Type Here to Get Search Results !

07 October 2021 Detailed daily Current Affairs in Kannada for All Competitive Exams

 

07 October 2021 Detailed daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ‌.

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 

ರಾಸಾಯನ ಶಾಸ್ತ್ರ ನೊಬೆಲ್ ಪ್ರಕಟ

2021 ನೇ ಸಾಲಿನ ರಾಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದ್ದು, “ಜರ್ಮನಿಯ ಬೆಂಜಮಿನ್ ಲಿಸ್ಟ್” ಮತ್ತು ಅಮೆರಿಕದ ಡೇವಿಡ್ ಮೆಕ್‌ಮಿಲನ್” ಭಾಜನರಾಗಿದ್ದಾರೆ.

ಪರಮಾಣು ರಚನೆಗಾಗಿ ಅತ್ಯಪೂರ್ವ ಹೊಸ ಪರಿಸರ ಸ್ನೇಹಿ ಸಾಧನ ಕಂಡುಹಿಡಿದಿರುವುದಕ್ಕಾಗಿ ಈ ಪಾರಿತೋಷಕವನ್ನು ಪ್ರಕಟಿಸಲಾಗಿದೆ.

* ಅನೇಕ ಸಂಶೋಧನಾ ವಲಯಗಳು ಹಾಗೂ ಕೈಗಾರಿಕೆಗಳು ಪರಮಾಣು ರಚನೆ ಮಾಡುವ ರಾಸಾಯನಿಕ ಶಾಸ್ತ್ರದ ಸಾಮರ್ಥ್ಯವನ್ನು ಅವಲಂಬಿಸಿರುತ್ತವೆ. ಇಂತಹ ಸಾಮರ್ಥ್ಯದಿಂದ ಸ್ಥಿತಿ ಸ್ಥಾಪಕತ್ವ ಹಾಗೂ ಬೆಲೆಬಾಳುವ ವಸ್ತುಗಳನ್ನು ತಯಾರಿಸಲು ಹಾಗೂ ಬ್ಯಾಟರಿಗಳಲ್ಲಿ ಇಂಧನ ದಾಸ್ತಾನು ಮಾಡಲು & ರೋಗದ ಪ್ರಗತಿಯನ್ನು ತಡೆಯಲು ಅನುಕೂಲವಾಗಲಿದೆ.

ರಾಸಾಯನ ಶಾಸ್ತ್ರ ನೊಬೆಲ್

* ಮೊದಲ ಪ್ರಶಸ್ತಿ - 1901

2020 ನೇ ಸಾಲಿನ ಪ್ರಶಸ್ತಿ ವಿಜೇತರು

1. ಜೆನ್ನಿಫರ್ ಡಾಡ್ತಾ

2. ಇಮ್ಯಾನುಯೆಲ್ ಚಾರ್ಪೆಂಟಿಯರ್


ಗೋಯಿಂಗ್ ಅಪ್ ಕಾರಂತ' ಕೃತಿ ಬಿಡುಗಡೆಗೆ ಸಿದ್ಧತೆ

 

ಕಡಲ ತೀರದ ಭಾರ್ಗವ ಎಂದೇ ಪರಿಚಿತರಾದ ಡಾ.ಕೆ.ಶಿವರಾಮ ಕಾರಂತ ಅವರ ಜೀವನ ಚರಿತ್ರೆ ಕುರಿತು ಅವರ ಮಕ್ಕಳು ಬರೆದಿರುವ “ಗೋಯಿಂಗ್ ಅಪ್ ಕಾರಂತ” ಕೃತಿ ಬಿಡುಗಡೆಗೆ ಸಿದ್ಧತೆಗೊಂಡಿದೆ. ಶಿವರಾಮ ಕಾರಂತ ಅವರ ಮಕ್ಕಳಾದ ಪರಿಸರ ತಜ್ಞ ಉಲ್ಲಾಸ ಕಾರಂತ, ಮಾಳವಿಕಾ ಕಪೂರ್ ಹಾಗೂ ಕ್ಷಮ್‌ರಾವ್ ಅವರು ಈ ಕೃತಿಯನ್ನು ರಚಿಸಿದ್ದಾರೆ. ಈ ಪುಸ್ತಕವನ್ನು “ವೆಸ್ಟ್‌ಲ್ಯಾಂಡ್ ಪ್ರಕಾಶನ” ದ ವತಿಯಿಂದ ಪ್ರಕಟಿಸಲಾಗಿದೆ.  ಶಿವರಾಮ ಕಾರಂತ ಕಡಲತೀರದ ಭಾರ್ಗವ, “ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ ಅನುವಾದಕರಾಗಿ ಖ್ಯಾತಿ ಹೊಂದಿದ್ದಾರೆ.

ಪ್ರಮುಖ ಕೃತಿಗಳು

  • 1. ರಾಷ್ಟ್ರಗೀತೆ ಸುಧಾಕರ
  • 2. ಸೀಳವನಗಳು
  • 3. ಅದೇ ಊರು ಅದೇ ಮರ
  • 4. ಮೈ ಮನಗಳ ಸುಳಿಯಲ್ಲಿ
  • 5. ಮೂಕಜ್ಜಿಯ ಕನಸುಗಳು
  • 6. ಹುಚ್ಚು ಮನಸಿನ ಹತ್ತು ಮುಖಗಳು

 

ಪ್ರಶಸ್ತಿಗಳು

  • 1. ಜ್ಞಾನಪೀಠ ಪ್ರಶಸ್ತಿ - 1977 - ಮೂಕಜ್ಜಿಯ ಕನಸುಗಳು
  • 2. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - 2011
  • 3. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - 1958 (ಯಕ್ಷಗಾನ ಬಯಲಾಟ)
  • 4. ಪಂಪ ಪ್ರಶಸ್ತಿ - 1992
  • 5. ತುಳಸಿ ಸಮ್ಮಾನ್ ಪ್ರಶಸ್ತಿ (ಮಧ್ಯಪ್ರದೇಶ) - 1990

 

ಸುಂದರ್ ಲಾಲ್ ಹೋರಾ ಪ್ರಶಸ್ತಿ ಪ್ರಕಟ

 

ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ 2020ನೇ ಸಾಲಿನ “ಸುಂದರ್ ಲಾಲ್ ಹೋರಾ” ಪ್ರಶಸ್ತಿಗೆ ಬೆಂಗಳೂರು ವಿವಿಯು ಮಾಜಿ ಕುಲಪತಿ ಪ್ರೊ.ಎಚ್.ವಿ.ರಂಗನಾಥ್ ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಮೌಲ್ಯಮಾಪನ & ಮಾನ್ಯತೆ ಮಂಡಳಿಯ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ವಂಶವಾಹಿ & ವಿಕಾಸದ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಹಲವಾರು ಲೇಖನಗಳನ್ನು ಪ್ರಕಟಪಡಿಸಿದ್ದರು.

 

ಅಮೇರಿಕ ಅಂಚೆ ಕಚೇರಿಗೆ ಸಂದೀಪ್ ಸಿಂಗ್ ಹೆಸರು ಮರುನಾಮಕರಣ

 

ಸೇವೆಯಲ್ಲಿದ್ದಾಗಲೆ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಇಂಡೋ-ಅಮೇರಿಕನ್ ಪೊಲೀಸ್ ಅಧಿಕಾರಿ ಹೆಸರನ್ನು ಅಂಚೆ ಕಚೇರಿಗೆ ಮರುನಾಮಕರಣ ಮಾಡುವ ಮೂಲಕ ಅಮೇರಿಕ ಸರ್ಕಾರ ಗೌರವ ಸಲ್ಲಿಸಿದೆ. ಟೆಕ್ಸಾಸ್ ಹೂಸ್ಟನ್ ನಲ್ಲಿರುವ ಹೊವೆಲ್ ರಸ್ತೆಯ ಅಂಚೆ ಕಚೇರಿ ದಿವಂಗತ ಹಿರಿಯ ಅಧಿಕಾರಿ “ಸಂದೀಪ್ ಸಿಂಗ್ ಧಲಿವಾಲ್” ಅವರ ಹೆಸರು ಮರುನಾಮಕರಣ ಮಾಡಲಾಗಿದೆ.

* ಸಂದೀಪ್ ಸಿಂಗ್ ಧಲಿವಾಲ್ ಅವರು ಸೆಪ್ಟಂಬರ್ 27, 2019 ರಂದು ಟೆಕ್ಸಾಸ್ ಹ್ಯಾರಿಸ್ ಕೌಂಟಿಯಲ್ಲಿ ಟ್ರಾಫಿಕ್ ಸ್ಟಾಪ್ ಕೆಲಸದಲ್ಲಿ ತೊಡಗಿದ್ದಾಗ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಸಿಖ್ ಧರ್ಮದ ಟರ್ಬನ್ ಧರಿಸಿ ಪೋಲೀಸ್ ಸೇವೆ ಸಲ್ಲಿಸಿದ ಮೊದಲ ಅಧಿಕಾರಿಯಾಗಿದ್ದರು.

 

ವಿಶ್ವದ ಮೊದಲ ಮಲೇರಿಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಸಮ್ಮತಿ

 

ಮಕ್ಕಳಿಗಾಗಿ ತಯಾರಿಸಲಾಗಿರುವ ವಿಶ್ವದ ಮೊದಲ ಮಲೇರಿಯಾ ಲಸಿಕೆಗೆ “ವಿಶ್ವ ಆರೋಗ್ಯ ಸಂಸ್ಥೆ” ಇತ್ತೀಚೆಗೆ ಅನುಮೋದನೆ ನೀಡಿದೆ.

* ಬ್ರಿಟನ್‌ನ ಸ್ಯಾಕ್ಸೊಸ್ಮಿತ್ ಕ್ಸೈನ್ ಕಂಪೆನಿ ಈ ಲಸಿಕೆ ಉತ್ಪಾದಿಸುತ್ತದೆ. ಇದನ್ನು ಪ್ರಾಯೋಗಿಕವಾಗಿ ಆಫ್ರಿಕಾದ ದೇಶಗಳಾದ ಘಾನಾ, ಕಿನ್ಯಾ & ಮಲಾವಿಗಳಲ್ಲಿ 2019 ರಲ್ಲಿ ಆರಂಭಿಸಲಾಗಿತ್ತು ಈ ಯೋಜನೆ ಯಶಸ್ವಿಯಾಗಿದ್ದರಿಂದ ವಿಶ್ವ ಆರೋಗ್ಯ ಸಂಸ್ಥೆ” ಮಲೇರಿಯಾ ಲಸಿಕೆಗೆ ಮಾನ್ಯತೆ ನೀಡಿದೆ.

* ಇದು ಸಹ ಕೋವಿಡ್ ಲಸಿಕೆಯಂತೆ ಶಕ್ತಿಶಾಲಿಯಾದ ಲಸಿಕೆಯಾಗಿದ್ದು, ಮಲೇರಿಯಾ ವಿರುದ್ಧ ಹೋರಾಡಲು ಸಹಕಾರಿಂಟಾಗಲಿದೆ. ಆದರೆ ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗುವುದಿಲ್ಲ ಎಂದು ಸಹ ಡಬ್ಲ್ಯುಹೆಚ್ಓ ಸ್ಪಷ್ಟಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ:

  • ಸ್ಥಾಪನೆ – ಏಪ್ರಿಲ್ 7, 1948
  • ಕೇಂದ್ರ ಕಚೇರಿ - ಜಿನೇವಾ (ಸ್ವಿಟ್ಟರ್‌ಲೆಂಡ್)
  • ಅಧ್ಯಕ್ಷ - ಡಾ. ತೆಡೋಸ್ ಅಧಾನಮ್ ಗೆಬಿಯೆಸಸ್

 

MADAD APP ಬಿಡುಗಡೆ

 

ಆಪ್ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಭಿವೃದ್ಧಿ ಪಡಿಸಿದೆ. ವಿದೇಶಗಳಲ್ಲಿ ಭಾರತೀಯ ರಾಯಭಾರಿ ಕಚೇರಿಗಳು ಒದಗಿಸುವ ಸೇವೆಯ ಮಾಹಿತಿಯನ್ನು ಈ ಆಪ್ ಬಳಕೆದಾರರಿಗೆ ನೀಡುತ್ತದೆ.

ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಈ ಆಪ್ ಹೆಚ್ಚು ಉಪಯುಕ್ತವಾಗಿದೆ. ಭಾರತೀಯ ಕೆಲಸಗಾರರ ಮೇಲಾಗುವ ದೌರ್ಜನ್ಯ ಇತ್ಯಾದಿ ವಿಷಯಗಳ ಬಗ್ಗೆ ಗಮನಹರಿಸಲು ಇದು ನೆರವಾಗುತ್ತದೆ. ಆದರೆ, ವೀಸಾಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಇದು ನೀಡುವುದಿಲ್ಲ.

 ಇವುಗಳನ್ನೂ ಓದಿ 












Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section