Type Here to Get Search Results !

01 October 2021 Detailed Current Affairs in Kannada for All Competitive Exams

01 October 2021 Detailed Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams



ಹಾಯ್, ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯ, ಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳು, ಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ‌.

💥 Also Read: 01 October 2021 Detailed daily Current Affairs in Kannada for All Competitive Exams

💥 Also Read: 02 October 2021 Detailed daily Current Affairs in Kannada for All Competitive Exams

💥 Click here to Read Daily Current Affairs in Kannada

 

ಶಸ್ತ್ರಾಸ್ತ್ರ ನಿರ್ದೇಶನಾಲಯಕ್ಕೆ ಮೊದಲ ಮಹಾನಿರ್ದೇಶಕರಾಗಿ ಇ.ಆರ್‌.ಶೇಖ್ ನೇಮಕ

 

ಆರ್ಡನನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್‌ಬಿ) ಯ ಸ್ಥಾನದಲ್ಲಿ ಸ್ಥಾಪನೆಯಾಗಿರುವ ಶಸ್ತ್ರಾಸ್ತ್ರ ನಿರ್ದೇಶನಾಲಯ (ಆರ್ಡನನ್ಸ್ ಡೈರೆಕ್ಟೋರೇಟ್)ದ ಮೊದಲ ಮಹಾ ನಿರ್ದೇಶಕರಾಗಿ ಇ.ಆರ್.ಶೇಖ್ ಅಧಿಕಾರ ವಹಿಸಿಕೊಂಡಿದ್ದಾರೆ. ಇಂಡಿಯನ್ ಆರ್ಡನನ್ಸ್ ಫ್ಯಾಕ್ಟರಿ ಸರ್ವಿಸ್ (ಐಒಎಫ್‌ಎಸ್)ನ 1984ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಅವರು, ಆಸ್ತಾಸ್ತ್ರ ತಯಾರಿಕೆಗೆ ಸಂಬಂಧಿಸಿದ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅನುಭವ ಅವರಿಗೆ ಇದೆ. ಮಹಾರಾಷ್ಟ್ರದ ಜಲಗಾಂವ್ ನಲ್ಲಿರುವ ವರಂಗಾಂವ್‌ನಲ್ಲಿರುವ ಅತ್ಯಾಧುನಿಕ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳ ಮತ್ತು ಮದ್ದುಗುಂಡುಗಳ ಕಾರ್ಖಾನೆ ಸ್ಥಾಪನೆಯಲ್ಲಿ ಅವರು ಮುಖ್ಯ ಭೂಮಿಕೆ ವಹಿಸಿದ್ದಾರೆ.

 

1 ಸಾವಿರ ಕೋಟಿ ರೂ. ಬಿಡುಗಡೆ : ರಕ್ಷಣೆಗೆ ಸಂಬಂಧಿಸಿದ 7 ಹೊಸ ಸಾರ್ವಜನಿಕ ವಲಯದ ಸಂಸ್ಥೆ (ಡಿಪಿಎಸ್‌ಯು) ಗಳ ಹಣಕಾಸು ಅಗತ್ಯಗಳನ್ನು ಪೂರೈಸುವ ಸಲುವಾಗಿ ಕೇಂದ್ರ ಹಣಕಾಸು ಸಚಿವಾಲಯವು ದೇಶದ ತುರ್ತು ನಿಧಿಯಿಂದ 1 ಸಾವಿರ ಕೋಟಿ ರೂ.ಗಳನ್ನು ಮುಂಗಡದ ರೂಪದಲ್ಲಿ ಬಿಡುಗಡೆ ಮಾಡಿದೆ.

 

ಕೈಗಾರಿಕಾ ವಲಯಗಳಲ್ಲಿನ ಬೆಳವಣಿಗೆಯಲ್ಲಿ ಪ್ರಗತಿ

ಮೂಲಸೌಕರ್ಯ ವಲಯಗಳ ಪ್ರಮುಖ ಎಂಟು ಕೈಗಾರಿಕೆಗಳು ಆಗಸ್ಟ್‌ನಲ್ಲಿ ಶೇಕಡ 11.6 ರಷ್ಟು ಬೆಳವಣಿಗೆ ಕಂಡಿವೆ. 2020 ರ ಆಗಸ್ಟ್‌ನಲ್ಲಿ ಈ ಎಂಟು ವಲಯಗಳು ಶೇ (-) 6.9ರಷ್ಟು ಇಳಿಕೆ ಕಂಡಿದ್ದವು.

 

* ದೇಶದ ಕೈಗಾರಿಕಾ ಉತ್ಪಾದನೆ ಸೂಚ್ಯಂಕಕ್ಕೆ (ಐಐಪಿ) ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳು ಶೇ 40.27 ರಷ್ಟು ಕೊಡುಗೆ ನೀಡುತ್ತಿವೆ.

* ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, ಕಳೆದ ವರ್ಷದ ಆಗಸ್ಟ್ ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಕಲ್ಲಿದ್ದಲು, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳ ಉತ್ಪಾದನೆ ಹೆಚ್ಚಾಗಿದೆ. ಇನ್ನೊಂದೆಡೆ ಕಚ್ಚಾ ತೈಲ ಮತ್ತು ರಸಗೊಬ್ಬರ ಕೈಗಾರಿಕೆಗಳ ಉತ್ಪಾದನೆ ಇಳಿಕೆ ಆಗಿದೆ. ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲದ ಉತ್ಪಾದನೆಯು ಕಳೆದ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಶೇ 20.6ರಷ್ಟು ಬೆಳವಣಿಗೆ ಕಂಡಿದೆ.

ಸಿಮೆಂಟ್ ಉತ್ಪಾದನೆಯು ಶೇ36.3ರಷ್ಟು, ಉಕ್ಕು ಉತ್ಪಾದನೆಯು ಶೇ.5.1ರಷ್ಟು ಏರಿಕೆ ಆಗಿದೆ. ಈ ಎಂಟು ವಲಯಗಳಿಗೆ ಸೇರಿದ ಕೈಗಾರಿಕೆಗಳ ಉತ್ಪಾದನೆಯಲ್ಲಿನ ಬೆಳವಣಿಗೆಯು ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಶೇ 19.3 ಆಗಿದೆ. ಹಿಂದಿನ ವರ್ಷದ ಏಪ್ರಿಲ್ - ಆಗಸ್ಟ್ ಅವಧಿಯಲ್ಲಿ ಈ ವಲಯದಲ್ಲಿ ಶೇ (-) 17.3ರಷ್ಟು ಇಳಿಕೆ ದಾಖಲಾಗಿತ್ತು.

 

ನಗರಗಳ ರೂಪಾಂತರದ ಯೋಜನೆ

 

7 ವರ್ಷಗಳ ಹಿಂದೆ ಜಾರಿಗೆ ತಂದ ಸ್ವಚ್ಛ ಭಾರತ ಹಾಗೂ ಆರು ವರ್ಷಗಳ ಹಿಂದೆ ಅನುಷ್ಠಾನಗೊಂಡ ಅಮೃತ್‌ (ಅಟಲ್ ಪುನರುಜ್ಜಿವನ ಹಾಗೂ ನಗರ ರೂಪಾಂತರ ಮಿಷನ್) ಯೋಜನೆಗಳ ಯಶಸ್ಸಿನಿಂದ ಉತ್ತೇಜಿತ ಗೊಂಡಿರುವ ಕೇಂದ್ರ ಸರ್ಕಾರ, ಈ ಎರಡೂ ಯೋಜನೆಗಳ ಎರಡನೇ ಹಂತವನ್ನು ಪ್ರಾರಂಭಿಸುತ್ತಿದೆ.

 

* ಸ್ವಚ್ಛ ಭಾರತ ಮಿಷನ್ ನಗರ 2.0 ಹಾಗೂ ಅಮೃತ್ 2.0 ಎಂಬ ಈ ಎರಡೂ ಯೋಜನೆಗಳಿಗೂ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.

* ಈ ಎರಡೂ ಯೋಜನೆಗಳ ಒಟ್ಟಾರೆ ವೆಚ್ಚ 4.28 ಲಕ್ಷ ಕೋಟಿ ರೂ. ದೇಶದ ಎಲ್ಲ ನಗರಗಳನ್ನು ಕಸಮುಕ್ತ ಮಾಡುವುದರ ಜೊತೆಗೆ, ಕುಡಿಯುವ ನೀರಿನ ಖಾತ್ರಿ ಒದಗಿಸುವುದು ಈ ಯೋಜನೆಗಳ ಒಟ್ಟಾರೆ ಉದ್ದೇಶ.

 

ಸ್ವಚ್ಛ ಭಾರತ ನಗರ 2.0 

 

ದೇಶದ ಎಲ್ಲ ನಗರಗಳನ್ನೂ ಕಸ ಮುಕ್ತಗೊಳಿಸಿ, ಶೌಚಾಲಯ ಹಾಗೂ ಗೃಹ ಬಳಕೆಯ ನೀರನ್ನು ನಿರ್ವಹಿಸುವುದು. ಎಲ್ಲ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವುದು. ತನ್ಮೂಲಕ ನಗರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯ ಕನಸನ್ನು ಸಾಕಾರಗೊಳಿಸುವುದು. ಜತೆಗೆ ಘನ ತಾಜ್ಯಗಳನ್ನು ಮೂಲದಲ್ಲೇ ವಿಂಗಡಿಸುವುದಕ್ಕೆ ಒತ್ತು ನೀಡುವುದು. 3 ಆರ್ (ರೆಗ್ಯುಸ್, ರೀಯೂಸ್, ರೀಸೈಕಲ್) ಎಂಬ ತತ್ವವನ್ನು ಬಳಸಿಕೊಳ್ಳುವುದು. ನಗರಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಬಗೆಯ ಘನ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸುವುದು, ಯೋಜನೆಯ ಒಟ್ಟು ವೆಚ್ಚ 1.41 ಲಕ್ಷ ಕೋಟಿ ರೂ.

 

* ಅಮೃತ್ 2.0 ಉದ್ದೇಶ

 

ದೇಶದಲ್ಲಿರುವ ಎಲ್ಲ 4700 ನಗರ ಸ್ಥಳೀಯ ಸಂಸ್ಥೆಗಳಿಗೆ 2.68 ಕೊಳಾಯಿ ಸಂಪರ್ಕ ನೀಡುವ ಮೂಲಕ ಎಲ್ಲ ಮನೆಗಳಿಗೂ ನೀರು ಪೂರೈಕೆ ನೀರು ಪೂರೈಕೆ ಗುರಿಯನ್ನು ತಲುಪುವುದು. 500 ಅಮೃತ್ ನಗರಗಳಲ್ಲಿ ಶೇ. 100 ರಷ್ಟು ಒಳಚರಂಡಿ ವ್ಯವಸ್ಥೆ. ಇದಕ್ಕಾಗಿ 2.64 ಕೋಟಿ ಒಳಚರಂಡಿ ಅಥವಾ ಸೆಪ್ಟಿಕ್ ಸಂಪರ್ಕ ಒದಗಿಸುವುದು. ತನ್ಮೂಲಕ 10.5 ಕೋಟಿ ನಗರ ವಾಸಿಗಳಿಗೆ ಅನುಕೂಲ ಕಲ್ಪಿಸುವುದು. ಈ ಯೋಜನೆಯ ಒಟ್ಟು ವೆಚ್ಚ 2.87 ಲಕ್ಷ ಕೋಟಿ ರುಪಾಯಿಗಳಾಗಿದೆ.

💥 Also Read: 01 October 2021 Detailed daily Current Affairs in Kannada for All Competitive Exams

💥 Also Read: 02 October 2021 Detailed daily Current Affairs in Kannada for All Competitive Exams

💥 Click here to Read Daily Current Affairs in Kannada

 

ಭಾರತದ ವಾಯುಪಡೆ ಮುಖ್ಯಸ್ಥರಾಗಿ ಚೌಧರಿ ನೇಮಕ

 

ಭಾರತೀಯ ವಾಯುಪಡೆಯ ನೂತನ ಮುಖ್ಯ ಸ್ಥರಾಗಿ ಏರ್‌ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಪ್ರಮಾಣ ವಚನ ಸ್ವೀಕರಿಸಿದನು. ಈ ಹಿಂದಿನ ಏರ್‌ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಚೌಧರಿ ಅವರ ನೇಮಕವಾಗಿದೆ.

 

ಭಾರತೀಯ ವಾಯುಸೇನೆ :

 

* ಸ್ಥಾಪನೆ - 8 ಅಕ್ಟೋಬರ್ 1932

* ಪ್ರಧಾನ ಕಚೇರಿ - ನವದೆಹಲಿ

* ಧ್ಯೇಯ ವಾಕ್ಯ - “Touching the sky with Glory”

 

ಹಿರಿಯ ನಾಗರಿಕ ಪ್ರಶಸ್ತಿ ಪ್ರಕಟ

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿಶ್ವ ಹಿರಿಯ ನಾಗರಿಕರ ದಿನದ ಹಿನ್ನೆಲೆಯಲ್ಲಿ ನೀಡುವ ಪ್ರಶಸ್ತಿಗೆ ಆರು ಮಂದಿ ಸಾಧಕರು ಹಾಗೂ ಒಂದು ಸಂಸ್ಥೆ ಸೇರಿದಂತೆ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಚಿವ ಹಾಲಪ್ಪ ಆಚಾರ್ ಪ್ರಕಟಿಸಿದ್ದಾರೆ.

 

* ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಿನ್ನೆಲೆಯಲ್ಲಿ ನಾನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರು ಹಾಗೂ ಒಂದು ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು 1 ಲಕ್ಷ ರೂ. ನಗದು, ಸ್ಮರಣಿಕೆ, ಪ್ರಮಾಣ ಪತ್ರ ಒಳಗೊಂಡಿದೆ ಎಂದರು.

 

ಪ್ರಶಸ್ತಿ ಪುರಸ್ಕೃತರ ಪಟ್ಟಿ :

ಹಾವೇರಿಯ ಗುರುಪಾದಪ್ಪ ಅಂಚೇರ (ಶಿಕ್ಷಣ),

ಬಾಗಲಕೋಟೆಯ ಡಾ|| ಕರವೀರಪ್ರಭು ಕ್ಯಾಲಕೊಂಡ (ಸಾಹಿತ್ಯ),

ರಾಯಚೂರಿನ ಶರಣಪ್ಪ ಗೋನಾಳ (ಕಲೆ),

ಉಡುಪಿಯ ಎಸ್.ಜನಾರ್ಧನ (ಸಮಾಜ ಸೇವೆ), ಕೋಲಾರದ ಅಂಚೆ ಅಶ್ವತ್ಥ (ಪ್ರತಿಭೆ/ಕ್ರೀಡೆ)

ಕೊಪ್ಪಳದ ಬಿ.ಕಿಷನ್ ರಾವ್ (ಕಾನೂನು) ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 

ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ ಬೀದರ್‌ನ ಡಾ. ಅಂಬೇಡ್ಕರ್ ಕಲ್ಬರಲ್ ಅಂಡ್ ವೆಲ್‌ಫೇರ ಸೊಸೈಟಿ ಸಂಸ್ಥೆಯೂ ಪ್ರಶಸ್ತಿಗೆ ಭಾಜನವಾಗಿದೆ ಎಂದರು.

 

* ವಿಶೇಷ ಸಾಧನೆಗಾಗಿ ಒಬ್ಬರು ಹಿರಿಯ ನಾಗರಿಕರನ್ನು ಪ್ರತಿ ವರ್ಷ ಸನ್ಮಾನಿಸಲಾಗುತ್ತದೆ. ಈ ಬಾರಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸ್ಮರಣಾರ್ಥ ನಾಲ್ಕು ಕಂದಾಯ ವಿಭಾಗಗಳಲ್ಲಿ ಒಬ್ಬರಂತೆ ನಾಲ್ಕು ಮಂದಿ ವಿಶೇಷ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

 

ಹಿರಿಯ ನಾಗರಿಕರ ಸಹಾಯವಾಣಿ 14567 ಗೆ ಚಾಲನೆ:

ಕೇಂದ್ರ ಸರ್ಕಾರದ 'ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ' 14567ಗೆ ಚಾಲನೆ ನೀಡಲಾಗಿದೆ.

💥 Also Read: 01 October 2021 Detailed daily Current Affairs in Kannada for All Competitive Exams

💥 Also Read: 02 October 2021 Detailed daily Current Affairs in Kannada for All Competitive Exams

💥 Click here to Read Daily Current Affairs in Kannada

 

ನುಸ್ರತ್ ಬರೂಚಾಗೆ “ಏಷಿಯಾದ ಅತ್ಯುತ್ತಮ ನಟಿ ಪ್ರಶಸ್ತಿ'

 

ದಕ್ಷಿಣ ಕೊರಿಯಾದ ಪ್ರತಿಷ್ಠಿತ 'ಭೂಸನ್ ಫಿಲ್ಸ್ ಫೆಸ್ಟಿವಲ್' ನಲ್ಲಿ ಏಷಿಯಾದ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಬಾಲಿವುಡ್ ನಟಿ ನುಸ್ರತ್ ಬರೂಚಾ ಪಡಿದಿದ್ದಾರೆ. ಎಂದು ಐಎಎನ್ಎಸ್ ವರದಿ ಮಾಡಿದೆ.

 

* 2020 ರ ಲಾಕ್ಡೌನ್ ಸಂದರ್ಭದಲ್ಲಿ ನೆಟ್ ಫಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದ ರಾಜ್ ಮೆಹ್ಲಾ ನಿರ್ದೇಶನದ 'ಅಜೆಬ್

ದಾಸ್ತಾನ್' ಸಿನಿಮಾದಲ್ಲಿನ ಅಭಿಮಾನಕ್ಕಾಗಿ ನುಸ್ರತ್ ಬರೂಚಾ ಅವರು ಅತ್ಯುತ್ತಮ ಏಷಿಯಾ ನಟಿ ಪ್ರಶಸ್ತಿಗೆ ಭಾಜನಾಗಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್‌ಗೆ ಈ ಪ್ರಶಸ್ತಿ ಬಂದಿದೆ.

* ಭೂಸನ್ ಫಿಲ್ಕ್ ಫೆಸ್ಟಿವಲ್‌ನಲ್ಲಿ ಏಷಿಯಾ ಭಾಗದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಲು “ಏಷಿಯನ್ ಕಂಟೆಸ್ಟಂಟ್ ಅವಾರ್ಡ್' ಪ್ರಶಸ್ತಿ ನೀಡಲಾಗುತ್ತಿದೆ.

* 2006 ರಲ್ಲಿ 'ಜೈ ಸಂತೋಷಿ ಮಾ' ಸಿನಿಮಾ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ್ದ ನುಸ್ರತ್ ಬರೂಚಾ 'ಲವ್ ಸೆಕ್ಸ್ ಔರ್ ದೋಖಾ', 'ಪ್ಯಾರಾ ಕಾ ಪಂಚನಾಮಾ', 'ಡೀಮ್ ಗರ್ಲ್' ಸೇರಿದಂತೆ ಬಾಲಿವುಡ್‌ನಲ್ಲಿ ಸುಮಾರು 13 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

 

ಹುರೂನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಟ

 

ಹುರೂನ್ ಇಂಡಿಯಾ ಸಿದ್ಧಪಡಿಸುವ 'ಐಐಎಫ್ ಎಲ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಲಿಸ್ಟ್ - 2021' ಬಿಡುಗಡೆ ಆಗಿದ್ದು. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಸಿರಿವಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

 

ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಕುಟುಂಬವು ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿ ಇದೆ. ಅದಾನಿ ಅವರು ಪ್ರತಿದಿನ ರೂ. 1,000 ಕೋಟಿ ಆದಾಯ ಗಳಿಸುತ್ತಿದ್ದಾರೆ ಎಂದು ವರದಿಯು ಹೇಳಿದೆ.

* ಮುಕೇಶ್ ಅಂಬಾನಿ ಅವರು ಸತತವಾಗಿ ಹತ್ತು ವರ್ಷಗಳಿಂದ 'ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ' ಆಗಿದ್ದಾರೆ ಎಂದು ಹುರೂನ್ ಇಂಡಿಯಾ ಹೇಳಿದೆ. 

* ಸೆಪ್ಟೆಂಬರ್ 15 ರವರೆಗಿನ ಅಂಕಿ-ಅಂಶಗಳನ್ನು ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಪಟ್ಟಿಯಲ್ಲಿ ಇರುವ ಶ್ರೀಮಂತರ ಸಂಪತ್ತಿನ ಒಟ್ಟು ಮೌಲ್ಯವು ಶೇಕಡ 51ರಷ್ಟು ಹೆಚ್ಚಳವಾಗಿದೆ. ರಾಸಾಯನಿಕಗಳು ಮತ್ತು ಸಾಫ್ಟ್ವೇರ್ ಉದ್ಯಮ ವಲಯಗಳು ಹೊಸ ಶ್ರೀಮಂತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿಸಿವೆ.

 

ಹುರೂನ್ ಸಿದ್ಧಪಡಿಸಿದ ಶ್ರೀಮಂತರ ಪಟ್ಟಿ 

💥💥💥💥
ಹುರೂನ್ ಸಿದ್ಧಪಡಿಸಿದ ಶ್ರೀಮಂತರ ಪಟ್ಟಿ
ಸ್ಥಾನ ಹೆಸರು ಸಂಪತ್ತಿನ ಮೌಲ್ಯ ಕಂಪನಿ ವಾಸಸ್ಥಳ
01 ಮುಕೇಶ್ ಅಂಬಾನಿ ಮತ್ತು ಕುಟುಂಬ ರೂ.7.18 ಆರ್‌ಐಎಲ್ ಮುಂಬೈ
02 ಗೌತಮ್ ಅದಾನಿ ಮತ್ತು ಕುಟುಂಬ ರೂ.5.05 ಅದಾನಿ ಅಹಮದಾಬಾದ್
03 ಶಿವ ನಾಡಾರ್‌ ಮತ್ತು ಕುಟುಂಬ ರೂ.2.36 ಎಚ್ಸಿಎಲ್ ನವದೆಹಲಿ
04 ಎಸ್.ಪಿ. ಹಿಂದುಜಾ ಮತ್ತು ಕುಟುಂಬ ರೂ.2.20 ಹಿಂದುಜಾ ಲಂಡನ್
05 ಎಲ್.ಎನ್.ಮಿತ್ತಲ್‌ ಮತ್ತು ಕುಟುಂಬ ರೂ.1.74 ಆರ್ಸೆಲರ್ ಮಿತ್ತಲ್ ಲಂಡನ್
06 ಸೈರಸ್ ಪೂನಾವಾಲಾಮತ್ತು ಕುಟುಂಬ ರೂ.1.63 ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪುಣೆ
07 ರಾಧಾಕಿಶನ್ ದಮಾನಿ ಮತ್ತು ಕುಟುಂಬ ರೂ.1.54 ಅವೆನ್ಯು ಸೂಪರ್ ಮಾರ್ಟ್ಟ ಮುಂಬೈ
08 ವಿನೋದ್ ಶಾಂತಿಲಾಲ್ ಅದಾನಿ ಮತ್ತು ಕುಟುಂಬ ರೂ.1.31 ಅದಾನಿ ದುಬೈ
09 ಕುಮಾರ ಮಂಗಲಂ ಬಿರ್ಲಾ ಮತ್ತು ಕುಟುಂಬ ರೂ.1.22 ಆದಿತ್ಯ ಬಿರ್ಲಾ ಮುಂಬೈ
10 ಜಯ್‌ಚೌಧರಿ ರೂ.1.21 ಝಡ್‌ಸ್ಕೇಲರ್ ಸ್ಯಾನ್‌ಜೋ
ಸಂಪತ್ತಿನ ಮೌಲ್ಯವನ್ನು ಲಕ್ಷ ಕೋಟಿಗಳಲ್ಲಿ ನೀಡಲಾಗಿದೆ.

 

 

 

ವಿಶ್ವ ಸಸ್ಯಹಾರ ಜಾಗೃತಿ ದಿನ : ಅಕ್ಟೋಬರ್ 01

 

ಸಸ್ಯಹಾರದ ಜಾಗೃತಿ ಬಗ್ಗೆ ಆಂದೋಲನ ಶುರು  ಮಾಡಿದ ಮೊದಲ ದೇಶ ಉತ್ತರ ಅಮೇರಿಕಾ, 1977 ರಲ್ಲಿ ಆರಂಭವಾದ ಅಮೇರಿಕಾದ ವೆಜಿಟೇರಿಯನ್ ಸೊಸೈಟಿ (North America Vegeterian Society) ಗೆ 1978 ರಲ್ಲಿ ಅಂತರರಾಷ್ಟ್ರೀಯ ಸಸ್ಯಾಹಾರಿಗಳ ಒಕ್ಕೂಟ ಮಾನ್ಯತೆ ನೀಡಿತು. ನಂತರದ ದಿನಗಳಲ್ಲಿ ಸಸ್ಯಾಹಾರದ ವಿಶ್ವದ ಜಾಗೃತಿ ದಿನ ಆಚರಣೆಯು ವ್ಯವಸ್ಥಿತವಾದ ರೀತಿಯಲ್ಲಿ ಆರಂಭಗೊಂಡಿತು.

 

ದೇಶದಲ್ಲಿನ ಒಟ್ಟು ಸಸ್ಯಾಹಾರಿಗಳ ಪ್ರಮಾಣ ಶೇ. 75

ದೇಶದಲ್ಲಿನ ಪೂರ್ತಿ ಸಸ್ಯಾಹಾರಿಗಳ ಪ್ರಮಾಣ ಶೇ. 25

ಸಸ್ಯಾಹಾರಿ ಆಹಾರ ಸೇವಿಸುವ ಮೊದಲ 3 ನಗರಗಳು

1) ಇಂದೋರ್‌ (49%)

2) ಮೀರತ್ (36%)

3) ದೆಹಲಿ (30%)

 

* ಅತೀ ಹೆಚ್ಚು ಸಸ್ಯಾಹಾರಿಗಳನ್ನು ಹೊಂದಿರುವ ದೇಶ ಭಾರತ.

 

ಸಸ್ಯ ಆಹಾರದಿಂದ ಆಗುವ ಉಪಯೋಗಗಳು:

 

* ಹಣ್ಣುಗಳು, ನಾರಿನಂಶವಿರುವ ಪದಾರ್ಥಗಳು ಹಾಗೂ ತರಕಾರಿಗಳು ಕೊಲೆಸ್ಟ್ರಾಲ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಅನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಹಾಗೂ ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತವೆ.

* ನಾರಿನ ಅಂಶವಿರುವ ತರಕಾರಿಗಳು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು ಸಹಾಯಕವಾಗಿವೆ. ತರಕಾರಿಯಲ್ಲಿ Antioxidants ತರುವ ಐಎಎಸ್ & ತ್ವಚೆಯ ಕಾಂತಿ/ಸೌಂದರ್ಯವನ್ನು ಹೆಚ್ಚಿಸುತ್ತದೆ. 

* ತರಕಾರಿಗಳಲ್ಲಿ ಆರೋಗ್ಯಕ್ಕೆ ಅಗತ್ಯವಾದ ಅಮೈನೊ ಅಂಶಗಳು ಅಧಿಕವಾಗಿರುತ್ತವೆ.

 

💥 Also Read: 01 October 2021 Detailed daily Current Affairs in Kannada for All Competitive Exams

💥 Also Read: 02 October 2021 Detailed daily Current Affairs in Kannada for All Competitive Exams

💥 Click here to Read Daily Current Affairs in Kannada

 

ಅಂತರರಾಷ್ಟ್ರೀಯ ಹಿರಿಯ ನಾಗರಿಕರ ದಿನ ಅಕ್ಟೋಬರ್ 1

 

ವಿಶ್ವ ಸಂಸ್ಥೆಯ ಸಾಮಾನ್ಯ International Senior Citizen's Day ಸಭೆಯು 1990 ಡಿಸೆಂಬರ್ 14 ರಂದು ಅಕ್ಟೋಬರ್ 01ನ್ನು ಅಂತಾರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಇದಕ್ಕೆ ಮುಂಚೆಯೇ ವಿಯೆನ್ನಾ ಇಂಟರ್ ನ್ಯಾಷನಲ್ ಪ್ಲಾನ್ ಆಫ್ ಆಕ್ಷನ್ ಆನ್ ಏಜಿಂಗ್ ಹಿರಿಯ ವ್ಯಕ್ತಿಗಳ ದಿನದ ಬಗ್ಗೆ ಉಲ್ಲೇಖಿಸಲಾಗಿತ್ತು. 1982 ರಲ್ಲಿ ಅಸೆಂಬ್ಲಿ ಆನ್ ಏಜಿಂಗ್ ಇದನ್ನು ಅಂಗೀಕರಿಸಿತು. 2002 ರಲ್ಲಿ ಎರಡನೇ ವಿಶ್ವಸಭೆಯು 21ನೇ ಶತಮಾನದಲ್ಲಿ ವಯಸ್ಸಾದವರ ಅವಕಾಶಗಳು ಮತ್ತು ಸವಾಲುಗಳಿಗೆ ಸ್ಪಂದಿಸಲು ಮತ್ತು ಎಲ್ಲಾ ವಯಸ್ಸಿನವರಿಗೂ ಸಮಾಜದ ಅಭಿ ವೃದ್ಧಿಯನ್ನು ಉತ್ತೇಜಿಸಲು ಮ್ಯಾಡ್ರಿಡ್ ಇಂಟರ್ ನ್ಯಾಷನಲ್ ಪ್ಲಾನ್ ಆಫ್ ಆ್ಯಕ್ಷನ್ ಆನ್ ಏಜಿಂಗ್ (Madrid International Plan of Action on Aging) ಅನ್ನು ಅಂಗೀಕರಿಸಿತು.

 

ಪ್ರಚಲಿತ ಘಟನೆಯ ಪ್ರಶೋತ್ತರಗಳು

 

1. ಪ್ರಸ್ತುತ ಜಾರಿಯಲ್ಲಿರುವ ಈ ಕೆಳಗಿನ ಯಾವ ಯೋಜನೆಯನ್ನು ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ.

ಎ) ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ

ಬಿ) ಪಹಲ್ ಯೋಜನೆ

ಸಿ) ಮಧ್ಯಾಹ್ನ ಬಿಸಿಯೂಟ ಯೋಜನೆ 

ಡಿ) ಕುಸುಮ್ ಯೋಜನೆ

 

2, 2021 ನೇ ಸಾಲಿನ ಮಹಾತ್ಮಗಾಂಧಿ ಸೇವಾ ಪ್ರಶಸ್ತಿಗೆ ಈ ಕೆಳಗಿನ ಯಾರು ಭಾಜನರಾಗಿದ್ದಾರೆ?

ಎ) ಮೀರಾಬಾಯಿ ಕೊಪ್ಪಿಕರ್

ಬಿ) ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ಮಠ

ಸಿ) ಎ ಮತ್ತು ಬಿ

ಡಿ) ರಾಕೇಶ್ ಟಿಕಾಯತ್

 

3. ರೈಟ್ ಲೈಕ್ಲಿಹುಡ್ ಪ್ರಶಸ್ತಿ ಸ್ಥಾಪನೆಯಾದ ವರ್ಷ

ಎ) 1969

ಬಿ) 1973

ಸಿ) 1980

ಡಿ) 1968

 

4. ಪ್ಯಮಿಯಾ ಕಿರಿದಾ ಇತ್ತೀಚೆಗೆ ಈ ಕೆಳಗಿನ ಯಾವ ದೇಶದ ಪ್ರಧಾನಮಂತ್ರಿಯಾಗಿ ನೇಮಕಗೊಂಡಿದ್ದಾರೆ?

ಎ) ಆಸ್ಟ್ರೇಲಿಯಾ 

ಬಿ) ಜರ್ಮನ್

ಸಿ) ಜಪಾನ್

ಡಿ) ಬ್ರೆಜಿಲ್

 

5, ರೌಧಾ ಬೌಡೆಂಟ್‌ರವರು ಈ ಕೆಳಗಿನ ಯಾವ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಗೊಂಡಿದ್ದಾರೆ?

ಎ) ಟ್ಯುನಿಶಿಯಾ 

ಬಿ) ಮಲೇಷಿಯಾ

ಸಿ) ಫಿಲಿಫೈನ್ಸ್

ಡಿ) ಫಿನ್‌ಲ್ಯಾಂಡ್

💥 Also Read: 01 October 2021 Detailed daily Current Affairs in Kannada for All Competitive Exams

💥 Also Read: 02 October 2021 Detailed daily Current Affairs in Kannada for All Competitive Exams

💥 Click here to Read Daily Current Affairs in Kannada

 

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section