಿರ ಅಡಿಯ ಅತೀ ದೊಡ್ಡ ರನ್ ವೇ ಹೊಂದಿದೆ. 

2021 ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟ (THE NOBEL PEACE PRIZE 2021)


ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗಾಗಿ ಶ್ರಮಿಸಿದ ಪತ್ರ ಕರ್ತರಾದ ಫಿಲಿಫೈನ್ಸ್ ನ ಮರಿಯಾ ರೆಸ್ಸಾ ಮತ್ತು ರಷ್ಯಾದ ಡಿಮಿಟ್ರಿ ಮುರಾಟೋವಾ ಅವರಿಗೆ 2021 ನೇ ಸಾಲಿನ ಶಾಂತಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮರಿಯಾ ರೆಸ್ಪಾ ರವರು 2012 ರಲ್ಲಿ ಆರಂಭವಾದ “ರಾಪ್ಲರ್” ಎಂಬ ನ್ಯೂಸ್ ವೆಬ್‌ಸೈಟ್‌ನ ಸಹ ಸ್ಥಾಪಕರಾಗಿದ್ದಾರೆ. ಮತ್ತು ಡಿಮಿಟ್ರಿ ಮುರಾಟೋವಾ 1993 ರಲ್ಲಿ ಸ್ಥಾಪನೆಯಾದ ರಷ್ಯಾದ ಸ್ವತಂತ್ರ ಪತ್ರಿಕೆ “ನೋವಾಯಾ ಗೆಜೆಟ್” ಸ್ವಸ್ಥಾಪಕರಾಗಿದ್ದಾರೆ.
* ಇದೇ ಮೊದಲ ಬಾರಿಗೆ 1935 ರ ನಂತರ ಪತ್ರಕರ್ತರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿದೆ.
* ಶಾಂತಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಪತ್ರಕರ್ತ ಜರ್ಮನಿಯ ಕಾರ್ಲ್ವಾನ್ ಒಸಿಟೆಸ್ನಿ.

ರೆಪೊದರ ಪ್ರಕಟಿಸಿದ ಆರ್.ಬಿ.ಐ


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹಣಕಾಸು ಪರಾಮರ್ಶೆಯಲ್ಲಿ ಬಡ್ಡಿ ದರಗಳನ್ನು ಸತತ 8ನೇ ಬಾರಿಗೆ ಯಾವುದೇ ರೀತಿ ದರಗಳಲ್ಲಿ ಬದಲಾವಣೆ ಮಾಡದೇ ಯಥಾಪ್ರಕಾರವಾಗಿ ಪ್ರಕಟಿಸಿದೆ
• ಪ್ರಸ್ತುತ ರೆಪೊದರ - 4%
• ಪ್ರಸ್ತುತ ರಿಸರ್ವ್ ರೆಪೊ ದರ - 3.35%

ಆರ್ಥಿಕ ಪ್ರಗತಿ & ಹಣದುಬ್ಬರವನ್ನು ಗಮನದಲ್ಲಿ ಇಟ್ಟುಕೊಂಡು ಸೂಕ್ತ ರೀತಿಯ ಬಡ್ಡಿ ದರಗಳನ್ನು ನಿಗದಿಪಡಿಸುವುದು ಭಾರತೀಯ ರಿಸರ್ವ್ ಬ್ಯಾಂಕ್‌ನ ಕಾರ್ಯವಾಗಿದೆ.

ರಿಸರ್ವ್ ಬ್ಯಾಂಕ್ ಇಂಡಿಯಾವು “ಇಮೀಡಿಯೇಟ್ ಪೇಮೆಂಟ್ ಸರ್ವೀಸ್” ಮೂಲಕ ಹಣ ವರ್ಗಾವಣೆ ಮಿತಿಯನ್ನು ಪ್ರಸ್ತುತ ಇರುವ 2 ಲಕ್ಷ ದಿಂದ 5 ಲಕ್ಷಗಳ ವರೆಗೆ ಏರಿಸಿದೆ ಅಲ್ಲದೇ ಈ ಸೇವೆಯನ್ನು ದಿನದ 24 ಗಂಟೆಗಳು ಈ ಸೇವೆಗಳು ಲಭ್ಯವಿರಲಿದೆ.
* ಆರ್.ಬಿ.ಐ – 2021 - 22 ರ ಜಿಡಿಪಿ ಮುನ್ನೋಟವನ್ನು ಶೇ 9.5 ಕ್ಕೆ ನಿಗದಿಪಡಿಸಿದೆ.
* 2021-22 ರ ರಿಟೇಲ್ ಹಣದುಬ್ಬರ ಪ್ರಮಾಣವನ್ನು ಶೇ.5.3 ಇರಬಹುದು ಎಂದು ಅಂದಾಜಿಸಿದೆ. 

ಭಾರತೀಯ ರಿಸರ್ವ್ ಬ್ಯಾಂಕ್.



  • ಸ್ಥಾಪನೆ : 1935 ಏಪ್ರಿಲ್ 01
  • ರಾಷ್ಟ್ರೀಕರಣ 1949 ಜನೇವರಿ 01
  •  ಲಾಂಛನ - ಹುಲಿ
  • ಕೇಂದ್ರ ಕಛೇರಿ - ಮುಂಬೈ
  • ಮೊದಲ ಗವರ್ನರ್ : ಸರ್.ಓಸ್.ಬರ್ನ್ಸ್ಮಿತ್
  • ಮೊದಲ ಭಾರತೀಯ ಗವರ್ನರ್ - ಸಿ.ಡಿ.ದೇಶ್‌ಮುಖ್‌
  • ಪ್ರಸ್ತುತ ಗವರ್ನರ್ - ಶಕ್ತಿ ಕಾಂತ್‌ ದಾಸ್‌ (25)
  • ರೆಪೋದರ : ವಾಣಿಜ್ಯ ಬ್ಯಾಂಕುಗಳು ಆರ್.ಬಿ.ಐ ದಿಂದ ತಂದಿರುವ ಸಾಲದ ಮೇಲೆ ಆರ್.ಬಿ.ಐ ವಿಧಿಸುವ ಬಡ್ಡಿದರವಾಗಿದೆ.
  •  ಪ್ರಸ್ತುತ ರೆಪೊದರ - 4.0% (2021)
  • ರಿವರ್ಸ್ ರೆಪೊದರ : ವಾಣಿಜ್ಯ ಬ್ಯಾಂಕ್‌ಗಳು ಆರ್.ಬಿ.ಐ ನಲ್ಲಿ ಇಟ್ಟ ಹಣದ ಮೇಲೆ ಆರ್.ಬಿ.ಐ ವಿಧಿಸುವ ಬಡ್ಡಿದರವೇ ರಿವರ್ಸ್ ರೆಪೋ ದರವಾಗಿದೆ.
  • ಪ್ರಸ್ತುತ ರಿವರ್ಸ್ ರೆಪೊ ದರ - 3.35%


ಏರ್ ಇಂಡಿಯಾ ಖರೀದಿಸಿದ ಟಾಟಾ ಸಮೂಹ


68 ವರ್ಷಗಳ ಬಳಿಕ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಟಾಟಾ ಸಮೂಹದ ಕೈ ಸೇರಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾ ಶೇ.100 ಸ್ವಾಧೀನ ಪಡಿಸಿಕೊಳ್ಳಲು 18,000 ಕೋಟಿ ರೂ. ಬಿಡ್ ಮಾಡುವುದರೊಂದಿಗೆ ಟಾಟಾ ಸಮೂಹ ತನ್ನದಾಗಿಸಿಕೊಂಡಿದೆ.

  • 18,000 ಕೋಟಿ ರೂ.ಗೆ ಟಾಟಾ ಸೆನ್ಸ್‌ಗೆ ಏರ್ ಇಂಡಿಯಾ ಗೆ ಮಾರಾಟ
  • 15,300 ಕೋಟಿ ರೂ.ಸಾಲದ ಹೊಣೆ ಹೊರಲಿರುವ ಟಾಟಾ
  • 2,700 ಕೋಟಿ ರೂ. ನಗದಿನಲ್ಲಿ ಸರ್ಕಾರಕ್ಕೆ ಪಾವತಿಸಲಿರುವ ಟಾಟಾ ಸನ್ಸ್.
  • 5 ವರ್ಷಗಳ ಬಳಿಕ ಟಾಟಾ ಸನ್ಸ್ ಬ್ಯಾಂಡ್‌ನ್ನು ಅದೇ ಹೆಸರಿನೊಂದಿಗೆ ಕೇವಲ ಭಾರತೀಯರಿಗಷ್ಟೇ ವರ್ಗಾಯಿಸಬಹುದು.
  • 60,000 ಕೋಟಿ ರೂ. ಏರ್ ಇಂಡಿಯಾ ಸಾಲ; ನಿತ್ಯ 20 ಕೋಟಿ ನಷ್ಟ ಒಪ್ಪಂದದ ಬಳಿಕ 46,262 ಕೋಟಿ ಮೌಲ್ಯದ ಸಾಲ, 14,718 ಕೋಟಿ ರೂ ಮೌಲ್ಯದ ಕಟ್ಟಡ ಮತ್ತು ಭೂಮಿ ಸರ್ಕಾರದ ಸುಪರ್ದಿಗೆ.

ಉದ್ಯೋಗಿಗಳ ಸ್ಥಿತಿ :-

* ಮೊದಲ ವರ್ಷದಲ್ಲಿ ಏರ್ ಇಂಡಿಯಾ ಉದ್ಯೋಗಿಗಳನ್ನು ವಜಾಗೊಳಿಸುವುದಿಲ್ಲ. 2ನೇ ವರ್ಷದಲ್ಲಿ ಸ್ವಯಂ ನಿವೃತ್ತಿ ಅಥವಾ ವಿಆರ್‌ಎಸ್‌ ಪಡೆದುಕೊಳ್ಳಬೇಕು.
* ಎಲ್ಲ ಉದ್ಯೋಗಿಗಳಿಗೂ ಗ್ರಾಚ್ಯುಟಿ ಮತ್ತು ಭವಿಷ್ಯ ನಿಧಿ ಪ್ರಯೋಜನ

ಏರ್ ಇಂಡಿಯಾ

  • ಸ್ಥಾಪಕ : ಜೆಆರ್‌ಡಿ ಟಾಟಾ
  • ಏರ್ ಇಂಡಿಯಾದ ಇತಿಹಾಸ ಸಹ ಭಾರತ ಸ್ವಾತಂತ್ರ್ಯಕ್ಕಿಂತಲೂ ಹಳೆಯದು. ಪೈಲಟ್ ಪರವಾನಗಿ ಪಡೆದಿದ್ದ ಮೊದಲ ಭಾರತೀಯ, ಉದ್ಯಮಿ ಜೆಆರ್‌ಡಿ ಟಾಟಾ 1932 ರಲ್ಲಿ ಕರಾಚಿ ಮತ್ತು ಬಾಂಬೆ ನಡುವೆ ಏ‌ರ್ ಮೇಲ್ ಸೇವೆಯನ್ನು ಆರಂಭಿಸಲು ನಿರ್ಧರಿಸಿದರು.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೊದಲ ಸ್ಥಾನ


ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವೂ ಅತಿ ಹೆಚ್ಚು ಪೆರಿಷಬಲ್ ಪದಾರ್ಥಗಳ ಸರಕು ಸಾಗಣೆ ಮಾಡಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೃಷಿ ಮತ್ತು ಸಂಸ್ಕರಿಸಿದ ಉತ್ಪನ್ನಗಳ ರಫ್ತು ಅಭಿವೃದ್ಧಿ ಮಂಡಳಿ (ಎಪಿಇಡಿಎ) ಅವರ ಮಾಹಿತಿ ಪ್ರಕಾರ 2020-21 ರ ಹಣಕಾಸು ವರ್ಷದಲ್ಲಿ 41,130 ಮೆಟ್ರಿಕ್ ಟನ್ ನಷ್ಟು ಕಡಿಮೆ ಬಾಳಿಕೆ ಅವಧಿಯ ಹಣ್ಣು ತರಕಾರಿಯಂತಹ (ಪೆರಿಷಬಲ್)- ಉತ್ಪನ್ನಗಳನ್ನು ರಫ್ತು ಮಾಡಲಾಗಿದ್ದು, ಇದು ದೇಶದ ಪೆರಿಷಬಲ್ ಉತ್ಪನ್ನಗಳ ಪೈಕಿ ಶೇ.31 ರಷ್ಟು ಕೆಂಪೇಗೌಡ ವಿಮಾನ ನಿಲ್ದಾಣದಿಂದಲೇ ರಫ್ತಾಗಿದೆ. ಕೋಳಿ, ಹೂಗಳ ರಫ್ತಿನಲ್ಲೂ ಕೆಂಪೇಗೌಡ ವಿಮಾನ ನಿಲ್ದಾಣವೇ ಮುಂಚೂಣಿಯಲ್ಲಿದ್ದು, 28, 182 ಮೆಟ್ರಿಕ್ ಟನ್‌ನಷ್ಟು ಕೋಳಿ ಹಾಗೂ 1,296 ಮೆಟ್ರಿಕ್ ಟನ್ ಹೂವುಗಳನ್ನು ರಫ್ತು ಮಾಡಲಾಗಿದೆ. 24 ವಿಮಾನಯಾನ ಸಂಸ್ಥೆಗಳು 46 ವಿದೇಶಗಳಲ್ಲಿ ಪರಿಷಬಲ್ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. ಪೆರಿಷಬಲ್ ಉತ್ಪನ್ನಗಳನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಕೆಡದಂತೆ ಸಂಸ್ಕರಿಸಿ ವೇಗವಾಗಿ ರಫ್ತು ಮಾಡಲಾಗುತ್ತಿದೆ.

 ಇವುಗಳನ್ನೂ ಓದಿ 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 












Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section