Breaking

Thursday, 14 October 2021

13 October 2021 Detailed Daily Current Affairs in Kannada for All Competitive Exams

    

13 October 2021 Detailed Daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams www.kpscnotesmcqs.in



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ‌.

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Also Read: 12 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 


ನಾಗಮೋಹನದಾಸ್ ಗೆ ತೋಂಟದ ಶ್ರೀ ರಾಷ್ಟ್ರೀಯ ಪ್ರಶಸ್ತಿ


ಗದಗದ ತೋಂಟದಾರ್ಯ ಸಂಸ್ಥಾನ ಮಠದಿಂದ ನೀಡಲಾಗುವ “ಡಾ।। ತೋಂಟದ ಸಿದ್ಧಲಿಂಗ ಶ್ರೀ ರಾಷ್ಟ್ರೀಯ ಪ್ರಶಸ್ತಿ'ಗೆ ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರನ್ನು ಆಯ್ಕೆ ಮಾಡಲಾಗಿದೆ.

  • ಈ ಪ್ರಶಸ್ತಿಯು 5 ಲಕ್ಷ ರೂ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.
  • 2019 ರಲ್ಲಿ ಈ ಪ್ರಶಸ್ತಿ ಆರಂಭಿಸಲಾಗಿದ್ದು, ಮೊದಲ ಪ್ರಶಸ್ತಿ ಪುರಸ್ಕೃತರು - ಈ ಕೃಷ್ಣಪ್ಪ
  • ಪ್ರಸ್ತುತ ಈ ಪ್ರಶಸ್ತಿಯು ಎರಡನೇ ಆವೃತ್ತಿಯದಾಗಿದೆ.

ನಾಗಮೋಹನದಾಸ್ ಅವರ ಕುರಿತು 

  • ಜನನ - ಫೆಬ್ರುವರಿ 12, 1952
  • ಜನ್ಮಸ್ಥಳ - ಕೋಲಾರ
  • ಬೆಂಗಳೂರು ವಿಶ್ವ ವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ.
  • 2004 ರ ಅಕ್ಟೋಬರ್‌ನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ.
  • 2014 ರಲ್ಲಿ ದೆಹಲಿಯ ಸರ್ವೋಚ್ಛ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿ ನೇಮಕ.
  • ರಾಜ್ಯ ಸರಕಾರದ ಹಲವು ಆಯೋಗಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಧಾನ ಮಂತ್ರಿ ಸಲಹೆಗಾರರಾಗಿ ಅಮಿತ್‌ ಖರೆ ನೇಮಕ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಅಮಿತ್ ಖರೆ ನೇಮಕಗೊಂಡಿದ್ದಾರೆ.
  • ಸಂಪುಟದ ಮಾಜಿ ಕಾರೈದರ್ಶಿ ಪಿ.ಕೆ.ಸಿನ್ಹಾ & ಮಾಜಿ ಕಾರ್ಯದರ್ಶಿ ಅಮರ್ಜಿತ್ ಸಿನ್ಹಾ ಅವರು ಈ ವರ್ಷ ಪ್ರಧಾನಮಂತ್ರಿ ಸಲಹೆಗಾರರ ಸ್ಥಾನವನ್ನು ತೊರೆದಿದ್ದು ಅವರ ಸ್ಥಾನಕ್ಕೆ ನೇಮಕ ಮಾಡಲಾಗಿದೆ.
  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರ್ದೇಶನದಲ್ಲಿ “ರಾಷ್ಟ್ರೀಯ ಶಿಕ್ಷಣ ನೀತಿ - 2020” ಮುನ್ನೆಡೆಸಿದ್ದರು.
  • ಪ್ರಸ್ತುತ ಇವರು ಡಿಜಿಟಲ್ ಮಾಧ್ಯಮಗಳ ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಮಾಹಿತಿ & ಪ್ರಸಾರ ಸಚಿವಾಲಯದಲ್ಲಿ ಬದಲಾವಣೆಗಳನ್ನು ತಂದಿದ್ದರು.

ಅಮಿತ್‌ ಖರೆ ಕುರಿತು

  • ಜನನ - 1956
  • 1985 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು.
  • 2019 ರಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಯಾಗಿ ಶಾಲಾ ಶಿಕ್ಷಣದ ಕುರಿತು ಹೆಚ್ಚುವರಿ ಉಸ್ತುವಾರಿ ವಹಿಸಿಕೊಂಡಿದ್ದರು.
  • ದೇಶದ ಗಮನ ಸೆಳೆದಿದ್ದ ಅಂದಿನ ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ರವರ ಮೇವು ಹಗರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಧಾನ ಮಂತ್ರಿ ಹುದ್ದೆಯ ಕುರಿತಾದ ಮಹತ್ವದ ಮಾಹಿತಿ ಇಲ್ಲಿದೆ


  • ಸಂವಿಧಾನದ 74(1)ನೇ ವಿಧಿಯು ಪ್ರಧಾನ ಮಂತ್ರಿಯ ಸ್ಥಾನಕ್ಕೆ ಅವಕಾಶ ಕಲ್ಪಿಸಿದೆ.
  • ಸಂವಿಧಾನದ 75ನೇ ವಿಧಿಯ ಅನ್ವಯ ಪ್ರಧಾನ ಮಂತ್ರಿ ರಾಷ್ಟ್ರಾಧ್ಯಕ್ಷರಿಂದ ನೇಮಕವಾಗುತ್ತಾರೆ. ಪ್ರಧಾನಮಂತ್ರಿಗಳಿಗೆ ರಾಷ್ಟ್ರಪತಿಯವರು ಪ್ರಮಾಣವಚನ ಬೋಧಿಸುತ್ತಾರೆ.
  • ಸಂವಿಧಾನದ 85ನೇ ವಿಧಿ ಅನ್ವಯ ಪ್ರಧಾನ ಮಂತ್ರಿಗಳು ಲೋಕಸಭೆಯನ್ನು ವಿಸರ್ಜಿಸುವಂತೆ ರಾಷ್ಟ್ರಪತಿಯವರಿಗೆ ಸಲಹೆ ನೀಡುತ್ತಾರೆ.

ಪಿ.ಎಂ.ಜೆ.ವೈ ಕ್ಲೋನ್ ಕವರ್ ಯೋಜನೆ


ಆರೋಗ್ಯ ವಿಮೆ ವ್ಯಾಪ್ತಿಯಿಂದ ಹೊರಗೆ ಇರುವ ಸುಮಾರು 40 ಕೋಟಿ ಮಂದಿಗೆ ವಿಶೇಷ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆದಿದೆ. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಮಾದರಿಯಲ್ಲಿಯೇ ಈ ಯೋಜನೆ ಇರಲಿದೆ ಪ್ರಸ್ತುತ ಇರುವ ಜನ ಆರೋಗ್ಯ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ ವಿಮೆ ನೀಡಲಾಗುತ್ತಿದೆ. ಈ ಆರೋಗ್ಯ ವಿಮೆಯಿಂದ ವಂಚಿತರಾಗಿರುವವರಿಗೆ “ಪಿ.ಎಂ.ಜೆ.ವೈ ಕ್ಲೋನ್ ಕವರ್ ಯೋಜನೆ” ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದಾರೆ. 

ಕ್ಲೋನ್ ಕವರ್ ಯೋಜನೆ


ಸುಮಾರು ಕೋಟಿ ಮಂದಿ ಆರ್ಥಿಕ ಸಂಕಷ್ಟದಿಂದ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗದೇ ಇರುವವರಿಗೆ ಈ ಯೋಜನೆ ಜಾರಿಗೆ ತರಲಾಗಿದ್ದು, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಮಾದರಿಯಲ್ಲಿಯೇ ಇರಲಿದೆ.

• ಸರ್ಕಾರವು ಈಗಾಗಲೇ ಗುರುತಿಸಿರುವ 21 ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಈ ಯೋಜನೆ ಜಾರಿ ಮಾಡಲಾಗುತ್ತಿದೆ.

ಪ್ರಮುಖ ಕಂಪನಿಗಳೆಂದರೆ


1. ಮ್ಯಾಕ್ಸ್ ಬೂಪಾ ಆರೋಗ್ಯ ವಿಮಾ ಕಂಪನಿ
2. ರಾಯಲ್ ಸುಂದರಂ ಜನರಲ್ ಇನ್ಸುರೆನ್ಸ್ ಕಂಪನಿ


ಕಿಮ್ಮನೆ ಗಾಲ್ಫ್ ರೆಸಾರ್ಟ್‌ಗೆ ಪ್ರಶಸ್ತಿ ಗರಿ


ಇತ್ತೀಚೆಗಷ್ಟೆ ಆರಂಭವಾಗಿರುವ ದೇಶ-ವಿದೇಶಗಳಲ್ಲಿ ಖ್ಯಾತಿಗಳಿಸಿರುವ ಶಿವಮೊಗ್ಗದ ಕಿಮ್ಮನೆ ಗಾಲ್ಫ್ ರೆಸಾರ್ಟ್ “ಬೆಸ್ಟ್ ಗಾಲ್ಫ್ ರೆಸಾರ್ಟ್ ಇನ್ ಏಷ್ಯಾ-2021” ಪ್ರಶಸ್ತಿಗೆ ಪಾತ್ರವಾಗಿದೆ.
* ಇಂಟರ್ ನ್ಯಾಷನಲ್ ಟ್ರಾವೆಲ್ ಆವಾರ್ಡ್ಸ್ ಆಯೋಜಕ ಸಮಿತಿಯು ವಿಶ್ವ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಅತ್ಯುತ್ತಮ ಸೇವೆ & ಸೌಲಭ್ಯವನ್ನು ಪರಿಗಣಿಸಿ 2021 ನೇ ಸಾಲಿಗೆ ಈ ಪ್ರಶಸ್ತಿಯನ್ನು ಘೋಷಿಸಿದೆ.

ಸಹ್ಯಾದ್ರಿ ಕಥನಕ್ಕೆ ಅತ್ಯುತ್ತಮ ಪುಸ್ತಕ ಪ್ರಶಸ್ತಿ


  • ಡಾ. ಕೇಶವ ಎಚ್. ಕೊರ್ಸೆಯವರ 'ಸಹ್ಯಾದ್ರಿ ಕಥನ' ಪುಸ್ತಕವನ್ನು 'ಕರ್ನಾಟಕ ವಿಜ್ಞಾನ & ತಂತ್ರಜ್ಞಾನ “ಅಕಾಡೆಮಿಯು 2020-21 ನೇ ಸಾಲಿನ ಅತ್ಯುತ್ತಮ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಿದೆ.
  • ವಿಜ್ಞಾನ & ತಂತ್ರಜ್ಞಾನ ವಿಭಾಗದಲ್ಲಿ ಡಾ. ಕೇಶವ್ ಎಚ್. ಕೊರ್ಸೆಯವರಿಗೆ ಈ ಪ್ರಶಸ್ತಿ ಸಂದಿದೆ.
  • ಇವರ ಜೊತೆಯಲ್ಲಿ, ಡಾ. ಬಿ. ರೇವತಿ ನಂದನ್, ಡಾ. ವಸಂತ ತುಮಲಾಪುರ, ಡಾ. ಕಿರಣ್ ಐಎಸ್ ಇವರು ಕೂಡ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
  • ಸ್ಮೃತಿ ಪ್ರಕಾಶನ ಪ್ರಕಟಿಸಿರುವ ಡಾ. ಕೇಶವ ಎಚ್ ಕೊರ್ಸೆಯವರು 'ಸಹ್ಯಾದ್ರಿ ಕಥನ' ಗ್ರಂಥ ಮಲೆನಾಡಿನ ನೈಸರ್ಗಿಕ ಸಂಪನ್ಮೂಲ ಉಗಮ ಹರವು, ಗುಣ ವಿಶೇಷಗಳು ಬದುಕನ್ನು ಅವು ಘೋಷಿಸುವ ಪರಿ ವಿಶ್ಲೇಷಿಸುವ ಬಹು-ಆಯಾಮದ ಸಮಾಜೋ-ವೈಜ್ಞಾನಿಕ ಬರಹಗಳ ಸಂಕಲನವಾಗಿದೆ.

ಐ.ಐ.ಎಸ್.ಸಿ. ಪ್ರಶಸ್ತಿ ಪ್ರಕಟ


ಅಪ್ರತಿಮ ಸಾಧನೆಗೈದ ಐವರು ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳಿಗೆ ಭಾರತೀಯ ವಿಜ್ಞಾನ ಸಂಸ್ಥೆ ಹಳೆಯ ವಿದ್ಯಾರ್ಥಿಗಳಿಗೆ ಕೊಡ ಮಾಡುವ ಪ್ರಶಸ್ತಿಯನ್ನು ಪ್ರಕಟಿಸಿದೆ.

ಭಾರತೀಯ ವಿಜ್ಞಾನ ಸಂಸ್ಥೆಯು ಹಳೆಯ ವಿದ್ಯಾರ್ಥಿಯಾಗಿ ಅವರವರ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದವರಿಗೆ ಪ್ರತಿವರ್ಷವೂ ಗುರುತಿಸಿ ಈ ಗೌರವ ನೀಡಲಾಗುತ್ತದೆ.

ಪ್ರಸಕ್ತ ಸಾಲಿನ ಐ ಐ ಎಸ್ ಸಿ ವಿಜೇತರು


1) ಡಾ. ಅನುರಾಧ ಅಣ್ಣಸ್ವಾಮಿ
2) ಪ್ರೊ ಸಜ್ಜಲ್ ಕೆ. ದಾಸ್
3) ಪ್ರೊ.ಟಿ. ಪ್ರದೀಪ್
4) ಪ್ರೊ. ಸಿ.ಎಸ್. ರಾಘವೇಂದ್ರ
5) ಡಾ. ರಿತು ಶ್ರೀವಾಸ್ತವ


ಭಾರತೀಯ ವಿಜ್ಞಾನ ಸಂಸ್ಥೆಯ ಕುರಿತು ಹೆಚ್ಚಿನ ಮಾಹಿತಿ

  • ಸ್ಥಾಪನೆ – 1909
  • ಸ್ಥಾಪಕರು - ಜೆಮ್‌ಶೆಡ್ ಜಿ ಟಾಟಾ
  • ಪ್ರಸ್ತುತ ನಿದೇರ್ಶಕರು - ಗೋವಿಂದ್ ರಂಗರಾಜನ್
  • ಕೇಂದ್ರ ಕಚೇರಿ - ಬೆಂಗಳೂರು

ಇಂಪ್ರೆಸ್ ಮೊಬೈಲ್ ಆ್ಯಪ್


  • ದೇಶದ ದಿನಸಿ ವ್ಯಾಪಾರಿಗಳು ವಹಿವಾಟು ಸುಲಭ ಗೊಳಿಸುವ ಸಲುವಾಗಿ ಅಭಿವೃದ್ಧಿ ಪಡಿಸಿರುವ 'ಇಂಪ್ರೆಸ್' ಎನ್ನುವ ಮೊಬೈಲ್ ಆ್ಯಪ್‌ನ್ನು ಜರ್ಮನಿಯ ಬುಕ್ಸ್' ಕಂಪೆನಿಯು ಬಿಡುಗಡೆ ಮಾಡಿದೆ.
  • ವ್ಯಾಪಾರಸ್ಥರು ತಮ್ಮ ಅಂಗಡಿ ವ್ಯಾಪಾರದಲ್ಲಿ ಪಾರದರ್ಶಕತೆ ದಾಸ್ತಾನು ನಿರ್ವಹಣೆ ಬಿಲ್ಲಿಂಗ್ ಪಾವತಿ ಸಂಗ್ರಹ ಗ್ರಾಹಕರ ಮಾಹಿತಿ ನಿರ್ವಹಣೆ ಸೇರಿದಂತೆ ಇನ್ನೂ ಹಲವು ಕೆಲಸಗಳನ್ನು ಈ ಆ್ಯಪ್‌ ಮೂಲಕ ಸುಲಭವಾಗಿ ಮಾಡಬಹುದಾಗಿದೆ.
  • ಉತ್ಪನ್ನಗಳ ಮೇಲೆ ಇರುವ ಬಾರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಬಿಲ್‌ನ ಪ್ರಿಂಟ್ ಔಟ್ ಅಥವಾ ಮೆಸೆಜ್ ಮಾಡುವ ಸೌಲಭ್ಯ ಇರಲಿದೆ.
  • ಈ ಆ್ಯಪ್‌ನಲ್ಲಿರುವ ಪಾಯಿಂಟ್ ಆಫ್ ಸೇಲ್ ವ್ಯವಸ್ಥೆಯು ವ್ಯಾಪಾರಸ್ಥರು & ಗ್ರಾಹಕರಿಗೆ ಉಪಯುಕ್ತವಾಗಿದೆ.
  • ಗ್ರಾಹಕರಿಗೆ ಉತ್ತಮ ಗ್ರಾಹಕ ಶಾಪಿಂಗ್ ಅನುಭವವನ್ನು ನೀಡುವುದರ ಜೊತೆಗೆ ಅವರ ದಿನನಿತ್ಯದ ಕಾರ್ಯಾಚರಣೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಆ್ಯಪ್ ಸಹಾಯ ಮಾಡುತ್ತದೆ.

ಪ್ರಚಲಿತ ಘಟನೆಯ ಪ್ರಶೋತ್ತರಗಳು


1. 2021ನೇ ಸಾಲಿನ ತೋಂಟದ ಸಿದ್ದಲಿಂಗ ರಾಷ್ಟ್ರೀಯ ಪ್ರಶಸ್ತಿಗೆ ಈ ಕೆಳಗಿನ ಯಾರು ಭಾಜನರಾಗಿದ್ದಾರೆ?
ಎ) ನ್ಯಾ. ಸಂತೋಷ ಹೆಗ್ಡೆ
ಬಿ) ನ್ಯಾ. ಎನ್.ಎಂ.ವೆಂಕಟಾಚಲಯ್ಯ
ಸಿ) ನ್ಯಾ. ಎಚ್.ಎನ್.ನಾಗಮೋಹನದ ಐಎಎಸ್ &
ಡಿ) ನ್ಯಾ. ಸತೀಶ್ ಚಂದ್ರ

ವಿವರಣೆ : ನಾಗಮೋಹನದಾಸ್
  • ಜನನ ಫೆಬ್ರುವರಿ 12, 1952
  • ಜನ್ಮಸ್ಥಳ - ಕೋಲಾರ
  • ಬೆಂಗಳೂರು ವಿಶ್ವ ವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ.
  • 2004 ರ ಅಕ್ಟೋಬರ್‌ನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ.
  • 2014 ರಲ್ಲಿ ದೆಹಲಿಯ ಸರ್ವೋಚ್ಛ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿ ನೇಮಕ.
  • ರಾಜ್ಯ ಸರಕಾರದ ಹಲವು ಆಯೋಗಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

2. ಪ್ರಸ್ತುತ ಪ್ರಧಾನ ಮಂತ್ರಿ ಸಲಹೆಗಾರರಾಗಿ ಈ ಕೆಳಗಿನ ಯಾರನ್ನು ನೇಮಕ ಮಾಡಲಾಗಿದೆ?
ಎ) ಅಮಿತ್ ಸಿಂಗ್ 
ಬಿ) ಅಮಿತ್‌ ಖರೆ
ಸಿ) ಅಮರ್ಜಿತ್ ಸಿನ್ಹಾ 
ಡಿ) ಪಿ.ಕೆ.ಸಿನ್ಹಾ

ವಿವರಣೆ : ಅಮಿತ್‌ ಖರೆ
  • ಜನನ - 1956
  • 1985 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು.
  • 2019 ರಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿಯಾಗಿ ಶಾಲಾ ಶಿಕ್ಷಣದ ಕುರಿತು ಹೆಚ್ಚುವರಿ ಉಸ್ತುವಾರಿ ವಹಿಸಿಕೊಂಡಿದ್ದರು.
  • ದೇಶದ ಗಮನ ಸೆಳೆದಿದ್ದ ಅಂದಿನ ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ರವರ ಮೇವು ಹಗರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

3. ಪಿ.ಎಂ.ಜೆ.ವೈ ಕ್ಲೋನ್ ಕವರ್ ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
ಎ) ತೆರಿಗೆ ಸುಧಾರಣೆಗೆ ಸಂಬಂಧಿಸಿದ ಯೋಜನೆ
ಬಿ) ವಸೂಲಾಗದ ಸಾಲದ ಅಧ್ಯಯನಕ್ಕೆ ಸಂಬಂಧಿಸಿದೆ
ಸಿ) ಆರೋಗ್ಯ ವಿಮೆಗೆ ಸಂಬಂಧಿಸಿದ ಯೋಜನೆ
ಡಿ) ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದ ಯೋಜನೆಯಾಗಿದೆ

ವಿವರಣೆ : ಕ್ಲೋನ್ ಕವರ್ ಯೋಜನೆ ಸುಮಾರು 40 ಕೋಟಿ ಮಂದಿ ಆರ್ಥಿಕ ಸಂಕಷ್ಟದಿಂದ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗದೇ ಇರುವವರಿಗೆ ಈ ಯೋಜನೆ ಜಾರಿಗೆ ತರಲಾಗಿದ್ದು, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಮಾದರಿಯಲ್ಲಿಯೇ ಇರಲಿದೆ.
* ಸರ್ಕಾರವು ಈಗಾಗಲೇ ಗುರುತಿಸಿರುವ 21 ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಈ ಯೋಜನೆ ಜಾರಿ ಮಾಡಲಾಗುತ್ತಿದೆ.


 ಇವುಗಳನ್ನೂ ಓದಿ 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Also Read: 12 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 














No comments:

Post a Comment

Important Notes

Random Posts

Important Notes

Popular Posts

18-09-2021 Current Affairs in Kannada for All Competitive Exams

18-09-2021 Current Affairs in Kannada for All Competitive Exams ವಿಶ್ವ ಓಜೋನ್ ದಿನ : ಸೆಪ್ಟಂಬರ್-16 ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ, ಓಜೋನ್ ಪದರ ನಮ್ಮನ್ನು ಸೂರ್ಯನಿಂದ ಬರುವ ಅತಿ ನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ಇಂತಹ ಮಹತ್ವದ ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್-16ನ್ನು 'ವಿಶ್ವ ಓಜೋನ್ ದಿನ' ಎಂದು ಆಚರಿಸಲಾಗುತ್ತದೆ. 2021ರ ಧೈಯವಾಕ್ಯ : 'ಕೀಪಿಂಗ್ ಅಸ್, ಅವರ್ ಫುಡ್ ಆ್ಯಂಡ್ ವ್ಯಾಕ್ಸಿನ್ ಕೂಲ್' ಎಂಬ ಧೈಯದೊಂದಿಗೆ ಆಚರಿಸಲಾಗುತ್ತಿದೆ. ಇದರ ಅರ್ಥ ಶಾಖವರ್ಧಕ ಅನಿಲಗಳ ಹೊಮ್ಮುವಿಕೆಯನ್ನು ಕಡಿತ ಮಾಡಿ ನಮ್ಮ ಆಹಾರ, ಆರೋಗ್ಯ ಮತ್ತು ಲಸಿಕೆಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂಬುದು ಅದರ ಸಂದೇಶ. ಭೂಮಿಯ ಮೇಲೆ 20 ಕಿ.ಮೀ. ಎತ್ತರದಲ್ಲಿ ಶುರುವಾಗಿ 50 ಕಿ.ಮೀ. ವರೆಗೂ ವ್ಯಾಪಿಸಿರುವ ಓಜೋನ್ ಪದರದ ಇರುವಿಕೆಯನ್ನು 1839ರಲ್ಲಿ ಕಂಡುಹಿಡಿಯಲಾಯಿತು. ಓಜೋನ್ ಎನ್ನುವುದು ನೀಲಿಬಣ್ಣದ ನೈಸರ್ಗಿಕ ಅನಿಲ. 1880ರಲ್ಲಿ ಓಜೋನ್ ಅತೀ ಹೆಚ್ಚು ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುವ ಅನಿಲವೆಂದು ಸಂಶೋಧಿಸಲಾಗಿದೆ. ಓಜೋನ್ ಪದರ ಅಳತೆಯನ್ನು ಡಾಬ್ಬನ್ ಯುನಿಟ್‌ನಿಂದ ಅಳೆಯುತ್ತಾರೆ. ಈ ತರಹದ ವಿಶೇಷತೆ ಹೊಂದಿದ ಓಜೋನ್ ಪದರು ಮೊದಲ ಸಲ ಅಂಟಾರ್ಕ್ಟಿಕದ ಮೇಲೆ ವಾಯುಮಂಡಲ ಓಜೋನ್ ಪದರಕ್ಕೆ ತೂತಾಗಿದೆ ಎಂದು ತಿಳಿದ ವಿಜ್ಞಾನಿಗಳು ಅದಕ್ಕ...

Indian Constitution Most Important Question Answers in Kannada For All Competitive Exams

ಭಾರತದ ಸಂವಿಧಾನದ ಪ್ರಶ್ನೋತ್ತರಗಳು ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತದ ಸಂವಿಧಾನ ದ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಭಾರತೀಯ ಸಂವಿಧಾನದ ಜ್ಞಾನ ಇರಬೇಕಾದದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯ ಸಂವಿಧಾನ ದ ಹಲವಾರು ಮಹತ್ವದ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇವುಗಳು ನಿಮ್ಮ ಅಧ್ಯಯನಕ್ಕೆ ಸಹಕಾರಿಯಾಬಹುದೆಂಬುದು ನಮ್ಮ ಮಹದಾಶಯ..!! 1. ಸಂವಿಧಾನ ಎಂದರೇನು? > ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಮೂಲ ನಿಯಮಗಳ ದಾಖಲೆಗಳು 2. ಸಂವಿಧಾನ ಎಂಬ ಪದದ ಮೂಲ ಯಾವುದು? > ಕಾನ್ಸ್ಟಿಟ್ಯೂಟ್ 3. ‘ಕಾನ್ಸ್ಟಿಟ್ಯೂಟ್’ ಅರ್ಥವೇನು? > ನಿಯೋಜಿಸು, ಸಂಯೋಜಿಸು ಮತ್ತು ವಿಧಿವತ್ತಾಗಿ ಸ್ಥಾಪಿಸು ಎಂದರ್ಥ 4. ಸಂವಿಧಾನಾತ್ಮಕ ಆಡಳಿತವು ಮೊಟ್ಟ ...

Top-100 History Question Answers in Kannada for All Competitive Exams-01

Top-100 History Question Answers in  Kannada for All Competitive Exams-01 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಇತಿಹಾಸ ದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 History Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recr...

Best General Knowledge MCQs in Kannada for All Competitive Exams-01

Best General Knowledge MCQs in  Kannada for All Competitive Exams-01 1. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ Show Answer ಎ) ಮಿಚೆಲ್ಲಿ 2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ ಡಿ) ನಾಲ್ಕನೇ ಸೋಮೇಶ್ವರ Show Answer ಸಿ) ಎರಡನೇ ದೇವರಾಯ 4. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ ಸಿ) ಕೊಲಂಬಿಯಾ  ಡಿ) ಚೀನಾ Show Answer ಬಿ) ಬಲ್ಗೇರಿಯಾ 5. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ Show Answer ಎ) ಸೋಡಿಯಂ 6. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ Show Answer ಬಿ) ಸೋಡಿಯಂ ಹೈಡ್ರಾಕ್ಸೆಡ್ 7. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ ಸಿ) ಪಟಿಯಾಲ ಡಿ) ವಿಜಯವಾಡ Show Answer ಬಿ) ಡಾರ್ಜಿಲಿಂಗ್ 8, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ)...

Top-10 Kannada Literature MCQs For All Competitive Exams-01

   Top-10 Kannada Literature MCQs For All Competitive Exams-01 ಕನ್ನಡ ಸಾಹಿತ್ಯ ಚರಿತ್ರೆ (SDA, FDA,PSI,KAS) 💥💥💥💥 1. ಕನ್ನಡ ಸಾಹಿತ್ಯದ ಆರಂಭವನ್ನು ಎಲ್ಲಿಂದ ಗುರುತಿಸುತ್ತಾರೆ 1, ತಾಳೆ ಗರಿಗಳಿಂದ  2. ಜನಪದ ಸಾಹಿತ್ಯ 3. ಅಕ್ಷರ ಸಾಹಿತ್ಯ 4. ಹಲ್ಮಿಡಿ ಶಾಸನ Show Answer ಸರಿಯಾದ ಉತ್ತರ : 4. ಹಲ್ಮಿಡಿ ಶಾಸನ 2. ಸಾಹಿತ್ಯ ಚರಿತ್ರೆಯ ಅಧ್ಯಯನವು ಇವರಿಂದ ಆರಂಭವಾಯಿತು 1. ರಾಜಮಹಾರಾಜರಿಂದ  2. ಕವಿಗಳಿಂದ 3. ಶಾಸನಗಳಿಂದ 4. ಕ್ರೈಸ್ತ ಮಿಷನರಿಗಳಿಂದ Show Answer ಸರಿಯಾದ ಉತ್ತರ: 4. ಕ್ರೈಸ್ತ ಮಿಷನರಿಗಳಿಂದ   3. An Essay on Kanarese Literature ಇವರ ಲೇಖನ 1. ಆರ್. ನರಸಿಂಹಚಾರ್  2. ಕಿಟಲ್ 3. ಶ್ರೀ 4. ತ. ಸು. ಶಾಮರಾಯ Show Answer ಸರಿಯಾದ ಉತ್ತರ : 2. ಕಿಟಲ್ 4. 'ಕವಿ ಚರಿತೆ' ಸಂಪುಟ 1, 2 ಮತ್ತು 3 ನಿರ್ಮಿಸಿದವರು. 1. ಆರ್. ನರಸಿಂಹಚಾರ್  2. ಇ.ಪಿ. ರೈಸ್ 3. ಮೈಸೂರು ಸುಬ್ಬಯ್ಯ 4, ರಂ. ಶ್ರೀ. ಮುಗಳಿ Show Answer ಸರಿಯಾದ ಉತ್ತರ : 1. ಆರ್. ನರಸಿಂಹಚಾರ್   5. 'ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ'ಯ 10 ಸಂಪುಟಗಳನ್ನು ನಿರ್ಮಿಸಿದವರು.... 1. ಬೆಂಗಳೂರು ವಿ.ವಿ  2. ಮಂಗಳೂರು ವಿ. ವಿ 3. ಮೈಸೂರು ವಿ. ವಿ 4. ಧಾರವಾಡ ವಿ.ವಿ Show Answer ...

Today Top-10 General Knowledge Question Answers with Explanation in Kannada for All Competitive Exams-04

Today Top-10 General Knowledge Question Answers with Explanation in  Kannada for All Competitive Exams-04 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Poli...

Top-50 General Knowledge (GK) Question Answers in Kannada for All Competitive Exams-05

Top-50 General Knowledge (GK) Question Answers in  Kannada for All Competitive Exams-05 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's El...