Breaking

Saturday, 6 November 2021

04 November 2021 Detailed Daily Current Affairs in Kannada for All Competitive Exams

           

04 November 2021 Detailed Daily Current Affairs in Kannada for All Competitive Exams


Daily Detailed Current Affairs in Kannada for All Competitive Exams www.kpscnotesmcqs.in



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ.

💥 Click here to Read Daily Current Affairs in Kannada  

ಒಂದು ಜಗತ್ತು, ಒಂದು ಗ್ರಿಡ್ ಯೋಜನೆ


ವಿಶ್ವ ಸಂಸ್ಥೆಯಲ್ಲಿ ನಡೆದ ಜಾಗತಿಕ ಹವಾಮಾನ ಶೃಂಗದಲ್ಲಿ ಭಾರತ ಮತ್ತು ಬ್ರಿಟನ್ ದೇಶದಲ್ಲಿ ಒಟ್ಟಾಗಿ ಪ್ರಸ್ತಾಪಿಸಿರುವ ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ ಯೋಜನೆಯು ತಾಪಮಾನ ಏರಿಕೆ ತಡೆಯಲು ಪ್ರಯತ್ನಿಸಬಹುದಾದ ಅತ್ಯಂತ ಮಹತ್ವದ ಪರಿಹಾರಗಳಲ್ಲಿ ಒಂದಾಗಿದೆ. ವಾಸ್ತವವಾಗಿ ಇದು 2018ರಲ್ಲೇ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದ ಯೋಜನೆ. ಆಗಲೇ “ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟ” (ಐಎಸ್ ಎ)ವನ್ನು ಕೂಡ ಹುಟ್ಟುಹಾಕಿದ್ದ ಪ್ರಧಾನಿ, ಅದಕ್ಕೆ ಭಾರತದಿಂದಲೇ ನಿರ್ದೇಶಕರನ್ನು ನೇಮಿಸಿ ಕಾರ್ಯಕೂಡ ಆರಂಭಿಸಿದ್ದರು.


* ಸೂರ್ಯ ಇಡೀ ಜಗತ್ತಿಗೆ ಸೇರಿದವನಾದ್ದರಿಂದ ಎಲ್ಲ ದೇಶಗಳೂ ಸೇರಿ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಿ, ಅದನ್ನು ಪರಸ್ಪರರ ನಡುವೆ ಹಂಚಿಕೊಳ್ಳುವ ಯೋಜನೆಯಿದು.


* ತಾಪಮಾನ ಏರಿಕೆ ತಡೆಯಲು ಮೋದಿ ಸೂಚಿಸಿರುವ ವಿನೂತನವಾದ ಈ ಪರಿಹಾರಕ್ಕೆ ಬ್ರಿಟನ್ ಕೂಡ ಕೈ ಜೋಡಿಸಿರುವುದರಿಂದ ಜಾಗತಿಕ ಮಟ್ಟದಲ್ಲಿ ಮಹತ್ವ ಬಂದಿದೆ.


* ಪ್ರಸ್ತುತ ಭಾರತದ ಯೋಜನೆಗೆ ಬ್ರಿಟನ್‌ ಕೂಡ ಕೈಜೋಡಿಸಿರುವುದರಿಂದ ಜಾಗತಿಕ ಮಟ್ಟದಲ್ಲಿ ಇದಕ್ಕೆ ಮಹತ್ವ ಬಂದಿದೆ. ಬೇರೆ ಬೇರೆ ದೇಶಗಳೂ ಇದಕ್ಕೆ ಕೈಜೋಡಿಸುವುದು ನಿಶ್ಚಿತವಾಗಿದ್ದು, ಅತ್ಯಂತ ದೂರಗಾಮಿ ಸತ್ಪರಿಣಾಮಗಳನ್ನು ಇದು ಹೊಂದಿದೆ.


* ತಾಪಮಾನ ಏರಿಕೆ ತಡೆಯಲು ಕಾರ್ಬನ್ ಉಗುಳುವ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಈಗಾಗಲೇ ಹಲವು ಒಪ್ಪಂದಗಳಾಗಿವೆ.


* ಕಾರ್ಬನ್ ಉಗುಳುವಿಕೆ ಕಡಿಮೆಯಾಗಬೇಕು ಅಂದರೆ, ಫಾಸಿಲ್ ಇಂಧನದಿಂದ ಓಡುವ ವಾಹನಗಳನ್ನು ಕಡಿಮೆ ಮಾಡಿ ವಿದ್ಯುಚ್ಚಾಲಿತ ವಾಹನಗಳನ್ನು ಜಗತ್ತು ಬಳಸಬೇಕು.


* ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಹಾಗೂ ಡೀಸೆಲ್ ಬಳಸುವುದನ್ನು ಬಿಟ್ಟು ಸ್ವಚ್ಛ ಇಂಧನಗಳನ್ನು ಬಳಸಬೇಕು.


* ಸ್ವಚ್ಛ ಇಂಧನ ಎಂದಾಗ ಅತ್ಯಂತ ಸುಲಭವಾಗಿ ಸಿಗುವ ಮೂಲವೆಂದರೆ ಸೌರಶಕ್ತಿ. ಇದರ ತಂತ್ರಜ್ಞಾನ ದುಬಾರಿ. ದೇಶಗಳು ತಮ್ಮ ವ್ಯಾಪ್ತಿಗೆ ಸೀಮಿತವಾಗಿ ಸೌರವಿದ್ಯುತ್ ಉತ್ಪಾದನೆಗೆ ಕೈಹಾಕಿದರೆ ಅದರ ವೆಚ್ಚ ಹೆಚ್ಚು. ಹೀಗಾಗಿ ಎಲ್ಲಾ ದೇಶಗಳೂ ಸೇರಿ ಸೌರವಿದ್ಯುತ್ ಉತ್ಪಾದನೆಗೆ ಕೈಹಾಕಿದರೆ ಅದರ ವೆಚ್ಚ ಹೆಚ್ಚು. ಹೀಗಾಗಿ ಎಲ್ಲಾ ದೇಶಗಳೂ ಸೇರಿ ಸೌರ ವಿದ್ಯುತ್ ಉತ್ಪಾದಿಸಿ ಪರಸ್ಪರರ ನಡುವೆ ತಂತ್ರಜ್ಞಾನ ಮತ್ತು ವಿದ್ಯುತ್ತನ್ನು ಹಂಚಿಕೊಳ್ಳುವ ವ್ಯವಸ್ಥೆ ಬಂದರೆ ಅದರಿಂದ ಸೌರಶಕ್ತಿಯ ಬಳಕೆಗೆ ಬಹುದೊಡ್ಡ ಉತ್ತೇಜನ ಸಿಗುತ್ತದೆ. ದೇಶ-ದೇಶಗಳ ನಡುವೆ ತೈಲ ಪೈಪ್‌ಲೈನ್, ಇಂಟರ್ನೆಟ್ ಲೈನ್ ಇರುವಂತೆ ವಿದ್ಯುತ್ ಲೈನ್ ಕೂಡ ಇರುವುದು ಅಸಾಧ್ಯವಲ್ಲ. ಇಂತಹದ್ದೊಂದು ಪರಿಕಲ್ಪನೆಯನ್ನು ಜಗತ್ತಿನ ಮುಂದೆ ಮಂಡಿಸಿ ಮೆಚ್ಚುಗೆ ಗಳಿಸುವ ಮೂಲಕ ಮೋದಿ ಅತ್ಯಂತ ಪ್ರಮುಖ ಬದಲಾವಣೆಯೊಂದಕ್ಕೆ ನಾಂದಿ ಹಾಡಿದ್ದಾರೆ. 


ಅಂತರರಾಷ್ಟ್ರೀಯ ಸೌರ ಒಕ್ಕೂಟ 


* ಇದೊಂದು ಸೌರ ಒಕ್ಕೂಟವಾಗಿದ್ದು ಭಾರತದಿಂದ ಪ್ರಾರಂಭವಾದ 124 ದೇಶಗಳ ಒಕ್ಕೂಟವಾಗಿದೆ.

* ಸ್ಥಾಪನೆ – 30 ನವೆಂಬರ್ 2015

* ಪ್ರಧಾನ್ ಕಛೇರಿ - ಗುರುಗ್ರಾಮ (ಹರಿಯಾಣ)

* ಮಹಾ ನಿರ್ದೇಶಕ - ಅಜಯ್ ಮಾಥುರ್

ಉದ್ದೇಶ - ಶುದ್ಧ ಶಕ್ತಿ ಸುಸ್ಥಿರ ಪರಿಸರ ಸಾರ್ವಜನಿಕ ಸಾರಿಗೆ & ಹವಾಮಾನವನ್ನು ಅನುಮೋದಿಸಲು ರಾಷ್ಟ್ರಗಳ ಗುಂಪನ್ನು ಒಟ್ಟುಗೂಡಿಸುವುದು.

ಕೋವ್ಯಾಕ್ಸಿನ್ ಲಸಿಕೆಗೆ WHO ಗ್ರೀನ್ ಸಿಗ್ನಲ್


* ಹೈದರಾಬಾದ್‌ನ ಭಾರತ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಅನುಮತಿ ನೀಡಿದೆ.


* ತುರ್ತು ಬಳಕೆ ಲಸಿಕೆಗಳ ಪಟ್ಟಿಯಲ್ಲಿ ಕೋವ್ಯಾಕ್ಸಿನ್ ಸೇರ್ಪಡೆಗೆ ಡಬ್ಲ್ಯೂಎಚ್‌ಒದ ತಾಂತ್ರಿಕ ಸಲಹಾ ಸಮಿತಿ ಅನುಮೋದನೆ ನೀಡಿದ್ದು, ಇದರೊಂದಿಗೆ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವಿಡ್ ಲಸಿಕೆಗೆ ಜಾಗತಿಕ ಮಾನ್ಯತೆ ದೊರೆತಂತಾಗಿದೆ.


* ಭಾರತದ ಕೋವಿಡ್ ಲಸಿಕೆಯ ಬಗ್ಗೆ ವಿಶ್ವಾಸವಿದೆ. ಭಾರತ್ ಬಯೋಟೆಕ್ ಕಂಪನಿಯು ನಿಯಮಿತವಾಗಿ ಮತ್ತು ತ್ವರಿತವಾಗಿ ಮಾಹಿತಿಗಳನ್ನು ಸಲ್ಲಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಹೇಳಿತ್ತು. ಒಮನ್ ಕೂಡ ಕೋವ್ಯಾಕ್ಸಿನ್ ಅನ್ನು ಅನುಮೋದಿತ ಕೋವಿಡ್ - 19 ಲಸಿಕೆಗಳ ಪಟ್ಟಿಗೆ ಸೇರಿಸಿತ್ತು.


* ಡಬ್ಲೂಎಚ್‌ಒ ಮಾನ್ಯತೆ ಪಡೆದ ಲಸಿಕೆಗಳು


ಕೋವಿಶೀಲ್ಡ್, ಕೋವ್ಯಾಕ್ಸಿನ್, ಫೈಜರ್, ಬಯೋಟೆಕ್, ಜಾನ್ಸನ್ ಆ್ಯಂಡ್ ಜಾನ್ಸನ್, ಮಾಡರ್ನಾ ಮತ್ತು ಸಿನೋಫಾರ್ಮಾ ಕಂಪನಿಗಳು ಉತ್ಪಾದಿಸುವ ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿದೆ.


ಕೋವ್ಯಾಕ್ಸಿನ್ ಲಸಿಕೆಗೆ ಜಾಗತಿಕ ಮನ್ನಣೆ ದೊರೆತ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮತ್ತು ಭಾರತ್ ಬಯೋಟೆಕ್ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಜಂಟಿಯಾಗಿ ಕೊವ್ಯಾಕ್ಸಿನ್ ಅಭಿವೃದ್ಧಿಪಡಿಸಿದ್ದವು.


ಕೋವ್ಯಾಕ್ಸಿನ್ ಲಸಿಕೆಯನ್ನು ಮೊದಲು ಭಾರತದಲ್ಲಿ ವಿತರಿಸುವುದಕ್ಕೆ ಸ್ಥಳೀಯ ವೈದ್ಯಕೀಯ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿತ್ತು.

* ನಂತರ ತುರ್ತು ಬಳಕೆಯ ಲಸಿಕೆಗಳ ಪಟ್ಟಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಸೇರಿಸಲು ಸಂಸ್ಥೆಯು ಆಸಕ್ತಿ ತೋರಿಸಿತು.

* ಈ ಕುರಿತು ಕಳೆದ 2021 ರ ಏಪ್ರಿಲ್ 19 ರಂದು ಅಗತ್ಯ ದಾಖಲೆಗಳೊಂದಿಗೆ ವಿಶ್ವ ಆರೋಗ್ಯ ಸಂಸ್ಥೆಗೆ ಮನವಿ ಮಾಡಿತ್ತು.

* ದಾಖಲೆಗಳನ್ನು ಪರಿಶೀಲಿಸಿದ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿಯು ನವೆಂಬರ್. 03 ರಂದು ತುರ್ತು ಬಳಕೆಗೆ ಅನುಮೋದನೆ ನೀಡಿದೆ.


ಕೋವ್ಯಾಕ್ಸಿನ್ ಬಳಕೆಯ ಅವಧಿ 12 ತಿಂಗಳಿಗೆ ವಿಸ್ತರಣೆ


ಕೋವ್ಯಾಕ್ಸಿನ್ ಬಳಕೆಯ ಅವಧಿಯನ್ನು 12 ತಿಂಗಳುಗಳಿಗೆ ವಿಸ್ತರಣೆ ಮಾಡಲಾಗಿದೆ ಎಂದು ಕೋವಿಡ್ ಲಸಿಕೆ ತಯಾರಿಕಾ ಕಂಪನಿ ಭಾರತ್ ಬಯೋಟೆಕ್ ತಿಳಿಸಿದೆ. ಬಳಕೆಯ ಅವಧಿ ವಿಸ್ತರಣೆಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಅನುಮೋದನೆ ನೀಡಿದೆ ಎಂದು ಕಂಪನಿ ಹೇಳಿದೆ. ಕೋವ್ಯಾಕ್ಸಿನ್ ಉತ್ಪಾದನೆಯಾದ ದಿನಾಂಕದಿಂದ ಅದರ ಶೆಲ್ಸ್ ಲೈಫ್ (ಬಳಕೆಯ ಅವಧಿ) ಅನ್ನು 12 ತಿಂಗಳುಗಳಿಗೆ ವಿಸ್ತರಿಸಲಾಗಿದೆ. ಹೆಚ್ಚುವರಿ ಸ್ಥಿರ ದತ್ತಾಂಶಗಳ ಆಧಾರದಲ್ಲಿ ಬಳಕೆಯ ಅವಧಿ ವಿಸ್ತರಣೆಗೆ ಸಿಡಿಎಸ್ ಸಿಒ ಅನುಮೋದನೆ ನೀಡಿದೆ. ಈ ಮಾಹಿತಿಯನ್ನು ನಮ್ಮ ಎಲ್ಲ ಪಾಲುದಾರರಿಗೂ ತಿಳಿಸಲಾಗಿದೆ ಎಂದು ಭಾರತ್ ಬಯೋಟೆಕ್ ಟ್ವೀಟ್ ಮಾಡಿದೆ.


ವಿಶ್ವ ಆರೋಗ್ಯ ಸಂಸ್ಥೆ


  • WHO-(World Health Organization)
  • ಸ್ಥಾಪನೆ – ಏಪ್ರಿಲ್ 7, 1948
  • ಕೇಂದ್ರ ಕಛೇರಿ - ಸ್ವಡ್ಡರ್‌ಲ್ಯಾಂಡಿನ ಜಿನೇವಾ.
  • ಪ್ರಸ್ತುತ ಮುಖ್ಯಸ್ಥರು ಡಾ|| ತೆಡ್ರೋಸ್ ಅಧನಂ ಗಿಬ್ರಿಯೆಸೂಸ್.
  • ವಿಶ್ವ ಆರೋಗ್ಯ ಸಂಸ್ಥೆಯ ದಿನ - ಏಪ್ರಿಲ್ 7

ಬನ್ನೇರುಘಟ್ಟದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆಗೆ ಅಸ್ತು


ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಉದ್ದ ಕೊಕ್ಕಿನ ರಣಹದ್ದುಗಳ (ಲಾಂಗ್ ಬಲ್ಡ್ ವಲ್ಚರ್ಸ್) ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣವುಳ್ಳ ಕೇಂದ್ರ ನಿರ್ಮಾಣಕ್ಕೆ ಅರಣ್ಯ ಇಲಾಖೆ ಇತ್ತೀಚೆಗೆ ಶಂಕುಸ್ಥಾಪನೆ ಮಾಡಿದೆ.


ರಾಜ್ಯದಲ್ಲಿ ರಣ ಹದ್ದುಗಳ ಸಂತತಿ ಇಳಿಮುಖವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆ, ಇವುಗಳ ಸಂತತಿ ವೃದ್ಧಿಸಲು ಯೋಜನೆ ರೂಪಿಸಿತ್ತು. ಜೊತೆಗೆ, ರಾಮನಗರ ಜಿಲ್ಲೆ ರಾಮದೇವರ ಬೆಟ್ಟದ ಬಳಿ ರಣ ಹದ್ದುಗಳ ಸಂತಾನೋತ್ಪತ್ತಿ ಕೇಂದ್ರ ನಿರ್ಮಾಣಕ್ಕೆ ನಿರ್ಧರಿಸಿತ್ತು. ಆದರೆ, ರಣಹದ್ದು ಸಂತಾನೋತ್ಪತ್ತಿಗೆ ಬೇಕಾದ ಕಟ್ಟಡ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗದ ಪರಿಣಾಮ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿತ್ತು.


* ರಣ ಹದ್ದುಗಳ ಸಂತಾನೋತ್ಪತ್ತಿ ಕೇಂದ್ರ ನಿರ್ಮಾಣಕ್ಕೆ 2019-20ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.

* ಸಂತಾನೋತ್ಪತ್ತಿ ಕೇಂದ್ರ ಸ್ಥಾಪಿಸಲು ಮೂಲಸೌಕರ್ಯ ಅಭಿವೃದ್ಧಿ ಪಡಿಸಲು 2.10 ಕೋಟಿ ರೂ. ಮತ್ತು ನಿರ್ವಹಣೆಗೆ 62.62 ಲಕ್ಷ ರೂ. ಸೇರಿದಂತೆ ಒಟ್ಟು 2.72 ಕೋಟಿ ರೂ. ಗಳ ನಿಗದಿಗೊಳಿಸಿತ್ತು. ಇದೀಗ ಕಳೆದ 20 ದಿನಗಳ ಹಿಂದೆಯಷ್ಟೇ ಸಂತಾನೋತ್ಪತ್ತಿ ಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ.


ಡಾ.ವಿಭೂಮಾರ್ಗ ದರ್ಶನ : 


ಹರ್ಯಾಣದ ಪಿಂಜಾರೋ ಎಂಬಲ್ಲಿ ಬಾಂಬೆ ನ್ಯಾಷನಲ್ ಹಿಸ್ಟರಿ ಸೊಸೈಟಿಯ ಡಾ. ವಿಭೂ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಪ್ರಾರಂಭವಾಗಿದೆ. ಕೇವಲ ಎರಡು ರಣಹದ್ದುಗಳಿಂದ ಸಂತಾನೋತ್ಪತ್ತಿ ಆರಂಭಿಸಿದ್ದು, ಇದೀಗ ಅವುಗಳ ಸಂಖ್ಯೆ 280 ಕ್ಕೆ ಹೆಚ್ಚಳವಾಗಿದೆ. ಹಾಗಾಗಿ ಡಾ. ವಿಭೂ ಮಾರ್ಗದರ್ಶನದಲ್ಲಿ ಬನ್ನೇರುಘಟ್ಟದಲ್ಲಿ ಸಂತಾನೋತ್ಪತ್ತಿ ಕೇಂದ್ರ ಪ್ರಾರಂಭಿಸಲಾಗಿದೆ.


* 4 ರಣಹದ್ದುಗಳಿಂದ ಸಂತಾನೋತ್ಪತ್ತಿ 


ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಜೋಡಿ (ನಾಲ್ಕು ರಣಹದ್ದುಗಳು) ರಣಹದ್ದುಗಳಿಂದ ಸಂತಾನೋತ್ಪತ್ತಿಗೆ ವ್ಯವಸ್ಥೆ ಮಾಡಲಾಗುವುದು. ಈ ಪಕ್ಷಿಗಳು ಕೇಂದ್ರದಿಂದ ಹೊರಕ್ಕೆ ಹೋಗದಂತೆ ಮೂಲ ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗುವುದು. ಅವುಗಳಿಗೆ ಬೇಕಾದ ಆಹಾರ ಮತ್ತು ಅವುಗಳು ವಾಸಿಸಲು ಪೂರಕವಾದ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಉಪಅರಣ್ಯ ಸಂರಕ್ಷಣಾಧಿಕಾರಿ ಪಿ.ರಮೇಶ್ ಕುಮಾರ್ ವಿವರಿಸಿದ್ದಾರೆ.

 ಇವುಗಳನ್ನೂ ಓದಿ 2



ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ


ರಾಜ್ಯ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ವಕೀಲರಾದ ಅನಂತ ರಾಮನಾಥ ಹೆಗ್ಡೆ, ಸಿದ್ದಯ್ಯ ರಾಚಯ್ಯ ಮತ್ತು ಕೆ.ಎಸ್.ಹೇಮಲೇಖ ಅವರನ್ನು ನೇಮಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ರಾಷ್ಟ್ರಪತಿಗಳ ಆದೇಶಾನುಸಾರ ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.


ಹಾಲಿ ವಕೀಲರಾಗಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಇವರನ್ನು ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಸಿಜೆಐ ಎನ್.ವಿ.ರಮಣ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ, ಕಲಬುರಗಿ ಪೀಠಗಳಿಗೆ ಒಟ್ಟು 62 ನ್ಯಾಯಮೂರ್ತಿ ಹುದ್ದೆಗಳು ಮಂಜೂರಾಗಿದ್ದು, ಸದ್ಯ 43 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಮೂವರ ನೇಮಕದಿಂದ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 46ಕ್ಕೆ ಏರಿಕೆಯಾಗಲಿದೆ.

ದೆಹಲಿ ಬಜಾರ್‌' ವೆಬ್ ಪೋರ್ಟಲ್‌ಗೆ ಚಾಲನೆ


ನಗರದ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ 'ದೆಹಲಿ ಬಜಾರ್' ವೆಬ್ ಪೋರ್ಟಲ್ ಸಿದ್ಧಪಡಿಸುತ್ತಿರುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಘೋಷಿಸಿದರು.


ಮುಂದಿನ ವರ್ಷ ಆಗಸ್ಟ್ ವೇಳೆಗೆ ಈ ಪೋರ್ಟಲ್ ಸಿದ್ಧವಾಗುವ ಪರೀಕ್ಷೆ ಇದೆ. ಇದರ ಮೂಲಕ ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ದೇಶೀಯವಾಗಿ ಮತ್ತು ವಿದೇಶಕ್ಕೂ ಮಾರಾಟ ಮಾಡಬಹುದಾಗಿದೆ ಎಂದು ಕೇಜ್ರಿವಾಲ್ ತಿಳಿಸಿದರು. 'ಈ ಪೋರ್ಟಲ್ ಬಹು ದೊಡ್ಡ ಪ್ರಮಾಣದಲ್ಲಿ ದೆಹಲಿಯ ಆದಾಯ, ಒಟ್ಟು ಆಂತರಿಕ ಉತ್ಪನ್ನ ಮತ್ತು ಆರ್ಥಿಕತೆ ವೃದ್ಧಿಗೆ ಉತ್ತೇಜನ ನೀಡುವ ನಿರೀಕ್ಷೆ ಇದೆ' ಎಂದು ಅವರು ಹೇಳಿದರು.


“ಉದ್ಯಮಿಗಳು, ವ್ಯಾಪಾರಿಗಳು, ಉತ್ಪನ್ನ ತಯಾರಕರು, ಮಾರುಕಟ್ಟೆಗಳು ಮತ್ತು ಅಂಗಡಿಯವರು ಈ ಪೋರ್ಟಲ್‌ನಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಬಹುದು ಮತ್ತು ದೇಶ ಹಾಗೂ ವಿದೇಶಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು'. 


ಇದರಲ್ಲಿ ವರ್ಚುವಲ್ ಮಾರುಕಟ್ಟೆ (ಆನ್‌ಲೈನ್ ಮಾರ್ಕೆಟ್) ಗಳು ಇವೆ. ಈ ಆನ್‌ಲೈನ್ ಮಾರುಕಟ್ಟೆಗಳ ಮೂಲಕ ಜನರು ತಮಗೆ ಬೇಕಾದ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಂಡು ಖರೀದಿಸಬಹುದು. ಅಷ್ಟೇ ಅಲ್ಲ, ವರ್ಚುವಲ್ ಆಗಿ ಉತ್ಪನ್ನಗಳ ಪ್ರದರ್ಶನವನ್ನು ಆಯೋಜಿಸಬಹುದು.


ನವದೆಹಲಿ ಕೇಂದ್ರಾಡಳಿತ ಪ್ರದೇಶ 


* ದೆಹಲಿಯು 1911 ರಿಂದ ಭಾರತದ ರಾಜಧಾನಿಯಾಗಿದೆ.

* ದೆಹಲಿ ಸ್ಥಾಪಕರು - ತೋಮರರು

* ದೆಹಲಿಯ ಮೊದಲ ಹೆಸರು - ಇಂದ್ರಪ್ರಸ್ಥ

* ದೆಹಲಿಯು “ರೈಸನ್ ಹಿಲ್ಸ್” ಬೆಟ್ಟದ ಮೇಲಿದೆ.

* ದೆಹಲಿಯು ತನ್ನದೇ ಆದ ಹೈಕೋರ್ಟ್ ಹೊಂದಿದ ಏಕೈಕ ಕೇಂದ್ರಾಡಳಿತ ಪ್ರದೇಶವಾಗಿದೆ.

* ದೆಹಲಿಯಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೆ.

* ದೆಹಲಿಯಲ್ಲಿ ಭಾರತದ ಪ್ರಥಮ ಮಸೀದಿ “ಕುವತ್-ಉಲ್-ಇಸ್ಲಾಂ” ಇದೆ.



 ಇವುಗಳನ್ನೂ ಓದಿ 



 ಇವುಗಳನ್ನೂ ಓದಿ 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Also Read: 12 October 2021 Detailed daily Current Affairs in Kannada for All Competitive Exams  

💥 Also Read: 13 October 2021 Detailed daily Current Affairs in Kannada for All Competitive Exams  

💥 Also Read: 14, 15,  16 and 17 October 2021 Detailed daily Current Affairs in Kannada for All Competitive Exams  

💥 Also Read: 18 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 














No comments:

Post a Comment

Important Notes

Random Posts

Important Notes

Popular Posts

Top-50 General Knowledge (GK) Question Answers in Kannada for All Competitive Exams-05

Top-50 General Knowledge (GK) Question Answers in  Kannada for All Competitive Exams-05 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's El...

03rd January 2025 Daily Current Affairs Quiz in Kannada for All Competitive Exams

          03rd January 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-03rd January 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

02nd January 2025 Daily Current Affairs Quiz in Kannada for All Competitive Exams

          02nd January 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-02nd January 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Child Development and Pedagogy Quiz in Kannada for TET, CTET, and GPSTR Competitive Exams

          Child Development and Pedagogy Quiz in Kannada for TET, CTET, and GPSTR Competitive Exams 🌺 Child Development and Pedagogy Quiz in Kannada for TET, CTET, and GPSTR Competitive Exams (Quiz) Mock Test-2021 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Child Development and Pedagogy Quiz in Kannada for TET, CTET, and GPSTR Competitive Exams Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Child Development and Pedagogy Quiz in Kannada for TET, CTET, and GPSTR Competitive Exams, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Top-100 General Knowledge (GK) Question Answers in Kannada for All Competitive Exams-01

Top-100 General Knowledge (GK) Question Answers in  Kannada for All Competitive Exams-01 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's E...