Breaking

Saturday, 6 November 2021

05 November 2021 Detailed Daily Current Affairs in Kannada for All Competitive Exams

            

05 November 2021 Detailed Daily Current Affairs in Kannada for All Competitive Exams


Daily Detailed Current Affairs in Kannada for All Competitive Exams www.kpscnotesmcqs.in



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ.

💥 Click here to Read Daily Current Affairs in Kannada  

ಜೀವಮಾನ ಸಾಧನೆ ಪ್ರಶಸ್ತಿಗೆ ಡಾ. ಟಿ. ಆರ್. ಅನಂತರಾಮು ಆಯ್ಕೆ


ವಿಜ್ಞಾನ ಲೇಖಕ ಡಾ. ಟಿ. ಆರ್. ಅನಂತರಾಮು ಅವರನ್ನು ಕರ್ನಾಟಕ ವಿಜ್ಞಾನ & ತಂತ್ರಜ್ಞಾನ ಅಕಾಡೆಮಿಯ (ಕೆಎಸ್‌ಟಿಎ) ಜೀವಮಾನ ಸಾಧನೆಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ವಿಜ್ಞಾನ, ತಂತ್ರಜ್ಞಾನ, ಕೃಷಿ, ಎಂಜಿನೀಯರಿಂಗ್, ವೈದ್ಯಕೀಯ ವಿಷಯಗಳನ್ನು ಕನ್ನಡದಲ್ಲಿ ಪ್ರಚುರಪಡಿಸಿ ಜನಪ್ರಿಯಗೊಳಿಸುವಲ್ಲಿ ಅನಂತರಾಮು ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ 2021ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಚಿನ್ನದ ಪದಕ, ರೂ. 50 ಸಾವಿರ ನಗದುನ್ನು ಒಳಗೊಂಡಿದೆ.


ಕುಮಾರ್ ಗೋವಿಂದ್‌ಗೆ ಅತ್ಯುತ್ತಮ ನಟ ಪ್ರಶಸ್ತಿ


ನಟ ಕುಮಾರ್ ಗೋವಿಂದ್ ಅವರಿಗೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಅಮೇರಿಕ ಡಲ್ಲಾಸ್ ಆ್ಯಕ್ಟಿಂಗ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ 2016ರಿಂದ ಈಚೆಗೆ ನಿರ್ಮಾಣಗೊಂಡ ಚಿತ್ರಗಳನ್ನು ಆಹ್ವಾನಿಸಲಾಗಿತ್ತು. ಈ ಚಿತ್ರೋತ್ಸವದಲ್ಲಿ ನಟ-ನಟಿಯರ ಅಭಿನಯಕ್ಕೆ ಮಾತ್ರ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇಡೀ ಚಿತ್ರವನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ.


ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿದ್ದ ಮೂಕನಾಯಕ ಕನ್ನಡ ಚಿತ್ರವು ಈ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಧಿಕೃತ ಪ್ರವೇಶ ಪಡೆದು ಸ್ಪರ್ಧೆಯ ಅಂತಿಮ ಸುತ್ತು ತಲುಪಿತ್ತು. ಈ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ನಟ ಕುಮಾರ್ ಗೋವಿಂದ್ ಅವರಿಗೆ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸಂದಿದೆ.


* ಮೂಕನಾಯಕ ಚಿತ್ರವು ಮಾತು ಬಾರದ ಚಿತ್ರ ಕಲಾವಿದನ ಬದುಕಿನ ಸುತ್ತ ಸುತ್ತುವ ಕಥೆಯನ್ನು ಒಳಗೊಂಡಿದೆ. ಸಮಾಜದ ಆಗು ಹೋಗುಗಳನ್ನು ತನ್ನ ಚಿತ್ರ ರಚನೆಯ ಮುಖಾಂತರ ಅಭಿವ್ಯಕ್ತಿಸುವ ಕಾಳಜಿಯ ಕಲಾವಿದನ ಪಾತ್ರವನ್ನು ಕುಮಾರ್ ಗೋವಿಂದ್ ನಿರ್ವಹಿಸಿದ್ದಾರೆ. ಕಲಾವಿದನ ಸೋದರಿ ಪಾತ್ರದಲ್ಲಿ ರೇಖಾ ನಟಿಸಿದ್ದು, ಅವರಿಗೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಸಂದಿದೆ.

ಸುದ್ದಿಯಲ್ಲಿರುವ ಜಾಗತಿಕ ತಾಪಮಾನ


ತಾಪಮಾನ ಬಿಕ್ಕಟ್ಟು ಪ್ರಸ್ತುತ ಗ್ಲಾಸ್ಕೋದಲ್ಲಿ ನಡೆದ ಜಾಗತಿಕ ಹವಾಮಾನ ಶೃಂಗಸಭೆಯ (ಸಿಒಪಿ26) ಕೇಂದ್ರ ಬಿಂದುವಾಗಿದೆ. ತಾಪಮಾನ ಬದಲಾವಣೆಗೆ ಕಾರಣಗಳು & ಅದರ ಪರಿಣಾಮಗಳ ಕುರಿತು ಗ್ಲಾಸ್ಟೋದಲ್ಲಿ ನಡೆಯುತ್ತಿರುವ 26ನೇ ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಗಂಭೀರವಾಗಿ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ತಾಪಮಾನ ಏರಿಕೆಯಿಂದಾಗಿ ನಮ್ಮ ಭೂಮಿಯ ಮೇಲೆ ಯಾವ ಪ್ರಮುಖ ಅಂಶಗಳು ಪರಿಣಾಮ ಬೀರುತ್ತಿವೆ ಎನ್ನುವುದು ಕುತೂಹಲಕಾರಿಯಾಗಿದೆ.


ಇಂಗಾಲ ಹೊರಸೂಸುವಿಕೆ


ಮುಂದಿನ 10 ರಿಂದ 30 ವರ್ಷಗಳಲ್ಲಿ ತಮ್ಮ ಆರ್ಥಿಕತೆಯನ್ನು ಇಂಗಾಲ ತಟಸ್ಥವನ್ನಾಗಿ ಪರಿವರ್ತಿಸಲು ಜಾಗತಿಕ ಸರ್ಕಾರಗಳು ಪ್ರತಿಜ್ಞೆ ಕೈಗೊಂಡಿವೆ. ಅಮೆರಿಕ & ಯುರೋಪ್‌ನಲ್ಲಿ ಹೊರಸೂಸುವಿಕೆ ಸ್ಥಿರವಾಗಿದ್ದರೆ ಏಷ್ಯಾ ಹಾಗೂ ಆಫ್ರಿಕಾದಲ್ಲಿ ಹೆಚ್ಚಾಗುತ್ತಿದ್ದು, ಇಂಗಾಲ ತಟಸ್ಥತೆಗೆ ಎಷ್ಟು ಆರ್ಥಿಕತೆ ಅಗತ್ಯವಿದೆ ಎಂಬುದು ಗಮನಾರ್ಹ. ತಲಾ ಇಂಗಾಲ ಹೊರಸೂಸುವಿಕೆ ದೃಷ್ಟಿಕೋನದಿಂದ ಗಮನಿಸಿದಾಗ, ಅಮೆರಿಕ & ಆಸ್ಟ್ರೇಲಿಯಾದಂತಹ ಪಾಶ್ಚಿಮಾತ್ಯ ರಾಷ್ಟ್ರಗಳು ಸೇರಿ ರಷ್ಯಾ, ಅರೇಬಿಯಾ, ಒಮನ್, ಕತಾರ್ & ಮಂಗೋಲಿಯಾದಂತಹ ಜಗತ್ತಿನ ಇತರ ರಾಷ್ಟ್ರಗಳಲ್ಲಿ ಜನಸಂಖ್ಯೆ ಗಾತ್ರದಲ್ಲಿ ಇಂಗಾಲ ಹೊರಸೂಸುವಿಕೆ ಪ್ರಮಾಣವು ವಿಭಿನ್ನವಾಗಿದೆ.


* ಇಂಗಾಲ ಹೊರಸೂಸುವಿಕೆ ತಗ್ಗಿಸುವಲ್ಲಿ ಯಾರು ಹೆಚ್ಚು ಕೊಡುಗೆ ನೀಡಬೇಕೆಂಬ ಬಗ್ಗೆ ತಜ್ಞರು ಚರ್ಚಿಸಿದ್ದಾರೆ. ಅದರಂತೆ, ಇದಕ್ಕೆ ಎಲ್ಲ ರಾಷ್ಟ್ರಗಳು ಸಮಾನವಾಗಿ ಜವಾಬ್ದಾರವಲ್ಲ. ಹೀಗಾಗಿ ಇಂಗಾಲ ಹೊರಸೂಸುವಿಕೆ ತಟಸ್ಥಗೊಳಿಸಲು ಆರ್ಥಿಕ ಬಲ & ಸಂಪತ್ತನ್ನು ಸಮಾನವಾಗಿ ಪರಿಗಣಿಸಲಾಗದು. ಹೆಚ್ಚಿನ ಆದಾಯ & ತಲಾ ಹೊರಸೂಸುವಿಕೆ ಸರಾಸರಿ ಪ್ರಮಾಣ ಗಣನೆಗೆ ತೆಗೆದುಕೊಂಡು ಅದರ ಆಧಾರದಲ್ಲಿ ಹೊರಸೂಸುವಿಕೆ ತಗ್ಗಿಸುವ ಹೋರಾಟದಲ್ಲಿ ರಾಷ್ಟ್ರಗಳನ್ನು ಒಗ್ಗೂಡಿಸಲಾಗುತ್ತದೆ. ಪ್ರತಿ ರಾಷ್ಟ್ರಗಳು ಯಾವ ರೀತಿ ವ್ಯಾಪಕವಾಗಿ ಬದಲಾಗುತ್ತಿವೆ ಎಂಬುದನ್ನು ಸಹ ಬಹಿರಂಗಪಡಿಸಲಾಗಿದ್ದು, ಹೆಚ್ಚಿನ ಆದಾಯವಿರುವ ರಾಷ್ಟ್ರದಲ್ಲಿ ಹೊರಸೂಸುವಿಕೆ ವ್ಯಾಪಕವಾಗಿ ಹರಡಿದೆ ಎನ್ನುವುದನ್ನು ಕಂಡುಕೊಳ್ಳಲಾಗಿದೆ. ಕತಾರ್‌ನಂತಹ ಹೆಚ್ಚಿನ ಆದಾಯದ ರಾಷ್ಟ್ರಗಳ ಸಮಾನ ಆದಾಯ ಗುಂಪಿನಲ್ಲಿರುವ ಜರ್ಮನಿ & ಫ್ರಾನ್ಸ್‌ನಂತಹ ರಾಷ್ಟ್ರಗಳಿಗಿಂತಲೂ ತಲಾ ಇಂಗಾಲ ಹೊರಸೂಸುವಿಕೆಯನ್ನು ಹೆಚ್ಚಾಗಿಸಿದೆ. ಮತ್ತೊಂದೆಡೆ ಭಾರತ & ಚೀನಾದ೦ತಹ ತಲಾ ಹೊರಸೂಸುವಿಕೆ ಪ್ರಮಾಣ ಕಡಿಮೆಯಿರುವ ರಾಷ್ಟ್ರಗಳು ತಮ್ಮ ನಿರ್ಧಾರದ ಮೂಲಕ ದೊಡ್ಡ ಪರಿಣಾಮ ಬೀರಿವೆ.

ಹಸಿರುಮನೆ ಅನಿಲದ ಪ್ರಮುಖ ಮೂಲಗಳು


ಮಿಥೇನ್ & ನೈಟ್ರಸ್ ಆಕ್ಸೈಡ್ ಸೇರಿದಂತೆ ಒಟ್ಟಾರೆ ಹಸಿರುಮನೆ ಅನಿಲದ ಮೇಲೆ  ಇಂಗಾಲ ಹೊರಸೂಸುವಿಕೆ ಪ್ರಮಾಣದಲ್ಲಿ ಕೈಗಾರಿಕೆ ವಲಯದ ಪಾಲು ಅತಿ ಹೆಚ್ಚಿಸಲಾಗಿದೆ. ಶೇ. 20 ಕೃಷಿ, ಅರಣ್ಯ & ಭೂಮಿ ಬಳಕೆ ಬದಲಾವಣೆ ಹಸಿರು ಮನೆ ಅನಿಲ ಹೊರಸೂಸುವಿಕೆಯ ಎರಡನೇ ಅತಿ ದೊಡ್ಡ ಮೂಲವಾಗಿದೆ.


ಕಳೆದ 2 ದಶಕದಲ್ಲಿ ವಾರ್ಷಿಕ ಮರ ನಾಶ ಪ್ರಮಾಣವು ಹೆಚ್ಚಾಗಿದೆ. ಅದರಂತೆ, 2020ರಲ್ಲಿ ಜಗತ್ತಿನ ಒಟ್ಟಾರೆ ಅರಣ್ಯನಾಶದಲ್ಲಿ ರಷ್ಯಾ, ಬ್ರೆಜಿಲ್ & ಅಮೆರಿಕ ಅತಿ ದೊಡ್ಡ ಪಾಲುದಾರ ರಾಷ್ಟ್ರಗಳಾಗಿವೆ. ಇದೇ ವೇಳೆ 1990-2000 ದಶಕಕ್ಕೆ ಹೋಲಿಸಿದಾಗ ಅರಣ್ಯ ನಾಶ ಪ್ರಮಾಣವು ಕಡಿಮೆಯಾಗಿದೆ. ಅರಣ್ಯ ನಾಶವು ಕೇವಲ ಇಂಗಾಲ ಹೊರಸೂಸುವಿಕೆಗೆ ಮಾತ್ರ ಸಮಸ್ಯೆದಾಯಕವಾಗಿಲ್ಲ. ಬದಲಿಗೆ ಮರಗಳು ವಾತಾವರಣದಲ್ಲಿ ಸ್ವತ: ಆಮ್ಲಜನಕ ಬಿಡುಗಡೆ ಮಾಡುತ್ತವೆ. ಆದರೂ ವಾತಾವರಣದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಅರಣ್ಯಗಳು & ಮಣ್ಣು ಹೀರಿಕೊಳ್ಳುವುದರಿಂದ ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಅರಣ್ಯಗಳು ಪ್ರಮುಖ ಅಸ್ತ್ರವಾಗಿ ಪರಿಗಣಿಸಲ್ಪಟ್ಟಿವೆ.

 ಇವುಗಳನ್ನೂ ಓದಿ 



ಇಂಗಾಲ ಹೊರಸೂಸುವಿಕೆ ಏರಿಕೆಗೆ ಕಾರಣ


ಕೈಗಾರೀಕರಣದ ಆರಂಭದ ದಿನಗಳಿಂದಲೂ ಕಲ್ಲಿದ್ದಲಿನಂತಹ ನೈಸರ್ಗಿಕ ಇಂಧನಗಳನ್ನು ಸುಡುವುದರಿಂದ ಇಂಗಾಲ ಹೊರಸೂಸುವಿಕೆ ಹೆಚ್ಚಾಗಿದೆ.ನಂತರದ ದಿನಗಳಲ್ಲಿ ವಾಹನಗಳು ಸಹ ಇದಕ್ಕೆ ಸೇರ್ಪಡೆಯಾಗಿದೆ. ಮನುಷ್ಯರಿಂದ ಉತ್ಪನ್ನವಾಗುವ ಅತಿ ಹೆಚ್ಚಿನ ಇಂಗಾಲದ ಡೈ ಆಕ್ಸಿಡ್‌ನ್ನು ಭೂಮಿ ನೈಸರ್ಗಿಕವಾಗಿ ಹೀರಿಕೊಳ್ಳುತ್ತದೆ. ಆದರೆ, ಮನುಷ್ಯನ ಜೀವನಶೈಲಿ ಬದಲಾದಂತೆ, ಭೂಮಿಯ ಜೈವಿಕ ವ್ಯವಸ್ಥೆ ನೈಸರ್ಗಿಕವಾಗಿ ಹೀರಿಕೊಳ್ಳುವುದಕ್ಕಿಂತಲೂ ಇಂಗಾಲ ಹೊರಸೂಸುವಿಕೆ & ಹಸಿರುಮನೆ ಅನಿಲಗಳು ಸಹ ಮತ್ತಷ್ಟು ಹೆಚ್ಚಾಗಿವೆ.


ಜಗತ್ತಿನ ತಾಪಮಾನ


ಇಂಗಾಲ ಹೊರಸೂಸುವಿಕೆಯ ಏರಿಕೆಯಿಂದಾಗಿ ವಾತಾವರಣದಲ್ಲಿ ಸೂರ್ಯನ ಬೆಳಕಿನ ಮೇಲೆ ಪರಿಣಾಮ ಬೀರಿದೆ. 20ನೇ ಶತಮಾನಕ್ಕೆ ಹೋಲಿಸಿದರೆ, ಕಳೆದ 5 ವರ್ಷಗಳಲ್ಲಿ ಸರಾಸರಿ ಜಾಗತಿಕ ತಾಪಮಾನವು ಸರಿ ಸುಮಾರು 1 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ. ಸ್ಥಳೀಯವಾಗಿ ಗಮನಿಸಿದಾಗ ಈ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯೂ ಆಗಬಹುದು. ಅಮೇರಿಕದ ಹವಾಮಾನ ಸಂಶೋಧನಾ ಸಂಸ್ಥೆಯಾದ ರಾಷ್ಟ್ರೀಯ ಸಾಗರ & ವಾಯುಮಂಡಲ ಆಡಳಿತ (ಎನ್‌ಒಎಎ) ಪ್ರಕಾರ, ಕಳೆದ 140 ವರ್ಷಗಳಲ್ಲಿ ಸಾಗರ ಮಟ್ಟವು 25 ಸೆಂಟಿಮೀಟರ್‌ಗಳಷ್ಟು (9.8 ಇಂಚು) ಹೆಚ್ಚಾಗಿದೆ. ಕಳೆದ 25 ವರ್ಷದಲ್ಲಿಯೇ ಈ ಪ್ರಮಾಣದ ಮೂರನೇ ಒಂದು ಭಾಗದಷ್ಟು ಏರಿಕೆಯಾಗಿದೆ ಎನ್ನುವುದು ಗಮನಾರ್ಹ. ಜಗತ್ತಿನಾದ್ಯಂತ ಸಾಗರ ಮಟ್ಟವು ಏರಿಕೆಯಾಗುತ್ತಿದೆ. ಆದರೆ, ಬೇರೆ ಪ್ರದೇಶಗಳಿಗೆ ಹೋಲಿಸಿದರೆ, ತಾಪಮಾನ ಹೆಚ್ಚುತ್ತಿರುವುದರಿಂದಾಗಿ ಆರ್ಕ್ಟಿಕ್‌ನಲ್ಲಿ ಸಾಗರ ಮಟ್ಟ ಉಳಿದೆಡೆಗಿಂತ ಹೆಚ್ಚಾಗಿದೆ.

ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆ


ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ರಾಹುಲ್ ಅವರನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಈ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಣೆ ನೀಡಿದೆ.


* ಸುಲಕ್ಷಣಾ ನಾಯ್ಕ & ಆರ್. ಪಿ. ಸಿಂಗ್ ಅವರಿದ್ದ ಕ್ರಿಕೆಟ್ ಸಲಹಾ ಸಮಿತಿ ರಾಹುಲ್ ದ್ರಾವಿಡ್ ಅವರನ್ನು ಅವಿರೋಧವಾಗಿ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಸಂದರ್ಭದಲ್ಲಿ ದ್ರಾವಿಡ್ ಕೋಚ್ ಆಗಿ ಕಾರ್ಯಾರಂಭ ಮಾಡಲಿದ್ದಾರೆ' ಪ್ರಸ್ತುತ ನಡೆಯುತ್ತಿರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಂತರ ಮುಖ್ಯ ಕೋಚ್ ರವಿಶಾಸ್ತ್ರಿಯವರ ಕಾರ್ಯಾವಧಿಯು ಮುಕ್ತಾಯಗೊಳ್ಳಿದೆ. ಈ ಸ್ಥಾನಕ್ಕಾಗಿ ಅಭ್ಯರ್ಥಿಯ ಆಯ್ಕೆಗಾಗಿ ಅಕ್ಟೋಬರ್ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು.


* ರವಿ ಶಾಸ್ತ್ರಿ ಮಾರ್ಗದರ್ಶನದಲ್ಲಿ ತಂಡವು ಹಲವು ಮಹತ್ವದ ಸಾಧನೆಗಳನ್ನು ಮಾಡಿದೆ. ಇದೇ ಉತ್ತಮ ಕಾರ್ಯವನ್ನು ಮುಂದುವರಿಸುವ ದ್ರಾವಿಡ್ 164 ಟೆಸ್ಟ್, 344 ಅಂತರರಾಷ್ಟ್ರೀಯ ಏಕದಿನ & 298 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕರೂ ಆಗಿದ್ದರು.

* ನಿವೃತ್ತಿಯ ನಂತರ ಭಾರತ ಎ, 19 ವರ್ಷದೊಳಗಿನವರ ತಂಡಗಳಿಗೆ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

“ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್" ಪರೀಕ್ಷೆ ಯಶಸ್ವಿ


ರಕ್ಷಣಾ ಸಂಶೋಧನೆ & ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ, ವಿಮಾನದಲ್ಲಿ ಬಳಸಬಹುದಾದ 'ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್ ಬಾಂಬ್ ಅನ್ನು ರಾಜಸ್ಥಾನದ ಜೈಸರ್‌ನಲ್ಲಿ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ವಿಮಾನದ ಮೂಲಕ ಉಡಾಯಿಸಬಹುದಾದ ಬಾಂಬ್‌ನ್ನು ಡಿಆರ್‌ಡಿಒ & ಭಾರತೀಯ ವಾಯುಪಡೆಯು ಜಂಟಿಯಾಗಿ ಪರೀಕ್ಷೆಗೆ ಒಳಪಡಿಸಿವೆ.


ಅಕ್ಟೋಬರ್ 28ರಂದು & ನವೆಂಬರ್ 3ರಂದು ಎರಡು ಬಾರಿ ಬಾಂಬ್‌ನ್ನು ಪರೀಕ್ಷಿಸಲಾಗಿದೆ. ಮೊದಲು ಉಪಗ್ರಹ ಆಧರಿತ ಪಥದರ್ಶಕದ ನೆರವಿನಿಂದ ಪರೀಕ್ಷೆ ನಡೆಸಲಾಗಿತ್ತು. ಎರಡನೇ ಬಾರಿ ಎಲೆಕ್ಟ್ರೋ-ಆಪ್ಟಿಕಲ್ ಸಂವೇಧಕಗಳ ನೆರವಿನಿಂದ ಪರೀಕ್ಷೆ ನಡೆಸಲಾಯಿತು. ಎರಡೂ ಪರೀಕ್ಷೆಗಳಲ್ಲಿ ಬಾಂಬ್ ತನ್ನ ಗುರಿಯನ್ನು ಕರಾರುವಾಕ್ಕಾಗಿ ಧ್ವಂಸ ಮಾಡಿದೆ.

* ಈ ಬಾಂಬ್, 100 ಕಿ.ಮೀ. ವರೆಗಿನ ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ಇಂತಹ ಬಾಂಬ್‌ನ್ನು ಎಲಕ್ಟ್ರೋ-ಆಪ್ಟಿಕಲ್ ಸಂವೇದಕ ತಂತ್ರಜ್ಞಾನ ಬಳಸಿ, ವಿಮಾನದ ಮೂಲಕ ಪರೀಕ್ಷೆಗೆ ಒಳಪಡಿಸಿದ್ದು ಇದೇ ಮೊದಲು.



 ಇವುಗಳನ್ನೂ ಓದಿ 



 ಇವುಗಳನ್ನೂ ಓದಿ 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Also Read: 12 October 2021 Detailed daily Current Affairs in Kannada for All Competitive Exams  

💥 Also Read: 13 October 2021 Detailed daily Current Affairs in Kannada for All Competitive Exams  

💥 Also Read: 14, 15,  16 and 17 October 2021 Detailed daily Current Affairs in Kannada for All Competitive Exams  

💥 Also Read: 18 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 














No comments:

Post a Comment

Important Notes

Random Posts

Important Notes

Popular Posts

Top-50 General Knowledge (GK) Question Answers in Kannada for All Competitive Exams-05

Top-50 General Knowledge (GK) Question Answers in  Kannada for All Competitive Exams-05 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's El...

Best General Knowledge MCQs in Kannada for All Competitive Exams-01

Best General Knowledge MCQs in  Kannada for All Competitive Exams-01 1. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ Show Answer ಎ) ಮಿಚೆಲ್ಲಿ 2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ ಡಿ) ನಾಲ್ಕನೇ ಸೋಮೇಶ್ವರ Show Answer ಸಿ) ಎರಡನೇ ದೇವರಾಯ 4. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ ಸಿ) ಕೊಲಂಬಿಯಾ  ಡಿ) ಚೀನಾ Show Answer ಬಿ) ಬಲ್ಗೇರಿಯಾ 5. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ Show Answer ಎ) ಸೋಡಿಯಂ 6. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ Show Answer ಬಿ) ಸೋಡಿಯಂ ಹೈಡ್ರಾಕ್ಸೆಡ್ 7. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ ಸಿ) ಪಟಿಯಾಲ ಡಿ) ವಿಜಯವಾಡ Show Answer ಬಿ) ಡಾರ್ಜಿಲಿಂಗ್ 8, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ)...

Indian Constitution Most Important Question Answers in Kannada For All Competitive Exams

ಭಾರತದ ಸಂವಿಧಾನದ ಪ್ರಶ್ನೋತ್ತರಗಳು ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತದ ಸಂವಿಧಾನ ದ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಭಾರತೀಯ ಸಂವಿಧಾನದ ಜ್ಞಾನ ಇರಬೇಕಾದದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯ ಸಂವಿಧಾನ ದ ಹಲವಾರು ಮಹತ್ವದ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇವುಗಳು ನಿಮ್ಮ ಅಧ್ಯಯನಕ್ಕೆ ಸಹಕಾರಿಯಾಬಹುದೆಂಬುದು ನಮ್ಮ ಮಹದಾಶಯ..!! 1. ಸಂವಿಧಾನ ಎಂದರೇನು? > ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಮೂಲ ನಿಯಮಗಳ ದಾಖಲೆಗಳು 2. ಸಂವಿಧಾನ ಎಂಬ ಪದದ ಮೂಲ ಯಾವುದು? > ಕಾನ್ಸ್ಟಿಟ್ಯೂಟ್ 3. ‘ಕಾನ್ಸ್ಟಿಟ್ಯೂಟ್’ ಅರ್ಥವೇನು? > ನಿಯೋಜಿಸು, ಸಂಯೋಜಿಸು ಮತ್ತು ವಿಧಿವತ್ತಾಗಿ ಸ್ಥಾಪಿಸು ಎಂದರ್ಥ 4. ಸಂವಿಧಾನಾತ್ಮಕ ಆಡಳಿತವು ಮೊಟ್ಟ ...

03rd January 2025 Daily Current Affairs Quiz in Kannada for All Competitive Exams

          03rd January 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-03rd January 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

02nd January 2025 Daily Current Affairs Quiz in Kannada for All Competitive Exams

          02nd January 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-02nd January 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs