Breaking

Thursday, 14 October 2021

12 October 2021 Detailed Daily Current Affairs in Kannada for All Competitive Exams

   

12 October 2021 Detailed Daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams www.kpscnotesmcqs.in



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ‌.

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 


ಗ್ರಾಮ ಸ್ವರಾಜ್ಯ ಡಿಜಿಟಲ್ ವೇದಿಕೆಗೆ ಮುನ್ನುಡಿ


ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಸೇವೆಗಳು ಮನೆ ಬಾಗಿಲಲ್ಲೇ ಸಿಗುವಂತೆ ಮಾಡುವ ಮೂಲಕ ಮತ್ತಷ್ಟು ಸಬಲೀಕರಣ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಆ ಮೂಲಕ ನಿಜವಾದ ಗ್ರಾಮ ಸ್ವರಾಜ್ಯಕ್ಕೆ ಡಿಜಿಟಲ್ ವೇದಿಕೆ ಕಲ್ಪಿಸಲು ಮುನ್ನುಡಿ ಬರೆಯುತ್ತಿದೆ.

ಅಧಿಕಾರ ವಿಕೇಂದ್ರೀಕರಣದ ನಾನಾ ಹಂತದ ಬಳಿಕ ಈಗ ಮಾಹಿತಿ ವಿಕೇಂದ್ರೀಕರಣದ ಕಡೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸರ್ಕಾರ ತೆಗೆದುಕೊಂಡು ಹೋಗುತ್ತಿದೆ. ರಾಜ್ಯದ 6000 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಇದರಿಂದ ಅನುಕೂಲವಾಗಲಿದೆ.

  • ಯೋಜನೆ ರೂಪಿಸುವುದು, ಅವುಗಳ ಅನುಷ್ಠಾನ, ಸ್ವಂತ ಸಂಪನ್ಮೂಲ ಬಲದ ಮೇಲೆ ಪಂಚಾಯಿತಿಗಳು ನಿಲ್ಲುವಂತಾಗುವುದು ಪಂಚಾಯತ್ ರಾಜ್ ವ್ಯವಸ್ಥೆಯ ಉದ್ದೇಶ, ಪಂಚಾಯಿತಿಗಳಿಗೆ ಬಲ ತುಂಬುವ ಉದ್ದೇಶದಿಂದ ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಎಂಬ ಸಮಿತಿಯನ್ನು ರಚನೆ ಮಾಡಲಾಗಿದೆ, ಮುಖ್ಯಮಂತ್ರಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಗ್ರಾಮೀಣಾಭಿವೃದ್ಧಿ ಕ್ಷೇತ್ರದ ತಜ್ಞರು ಸದಸ್ಯರಾಗಿದ್ದಾರೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಪಂಚಾಯಿತಿಗಳು ನಿರ್ವಹಣೆ ಮಾಡುವ ಕಾರ್ಯ ಶೇ. 17 ಇದ್ದರೆ, ಶೇ.83 ರಷ್ಟು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದೆ. ಅದನ್ನು ಈಗ ಗ್ರಾಮ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.
  • ಗ್ರಾಮೀಣ ಭಾಗದ ಜನರು ಯಾವುದೇ ಇಲಾಖೆಯ ಯೋಜನೆಗಳ ಫಲಕ್ಕಾಗಿ ಜಿಲ್ಲಾ ಅಥವಾ ತಾಲೂಕು ಕೇಂದ್ರಕ್ಕೆ ಅಲೆಯುವಂತಾಗಬಾರದು, ಎಲ್ಲವೂ ಮನೆ ಬಾಗಿಲಿನಲ್ಲಿಯೇ ಸಿಗುವಂತಾಗಬೇಕು. ಹೆಚ್ಚಿನ ಸೇವೆಯ ಅವಕಾಶವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿ ಸದಸ್ಯರಲ್ಲೂ ಕೆಲಸ ಮಾಡುವ ವಿಶ್ವಾಸವನ್ನು ಹೆಚ್ಚಿಸಬೇಕು ಎಂಬುದು ಒಟ್ಟಾರೆಯ ಉದ್ದೇಶವಾಗಿದೆ. ತಾಲೂಕು ಕೇಂದ್ರಕ್ಕೆ ಹೋಗಬೇಕಾಗಿದ್ದ 29 ಇಲಾಖೆಯ ಕೆಲವೊಂದು ಸೇವೆಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಸಿಗುವಂತೆ ಮಾಡಲಾಗುತ್ತದೆ. ಈಗಾಗಲೇ 13 ಇಲಾಖೆಗಳ ಸೇವೆಗಳನ್ನು ಗ್ರಾ.ಪಂ.ಗಳಿಗೆ ವರ್ಗಾವಣೆ ಮಾಡಲಾಗಿದೆ.

ಪ್ರಮುಖ ಸೇವೆಗಳು


  • ಗ್ರಂಥಾಲಯಗಳು ಮಾಹಿತಿ ಕೇಂದ್ರಗಳಾಗಿ ಪರಿವರ್ತನೆ
  • ಅಂಗನವಾಡಿಗಳ ನಿರ್ವಹಣೆ
  • ಪಶು ಸಂಗೋಪನೆ ಇಲಾಖೆಯ ಸೇವೆಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೇವೆಗಳು
  • ಆಶ್ರಮ ಮತ್ತು ವಸತಿ ಶಾಕೆಗಳ ಮೇಲ್ವಿಚಾರಣೆ
  • ಮಹಿಳಾ ಸಬಲೀಕರಣದ ಯೋಜನೆಗಳು ಪರಿಶಿಷ್ಟ ಜಾತಿ ಮತ್ತು ವರ್ಗದ ಏಳೆಗಾಗಿ ರೂಪಿಸಿರುವ ಯೋಜನೆಗಳ ಅನುಷ್ಠಾನ
  • ರಾಜ್ಯದ 28 ಸಾವಿರ ಕೆರೆಗಳು ಪಂಚಾಯಿತಿ ವ್ಯಾಪ್ತಿಗೆ ಬಂದಿದ್ದು ಅವುಗಳ ನಿರ್ವಹಣೆ
  • ಅಂಗವಿಕಲರ ಅಭ್ಯುದಯಕ್ಕಾಗಿರುವ ಯೋಜನೆಗಳು 

ವಿಕೇಂದ್ರೀಕರಣದ ಹೆಜ್ಜೆಗಳು : 


ನೆಹರು ಆಡಳಿತ ಅವಧಿಯಲ್ಲಿ ಪಂಚಾಯಿತಿ ಬೋರ್ಡ್ ವ್ಯವಸ್ಥೆ 40 ವರ್ಷ ಜಾರಿಯಲ್ಲಿತ್ತು. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ, ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿ ಮೂರು ಹಂತದ ವ್ಯವಸ್ಥೆ ಜಾರಿಗೆ ತಂದರು. ಅದು ಅಧಿಕಾರ ವಿಕೇಂದ್ರೀಕರಣದ ಮೊದಲ ಹೆಜ್ಜೆ, 1993 ರಲ್ಲಿ ವೀರಪ್ಪ ಮೊಯಿಲಿ ಅವರು ಸಿಎಂ ಆಗಿ ಎಂ.ವೈ ಘೋರ್ಪಡೆ ಅವರು ಆರ್‌ಡಿಪಿಆರ್ ಮಂತ್ರಿಯಾಗಿದ್ದಾಗ ಮೀಸಲಾತಿ ತಂದು ಸಾಮಾಜಿಕ ವಿಕೇಂದ್ರೀಕರಣಕ್ಕೆ ಕಾರಣವಾದರು. ಸಿದ್ಧರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್.ಕೆ. ಪಾಟೀಲ್ 1993ರ ಕಾಯ್ದೆಗೆ ತಿದ್ದುಪಡಿ ತಂದು ಪಂಚಾಯತ್ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿ ಮಾಡಿದರು. ಅದು ಯೋಜನೆಗಳ ವಿಕೇಂದ್ರೀಕರಣವಾಯಿತು.



ಪಂಚತಂತ್ರ - 2:


ಪಂಚಾಯಿತಿಗಳನ್ನು ಸಬಲೀಕರಣ ಮಾಡುವ ಮೂಲಕ ಇ-ಗ್ರಾಮ ಸ್ವರಾಜ್ ವ್ಯವಸ್ಥೆ ತರಲು ಪಂಚತಂತ್ರ-2 ಸಾಫ್ಟ್‌ವೇರ್ ಸಿದ್ಧವಾಗುತ್ತಿದೆ. ಅದರ ಮೂಲಕ ಪಂಚಾಯಿತಿಗೆ ಸಮಗ್ರ ಡಿಜಿಟಲ್ ವೇದಿಕೆ ಒದಗಿಸಲಾಗುತ್ತದೆ.

ಈ ಮೂಲಕವೇ ಯೋಜನೆಗಳನ್ನು ರೂಪಿಸುವುದಕ್ಕೆ ಪೂರಕವಾದ ಜನವಸತಿ ಸಭೆ, ವಾರ್ಡ್ಸಭೆ, ಗ್ರಾಮ ಸಭೆ ನಡೆಸಲಾಗುತ್ತದೆ. ಯೋಜನೆಗಳನ್ನು ಜಾರಿ ಮಾಡಲು ಫಲಾನುಭವಿಗಳ ಆಯ್ಕೆ ಸೇವೆಗಳ ಅನುಷ್ಠಾನ, ಕಂದಾಯ ಸಂಗ್ರಹ ಇನ್ನಿತರ ಸವಾಲಿನ ಕೆಲಸಗಳನ್ನು ಪಾರದರ್ಶಕ ವ್ಯವಸ್ಥೆಯ ಮೂಲಕ ಸುಲಭ ಮಾಡಿಕೊಳ್ಳುವ ಉದ್ದೇಶವಿದೆ.

ತೆರಿಗೆ ಸಂಗ್ರಹಣೆಗೆ-ಇ-ಪಾವತಿ ವ್ಯವಸ್ಥೆಗಳನ್ನು ಪಂಚಾಯಿತಿ ಮಟ್ಟದಲ್ಲಿಯೇ ಒದಗಿಸುವ ಉದ್ದೇಶ ಹೊಂದಲಾಗಿದೆ.
ಗೂಗಲ್ ಪೇ, ಪೇಟಿಎಂ ಮೂಲಕವೂ ಪಾವತಿಸಹುದು.

ಉಪಯೋಗಗಳು


  • ಸ್ಥಳೀಯವಾಗಿ ಯೋಜನೆ ರೂಪಿಸುವುದು
  • ಮನೆ ಬಾಗಿಲಿನಲ್ಲಿಯೇ ಸೇವೆ
  • ತೆರಿಗೆ ಪಾವತಿಗೆ ಇ-ವ್ಯವಸ್ಥೆ
  • ಗ್ರಾಮೀಣ ಜನರಿಗೆ ಅಲೆದಾಟ ತಪ್ಪಲಿದೆ ಈ ಕೆಳಹಂತದ ಆಡಳಿತಕ್ಕೆ ಮಾನ್ಯತೆ
  • ಎಲ್ಲ ಪಂಚಾಯಿತಿಗಳು ಇ-ಕಚೇರಿ ಪಂಚಾಯಿತಿ ವ್ಯಾಪ್ತಿಗೆ ಬರುವ ಯೋಜನೆಗಳು
  • ವಿವಾಹ ನೋಂದಣಿ, ಇದರಿಂದ ಬಾಲ್ಯ ವಿವಾಹಕ್ಕೆ ತಡೆ ಹಾಕುವ ಉದ್ದೇಶ
  • ಆರ್‌ಟಿಸಿ ಪಡೆಯುವುದು
  • ಸಾಮಾಜಿಕ ಭದ್ರತಾ ಪಂಚಣಿಗಳನ್ನು ನೀಡುವುದು ಜನನ, ಮರಣ, ವಾಸ, ಆದಾಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ನೀಡುವುದು ಅಗ್ನಿಶಾಮಕ ಸೇವೆಗಳು
  • 15ನೇ ಹಣಕಾಸು ಯೋಜನೆಯಲ್ಲಿ ಲಭ್ಯ ಅನುದಾನದ ಸಮರ್ಪಕ ಬಳಕೆ
  • ವಿವಿಧ ಮೂಲಗಳಿಂದ ಲಭ್ಯವಾಗುವ ಅನುದಾನ ಬಳಕೆಗೆ ಯೋಜನೆ ರೂಪಿಸುವುದು
  • ಆಯವ್ಯಯ ಬೇರೆ ಉದ್ದೇಶಕ್ಕೆ ಬಳಸದಂತೆ ಎಚ್ಚರಿಕೆ 

ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಚಾಲನೆ


ಭಾರತದ ಬಾಹ್ಯಾಕಾಶ ವಲಯದಲ್ಲಿ ಅಮೆರಿಕ ಸೇರಿದಂತೆ ಹಲವು ಜಾಗತಿಕ ಮತ್ತು ದೇಶಿಯ ಖಾಸಗಿ ವಲಯದ ಸಂಸ್ಥೆಗಳು ಆಸಕ್ತಿ ಹೊಂದಿವೆ. ಇದರಿಂದ. ಬಾಹಾಕ್ಯಾಶ ಆಧರಿತ ಸಂವಹನ ಜಾಲಗಳು ಮುನ್ನೆಲೆಗೆ ಬರುತ್ತಿವೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಬಾಹ್ಯಾಕಾಶ ಸಂಘಕ್ಕೆ (ಐಎಸ್‌ಪಿಎ) ಅಧಿಕೃತವಾಗಿ ಚಾಲನೆ ನೀಡಿದ್ದಾರೆ.  ಬಾಹ್ಯಾಕಾಶ ಹಾಗೂ ಉಪಗ್ರಹಗಳಿಗೆ ಸಂಬಂಧಿಸಿದ ಭಾರತೀಯ ಬಾಹ್ಯಾಕಾಶ ಸಂಘ (ಇಸ್ಪಾ)ಕ್ಕೆ ಚಾಲನೆ ನೀಡಿದರು.

  • ಗಣಿಗಾರಿಕೆ, ಕಲ್ಲಿದ್ದಲು, ರಕ್ಷಣೆ ಹಾಗೂ ಬಾಹ್ಯಾಕಾಶ ವಲಯಗಳ ಬಾಗಿಲನ್ನು ಖಾಸಗಿ ಕಂಪನಿಗಳಿಗಾಗಿ ತೆರೆದಿಡಲಾಗಿದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನೀತಿ ಸ್ಪಷ್ಟವಾಗಿದೆ. ಅದೇನೆಂದರೆ, ಸರ್ಕಾರದ ಉಪಸ್ಥಿತಿಯ ಅಗತ್ಯ ಎಲ್ಲಿ ಬೀಳುವುದಿಲ್ಲವೋ ಅಂತಹ ವಲಯಗಳನ್ನು ಖಾಸಗಿ ಕ್ಷೇತ್ರಕ್ಕೆ ನೀಡುವುದಾಗಿದೆ ಎಂದು ತಿಳಿಸಿದರು.
  • ಹಲವು ವಲಯಗಳನ್ನು ಖಾಸಗಿ ನೀಡುವುದರ ಜತೆಗೆ ಸರ್ಕಾರ ನಿಯಂತ್ರಣ ವಾತಾವರಣವನ್ನು ನಿರ್ಮಾಣ ಮಾಡಿದೆ. ಆ ಮೂಲಕ ರಾಷ್ಟ್ರೀಯ ಹಿತಾಸಕ್ತಿಗೆ ಒತ್ತು ನೀಡುವುದರ ಜತೆಗೆ ವಿವಿಧ ಕಂಪನಿಗಳ ಹಿತಾಸಕ್ತಿಯನ್ನೂ ಗಮನಿಸಲಾಗುತ್ತದೆ. ಬಾಹ್ಯಾಕಾಶ ಕ್ಷೇತ್ರದ ಸುಧಾರಣೆ ನಾಲ್ಕು ಆಧಾರ ಸ್ತಂಭಗಳನ್ನು ಹೊಂದಿದೆ. ಖಾಸಗಿ ಕಂಪನಿಗಳಿಗೆ ನಾವೀನ್ಯತೆಯ ಸ್ವಾತಂತ್ರ್ಯ ಕಲ್ಪಿಸುವುದು. ಭವಿಷ್ಯಕ್ಕೆ ಯುವಕರನ್ನು ಸಜ್ಜುಗೊಳಿಸುವುದು. ಶ್ರೀಸಾಮಾನ್ಯನ ಅಭಿವೃದ್ಧಿಗೆ ಈ ವಲಯವನ್ನು ಸಂಪನ್ಮೂಲವಾಗಿ ಬೆಳೆಸುವುದು ಎಂದರು.

ಸಂಸ್ಥೆಯ ಉದ್ದೇಶ :


ಭಾರತದ ಬಾಹ್ಯಾಕಾಶ ಮತ್ತು ಬಾಹ್ಯಾಕಾಶ ಆಧಾರಿತ ಸಂವಹನದ ನೆಟ್ ವರ್ಕ್ಸ್‌ನಲ್ಲಿ ತೊಡಗಿಸಿಕೊಳ್ಳಲು ಅಮೆರಿಕ ಸೇರಿದಂತೆ ಜಾಗತಿಕ ಮತ್ತು ದೇಶಿಯ ಬಾಹ್ಯಾಕಾಶ ಸಂಸ್ಥೆಗಳು ಮುಂದೆ ಬರುತ್ತಿವೆ. ಇಂಥ ಮಹತ್ವದ ಸಂದರ್ಭದಲ್ಲಿ ಬಾಹ್ಯಾಕಾಶ ಮತ್ತು ಉಪಗ್ರಹ ಕಂಪನಿಗಳನ್ನು ಒಟ್ಟಿಗೆ ಸೇರಿಸಲಿರುವ ಈ ಸೇರಿಸಲಿರುವ ಈ ಐಎಸ್‌ಪಿಎ ಇಕ್ಕೂಟವು. ಭಾರತೀಯ ಬಾಹ್ಯಾಕಾಶ ಉದ್ಯಮದ ಧ್ವನಿಯಾಗಲಿದೆ.

* ಸದಸ್ಯರು : ಹೊಸ ಸಂಖ್ಯೆಯಲ್ಲಿ ಇಸ್ರೋ, ಮ್ಯಾಪ್ ಮೈ ಇಂಡಿಯಾ, ವಾಲ್‌ಚಂದ್‌ನಗರ್ ಇಂಡಸ್ಟ್ರೀಸ್, ಅನಂತ್ ಟೆಕ್ನಾಲಜಿ ಲಿ, ಬಿಇಎಲ್, ಸೆಂಟ್ರಾನ್, ಭಾರ್ತಿ ಏರ್ಟೆಲ್ ಟ್ಯೂಬ್ರೋ, ನೆಲ್ಕೋ ಸೇರಿದಂತೆ ಇನ್ನಿತರ ಕಂಪನಿಗಳು ಸದಸ್ಯರಾಗಿವೆ.

ಸರ್ಕಾರ ಆರಂಭಿಸಿದ ಹೊಸ ಸಂಸ್ಥೆ ಮಹತ್ವ ಹಲವು ಅಂತಾರಾಷ್ಟ್ರೀಯ ಮತ್ತು ಭಾರತೀಯ ಕಂಪನಿಗಳು ಮುಂದಿನ ದಿನಗಳಲ್ಲಿ ಭಾರೀ ವೇಗದ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ನೀಡಲು ಭಾರೀ ಪೈಪೋಟಿ ಒಡ್ಡುತ್ತಿವೆ. ಇದಕ್ಕೆ ಪೂರಕವಾಗಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ನ ಸ್ಟಾರ್‌ಲಿಂಕ್, ಸುನಿಲ್ ಭಾರ್ತಿ ಮಿತ್ತಲ್ ಅವರ ಒನ್‌ವೆಬ್‌ ಸೇರಿದಂತೆ ಇನ್ನಿತರ ಕಂಪನಿಗಳು ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗೆ ಮುಂದಾಗಿವೆ. 2022 ರ ವೇಳೆಗೆ ಒನ್‌ವೆಬ್‌ ಸಂಸ್ಥೆಯು ಭಾರತದಲ್ಲೂ ಸೇವೆ ಒದಗಿಸುವ ಸಾಧ್ಯತೆಯಿದೆ. ಅಲ್ಲದೆ ಸ್ಪೇಸ್ ಎಕ್ಸ್ ಸಹ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಾಗಿ 12 ಸಾವಿರ ಉಪಗ್ರಹ ನೆಟ್‌ವರ್ಕ್‌ಗಳ ಸ್ಥಾಪನೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಐಎಸ್‌ಪಿಎ ಹೆಚ್ಚು ಮಹತ್ವ ಪಡೆದಿದೆ.

ಉಪಗ್ರಹ ಅಂತರ್ಜಾಲ ಪ್ರಾಮುಖ್ಯತೆ :


ಭೂಮಿಯ ನೆಟ್‌ವರ್ಕ್‌ಗಳು ತಲುಪದ ಜನನಿಬಿಡ ಸ್ಥಳಗಳು ಮತ್ತು ದೂರದ ಪ್ರದೇಶಗಳಲ್ಲಿ ಬ್ರಾಡ್‌ಬ್ಯಾಂಡ್ ಸೌಲಭ್ಯಕ್ಕಾಗಿ ಉಪಗ್ರಹ ಅಂತರ್ಜಾಲ ಅತ್ಯಂತ ಅಗತ್ಯ ಎನ್ನುವುದು ತಜ್ಞರ ಅಭಿಪ್ರಾಯ. ಇಲ್ಲಿಯವರೆಗೆ ಉಪಗ್ರಹ ಸಂವಹನಗಳು ಕಾರ್ಪೋರೇಟ್‌ಗಳು ಹಾಗೂ ಸಂಸ್ಥೆಗಳು ತುರ್ತು ಬಳಕೆಗೆ ಉಪಯೋಗಿಸಲಾಗುತ್ತಿತ್ತು. ಸಂಪರ್ಕ ವ್ಯವಸ್ಥೆಯಿಲ್ಲದ ದೂರದ ಪ್ರದೇಶಗಳೊಂದಿಗೆ ಸಂಪರ್ಕ ಸಾಧಿಸಲು ಉಪಗ್ರಹ ಸಂವಹನಗಳ ಬಳಕೆಯಾಗುತ್ತಿತ್ತು. ಈ ವರ್ಷದ ಆಗಸ್ಟ್‌ನಲ್ಲಿ ಭಾರತ ಕೇವಲ 3 ಲಕ್ಷ ಉಪಗ್ರಹಗಳನ್ನು ಹೊಂದಿತ್ತು ಎನ್ನುವುದು ಗಮನಾರ್ಹ.


ಹೊಯ್ಸಳರ ಲಾಂಛನವುಳ್ಳ ವೀರಗಲ್ಲು ಪತ್ತೆ


ಚಿಕ್ಕಮಂಗಳೂರು ಜಿಲ್ಲೆಯ ಹೊಸಹಳ್ಳಿ ಶ್ರೀ ನಿರ್ವಾಣಸ್ವಾಮಿ ಮಠದ ಕಳೆದ ಆವರಣದಲ್ಲಿ ಹೊಯ್ಸಳರ ಕಾಲದ ಮೂರು ವೀರಗಲ್ಲು ಹಾಗೂ ಒಂದು ಮಹಾಸತಿ ಕಲ್ಲು ಸೇರಿ ನಾಲ್ಕು ಅಪ್ರಕಟಿತ ಸ್ಮಾರಕಗಳನ್ನು ಪಾಂಡುರಂಗ ಸಂಶೋಧಿಸಿದ್ದಾರೆ.

ಮೊದಲನೇ ವೀರಗಲ್ಲು ಹೋಯ್ಸಳ ಲಾಂಛನ ಸಹಿತವಾಗಿದೆ. ಈ ರೀತಿಯ ಸ್ಮಾರಕ ರಾಜ್ಯದಲ್ಲೇ ಮೊದಲನೆಯದ್ದಾಗಿದೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ವೀರಗಲ್ಲಿನ ಎರಡೂ ಬದಿ ಹೊಯ್ಸಳರ ಲಾಂಛನವಾದ ಹುಲಿಯನ್ನು ಕೊಲ್ಲುತ್ತಿರುವ ಹೊಯ್ಸಳರ ಮೂಲಪುರುಷ ಸಳನ ಚಿತ್ರಣವಿದೆ.

ಶತ್ರುಗಳೊಂದಿಗೆ ಕಾಳಗದ ಚಿತ್ರಣ :


ಭಲ್ಲೆಧಾರಿ ಅಶ್ವಾರೋಹಿ ಶತ್ರು ಸೈನಿಕರೊಂದಿಗೆ ಕಾಳಗ ಮಾಡುತ್ತಿರುವ ಧನುರ್ಧಾರಿ ಯೋಧನ ಚಿತ್ರಣ, ಕಾಳಗದಲ್ಲಿ ಮಡಿದ ವೀರನನ್ನು ವಿಮಾನದಲ್ಲಿ ಕೂರಿಸಿಕೊಂಡು ದೇವಲೋಕಕ್ಕೆ ಕರೆದೊಯ್ಯುತ್ತಿರುವ ನಾಲ್ವರು  ಚಾಮರಧಾರಿ ಅಪ್ಪರೆಯರ ಚಿತ್ರಣ, ರುದ್ರಾಕ್ಷಿ ಕಿರೀಟಾಲಂಕೃತ ಶಿವಲಿಂಗ ಅದರ ಎರಡೂ ಬದಿ ಸೊಂಟದಲ್ಲಿ ಕಠಾರಿ ಧರಿಸಿದ ವೀರನೊಬ್ಬ ಬಲಗೈನಲ್ಲಿ ಕಿನ್ನರಿ ಎಂಬ ಸಂಗೀತವಾದ್ಯ ಹಿಡಿದಿದ್ದು ಎಡಗೈನಲ್ಲಿ ತಾಳಚಿಟಿಕೆ ಹಿಡಿದ ಚಿತ್ರಣ ಹಾಗೂ ಸಂಗೀತಗಾರನ ಎಡಗಡೆ ಕಾಲಬುಡದಲ್ಲಿ ಬಿದ್ದಿರುವ ಕಾಡುಹಂದಿಯ ಚಿತ್ರಣವಿದೆ. ಶಿಲ್ಪ ಚಿತ್ರಣದ ಆಧಾರದ ಮೇಲೆ ಹಂದಿ ಬೇಟೆ ವೇಳೆ ಕಿನ್ನರಿವೀರ ಮರಣಹೊಂದಿದ ನಿಮಿತ್ತ ಅವನ ಸ್ಮಾರಕವಾಗಿ ಸ್ಥಾಪಿಸಿದ ಹೊಯ್ಸಳರ ಕಾಲದ ಹನ್ನೆರಡು ಅಥವಾ ಹದಿಮೂರನೇ ಶತಮಾನದ ವಿಶೇಷ ವೀರಗಲ್ಲು ಎನ್ನಬಹುದಾಗಿದೆ.

ಶಿವಾರ್ಚನೆ ಮಾಡುತ್ತಿರುವ ಪೇಟಧಾರಿ ಪಾಶುಪತ ಶೈವಯತಿಗಳು, ಶಿವನ ವಾಹನ ನಂದಿ, ಕಾಳಗದಲ್ಲಿ ಹೋರಾಡಿ ವೀರಸ್ವರ್ಗ ಪಡೆದು ಕೈಲಾಸವಾಸಿಯಾದ ಧನುರ್ಧಾರಿ ವೀರ, ಶಿವಲಿಂಗದ ಮುಂದೆ ಪರ್ಯಂ ಕಾಸನದಲ್ಲಿ ಕರಮುಗಿದು ಕುಳಿತ ಚಿತ್ರಣ. ಕೆಳಗೆ ಮಂಟಪದಲ್ಲಿ ದ್ವಾರಪಾಲಕರ ಸಹಿತ ವಿಷ್ಣುವಿನ ಚಿತ್ರಣವಿದೆ.

ಹೊಯ್ಸಳ ಕಾಲದ ಹಳೆಗನ್ನಡ ಲಿಪಿ :


ಈ ವೀರಗಲ್ಲಿನಲ್ಲಿ ಹೊಯ್ಸಳ ಲಿಪಿ ಸಾದೃಶ್ಯದ ಹಳೆಕನ್ನಡ ಅಕ್ಷರಗಳಿದ್ದು ಅಸ್ಪಷ್ಟವಾಗಿವೆ. ಹೊಯ್ಸಳ ಲಾಂಛನ ಹಾಗೂ ಮಹಾವಿಷ್ಣು ಶಿಲ್ಪದ ಹಿನ್ನೆಲೆಯಲ್ಲಿ ಈ ವೀರಗಲ್ಲು ವಿಷ್ಣುವರ್ಧನನ ಆಡಳಿತದ ಆರಂಭಕಾಲದ ಶೈವ-ವೈಷ್ಣವ ಸಂಪ್ರದಾಯದ ಹೊಯ್ಸಳ ಲಾಂಛನ ಸಹಿತ ದೊರೆತ ಕರ್ನಾಟಕದ ಪ್ರಥಮ ವೀರಗಲ್ಲು ಎಂದು ಭಾವಿಸಬಹುದಾಗಿದೆ.

ಬಿಲ್ಗಾರ ಯೋಧನ ವೀರಗಲ್ಲು :


ಎರಡನೇ ಸ್ಮಾರಕದ ಅಂಚು ಒಡೆದಿದೆ. ಎಡಗೈಯಲ್ಲಿ ಬಿಲ್ಲು, ಬಲಗೈನಲ್ಲಿ ವಿಶಿಷ್ಟವಾದ ಮತ್ಸ್ಯಾಕಾರದ ತುದಿ ಹೊಂದಿದ ಬಾಣ ಹಿಡಿದಿದ್ದಾನೆ. ಸೊಂಟದಲ್ಲಿ ಕಠಾರಿ ಧರಿಸಿದ್ದು ಯಾವುದೋ ಯುದ್ಧದಲ್ಲಿ ಹೋರಾಡಿ ಮಡಿದ ನಿಮಿತ್ಯ ವೀರನ ಸ್ಮಾರಕವಾಗಿ ಈ ವೀರಗಲ್ಲನ್ನು ಸ್ಥಾಪಿಸಲಾಗಿದೆ.

ಹೊಯ್ಸಳರು

  • ಸ್ಥಾಪಕರು - ಸಳ
  • ಲಾಂಛನ - ಹುಲಿಯನ್ನು ಕೊಲ್ಲುತ್ತಿರುವ ಸಳ
  • ರಾಜಧಾನಿ - ಸೊಸೆವೂರು/ಅಂಗಡಿ ಗ್ರಾಮ
  • ಪ್ರಮುಖ ಅರಸ - ವಿಷ್ಣುವರ್ಧನ, 1ನೇ ನರಸಿಂಹ
  • ಪ್ರಮುಖ ಕವಿಗಳು -
  1.  ಕೇಶಿರಾಜ
  2. ಜನ್ನ
  3. ರಾಘವಾಂಕ
  4. ನೇಮಿಚಂದ್ರ
  5. ರುದ್ರಭಟ್ಟ

ಅರ್ಥಶಾಸ್ತ್ರ ನೋಬೆಲ್ ಪ್ರಕಟ


ನೈಸರ್ಗಿಕ ಪ್ರಯೋಗ ತತ್ವಕ್ಕೆ ಸಮರ್ಪಕವಾದ ಉಪಸಂಹಾರ ರೂಪಿಸಿದ ಅಮೆರಿಕ ಮೂಲದ ಮೂವರು ಅರ್ಥ ಶಾಸ್ತ್ರಜ್ಞರಾದ ಡೇವಿಡ್ ಕಾರ್ಡ್, ಜೊಡು ವಾ ಆ್ಯಂಗ್ರಿಸ್ಟ್ ಮತ್ತು ಗ್ವಿಡೊ ಇಂಬೆನ್ಸ್ 2021 ರ ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರ ಪಡಿದಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಡೇವಿಡ್ ಕಾರ್ಡ್, ಮೆಸಷುವೆಟ್ಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಜೊಷುವಾ ಆ್ಯಂಗ್ರಿಸ್ಟ್ ಮತ್ತು ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಗ್ವಿಡೊ ಎಂಬೈನ್ಸ್ ಈ ಮೂವರು ತಜ್ಞರು ಆರ್ಥಿಕ ವಿಜ್ಞಾನದಲ್ಲಿ ಪ್ರಯೋಗಿಸಿದ್ದ ಕಾರ್ಯಗಳನ್ನು ಸಂಪೂರ್ಣ ಮರು ರೂಪಿಸಿದ್ದಾರೆ.

ನೈಸರ್ಗಿಕ ಪ್ರಯೋಗವು ಪ್ರಾಯೋಗಿಕ ಅಧ್ಯಯನವಾಗಿದ್ದು, ಇದರಲ್ಲಿ ವ್ಯಕ್ತಿಗಳು ಅಥವಾ ವ್ಯಕ್ತಿಗಳ ಸಮೂಹವು, ಪ್ರಕೃತಿ ಅಥವಾ ಅನುಸಂಧಾನಕಾರರ ನಿಯಂತ್ರಣಕ್ಕೆ ಹೊರತಾದ ಅಂಶಗಳಿಂದ ನಿರ್ಧರಿಸಲ್ಪಡುವ ಪ್ರಯೋಗಾತ್ಮಕ ಮತ್ತು ನಿಯಂತ್ರಣ ಪರಿಸ್ಥಿತಿಗಳಿಗೆ ಒಡ್ಡಿ ಕೊಳ್ಳುತ್ತಾರೆ. ಸಮಾಜಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳ ಕುರಿತು ಕಾರ್ಡ್ ಅಧ್ಯಯನ ನಡೆಸಿದ್ದರೆ, ನೈಸರ್ಗಿಕ ಪ್ರಯೋಗವು ಜ್ಞಾನದ ಅಗಾಧ ಸಂಪನ್ಮೂಲ ಎಂಬುದನ್ನು ಜೊಷುವಾ ಮತ್ತು ಇಂಬೆನ್ಸ್ ಅವರ ಕ್ರಮಶಾಸ್ತ್ರದ ಕೊಡುಗೆ ತೋರಿಸಿಕೊಟ್ಟಿದೆ. ಸಮಾಜಕ್ಕೆ ಮಹತ್ತರ ಪ್ರಯೋಜನವಾಗಿರುವ ಪ್ರಮುಖ ಸಾಂದರ್ಭಿಕ ಪ್ರಶ್ನೆಗಳಿಗೆ ಉತ್ತರಿಸುವ ನಮ್ಮ ಸಾಮರ್ಥ್ಯವನ್ನು ಇವರ ಸಂಶೋಧನೆಗಳು ಗಮನಾರ್ಹವಾಗಿ ವೃದ್ಧಿಸಿವೆ. 

ಈ ಮೂವರು ಅರ್ಥಶಾಸ್ತ್ರಜ್ಞರ ಸಂಶೋಧನಾ ಕಾರ್ಯಗಳು ಕಾರ್ಮಿಕ ಅರ್ಥಶಾಸ್ತ್ರದ ಕುರಿತ ಹೊಸ ಚಿಂತನೆಯನ್ನು ಒದಗಿಸಿದ ಜತೆಗೆ, ನೈಸರ್ಗಿಕ ಪ್ರಯೋಗದಿಂದ ಆಗುವ ಪರಿಣಾಮ ಮತ್ತು ಉಪಸಂಹಾರದ ಬಗ್ಗೆ ಹೆಚ್ಚಿನ ಅರಿವು ಒದಗಿಸಿದೆ.

ಅರ್ಥಶಾಸ್ತ್ರದ ನೋಬೆಲ್ ಇತಿಹಾಸ


ಈ ಪ್ರಶಸ್ತಿಯು ಮೂಲತಃವಾಗಿ ಅಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿ ಇಲ್ಲ, ಆದರೆ ಅಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ 'ಬ್ಯಾಂಕ್ ಆಫ್ ಸ್ವೀಡನ್' ಈ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತದೆ.

1968 ರಲ್ಲಿ ಬ್ಯಾಂಕ್‌ನ 300ನೇ ವರ್ಷಾಚರಣೆಯ ಸಂದರ್ಭದಲ್ಲಿ 'ಅರ್ಥಶಾಸ್ತ್ರ ನೊಬೆಲ್' ಗೆ ಅರ್ಹತೆಯನ್ನು 'ರಾಯಲ್ ಸ್ವೀಡೀಷ್ ವಿಜ್ಞಾನ ಅಕಾಡೆಮಿ' ನಿರ್ಧರಿಸುತ್ತದೆ.

2020 ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತರು

  1. ಪೌಲ್ ಆರ್ ಮಿಲ್ ಗೇಮ್
  2. ರಾಬರ್ಟ್ ಬಿ. ವಿನ್ಸನ್



 ಇವುಗಳನ್ನೂ ಓದಿ 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 














No comments:

Post a Comment

Important Notes

Random Posts

Important Notes

Popular Posts

Top-50 General Knowledge (GK) Question Answers in Kannada for All Competitive Exams-05

Top-50 General Knowledge (GK) Question Answers in  Kannada for All Competitive Exams-05 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's El...

Best General Knowledge MCQs in Kannada for All Competitive Exams-01

Best General Knowledge MCQs in  Kannada for All Competitive Exams-01 1. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ Show Answer ಎ) ಮಿಚೆಲ್ಲಿ 2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ ಡಿ) ನಾಲ್ಕನೇ ಸೋಮೇಶ್ವರ Show Answer ಸಿ) ಎರಡನೇ ದೇವರಾಯ 4. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ ಸಿ) ಕೊಲಂಬಿಯಾ  ಡಿ) ಚೀನಾ Show Answer ಬಿ) ಬಲ್ಗೇರಿಯಾ 5. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ Show Answer ಎ) ಸೋಡಿಯಂ 6. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ Show Answer ಬಿ) ಸೋಡಿಯಂ ಹೈಡ್ರಾಕ್ಸೆಡ್ 7. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ ಸಿ) ಪಟಿಯಾಲ ಡಿ) ವಿಜಯವಾಡ Show Answer ಬಿ) ಡಾರ್ಜಿಲಿಂಗ್ 8, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ)...

03rd January 2025 Daily Current Affairs Quiz in Kannada for All Competitive Exams

          03rd January 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-03rd January 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

02nd January 2025 Daily Current Affairs Quiz in Kannada for All Competitive Exams

          02nd January 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-02nd January 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Today Top-10 General Knowledge Question Answers with Explanation in Kannada for All Competitive Exams-07

Today Top-10 General Knowledge Question Answers with Explanation in  Kannada for All Competitive Exams-07 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Poli...

09 December 2021 Today Top-10 General Knowledge Question Answers in Kannada for All Competitive Exams

09 December 2021 Today Top-10 General Knowledge Question Answers in Kannada for All Competitive Exams ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Ka...

Top-10 Kannada Literature MCQs For All Competitive Exams-01

   Top-10 Kannada Literature MCQs For All Competitive Exams-01 ಕನ್ನಡ ಸಾಹಿತ್ಯ ಚರಿತ್ರೆ (SDA, FDA,PSI,KAS) 💥💥💥💥 1. ಕನ್ನಡ ಸಾಹಿತ್ಯದ ಆರಂಭವನ್ನು ಎಲ್ಲಿಂದ ಗುರುತಿಸುತ್ತಾರೆ 1, ತಾಳೆ ಗರಿಗಳಿಂದ  2. ಜನಪದ ಸಾಹಿತ್ಯ 3. ಅಕ್ಷರ ಸಾಹಿತ್ಯ 4. ಹಲ್ಮಿಡಿ ಶಾಸನ Show Answer ಸರಿಯಾದ ಉತ್ತರ : 4. ಹಲ್ಮಿಡಿ ಶಾಸನ 2. ಸಾಹಿತ್ಯ ಚರಿತ್ರೆಯ ಅಧ್ಯಯನವು ಇವರಿಂದ ಆರಂಭವಾಯಿತು 1. ರಾಜಮಹಾರಾಜರಿಂದ  2. ಕವಿಗಳಿಂದ 3. ಶಾಸನಗಳಿಂದ 4. ಕ್ರೈಸ್ತ ಮಿಷನರಿಗಳಿಂದ Show Answer ಸರಿಯಾದ ಉತ್ತರ: 4. ಕ್ರೈಸ್ತ ಮಿಷನರಿಗಳಿಂದ   3. An Essay on Kanarese Literature ಇವರ ಲೇಖನ 1. ಆರ್. ನರಸಿಂಹಚಾರ್  2. ಕಿಟಲ್ 3. ಶ್ರೀ 4. ತ. ಸು. ಶಾಮರಾಯ Show Answer ಸರಿಯಾದ ಉತ್ತರ : 2. ಕಿಟಲ್ 4. 'ಕವಿ ಚರಿತೆ' ಸಂಪುಟ 1, 2 ಮತ್ತು 3 ನಿರ್ಮಿಸಿದವರು. 1. ಆರ್. ನರಸಿಂಹಚಾರ್  2. ಇ.ಪಿ. ರೈಸ್ 3. ಮೈಸೂರು ಸುಬ್ಬಯ್ಯ 4, ರಂ. ಶ್ರೀ. ಮುಗಳಿ Show Answer ಸರಿಯಾದ ಉತ್ತರ : 1. ಆರ್. ನರಸಿಂಹಚಾರ್   5. 'ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ'ಯ 10 ಸಂಪುಟಗಳನ್ನು ನಿರ್ಮಿಸಿದವರು.... 1. ಬೆಂಗಳೂರು ವಿ.ವಿ  2. ಮಂಗಳೂರು ವಿ. ವಿ 3. ಮೈಸೂರು ವಿ. ವಿ 4. ಧಾರವಾಡ ವಿ.ವಿ Show Answer ...