Breaking

Wednesday, 3 November 2021

03 November 2021 Detailed Daily Current Affairs in Kannada for All Competitive Exams

          

03 November 2021 Detailed Daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams www.kpscnotesmcqs.in



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ.

💥 Click here to Read Daily Current Affairs in Kannada  


ಚಡಗ ಕಾದಂಬರಿ ಪ್ರಶಸ್ತಿ


ಕೋಟೇಶ್ವರದ ಎನ್‌ಎಎಂಎಚ್ ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ನೀಡುವ 12 ನೇ ವರ್ಷದ ಚಡಗ ಕಾದಂಬರಿ ಪ್ರಶಸ್ತಿಗೆ ದವನ ಸೊರಬ ಅವರ ಪರವಶ ಕಾದಂಬರಿ ಆಯ್ಕೆಯಾಗಿದೆ.

* ಕನ್ನಡದ ಖ್ಯಾತನಾಮ ಕಾದಂಬರಿಕಾರ್ತಿ, ಸಾಹಿತಿ ಪ್ರೇಮಾ ಭಟ್‌ರನ್ನು ಈ ಸಾಲಿನ 'ಚಡಗ ಸಂಸ್ಕರಣಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

* ನವೋದಯ ಕನ್ನಡ ಕಥೆಗಾರಿಕೆಗೆ ಬಹು ಹತ್ತಿರದ ಲಾಲಿತ್ಯ, ಮಲೆನಾಡಿನ ಬದುಕಿನ ಹೃದಯವಂತಿಕೆ ಮತ್ತು ಬಹುತೇಕ ಕಾವ್ಯವೇ ಅನ್ನಿಸಿಬಿಡುವ ಆಕೃತಿಯನ್ನು ಅವಲಂಬಿಸಿದ್ದು, ಮರೆಯಾಗುತ್ತಿರುವ ಮಲೆನಾಡಿನ ಹಳ್ಳಿಗಾಡಿನ ಸುಮಾರು ಅರವತ್ತು ಪಾತ್ರಗಳನ್ನು ಹದಗೆಡದಂತೆ ಬಳಸಿಕೊಳ್ಳುವ 'ಪರವಶ' ಕಾದಂಬರಿ ದವನ ಸೊರಬರ 3 ನೇ ಕಾದಂಬರಿ.


• ಪ್ರಶಸ್ತಿಯು ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಹತ್ತು ಸಾವಿರ ರೂ. ನಗದು ಬಹುಮಾನಗಳನ್ನು ಒಳಗೊಂಡಿದೆ.

* ಸೂರ್ಯನಾರಾಯಣ ಚಡಗರ ಸಾಹಿತ್ಯ ಒಡನಾಡಿಯಾಗಿದ್ದ ಹಿರಿಯ ಲೇಖನಿ ಪ್ರೇಮಾ ಭಟ್‌ರ ಜೀವಮಾನ ಸಾಧನೆಯನ್ನು ಪರಿಗಣಿಸಿ, ಅವರನ್ನು ಚಡಗ ಸಂಸ್ಕರಣಾ ಪುರಸ್ಕಾರವಿತ್ತು ಗೌರವಿಸಲಾಗುವುದು .

ರಂಗನಾಥ ರಾವ್ ಸಾಹಿತ್ಯ ಪ್ರಶಸ್ತಿ


2020 ನೇ ಸಾಲಿನ ಶ್ರೀಮತಿ ಸರಳಾ ರಂಗನಾಥ್ ರಾವ್ ಸಾಹಿತ್ಯ ಪ್ರಶಸ್ತಿಗೆ ಕತೆಗಾರ್ತಿ ಶಾಂತಿ ಕೆ. ಅಪ್ಪಣ್ಣ ಆಯ್ಕೆಯಾಗಿದ್ದಾರೆ. 

• ಲೇಖಕಿಯರಿಗೆ ನೀಡಲಾಗುವ ಶ್ರೀಮತಿ ಸರಳಾರಂಗನಾಥ ರಾವ್ ಸಾಹಿತ್ಯ ಪ್ರಶಸ್ತಿಯನ್ನು ಕೊಡಗಿನ ಕಥೆಗಾರ್ತಿ ಶ್ರೀಮತಿ ಶಾಂತಿ ಕೆ. ಅಪ್ಪಣ್ಣ ಅವರ 'ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು' ಕಥಾ ಸಂಕಲನಕ್ಕೆ ನೀಡಲಾಗಿದೆ.

* ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ, ಹತ್ತು ಸಾವಿರ ರೂ. ನಗದು ಒಳಗೊಂಡಿದೆ.


ಬಾರ್ಕ್ಲೆಸ್ ಸಿಇಒ ಆಗಿ ವೆಂಕಟಕೃಷ್ಣನ್ ನೇಮಕ


330 ವರ್ಷಗಳ ಹಿಂದೆ ಆರಂಭವಾದ, ಬ್ರಿಟನ್ ಮೂಲದ ಬಾರ್ಕ್ಲೆಸ್ ಬ್ಯಾಂಕ್‌ನ ನೂತನ ಸಿಇಒ ಆಗಿ ಮೈಸೂರು ಮೂಲದ ಸಿ.ಎಸ್. ವೆಂಕಟಕೃಷ್ಣನ್ ಆಯ್ಕೆಯಾಗಿದ್ದಾರೆ.


* ಭಾರತೀಯ ಮೂಲದ ಮತ್ತೋರ್ವ ವ್ಯಕ್ತಿಗೆ ಜಾಗತಿಕ ಮಟ್ಟದ ಹಣಕಾಸು ಸಂಸ್ಥೆಯೊಂದರ ಉನ್ನತ ಹುದ್ದೆ ಲಭಿಸಿದಂತಾಗಿದೆ. ಹಾಲಿ ಬಾರ್ಕ್ಲೆಸ್ ಸಿಇಒ ಆಗಿದ್ದ ಜೆಸ್ ಸ್ಟೇಲೇ ಹಗರಣವೊಂದರಲ್ಲಿ ಸಿಕ್ಕಿಬಿದ್ದು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ವೆಂಕಟಕೃಷ್ಣನ್ ಅವರನ್ನು ಆಯ್ಕೆ ಮಾಡಲಾಗಿದೆ.


ವೆಂಕಟಕೃಷ್ಣನ್ ವಾರ್ಷಿಕ 277 ಕೋಟಿ ರೂ. ವೇತನ ಪಡೆಯಲಿದ್ದಾರೆ. 1994 ರಲ್ಲಿ ಜೆಪಿ ಮಾರ್ಗನ್‌ನಲ್ಲಿ ವೃತ್ತಿ ಆರಂಭಿಸಿದ್ದ ವೆಂಕಟಕೃಷ್ಣನ್ ಬಳಿಕ ಬಾರ್ಕ್ಲೆಸ್ ‌ನಲ್ಲಿ ಗ್ಲೋಬಲ್ ಮಾರ್ಕೆಟ್ ಹೆಡ್ ಮತ್ತು ಚೀಫ್ ರಿಸ್ಟ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.


ಬಾರ್ಕ್ಲೆಸ್ ಬ್ಯಾಂಕ್


  • ಸ್ಥಾಪನೆ – 17 ನವೆಂಬರ್ 1690
  • ಪ್ರಧಾನ ಕಚೇರಿ - ಲಂಡನ್
  • ಸಿಇಒ - ಜೆಸ್ಸ್ಟಾಲಿ (ನಿರ್ಗಮಿತ) 
  • ಪ್ರಸ್ತುತ ವೆಂಕಟಕೃಷ್ಣನ್


ಅಂಗಸಂಸ್ಥೆಗಳು 

1) ಬಾರ್ಕ್ಲೆ ಕಾರ್ಡ್

2) ಬಾರ್ಕ್ಲೆಸ್ ಇನ್ವೆಸ್ಟ್ ಬ್ಯಾಂಕ್



ದ ಸೇಜ್ ವಿತ್ ಟು ಹಾರ್ನ್ ಕೃತಿ ಬಿಡುಗಡೆ


ಭಾರತವು ಪುರಾಣದ ಇತಿಹಾಸದಲ್ಲಿ ಕಳೆದು ಹೋಗಿರುವ ಆಕರ್ಷಕ ಕಥನಗಳನ್ನು ಒಳಗೊಂಡ ಸುಧಾಮೂರ್ತಿ ಅವರ ಹೊಸ ಕೃತಿ 'ದ ಸೇಜ್ ವಿತ್ ಟು ಹಾರ್ನ್' ಬಿಡುಗಡೆ ಆಗಲಿದೆ. ಮಕ್ಕಳನ್ನು ಗುರಿಯಾಗಿಸಿಕೊಂಡು ರಚಿಸಲಾದ ಇದು ಸುಧಾಮೂರ್ತಿ ಅವರ 'ಅನ್ ಯೂಷುವಲ್ ಟೇಲ್ಸ್ ಫ್ರಂ ಮಿಥಾಲಜಿ' ಸರಣಿಯಲ್ಲಿ ಐದನೆಯದು. 


• ಪುರಾಣಗಳಲ್ಲಿನ ರಾಜ-ರಾಣಿಯರು, ದೇವರು, ದೇವತೆಯರು, ಋಷಿಗಳು, ಅತೀತ ಶಕ್ತಿಯುಳ್ಳ ಮನುಷ್ಯರು ಹೀಗೆ ಆಕರ್ಷಕ ವ್ಯಕ್ತಿತ್ವಗಳನ್ನು ಕೃತಿಯು ಪರಿಚಯಿಸಲಿದೆ.


• ಐದು ಸಂಪುಟಗಳಲ್ಲಿ ಸುಧಾ ಮೂರ್ತಿ ಅವರು ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆ ಕುರಿತ ವಿವಿಧ ರಾಜ್ಯಗಳ, ವಿವಿಧ ಆವೃತ್ತಿಗಳ ಭಿನ್ನ ಆವೃತ್ತಿಗಳನ್ನು ಪರಿಚಯಿಸುತ್ತಾರೆ.


• ನೋಡಲು ಭಿನ್ನವಾಗಿದ್ದರೂ, ಇವುಗಳ ಮೂಲ ಎಳೆ ಒಂದೇ ಆಗಿದೆ. ಪುರಾಣಗಳಲ್ಲಿರುವ ಕೆಲ ಪೋಷಕ ಪಾತ್ರಗಳು ತಮ್ಮದೇ ಕಥೆ ಹಾಗೂ ಭಿನ್ನ ಜೀವನ ದೃಷ್ಟಿಕೋನ ಹೊಂದಿವೆ.

2021 ನೇ ಸಾಲಿನ ಮೇಜರ್ ಧ್ಯಾನ್ ಚಂದ್ ಖೇಲ್‌ರತ್ನ ಪ್ರಶಸ್ತಿ ಪ್ರಕಟ


2021 ನೇ ಸಾಲಿನ ಮೇಜರ್ ಧ್ಯಾನ್‌ಚಂದ್ ಪ್ರಶಸ್ತಿ ಪ್ರಕಟವಾಗಿದ್ದು, ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿ 12 ಮಂದಿ ಕ್ರೀಡಾಪಟುಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.


* 35 ಕ್ರೀಡಾ ಸಾಧಕರನ್ನು ಅರ್ಜುನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ಖೇಲ್‌ರತ್ನ ಪ್ರಶಸ್ತಿ 2021 ವಿಜೇತರು


1) ನೀರಜ್ ಚೋಪ್ರಾ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ

2) ರವಿ ದಹಿಯಾ - ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ

3) ಲಬ್ಧನಾ ಬೋರ್ಗೊಹೈನ್ - ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ

4) ಶ್ರೀಜೆಶ್ - ಗೋಲ್ ಕೀಪರ್

5) ಮಿಥಾಲಿ ರಾಜ್ - ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕಿ

6) ಸುನೀಲ್ ಚೆಟ್ರಿ - ಫುಟಬಾಲ್ ಆಟಗಾರ

7) ಮನ್‌ಪ್ರೀತ್ ಸಿಂಗ್ - ಹಾಕಿ ತಂಡದ ನಾಯಕ

8) ಅವನಿ ಲೇಖರ - ಪ್ಯಾರಾಲಿಂಪಿಕ್ಸ್ ಶೂಟಿಂಗ್‌ನಲ್ಲಿ ಪದಕ

9) ಮನೀಷ್ ನರ್ವಾಲ್ - ಪ್ಯಾರಾಲಿಂಪಿಕ್ಸ್ ಶೂಟಿಂಗ್ ಪಟು

10) ಸುಮೀತ್ ಅಂಕಿಲ್ - ಪ್ಯಾರಾಲಿಂಪಿಕ್ಸ್‌ ಜಾವೆಲಿನ್ ಪಟು

11) ಪ್ರಮೋದ್ ಭಗತ್ - ಬ್ಯಾಡ್ಮಿಂಟನ್

12) ಕೃಷ್ಣ ನಗರ್ - ಬ್ಯಾಡ್ಮಿಂಟನ್


ಅರ್ಜುನ ಪ್ರಶಸ್ತಿ 2021 ವಿಜೇತರು


ಕ್ರಿಕೆಟಿಗ ಶಿಖರ್ ಧವನ್, ಪ್ಯಾರಾ ಟೇಬಲ್ ಟೆನಿಸ್, ಆಟಗಾರ್ತಿ ಭವಿನಾ ಪಟೇಲ್, ಪ್ಯಾರಾ ಶಟ್ಲರ್ ಸುಹಾಸ್, ಯತಿರಾಜ್, ಹೈಜಂಪ್ ಪಟು ನಿಶಾದ್ ಕುಮಾರ್ ಹಾಗೂ ಟೊಕಿಯೊ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡ ಸೇರಿದಂತೆ 35 ಕ್ರೀಡಾ ಸಾಧಕರನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿ ಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ


• ಇದು ಭಾರತದ ಕ್ರೀಡಾ ಕ್ಷೇತ್ರದ ಅತ್ಯಂತ ಶ್ರೇಷ್ಠ ಪ್ರಶಸ್ತಿಯಾಗಿದೆ

* ಈ ಪ್ರಶಸ್ತಿಯನ್ನು ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿ ನೀಡಲಾಗುತ್ತಿತ್ತು. ಪ್ರಸ್ತುತ ಆಗಸ್ಟ್ 2021 ರಲ್ಲಿ ಈ ಪ್ರಶಸ್ತಿಗೆ ಮೇಜರ್ ಧ್ಯಾನಚಂದ್ ಹೆಸರನ್ನು ಮರುನಾಮಕರಣ ಮಾಡಲಾಯಿತು.

* ಸ್ಥಾಪನೆ – 1991

* ಕ್ಷೇತ್ರ - ಕ್ರೀಡೆ

* ನೀಡುವವರು - ಭಾರತ ಸರ್ಕಾರ

* ಪ್ರಶಸ್ತಿ ಮೊತ್ತ - 25 ಲಕ್ಷ ರೂ.

* ಮೊಟ್ಟ ಮೊದಲ ಪ್ರಶಸ್ತಿ ವಿಜೇತ ವಿಶ್ವನಾಥನ್ ಆನಂದ್


2020 ರ ಪ್ರಶಸ್ತಿ ವಿಜೇತರು


1) ರೋಹಿತ್ ಶರ್ಮಾ - ಕ್ರಿಕೆಟ್

2) ಮಾಣಿಕಾ ಭಾತ್ರಾ - ಟೇಬಲ್ ಟೆನಿಸ್

3) ವಿನೇಶ್ ಪೊಗಟ್ - ಕುಸ್ತಿ

4) ಮರಿಯಪ್ಪನ್ ತಂಗವೇಲ್ - ಪ್ಯಾರಾ ಅಥ್ಲೆಟ್

5) ರಾಣಿ ರಾಂಪಾಲ್ - ಹಾಕಿ



ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಅರ್ಜುನ ಪ್ರಶಸ್ತಿ ಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ


* ಸ್ಥಾಪನೆ – 1961

* ಆಯ್ಕೆ ವಿಧಾನ : ಸತತವಾಗಿ 3 ವರ್ಷಗಳ ಕಾಲ ಕ್ರೀಡಾ ವಿಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರಬೇಕು.

* ಪ್ರಶಸ್ತಿ ಮೊತ್ತ - 15 ಲಕ್ಷ ರೂಪಾಯಿಗಳು


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ದ್ರೋಣಾಚಾರ್ಯ ಪ್ರಶಸ್ತಿ ಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ


* ಜೀವಮಾನ ಸಾಧನೆಗಾಗಿ ಕ್ರೀಡಾ ತರಬೇತುದಾರರಿಗೆ ನೀಡಲಾಗುತ್ತದೆ

* ಪ್ರಶಸ್ತಿ ಮೊತ್ತ - 15 ಲಕ್ಷ

* ನಿಯಮಿತ ಸಾಧನೆಗಾಗಿ ನೀಡುವ ದ್ರೋಣಾಚಾರ್ಯ

* ಪ್ರಶಸ್ತಿ ಮೊತ್ತ - 10 ಲಕ್ಷ ರೂ.


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮೇಜರ್ ಧ್ಯಾನ ಚಂದ್ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ


* ಜನನ - 29-08-1905

* ಜನ್ಮಸ್ಥಳ - ಅಲಹಾಬಾದ್

* 1926 ರಿಂದ 1945 ರ ಅವಧಿಯಲ್ಲಿ ಹಾಕಿಯಲ್ಲಿ ಪ್ರಸಿದ್ಧಿ ಹೊಂದಿದ್ದರು.

* ವೃತ್ತಿ ಜೀವನದಲ್ಲಿ 400 ಕ್ಕೂ ಅಧಿಕ ಗೋಲುಗಳನ್ನು ಬಾರಿಸಿದ್ದಾರೆ

* 1928, 1932 ಹಾಗೂ 1936 ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ ಗೆಲ್ಲುವಲ್ಲಿ ಧ್ಯಾನ್‌ಚಂದ್ ಅವರ ಪಾತ್ರ ಮಹತ್ವದಾಗಿತ್ತು.

ಖಾಸಗೀಕರಣಗೊಳ್ಳಲಿರುವ ಪ್ರಸಾರ ಭಾರತಿ


ಗಾಂಧೀಜಿ, ಜವಾಹರಲಾಲ್ ನೆಹರು, ವಲ್ಲಭ ಭಾಯಿ ಪಟೇಲ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಐತಿಹಾಸಿಕ ಸಂದರ್ಶನ, ಕಾರ್ಯಕ್ರಮಗಳ ಸಂಗ್ರಹವನ್ನು ಖಾಸಗಿ ತೆಕ್ಕೆಗೆ ಒಪ್ಪಿಸಲು ಪ್ರಸಾರ ಭಾರತಿ ಮುಂದಾಗಿದೆ.


ತುರ್ತು ಪರಿಸ್ಥಿತಿ, ಗಣ್ಯರ ನಿಧನ, ಸಂದರ್ಶನದ ರೇಡಿಯೋ ಹಾಗೂ ಡಿಡಿ ಮುದ್ರಿತ ಕಾರ್ಯಕ್ರಮಗಳನ್ನು ಒಟಿಟಿ ಸೇರಿದಂತೆ ಇನ್ನಿತರ ಖಾಸಗಿ ಮೂಲಗಳಿಗೆ ಹರಾಜು ಪ್ರಕ್ರಿಯೆ ಮೂಲಕ ನೀಡಲು ವ್ಯವಸ್ಥೆ ರೂಪಿಸಿದೆ. 'ಹಣಗಳಿಕೆ' ಉದ್ದೇಶಿತ ಈ ನೀತಿಗೆ ರಾಷ್ಟ್ರವ್ಯಾಪಿ, ವಿರೋಧ ವ್ಯಕ್ತವಾಗುತ್ತಿದೆ. ಕಾರ್ಯಕ್ರಮಗಳನ್ನು ಆಕಾಶವಾಣಿ, ಡಿಡಿ ವ್ಯಾಪ್ತಿಂತಲ್ಲೇ ಕಾಪಾಡಲು ಕೇಂದ್ರ ಸರಕಾರ ಮುಂದಾಗಬೇಕಿದೆ.


* ಪ್ರಸಾರ ಭಾರತಿ ತನ್ನ ಆನ್‌ಲೈನ್ ಹರಾಜಿನಲ್ಲಿ 1936 ರ ಬಳಿಕ ಡಿಡಿ, ಬಾನುಲಿಯಲ್ಲಿ ಪ್ರಸಾರವಾಗಲಿರುವ ಐತಿಹಾಸಿಕ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಟೆಲಿ ಸಿನಿಮಾ, ಸಾಕ್ಷ್ಯಚಿತ್ರಗಳು, ಜೀವನ ಚರಿತ್ರೆ, ನಾಟಕಗಳು ಸೇರಿದಂತೆ ಒಟ್ಟು 10 ವಿಭಾಗಗಳ ಬೃಹತ್ ಭಂಡಾರದ ಪ್ರಸಾರದ ಹಕ್ಕುಗಳನ್ನು ಮಾರಾಟಕ್ಕಿಟ್ಟಿದೆ.


ಪ್ರಸಾರ ಭಾರತಿ ಸೆಕ್ಷನ್ 14 ಸ್ಪಷ್ಟವಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದೇ ಉದ್ದೇಶವೆಂದು ಹೇಳಿದೆ. ಆದರೆ ಪ್ರಸಾರ ಭಾರತಿ ಹಣಗಳಿಕೆಯೆನ್ನುವ ಉದ್ದೇಶದಿಂದಲೇ ಸಂಗ್ರಹ ಹರಾಜಿಗೆ ಮುಂದಾಗುತ್ತಿರುವುದು ಸ್ಪಷ್ಟವಾಗಿ ತಿಳಿದುಬಂದಿದೆ.


ಪ್ರಸಾರ ಭಾರತಿ ಹೊಸ ನೀತಿ


* ಐತಿಹಾಸಿಕವಾಗಿ ಕಾರ್ಯಕ್ರಮ ಸಂಗ್ರಹವನ್ನು 'ಅನುದಾನ ಸಂಗ್ರಹ' (ಮಾನಿಟೈಸ್) ಕ್ಕಾಗಿ ಖಾಸಗಿ ವಲಯಕ್ಕೆ ಹರಾಜಿನ ಮೂಲಕ ನೀಡಲಾಗುತ್ತಿದ್ದು, ಟಿವಿ ರೇಡಿಯೋ ಪ್ರಸಾರದೊಂದಿಗೆ ಒಟಿಟಿ ಕ್ಷೇತ್ರದ ಪ್ರಸಾರಕ್ಕೂ ಇದು ಅನ್ವಯವಾಗಲಿದೆ

* ಆನ್‌ಲೈನ್ ಮೂಲಕ ಹರಾಜು ಪ್ರಕ್ರಿಯೆಗೆ ಅವಕಾಶ ಹಕ್ಕುಗಳನ್ನು ವಾರ್ಷಿಕ ಅವಧಿಗೆ ಮಾರಾಟ

* ಜಾಗತಿಕ ಮತ್ತು ದೇಶೀಯ ಮಟ್ಟದಲ್ಲಿ ಹರಾಜು ಪ್ರಕ್ರಿಯೆಗೆ ಅವಕಾಶ

* ಕಾರ್ಯಕ್ರಮಗಳ ಗುಣಮಟ್ಟ ಕಾಯ್ದುಕೊಳ್ಳಲು ಷರತ್ತು ಹರಾಜಿನಿಂದಾಗುವ ಲಾಭ

* ಒಟಿಟಿಯಲ್ಲಿ ಆಕಾಶವಾಣಿ ಹಳೇ ಸಂಗ್ರಹಕ್ಕೆ ಬೇಡಿಕೆಯಿದೆ ಉತ್ತಮ ಆದಾಯ ಹರಿದುಬಂದಿದೆ

* ದೇಸಿ ಕಾರ್ಯಕ್ರಮಗಳು ಯೂಟ್ಯೂಬ್ ಸೇರಿದಂತೆ ಹಲವೆಡೆ ಹೆಚ್ಚು ಪ್ರಸಾರಗೊಳ್ಳಲಿವೆ

* ಕೇವಲ ಡಿಡಿ, ಬಾನುಲಿ ಮಾತ್ರವಲ್ಲದೆ ಉಳಿದೆಡೆ ಸಹ ಕಾರ್ಯಕ್ರಮ ಸಿಗಲಿವೆ


ಆಂತಕವೇನು?


ಅಮೂಲ್ಯ ಸಂಪತ್ತಾಗಿರುವ ದೇಸಿ ಐತಿಹಾಸಿಕ ಕಾರ್ಯಕ್ರಮ ಖಾಸಗಿ ತೆಕ್ಕೆಗೆ ಜಾರುವ ಆತಂಕ

* ಸಂಗ್ರಹದ ಹಕ್ಕು ಹರಾಜಿನಿಂದ ದೇಸಿ ಅಸ್ಮಿತೆ ಆಕಾಶವಾಣಿಯಿಂದ ಕೈತಪ್ಪಲಿದೆ

* ಯೂಟ್ಯೂಬ್ ಸೇರಿದಂತೆ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲ ಕಾರ್ಯಕ್ರಮಗಳಿಗೆ ಆಕಾಶವಾಣಿಗೆ ಸಿಗಲಿದ್ದ ಪ್ರಚಾರಕ್ಕೆ ಕುತ್ತು.



 ಇವುಗಳನ್ನೂ ಓದಿ 


 ಇವುಗಳನ್ನೂ ಓದಿ 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Also Read: 12 October 2021 Detailed daily Current Affairs in Kannada for All Competitive Exams  

💥 Also Read: 13 October 2021 Detailed daily Current Affairs in Kannada for All Competitive Exams  

💥 Also Read: 14, 15,  16 and 17 October 2021 Detailed daily Current Affairs in Kannada for All Competitive Exams  

💥 Also Read: 18 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 














No comments:

Post a Comment

Important Notes

Random Posts

Important Notes

Popular Posts

Top-50 General Knowledge (GK) Question Answers in Kannada for All Competitive Exams-05

Top-50 General Knowledge (GK) Question Answers in  Kannada for All Competitive Exams-05 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's El...

Best General Knowledge MCQs in Kannada for All Competitive Exams-01

Best General Knowledge MCQs in  Kannada for All Competitive Exams-01 1. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ Show Answer ಎ) ಮಿಚೆಲ್ಲಿ 2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ ಡಿ) ನಾಲ್ಕನೇ ಸೋಮೇಶ್ವರ Show Answer ಸಿ) ಎರಡನೇ ದೇವರಾಯ 4. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ ಸಿ) ಕೊಲಂಬಿಯಾ  ಡಿ) ಚೀನಾ Show Answer ಬಿ) ಬಲ್ಗೇರಿಯಾ 5. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ Show Answer ಎ) ಸೋಡಿಯಂ 6. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ Show Answer ಬಿ) ಸೋಡಿಯಂ ಹೈಡ್ರಾಕ್ಸೆಡ್ 7. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ ಸಿ) ಪಟಿಯಾಲ ಡಿ) ವಿಜಯವಾಡ Show Answer ಬಿ) ಡಾರ್ಜಿಲಿಂಗ್ 8, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ)...

02nd January 2025 Daily Current Affairs Quiz in Kannada for All Competitive Exams

          02nd January 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-02nd January 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

03rd January 2025 Daily Current Affairs Quiz in Kannada for All Competitive Exams

          03rd January 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-03rd January 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Today Top-10 General Knowledge Question Answers with Explanation in Kannada for All Competitive Exams-07

Today Top-10 General Knowledge Question Answers with Explanation in  Kannada for All Competitive Exams-07 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Poli...

Indian Constitution Most Important Question Answers in Kannada For All Competitive Exams

ಭಾರತದ ಸಂವಿಧಾನದ ಪ್ರಶ್ನೋತ್ತರಗಳು ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತದ ಸಂವಿಧಾನ ದ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಭಾರತೀಯ ಸಂವಿಧಾನದ ಜ್ಞಾನ ಇರಬೇಕಾದದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯ ಸಂವಿಧಾನ ದ ಹಲವಾರು ಮಹತ್ವದ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇವುಗಳು ನಿಮ್ಮ ಅಧ್ಯಯನಕ್ಕೆ ಸಹಕಾರಿಯಾಬಹುದೆಂಬುದು ನಮ್ಮ ಮಹದಾಶಯ..!! 1. ಸಂವಿಧಾನ ಎಂದರೇನು? > ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಮೂಲ ನಿಯಮಗಳ ದಾಖಲೆಗಳು 2. ಸಂವಿಧಾನ ಎಂಬ ಪದದ ಮೂಲ ಯಾವುದು? > ಕಾನ್ಸ್ಟಿಟ್ಯೂಟ್ 3. ‘ಕಾನ್ಸ್ಟಿಟ್ಯೂಟ್’ ಅರ್ಥವೇನು? > ನಿಯೋಜಿಸು, ಸಂಯೋಜಿಸು ಮತ್ತು ವಿಧಿವತ್ತಾಗಿ ಸ್ಥಾಪಿಸು ಎಂದರ್ಥ 4. ಸಂವಿಧಾನಾತ್ಮಕ ಆಡಳಿತವು ಮೊಟ್ಟ ...

SYLLABUS FOR KARNATAKA COMPUTER LITERACY TEST

SYLLABUS FOR KARNATAKA COMPUTER LITERACY TEST (Maximum Marks- 80) Time-90 Minutes   (5 Marks) 1. Introduction to Computer: - (a) What is Computer (b) Broad Categories of Computers (c) Language of Computer (d) Basic applications of Computer (e) Component l Processing Unit (CPU) (e) Components of Computer §   Central Processing Unit (CPU) §   Input and Output devices §   Computer memory §   Concept of hardware and software (F) Representation of data concepts of data processing §   Definition of data §   Basic data types §   Storage of data as files 2. Introduction to Windows and Windows concepts (a) What is an Operating System and basics of Window (b) The user interface §   Using mouse and moving Icons on the Screen §   The My Computer Icon §   The Recycle Bin Status bar, §   Start and Menu §   Running an application §   Windows Explorer §   Viewing of File, §   Fold...