Breaking

Wednesday, 6 October 2021

03, 04 October 2021 Detailed daily Current Affairs in Kannada for All Competitive Exams

 

03, 04 October 2021 Detailed daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ‌.

💥 Also Read: 01 October 2021 Detailed daily Current Affairs in Kannada for All Competitive Exams

💥 Also Read: 02 October 2021 Detailed daily Current Affairs in Kannada for All Competitive Exams

💥 Click here to Read Daily Current Affairs in Kannada

 

ವಿಶ್ವ ಪ್ರಾಣಿ ದಿನ : ಅಕ್ಟೋಬರ್ -04

ವಿಶ್ವ ಪ್ರಾಣಿ ದಿನವು ಪ್ರಾಣಿಗಳ ಹಕ್ಕುಗಳ ರಕ್ಷಣೆ ಹಾಗೂ ಅವುಗಳ ಕ್ಷೇಮಾಭಿವೃದ್ಧಿಗಾಗಿ ಕ್ರಿಯಾಬದ್ಧರಾಗುವ ದಿನ. ಇದನ್ನು ಅಕ್ಟೋಬರ್ 4ರಂದು ಆಚರಿಸಲಾಗುತ್ತದೆ.

§  ಫ್ರಾನ್ಸಿಸ್ ಆಫ್ ಅಸ್ಸಿಸಿ ಎಂಬ ಸಂತ ಪ್ರಾಣಿಗಳ ಪೋಷಣೆಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟಿದ್ದ. ಆ ಸಂತನ ಹಬ್ಬದ ದಿನವನ್ನೇ ವಿಶ್ವ ಪ್ರಾಣಿ ದಿನವೆಂದು ಆಚರಿಸಲಾಗುತ್ತದೆ.

§  ಸಮಾಜದಲ್ಲಿ ಪ್ರಾಣಿಗಳ ಸ್ಥಾನಮಾನವನ್ನು ಹೆಚ್ಚಿಸುವ ಮೂಲಕ, ವಿಶ್ವಾದ್ಯಂತ ಅವುಗಳ ಪೋಷಣೆಯ ಮಾನದಂಡಗಳನ್ನು ಸುಧಾರಿಸುವುದು ಈ ದಿನದ ಧೈಯವಾಗಿದೆ.

§  ಜಗತ್ತಿನಾದ್ಯಂತವಿರುವ ಪ್ರಾಣಿ ಕಲ್ಯಾಣ ಆಂದೋಲನಗಳನ್ನು ಒಟ್ಟುಗೂಡಿಸುವುದು & ನಾವು ವಾಸಿಸುವ ಜಗತ್ತನ್ನು ಎಲ್ಲಾ ಪ್ರಾಣಿಗಳಿಗೆ ಉತ್ತಮ ಮತ್ತು ಸುರಕ್ಷಿತ ಸ್ಥಳವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ದಿನಾಚರಣೆಯು ಜಾಗೃತಿ ಮೂಡಿಸುತ್ತದೆ.

§  ವಿಭಿನ್ನ ರಾಜಕೀಯ ಪದ್ಧತಿ, ನಂಬಿಕೆ, ಧರ್ಮ ಅಥವಾ ರಾಷ್ಟ್ರೀಯತೆಯನ್ನು ಲೆಕ್ಕಿಸದೇ ವಿಶ್ವ ಪ್ರಾಣಿ ದಿನವನ್ನು ಪ್ರತಿ ರಾಷ್ಟ್ರದಲ್ಲೂ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ.

§  ಹೆಚ್ಚಿದ ಅರಿವು & ಶಿಕ್ಷಣದ ಮೂಲಕ, ಪ್ರಾಣಿಗಳನ್ನು ಯಾವಾಗಲೂ ಸಂವೇದನಾಶೀಲ ಜೀವಿಗಳೆಂದು ಅಂಗೀಕರಿಸುವ ಜಗತ್ತನ್ನು ರಚಿಸಲು ನಾವು ಸಮರ್ಥರಾಗಿದ್ದೇವೆ ಎಂಬುದನ್ನು ಸಾರುತ್ತದೆ ಈ ವಿಶ್ವ ಪ್ರಾಣಿ ದಿನ.

ದಿನಾಚರಣೆಯ ಹಿನ್ನೆಲೆ

ಜರ್ಮನಿಯ ಬರ್ಲಿನ್‌ನಲ್ಲಿ 1925ರಲ್ಲಿ ಮಾರ್ಚ್ 24ರಂದು ಮೊಟ್ಟಮೊದಲ ಬಾರಿಗೆ ಹೆನ್ರಿಕ್ ಜಿಮ್ಮರ್ ಮ್ಯಾನ್ ವಿಶ್ವ ಪ್ರಾಣಿ ದಿನವನ್ನು ಪ್ರಾರಂಭಿಸಿದರು. ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಸಿ ಹಬ್ಬದ ದಿನದ ಜೊತೆ ವಿಶ್ವ ಪ್ರಾಣಿ ದಿನವನ್ನು ಹೊಂದಾಣಿಕೆ ಮಾಡಲು 1929ರಲ್ಲಿ ಅಕ್ಟೋಬರ್ 4ಕ್ಕೆ ಸ್ಥಳಾಂತರಿಸಲಾಯಿತು.

ಮೊದಲಿಗೆ ಅವರು ಜೆಕೋಸ್ಕೊವಾಕಿಯಾ ಸ್ವಿಟ್ಟರ್‌ಲ್ಯಾಂಡ್, ಅಸ್ಪಿಯಾ & ಜರ್ಮನಿಯಲ್ಲಿ ಆಚರಿಸಲಾಗುತ್ತಿತ್ತು. ಪ್ರತಿ ವರ್ಷ ಜಿಮ್ಮರ್‌ಮ್ಯಾನ್ ವಿಶ್ವ ಪ್ರಾಣಿ ದಿನದ ಆಚರಣೆಗೆ ಪ್ರೋತ್ಸಾಹ ನೀಡಲು ಹೆಚ್ಚಿನ ಪ್ರಯತ್ನ ವಹಿಸಿದ ಫಲಿತಾಂಶವಾಗಿ, ಮೇ 1931ರಲ್ಲಿ ಅವರು ಇಟಲಿಯ ಫ್ಲಾರೆನ್ಸ್‌ನಲ್ಲಿ ನಡೆದ ಐಎಸ್‌ಆರ್ ಸಮಾವೇಶದಲ್ಲಿ 4 ಅಕ್ಟೋಬರ್‌ನ್ನು ವಿಶ್ವ ಪ್ರಾಣಿ ದಿನವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಯಿತು.

ಜೆಜೆಎಮ್ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ

2024 ರೊಳಗೆ ದೇಶದ ಪ್ರತಿ ಹಳ್ಳಿಗೂ ನಿರಂತರ ಶುದ್ಧ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್‌ನ (ಜೆಜೆಎಮ್) ಭಾಗವಾಗಿರುವ ಮೊಬೈಲ್ ಅಪ್ಲಿಕೇಷನ್‌ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ಕಲ್ಪಿಸುವ ಕಾರ್ಯಕ್ಕೆ ತಂತ್ರಜ್ಞಾನದ ಸ್ಪರ್ಶ ನೀಡುವುದೇ ಆ್ಯಪ್‌ನ ಗುರಿ.

ಯಾರಿಂದ ನಿರ್ವಹಣೆ

ಕೇಂದ್ರದ ಜಲಶಕ್ತಿ ಇಲಾಖೆ ಒಟ್ಟು ಮಾಹಿತಿ ನಿರ್ವಹಣೆ ಮಾಡುತ್ತದೆ. ಈ ಮೂಲಕ ದೇಶಾದ್ಯಂತ ಸಮರ್ಪಕ ಕುಡಿಯುವ ನೀರು ಲಭ್ಯವಾಗುತ್ತಿರುವ ಬಗ್ಗೆ ನಿಗಾ ಇಡಲಿದೆ. ದೇಶದ ಮೂಲೆ-ಮೂಲೆಯಲ್ಲಿರುವ ಪ್ರಯೋಗಾಲಯಗಳಲ್ಲಿ ನಡೆಸಲಾದ ನೀರಿನ ಗುಣಮಟ್ಟ ಪರೀಕ್ಷೆ ವರದಿಗಳು ಇಲಾಖೆಗೆ ಲಭ್ಯವಾಗಲಿದೆ. ಯೋಜನೆಯಡಿ, ಸ್ಥಳೀಯ ಅಧಿಕಾರಿಗಳು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪ್ರತಿಯೊಂದು ಗ್ರಾಮಗಳಲ್ಲಿ ಐದು ಮಹಿಳೆಯರನ್ನು ನೇಮಕ ಮಾಡಿಕೊಂಡು ಆಧುನಿಕ ಸಾಧನಗಳ ಅಳವಡಿಕೆ ಹಾಗೂ ಪರೀಕ್ಷೆಗೆ ನಿಯೋಜಿಸಲಾಗುತ್ತದೆ.

ಏನಿದು ಆ್ಯಪ್?

ಜಲ ಜೀವನ್ ಮಿಷನ್ ವೆಬ್ ಸೈಟ್ ನಲ್ಲಿ ವಿವರಿಸುವಂತೆ, ಮೊಬೈಲ್ ಅಪ್ಲಿಕೇಷನ್‌ನಲ್ಲಿ ಕುಡಿಯುವ ನೀರು ಸರಬರಾಜು ಹಾಗೂ ಮೂಲಸೌಕರ್ಯದ ಕುರಿತ ಮಾಹಿತಿಗಳಿರುತ್ತವೆ. ಗ್ರಾಹಕರು ಆಧಾರ್ ಸಂಖ್ಯೆ ಮೂಲಕ ಆ್ಯಪ್‌ಗೆ ನೋಂದಣಿ ಮಾಡಿಕೊಂಡು, ತಾವು ಕುಡಿಯುತ್ತಿರುವ ನೀರು ಹಾಗೂ ಅದರ ಶುದ್ಧತೆಯ ಕುರಿತ ಮಾಹಿತ ಪಡೆಯಬಹುದು. ಅಂತೆಯೇ, ಆಪ್ ಮೂಲಕ ಗ್ರಾಮ, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೂ ಕ್ಷಣಕ್ಷಣದ ಮಾಹಿತಿ ರವಾನೆಯಾಗಲಿದೆ. ಏಕೀಕೃತ ವ್ಯವಸ್ಥೆ ಮೂಲಕ ಆ್ಯಪ್‌ನ ಡೇಟಾ ನಿರ್ವಹಣೆ ಮಾಡಲಾಗುತ್ತದೆ. ಇದರಲ್ಲಿ ಗ್ರಾಮಗಳು, ಜಿಲ್ಲೆಗಳು ಹಾಗೂ ರಾಜ್ಯಮಟ್ಟದ ಕಾರ್ಯಯೋಜನೆ ಕುರಿತ ಮಾಹಿತಿ ಇರುತ್ತದೆ. ನೀರಿನ ಗುಣಮಟ್ಟ ಹಾಗೂ ಲಭ್ಯತೆ ಕುರಿತು ಆ್ಯಪ್ ಮೂಲಕ ರೇಟಿಂಗ್ ನೀಡುವುದಕ್ಕೂ ಗ್ರಾಹಕರಿಗೆ ಅವಕಾಶವಿದೆ.

ತಂತ್ರಜ್ಞಾನದ ಸ್ಪರ್ಶ ಹೇಗೆ?

ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆ ತಂತ್ರಜ್ಞಾನ ಆಧಾರಿತ ಆಧುನಿಕ ಸಾಧನಗಳ ಬಳಕೆಯೂ ಯೋಜನೆಯಲ್ಲಿದೆ. ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಆಧಾರಿತ ಸೆನ್ಸರ್‌ಗಳು, ನೀರಿನ ಮೀಟರ್‌ಗಳು, ನೀರಿನ ಗುಣಮಟ್ಟ ಪರೀಕ್ಷೆ ಕಿಟ್‌ಗಳು ಜಾರಿಗೆ ಬರಲಿವೆ. ಈ ಕಿಟ್‌ಗಳು ಫಾಸ್ಪೇಟ್, ಸಲ್ವೇಟ್ ಸೇರಿದಂತೆ ಅಪಾಯಕಾರಿ 12 ಮಾದರಿಯ ಖನಿಜಗಳ ಪತ್ತೆ ಸಾಮರ್ಥ್ಯ ಹೊಂದಿದೆ. ಇದರ ನೆರವಿನಿಂದ 2024ರೊಳಗೆ ಕಡಿಮೆ ವೆಚ್ಚದಲ್ಲಿ ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಗುರಿ ಸರಕಾರದ ಮುಂದಿದೆ. ಕೊಳವೆಗೆ ಅಳವಡಿಸಲಾಗುವ ಸೆನ್ಸರ್‌, ನೀರು ಎಷ್ಟು ಪ್ರಮಾಣದಲ್ಲಿ ಹರಿಯುತ್ತಿದೆ ಎಂಬುದನ್ನು ಗಮನಿಸುವ ಜೊತೆಗೆ ಮಾಲಿನ್ಯದ ಮೇಲೂ ನಿಗಾ ಇಡುತ್ತದೆ. ನೀರಿನ ಒತ್ತಡ ನಿರ್ವಹಣೆ ಸೆನ್ಸಾರ್‌ ಬಳಕೆಯಾಗಲಿದ್ದು, ಎಷ್ಟು ಪ್ರಮಾಣದಲ್ಲಿ ನೀರು ಬಳಕೆಯಾಗುತ್ತದೆ ಎಂಬ ಮಾಹಿತಿ ಸಂಗ್ರಹಿಸಲಿದೆ. ಜಲ ಸಂಗ್ರಹಾಗಾರಗಳಲ್ಲಿ ಸಂಗ್ರಹ ಪ್ರಮಾಣ ಮಾಹಿತಿಗಾಗಿ ಅರಿಯಲು ಸೆನ್ಸಾರ್‌ ಅಳವಡಿಸಲಾಗುತ್ತದೆ.

Note:

Ø  3.60 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಜಲ ಜೀವನ್ ಮಿಷನ್‌ನ್ನು 2019ರಲ್ಲಿ ಜಾರಿಗೊಳಿಸಲಾಗಿದೆ.

Ø  1.25 ಲಕ್ಷ ಹಳ್ಳಿಗಳ 5 ಕೋಟಿ ಮನೆಗಳಿಗೆ ಈವರೆಗೆ ಈ ಅಭಿಯಾನದಲ್ಲಿ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ.

Ø  71 ಲಕ್ಷ ಮಹಿಳೆಯರಿಗೆ ನೀರಿನ ಗುಣಮಟ್ಟ ಪರಿಶೀಲನೆ ತರಬೇತಿ ನೀಡಲಾಗಿದೆ.

Ø  6 ಲಕ್ಷ ಗ್ರಾಮ ಸಮಿತಿ, ಪಾನಿ ಸಮಿತಿಗಳನ್ನು ದೇಶಾದ್ಯಂತ ಈ ಅಭಿಯಾನದ ನಿರ್ವಹಣೆಗಾಗಿ ರಚಿಸಲಾಗಿದೆ.

💥 Also Read: 01 October 2021 Detailed daily Current Affairs in Kannada for All Competitive Exams

💥 Also Read: 02 October 2021 Detailed daily Current Affairs in Kannada for All Competitive Exams

💥 Click here to Read Daily Current Affairs in Kannada

 

ನಾಡಗೀತೆ ಸಮಯದ ಮಿತಿ 214 ನಿಮಿಷಗಳಿಗೆ ಮಿತಿಗೊಳಿಸಿದ ಕರ್ನಾಟಕ ಸರ್ಕಾರ


ಕನ್ನಡಿಗರ ದಶಕಗಳ ಕಾಲದ ಒತ್ತಾಯಕ್ಕೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದೆ. ನಾಡಗೀತೆ ಹಾಡುವ ಸಮಯದ ಮಿತಿಯನ್ನು 2.14 ಸೆಕೆಂಡ್ ಗಳಿಗೆ ಸೀಮಿತ ಗೊಳಿಸಲು ಕನ್ನಡ & ಸಂಸ್ಕೃತಿ ಇಲಾಖೆ ಅಂತಿಮ ನಿರ್ಧಾರ ಕೈಗೊಂಡಿದೆ. ಈ ಕುರಿತು ಮಾಹಿತಿ ನೀಡಿದ ಕನ್ನಡ & ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು, ನಾಡಗೀತೆ ರಾಗ ಸಂಯೋಜನೆ ಹಾಗೂ ಸಮಯದ ಮಿತಿಯನ್ನು ಅಂತಿಮಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕಳೆದ ಹಲವು ವರ್ಷಗಳಿಂದ ನಾಡಗೀತೆಯ ರಾಗ ಸಂಯೋಜನೆ, ಸಮಯ ಮಿತಿ ಬಗ್ಗೆ ಹಲವು ಸಮಿತಿಗಳು ವರದಿಗಳನ್ನು ನೀಡಿದ್ದವು. ಸರ್ಕಾರ ಮೈಸೂರು ಲೀಲಾವತಿ ಹಾಗೂ ಸಾಹಿತಿ ದೊಡ್ಡರಂಗೇಗೌಡ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಆ ಸಮಿತಿ ವರದಿ ನೀಡಿದೆ. ಅದರ ಅನುಸಾರವಾಗಿ 2.14 ಸೆಕೆಂಡ್‌ಗಳಿಗೆ ನಾಡಗೀತೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ.

ಕೆ. ಎಂ. ಕಾರ್ಯಪ್ಪ ಜೀವನಾಧಾರಿತ ಮಾರ್ಷಲ್ ಚಿತ್ರ ನಿರ್ಮಾಣ

ದೇಶ ಕಂಡ ಅಪ್ರತಿಮ ಸೇನಾಧಿಕಾರಿ, ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಜೀವನಾಧಾರಿತ ಕಥೆಯ 'ಮಾರ್ಷಲ್' ಚಿತ್ರವನ್ನು ಇಂಗ್ಲೀಷ್‌ನಲ್ಲಿ ನಿರ್ಮಿಸಲಾಗುತ್ತಿದ್ದು, ಕನ್ನಡ, ಹಿಂದಿ ಮತ್ತಿತರ ಭಾರತೀಯ ಭಾಷೆಗಳಲ್ಲೂ ಮೂಡಿಬರಲಿದೆ. ಹಾಲಿವುಡ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಪ್ರೇಮ್ ಚಿತ್ರದ ನಾಯಕನಾಗಿ ಅಭಿನಯಿಸಲಿದ್ದಾರೆ. ದೇಶಪ್ರೇಮ ಸಾರುವ, ದೊಡ್ಡ ಬಜೆಟ್‌ನ ಈ ಚಿತ್ರದ ಚಿತ್ರೀಕರಣ ಆರಂಭಿಸುವ ಮುನ್ನ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿ ಸ್ಥಳಕ್ಕೆ ಚಿತ್ರತಂಡದೊಂದಿಗೆ ಭೇಟಿ ನೀಡಿದ್ದಾರೆ.

ಕನ್ನಡದ ಹೆಮ್ಮೆಯ ಪುತ್ರ ಕಾರ್ಯಪ್ಪ ಅವರ ಸಾಹಸಗಾಥೆಯ ಈ ಚಿತ್ರಕ್ಕೆ ಬಹುರಾಷ್ಟ್ರೀಯ ಕಂಪನಿಗಳೂ ಬಂಡವಾಳ ಹೂಡಲು ಸಿದ್ದವಾಗಿದ್ದು, ಶೀಘ್ರವೇ ತೆರೆ ಕಾಣಲಿರುವ 'ಪ್ರೇಮಂ ಪೂಜ್ಯಂ' ಚಿತ್ರದ ಬಿ. ಎಸ್. ರಾಘವೇಂದ್ರ ಅವರನ್ನೇ ಚಿತ್ರದ ನಿರ್ದೇಶನಕ್ಕೆ ಆಯ್ಕೆ ಮಾಡಲಾಗಿದೆ.

ಕುಂದಾಪುರದ ಹೊಸಾಡು ಮರವಂತೆ ಗ್ರಾಮ ಪಂಚಾಯತ್‌ಗೆ ವಿಶೇಷ ಗರಿಮೆ

ಗ್ರಾಮ ಪಂಚಾಯತ್‌ಗಳ ಸಮಗ್ರ ಪ್ರಗತಿಯನ್ನು ಪರಿಗಣಿಸಿ ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯು ಕೊಡಮಾಡುವ ಪ್ರತಿಷ್ಠಿತ 'ಗಾಂಧಿ ಗ್ರಾಮದ ಪುರಸ್ಕಾರ'ಕ್ಕೆ ಈ ಸಾಲಿನಲ್ಲಿ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯತ್ ಹಾಗೂ ಬೈಂದೂರು ತಾಲೂಕಿನ ಮರವಂತೆ ಗ್ರಾಮ ಪಂಚಾಯತ್‌ಗಳು ಆಯ್ಕೆಯಾಗಿವೆ.


ಈ ಎರಡೂ ಪಂಚಾಯತ್‌ಗಳು ಮೂರನೇ ಬಾರಿಗೆ ಈ ಪ್ರಶಸ್ತಿಗೆ ಆಯ್ಕೆಯಾಗುತ್ತಿರುವುದು ವಿಶೇಷ. ಪ್ರಶಸ್ತಿ ಪಡೆದ ವರ್ಷ ಕುಂದಾಪುರದ ಹೊಸಾಡು ಪಂಚಾಯತ್ ಈ ಹಿಂದೆ 2016-17, 2017-18ರಲ್ಲಿ ಸತತ ಎರಡು ವರ್ಷ ಹಾಗೂ ಈ ಬಾರಿ ಆಯ್ಕೆಯಾದರೆ, ಬೈಂದೂರು ತಾಲೂಕಿನ ಮರವಂತೆ ಗ್ರಾ. ಪಂ. 2013-14ರಲ್ಲಿ, 2019-20 ಹಾಗೂ 2020-21ರಲ್ಲಿ ಸತತ ಎರಡನೇ ಬಾರಿಗೆ ಆಯ್ಕೆ ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆ

ಪ್ರಶಸ್ತಿಗೆ 2020-21ನೇ ಸಾಲಿನ ಪ್ರಗತಿ, ಸಾಂಸ್ಥಿಕ ಹಾಗೂ ಪ್ರಗತಿ ಸೂಚ್ಯಂಕಗಳನ್ನು ಹೊಂದಿದ 200 ಅಂಕಗಳ ಪ್ರಶ್ನಾವಳಿಗಳನ್ನು ಪಂಚತಂತ್ರ ತಂತ್ರಾಂಶದಿಂದ ಉತ್ತರಿಸುವ ಗ್ರಾಮ ಆಹ್ವಾನಿಸಲಾಗುತ್ತದೆ. ಜೀವನ ಗುಣಮಟ್ಟವ ಸಂಪನ್ಮೂಲ ಕ್ರೋಢೀಕರಣ, ಮೂಲಸೌಕರ್ಯ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಉತ್ತಮ ಆಡಳಿತ, ಸೇವಾ ಪೂರೈಕೆ ಹಾಗೂ ನಾವೀನ್ಯತಾ ಯೋಜನೆಗಳನ್ನು ಪರಿಗಣಿಸಿ ಅಂಕ ನೀಡಲಾಗುತ್ತದೆ.

ಹೊಸಾಡು ಗ್ರಾಮ ಪಂಚಾಯತ್‌ನ ಸಾಧನೆಗಳು

§  ಕೊರೋನಾ ಲಸಿಕೆ ನೀಡುವಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, 2770 ಮಂದಿ ಗ್ರಾಮಸ್ಥರ ಪೈಕಿ ಕೇವಲ 130 ಮಂದಿಗಷ್ಟೇ ಲಸಿಕೆ ಬಾಕಿ.

§   2020-21ನೇ ಸಾಲಿನಲ್ಲಿ ಶೇ. 100 ತೆರಿಗೆ ಸಂಗ್ರಹ.

§  ಅಗತ್ಯವಿರುವ ಎಲ್ಲ ಮನೆಗಳಿಗೂ ಕುಡಿಯುವ ನೀರಿನ ಸಂಪರ್ಕ

§  ಕಸ ಸಂಗ್ರಹ ಹಾಗೂ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನ

ಮರವಂತೆ ಗ್ರಾಮ ಪಂಚಾಯತ್ ಸಾಧನೆಗಳು

Ø  ಗ್ರಾಮದ 4,403 ಮಂದಿ ಕೊರೋನಾ ಲಸಿಕೆ ಪಡೆದಿದ್ದು, 117 ಮಂದಿ ಮಾತ್ರ ಲಸಿಕೆ ಪಡೆಯಲು ಬಾಕಿ.

Ø  ಶೇ. 100ರಷ್ಟು ತೆರಿಗೆ ಸಂಗ್ರಹ ಸ್ವಯಂ ಪ್ರೇರಿತ ಸಾಮಾಜಿಕ-ಆರ್ಥಿಕ ಸಮೀಕ್ಷೆ

Ø  ಮಾದರಿಯಾದ ತ್ಯಾಜ್ಯ ವಿಲೇವಾರಿ ಕ್ರಮ ಸಂಪನ್ಮೂಲ ಕ್ರೋಢೀಕರಣ, ಬೀದಿ ದೀಪ ಅಳವಡಿಕೆ- ನಿರ್ವಹಣೆ, ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನ.

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams   

💥 Click here to Read Daily Current Affairs in Kannada  

 

ಬಿಳಿ ಈರುಳ್ಳಿಗೆ ಭೌಗೋಳಿಕ ಮಾನ್ಯತೆ

ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಅಲಿಬಾಗ್‌ನ ಪ್ರಖ್ಯಾತ ಬಿಳಿ ಈರುಳ್ಳಿ ಈಗ ಭೌಗೋಳಿಕ ಮಟ್ಟದಿಂದ ಗುರುತಿಸಲ್ಪಟ್ಟಿದೆ. ಔಷಧೀಯ ಗುಣಗಳನ್ನು ಹೊಂದಿರುವ ಬಿಳಿ ಈರುಳ್ಳಿ ಯನ್ನು ಹೃದಯ ಸಂಬಂಧಿ ಚಿಕಿತ್ಸೆಗೆ, ಕೊಬ್ಬು ನಿಯಂತ್ರಣಕ್ಕೆ ಇನ್ಸುಲಿನ್ ಸೃಷ್ಟಿಗೆ ಬಳಸಲಾಗುತ್ತಿರುವುದರಿಂದ 1883 ರಷ್ಟು ಹಿಂದೆಯೇ ಅಧಿಕೃತ ರಾಜ್ಯ ಪತ್ರದಲ್ಲೇ ಅದನ್ನು ಉಲ್ಲೇಖಿಸಲಾಗಿದೆ. ಕೃಷಿ ಇಲಾಖೆ ಹಾಗೂ ಕೊಂಕಣ ಕೃಷಿ ವಿಶ್ವವಿದ್ಯಾಲಯ ಜಂಟಿಯಾಗಿ ಈ ಬಿಳಿ ಈರುಳ್ಳಿಯ ಭೌಗೋಳಿಕ ಮಾನ್ಯತೆಗಾಗಿ 2019 ರ ಜನವರಿ 15 ರಂದು ಅರ್ಜಿ ಸಲ್ಲಿಸಿದ್ದವು. ಮುಂಬಯಿಯಲ್ಲಿರುವ ಹಕ್ಕು ಸ್ವಾಮ್ಯದ ಕಚೇರಿಯಲ್ಲಿ ಈ ಪ್ರಸ್ತಾವವನ್ನು ಹಾಲಿ ವರ್ಷದ ಸೆ. 29 ರಂದು ಪರಿಶೀಲಿಸಿದ ನಂತರ ಅಲಿಬಾಗ್‌ನ ಬಿಳಿ ಈರುಳ್ಳಿ ಎಂಬ ಮಾನ್ಯತೆ ನೀಡಲಾಗಿದೆ. ಒಂದು ಎಕರೆಯಲ್ಲಿ ಬಿಳಿ ಈರುಳ್ಳಿ ಬೆಳೆದರೆಡ 2 ಲಕ್ಷ ರೂ ದಷ್ಟು ಆದಾಯ ಗಳಿಸಬಹುದೆಂದು ಅಧಿಕಾರಿಗಳು ಹೇಳುತ್ತಾರೆ.

ಎಲ್‌ಐಸಿ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಪಟ್ನಾಯಕ್ ನೇಮಕ

Ø  ದೇಶದ ಸರ್ಕಾರಿ ಸ್ವಾಮ್ಯದ ವಿಮಾ ಜೀವ ವಿಮಾ ನಿಗಮದ (ಎಲ್‌ಐಸಿ) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಬಿ.ಸಿ. ಪಟ್ನಾಯಕ್ ಇತ್ತೀಚಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಮುಂಬೈನ ಕೌನ್ಸಿಲ್ ಆಫ್ ಇನ್ನೂರೆನ್ಸ್ ಓಂಬಡ್ಸ್ ಮನ್ (ಸಿಐಒ) ದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಟ್ನಾಯಕ್‌ರನ್ನು ಅ.1 ರಿಂದ ಜಾರಿಗೆ ಬರುವಂತೆ ಎಲ್‌ಐಸಿ ವ್ಯಸ್ಥಾಪಕ ನಿರ್ದೇಶಕ ಹುದ್ದೆಗೆ ನೇಮಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

Ø  1963 ರಲ್ಲಿ ಜನಿಸಿದ ಪಟ್ನಾಯಕ್ 1986 ರ ಮಾರ್ಚ್‌ನಲ್ಲಿ ನೇರ ನೇಮಕಾತಿ ಅಧಿಕಾರಿಯಾಗಿ ಎಲ್‌ಐಸಿ ಸೇರಿದ್ದರು.

Ø  ಇನ್ನೂರೆನ್ಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಸ್ನಾತಕೋತ್ತರ ಪದವಿ ಮತ್ತು ಫೆಲೋ ಪಡೆದಿದ್ದಾರೆ.

LIC ಕುರಿತು ಹೆಚ್ಚಿನ ಮಾಹಿತಿ

§  ಸ್ಥಾಪನೆ - ಸೆಪ್ಟೆಂಬರ್ -01, 1956

§  ಅಧ್ಯಕ್ಷರು - ಎಂ. ಆರ್. ಕುಮಾರ್

§  ಕೇಂದ್ರ ಕಚೇರಿ – ಮುಂಬೈ

§  ಮಾತೃ ಸಂಸ್ಥೆ - ಹಣಕಾಸು ಸಚಿವಾಲಯ ಭಾರತ ಸರ್ಕಾರ

ಚಾಚಾ ಚೌಧರಿ ಲಾಂಛನ

v  ಗಂಗಾನದಿ ಶುದ್ದೀಕರಣ ಯೋಜನೆ 'ನಮಾಮಿ ಗಂಗೆ ಯೋಜನೆ' ಲಾಂಛನವನ್ನಾಗಿ ಕಾಮಿಕ್ ಪಾತ್ರ “ಚಾಚಾ ಚೌಧರಿ' ಯನ್ನು ಬಳಕೆ ಮಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

v  ಈ ಕ್ರಮದ ಮೂಲಕ ಯೋಜನೆಯಲ್ಲಿ ಮಕ್ಕಳು ಮತ್ತು ಯುವಕರು ಹೆಚ್ಚಿನ ರೀತಿಯಲ್ಲಿ ಭಾಗವಹಿಸುವಂತೆ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಈ ಉದ್ದೇಶಕ್ಕಾಗಿ ಕಾಮಿಕ್ ಪುಸ್ತಕಗಳ ಪ್ರಕಾಶನ ಡೈಮಂಡ್ ಟೂನ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಚಾಚಾ ಚೌಧರಿ ಹೆಸರಿನಲ್ಲಿ ಗಂಗಾ ನದಿ ರಕ್ಷಣೆಗಾಗಿ ಇ-ಕಾಮಿಕ್ಸ್ಗಳು ಆ್ಯನಿಮೇಷನ್ ವಿಡಿಯೋಗಳು, ಚಿತ್ರಗಳನ್ನು ಸಿದ್ಧಪಡಿಸಲಿದೆ ಎಂದು ಯೋಜನೆಯ ಪ್ರಧಾನ ನಿರ್ದೇಶಕ ರಾಜೀವ್ ರಂಜನ್ ಮಿಶ್ರಾ ತಿಳಿಸಿದ್ದಾರೆ‌.

ಸಿಕ್ಕಿಂನಲ್ಲಿ ನೀರಿನ ಬಾಟಲ್‌ಗೆ ನಿಷೇಧ

ಸಿಕ್ಕಿಂನಲ್ಲಿ ಮಿನರಲ್ ನೀರಿನ ಬಾಟಲ್ ಮಾರಾಟವನ್ನು ಜ. 1 ರಿಂದ ಸಂಪೂರ್ಣವಾಗಿ ನಿಷೇಧಿಸುವುದಾಗಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಘೋಷಿಸಿದ್ದಾರೆ. ಗಾಂಧಿ ಜಯಂತಿ ಪ್ರಯುಕ್ತ ನಡೆಸಲಾದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಿದ್ದಾರೆ. ನಿಷೇಧ ಜಾರಿಗೆ ಬಂದ ನಂತರ ಮಾರುಕಟ್ಟೆಯಲ್ಲಿ ಸಂಗ್ರಹವಿರುವ ನೀರಿನ ಬಾಟಲ್‌ಗಳನ್ನು ಖಾಲಿ ಮಾಡಲು 3 ತಿಂಗಳ ಕಾಲಾವಕಾಶ ಕೊಡಲಾಗುವುದು ಎಂದರು. ರಾಜ್ಯದಲ್ಲಿ ಶುದ್ಧ ನೀರು ಕೊಡುವ ಕೊಡುವ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಜನರು ಮಿನರಲ್ ನೀರಿನ ಬಾಟಲ್ ಬದಲು ನೈಸರ್ಗಿಕ ಸಂಪನ್ಮೂಲಗಳನ್ನು ಬಳಕೆ ಮಾಡಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ.

ಗೊರಿಲ್ಲಾ ಹೊಂದಿರುವ ಏಷ್ಯಾದ ಏಕೈಕ ಮೃಗಾಲಯವಾಗಿ ಚಾಮರಾಜೇಂದ್ರ ಪ್ರಸಿದ್ದಿ

ನಗರದ ಶ್ರೀ ಚಾಮರಾಜೇಂದ್ರ ಮೃಗಾಯಲಕ್ಕೆ ಮಲೇಷಿಯಾ, ಸಿಂಗಾಪುರದಿಂದ ತಲಾ ಎರಡು ಜೋಡಿ ಒರಾಂಗೂ ಟಾನ್ ಮತ್ತು ಜರ್ಮನಿಯಿಂದ ಎರಡು ಗಂಡು ಗೋರಿಲ್ಲಾಗಳ ಆಗಮನವಾಗಿದೆ. ಈ ಮೂಲಕ ಗೊರಿಲ್ಲಾ ಹೊಂದಿರುವ ಏಷ್ಯಾದ ಏಕೈಕ ಮೃಗಾಲಯ ಎಂಬ ಹೆಗ್ಗಳಿಕೆಗೆ ಮೈಸೂರು ಝೂ ಪಾತ್ರವಾಗಿದೆ.

ಸದ್ಯ ಗೊರಿಲ್ಲಾ ಹಾಗೂ ಒರಾಂಗೂಟಾನ್‌ಗಳನ್ನು ಕ್ವಾರಂಟೈನ್‌ನಲ್ಲಿಡಲಾಗಿದ್ದು, ಈ ಅವಧಿ ಮುಗಿದ ಬಳಿಕ ಸಾರ್ವಜನಿಕ ವೀಕ್ಷಣೆ ಮುಕ್ತಗೊಳಿಸಲಾಗುತ್ತದೆ. ಮೈಸೂರು ಮೃಗಾಲಯದ ಆಕರ್ಷಣೆಯಾಗಿದ್ದ ಪೋಲೋ ಗೊರಿಲ್ಲಾ 2014 ರಲ್ಲಿ ಮೃತಪಟ್ಟ ಬಳಿಕ ಗೊರಿಲ್ಲಾವನ್ನು ಮೃಗಾಲಯಕ್ಕೆ ತರಲು ಸತತ ಪ್ರಯತ್ನ ನಡೆಸಲಾಗಿದ್ದು, ಇದರ ಫಲವಾಗಿ 14 ವರ್ಷದ 'ತಾಬೋ' ಹಾಗೂ 8 ವರ್ಷ 'ಡೆಂಬ ಎಂಬ ಗೊರಿಲ್ಲಾ ಮೃಗಾಲಯದಲ್ಲಿ ಅತಿಥ್ಯ ಸ್ವೀಕರಿಸುತ್ತಿವೆ.

50 ವರ್ಷಗಳ ಬಳಿಕ ಒರಾಂಗೂ ಟಾನ್:

ಅಳಿವಿನಂಚಿನಲ್ಲಿರುವ ಒರಾಂಗೂ ಟಾನ್ ನ ಭಾರತದ ಯಾವುದೇ ಮೃಗಾಲಯದಲ್ಲಿ ಇಲ್ಲ. ಮೈಸೂರು ಮೃಗಾಲಯದಲ್ಲಿ 50 ವರ್ಷಗಳ ಬಳಿಕ ಒರಾಂಗೂಟಾನ್ ನೋಡುವ ಅವಕಾಶ ದೊರೆತಿದ್ದು, ಮಲೇಷಿಯಾ ಮೃಗಾಲಯದಿಂದ 5.5 ವರ್ಷದ ಹೆಣ್ಣು ಮಿನ್ನಿ, ಸಿಂಗಾಪುರ ಮೃಗಾಲಯದಿಂದ 17 ವರ್ಷದ ಗಂಡು ಒರಾಂಗೂಟಾನ್ ಮೆರ್ಲಿನ್ ಹಾಗೂ 13 ವರ್ಷದ ಹೆಣ್ಣು ಆಟಿನ ಮೈಸೂರು ಮೃಗಾಲಯಕ್ಕೆ ಆಗಮಿಸಲಿವೆ.

ವಾಡಾ ಅಕ್ಕಿಗೆ ಭೌಗೋಳಿಕ ಮಾನ್ಯತೆ

v  ಮಹಾರಾಷ್ಟ್ರದ ಫಲ್ಗಾರ್ ಜಿಲ್ಲೆಯ ವಾಡಾ ಎಂಬಲ್ಲಿ ವ್ಯಾಪಕವಾಗಿ ಬೆಳೆಯುವ ಅಕ್ಕಿಗೆ ಈಗ ಭೌಗೋಳಿಕ ಮಾನ್ಯತೆ ನೀಡಲಾಗಿದೆ. ಮುಂಬೈನಲ್ಲಿ ನಡೆದಿರುವ ವಿಭಾಗೀಯ ಕೃಷಿ ಮಂಡಳಿ ಸಭೆಯಲ್ಲಿ ಈ ಅಕ್ಕಿಗೆ ಭೌಗೋಳಿಕ ಮಾನ್ಯತೆ ನೀಡುವ ತೀರ್ಮಾನ ಕೈಗೊಳ್ಳಲಾಯಿತು.

v  ವಾಡಾ ತಾಲೂಕಿನ 180 ಗ್ರಾಮಗಳಲ್ಲಿ ಸುಮಾರು 2500 ಮಂದಿ ರೈತರು ಈ ಅಕ್ಕಿಯನ್ನು ಬೆಳೆಯುತ್ತಿದ್ದಾರೆ. ಹೀಗಾಗಿ ಸಾಂಪ್ರದಾಯಿಕ ತಳಿಯ ಈ ಅಕ್ಕಿಗೆ 'ವಾಡಾ ಕೊಲಂ' ಅಥವಾ “ಜಿನಿ ಇಲ್ಲವೇ ಝಿನಿ ಅಕ್ಕಿ' ಎಂದೂ ಕರೆಯಲಾಗುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗೆ 60 ರಿಂದ 70 ರೂ. ಬೆಲೆಯಿರುವ ಈ ಅಕ್ಕಿಗೆ ವಿದೇಶಿ ಮಾರುಕಟ್ಟೆಯಲ್ಲೂ ಬೇಡಿಕೆ ಇದೆ.

ವಿಕ್ರಮಾದಿತ್ಯ ನೌಕಾ ಸಿಬ್ಬಂದಿಗೆ ಎಸ್‌ಬಿಐ ನಾವ್-ಇ ಕ್ಯಾಶ್ ಭಾಗ್ಯ

ಭಾರತೀಯ ನೌಕಾಪಡೆಯ ವಿಮಾನ ಹೊತ್ತೊಯ್ಯುವ ಐಎನ್ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಎಸ್‌ಬಿಐನ ನಾವ್-ಇಕ್ಯಾಶ್ ಕಾರ್ಡ್ ಸೇವೆಗೆ ಚಾಲನೆ ನೀಡಲಾಗಿದೆ. ಮಹತ್ವಾಕಾಂಕ್ಷೆ ಯೋಜನೆಯಾದ ಡಿಜಿಟಲ್ ಇಂಡಿಯಾಕ್ಕೆ ಇದು ಮತ್ತಷ್ಟು ಬಲ ತುಂಬಲಿದೆ. ಕರ್ನಾಟಕದ ಕಾರವಾರದಲ್ಲಿ ಎಸ್‌ಬಿಐನ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್. ಶೆಟ್ಟಿ ಮತ್ತು ಪಶ್ಚಿಮ ನೌಕೆ ಕಮಾಂಡಿಂಗ್ ಮುಖ್ಯ ಅಧಿಕಾರಿ ಅಡ್ಮಿರಲ್ ಆರ್. ಹರಿಕುಮಾರ್ ಅವರು ನಾವ್-ಇಕ್ಯಾಶ್ ಕಾರ್ಡ್ ಅನ್ನು ಅನಾವರಣಗೊಳಿಸಿದರು.

ಕುಗ್ರಾಮಗಳಲ್ಲಿರುವ ಸೇನಾ ಪಡೆಗಳ ಕೇಂದ್ರ, ಅರೆಸೇನಾ ಪಡೆದ ಮತ್ತು ಸರ್ಕಾರದ ಇನ್ನಿತರ ಸಂಸ್ಥೆಗಳು ಹಾಗೂ ಸಮುದ್ರದ ಹಡಗುಗಳಲ್ಲಿ ಕಾರ್ಯ ನಿರ್ವಹಿಸುವ ಭದ್ರತಾ ಸಿಬ್ಬಂದಿ ನಾವ್-ಇಕ್ಯಾಶ್ ಮುಖಾಂತರ ಬ್ಯಾಂಕಿಂಗ್ ಚಟುವಟಿಕೆ ನಡೆಸಬಹುದು. ನಾವ್-ಇಕ್ಯಾಶ್ ಡ್ಯುಯೆಲ್ ಚಿಪ್ ಕಾರ್ಡ್ ಡೆಬಿಟ್ ಕಾರ್ಡ್ ಮಾದರಿಯಾಗಿಯೂ ಬಳಸಿಕೊಳ್ಳಬಹುದು. ವಿಕ್ರಮಾದಿತ್ಯ ನೌಕೆಯಲ್ಲಿ ಕಾರ್ಯ ನಿರ್ವಹಿಸುವ ಭದ್ರತಾ ಸಿಬ್ಬಂದಿಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸುರಕ್ಷಿತ ನಗದು ರಹಿತ ವ್ಯವಹಾರಕ್ಕೆ ಅವಕಾಶ ಕಲ್ಪಿಸುವ ಇಕ್ಯಾಶ್ ಪರಿಕಲ್ಪನೆಗೆ ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ಬಿಐ ಜೀವ ತುಂಬಿದೆ.

No comments:

Post a Comment

Important Notes

Random Posts

Important Notes

Popular Posts

Child Development and Pedagogy Quiz in Kannada for TET, CTET, and GPSTR Competitive Exams

          Child Development and Pedagogy Quiz in Kannada for TET, CTET, and GPSTR Competitive Exams 🌺 Child Development and Pedagogy Quiz in Kannada for TET, CTET, and GPSTR Competitive Exams (Quiz) Mock Test-2021 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Child Development and Pedagogy Quiz in Kannada for TET, CTET, and GPSTR Competitive Exams Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Child Development and Pedagogy Quiz in Kannada for TET, CTET, and GPSTR Competitive Exams, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Top-50 General Knowledge (GK) Question Answers in Kannada for All Competitive Exams-05

Top-50 General Knowledge (GK) Question Answers in  Kannada for All Competitive Exams-05 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's El...