Type Here to Get Search Results !

18-09-2021 Current Affairs in Kannada for All Competitive Exams

18-09-2021 Current Affairs in Kannada for All Competitive Exams

18-09-2021 Current Affairs in Kannada for All Competitive Exams


ವಿಶ್ವ ಓಜೋನ್ ದಿನ : ಸೆಪ್ಟಂಬರ್-16


ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ, ಓಜೋನ್ ಪದರ ನಮ್ಮನ್ನು ಸೂರ್ಯನಿಂದ ಬರುವ ಅತಿ ನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ಇಂತಹ ಮಹತ್ವದ ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್-16ನ್ನು 'ವಿಶ್ವ ಓಜೋನ್ ದಿನ' ಎಂದು ಆಚರಿಸಲಾಗುತ್ತದೆ. 2021ರ ಧೈಯವಾಕ್ಯ : 'ಕೀಪಿಂಗ್ ಅಸ್, ಅವರ್ ಫುಡ್ ಆ್ಯಂಡ್ ವ್ಯಾಕ್ಸಿನ್ ಕೂಲ್' ಎಂಬ ಧೈಯದೊಂದಿಗೆ ಆಚರಿಸಲಾಗುತ್ತಿದೆ. ಇದರ ಅರ್ಥ ಶಾಖವರ್ಧಕ ಅನಿಲಗಳ ಹೊಮ್ಮುವಿಕೆಯನ್ನು ಕಡಿತ ಮಾಡಿ ನಮ್ಮ ಆಹಾರ, ಆರೋಗ್ಯ ಮತ್ತು ಲಸಿಕೆಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂಬುದು ಅದರ ಸಂದೇಶ.


ಭೂಮಿಯ ಮೇಲೆ 20 ಕಿ.ಮೀ. ಎತ್ತರದಲ್ಲಿ ಶುರುವಾಗಿ 50 ಕಿ.ಮೀ. ವರೆಗೂ ವ್ಯಾಪಿಸಿರುವ ಓಜೋನ್ ಪದರದ ಇರುವಿಕೆಯನ್ನು 1839ರಲ್ಲಿ ಕಂಡುಹಿಡಿಯಲಾಯಿತು. ಓಜೋನ್ ಎನ್ನುವುದು ನೀಲಿಬಣ್ಣದ ನೈಸರ್ಗಿಕ ಅನಿಲ.


1880ರಲ್ಲಿ ಓಜೋನ್ ಅತೀ ಹೆಚ್ಚು ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುವ ಅನಿಲವೆಂದು ಸಂಶೋಧಿಸಲಾಗಿದೆ. ಓಜೋನ್ ಪದರ ಅಳತೆಯನ್ನು ಡಾಬ್ಬನ್ ಯುನಿಟ್‌ನಿಂದ ಅಳೆಯುತ್ತಾರೆ. ಈ ತರಹದ ವಿಶೇಷತೆ ಹೊಂದಿದ ಓಜೋನ್ ಪದರು ಮೊದಲ ಸಲ ಅಂಟಾರ್ಕ್ಟಿಕದ ಮೇಲೆ ವಾಯುಮಂಡಲ ಓಜೋನ್ ಪದರಕ್ಕೆ ತೂತಾಗಿದೆ ಎಂದು ತಿಳಿದ ವಿಜ್ಞಾನಿಗಳು ಅದಕ್ಕೆ ಕ್ಲೋರಿನ್ ಅಣು ಮತ್ತು ಕ್ಲೋರಿನ್ ಮೊನಾಕ್ಸೆಡ್‌ನಿಂದ ಉಂಟಾಗಿದೆ ಎಂದು ತಿಳಿದರು. ಆದ್ದರಿಂದ ಇದನ್ನು ತಡೆಗಟ್ಟಲು 1987 ಸೆಪ್ಟೆಂಬರ್ 16ರಲ್ಲಿ ಮಾಂಟ್ರಿಯಲ್ ಪ್ರೋಟೋಕಾಲ್‌ನಲ್ಲಿ ಹಾಗೂ 1994 ಸೆಪ್ಟೆಂಬರ್ 16ರಲ್ಲಿ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಓಜೋನ್ ಪದರದ ಸಂರಕ್ಷಣೆ ಸಂಬಂಧಿಸಿದ ಅಂತಾರಾಷ್ಟ್ರೀಯ ದಿನ ಆಚರಿಸಲು ನಿರ್ಧರಿಸಲಾಯಿತು. ಓಜೋನ್ ಪದರ ಛಿದ್ರವಾಗುವುದನ್ನು ತಡೆಯಲು ಸಿಎಫ್ಸಿ (ಕ್ಲೋರೋ ಫ್ಲೋರೋ ಕಾರ್ಬನ್) ಮತ್ತು ಬಿಎಫ್‌ಸಿ (ಬೋಮೋ ಘೋರೋ ಕಾರ್ಬನ್) ನಿಷೇಧಿಸಿ ಈ ಎಚ್ಎಫ್‌ಸಿಗಳನ್ನು (ಹೈಡೋ ಕ್ಲೋರೋ ಫೈರೋ ಕಾರ್ಬನ್) ಬಳಸಲು ಪ್ರಾರಂಭಿಸಿದ್ದೇವೆ.


Note : ವಿಶ್ವ ಸಂಸ್ಥೆಯ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಜಗತ್ತಿನಲ್ಲಿ ಅತೀ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಮೊದಲ ಸ್ಥಾನ ಚೀನಾ, ಭಾರತ 4ನೇ ಸ್ಥಾನದಲ್ಲಿದೆ.

# ಅತೀ ಕಡಿಮೆ ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಇಥಿಯೋಪಿಯಾ ಮೊದಲನೇ ಸ್ಥಾನದಲ್ಲಿದೆ.


2020ರ ರಾಷ್ಟ್ರೀಯ ಅಪರಾಧ ಬ್ಯೂರೋ ವರದಿ ಬಿಡುಗಡೆ


ರಾಷ್ಟ್ರೀಯ ಅಪರಾಧ ದಾಖಲೆ ಘಟಕ (NCRB) ವು 2020ರ ಸಾಲಿನ ವಿವಿಧ ವಿಭಾಗದ ಭಾರತದಲ್ಲಿನ ಅಪರಾಧ "d 2ಜಿ ಗಳ ವರದಿ ಬಿಡುಗಡೆ ಮಾಡಿದೆ.

1) ಕೊಲೆ ಪ್ರಕರಣ ವರದಿ - 2020

ಕೊರೋನಾ ಸಾಂಕ್ರಾಮಿಕತೆಯಿಂದ ಲಾಕ್‌ಡೌನ್ ಇದ್ದ ಹೊರತಾಗಿಯೂ ಮಹಿಳೆಯ ಮೇಲೆ ಕೊಲೆ ಪ್ರಕರಣಗಳಲ್ಲಿ ಅಷ್ಟೇನೂ ಇಳಿಕೆ ಕಂಡಿಲ್ಲ.  2020ರ ವರದಿ ಪ್ರಕಾರ ದೇಶದಲ್ಲಿ ಪ್ರತಿ ದಿನ ಸರಾಸರಿ 80 ಕೊಲೆ ಪ್ರಕರಣಗಳು ದಾಖಲೆಯಾಗಿವೆ ಎಂದು ರಾಷ್ಟ್ರೀಯ ಅಪರಾಧ ಬ್ಯೂರೋ ವರದಿ ಮಾಡಿದೆ.


ಅತೀ ಹೆಚ್ಚು ಕೊಲೆ ಪ್ರಕರಣ ನಡೆದ ರಾಜ್ಯಗಳು:

ಎ) ಉತ್ತರ ಪ್ರದೇಶ - 3779

ಬಿ) ಬಿಹಾರ - 3150

ಸಿ) ಮಹಾರಾಷ್ಟ್ರ - 2163

Note : ಕರ್ನಾಟಕ ಅತೀ ಹೆಚ್ಚು ಕೊಲೆ ನಡೆದ ರಾಜ್ಯಗಳ ಪೈಕಿ 10ನೇ ಸ್ಥಾನ ಪಡೆದುಕೊಂಡಿದೆ.

2) ಅತ್ಯಾಚಾರ ಪ್ರಕರಣ ವರದಿ - 2020 

ದೇಶದಲ್ಲಿ 2020ರಲ್ಲಿ ಪ್ರತಿ ದಿನ ಸರಾಸರಿ 77 ಅತ್ಯಾಚಾರ ನಡೆದು ಒಟ್ಟು 28,046 ರೇಪ್ ಕೇಸ್‌ಗಳು ದಾಖಲಾಗಿವೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ (ಯುಟಿ) ಪೈಕಿ ರಾಜಸ್ಥಾನದಲ್ಲಿ ಅತೀ ಹೆಚ್ಚು ಪ್ರಕರಣಗಳು ನಡೆದಿವೆ.


ಟಾಪ್ 3 ರಾಜ್ಯಗಳು

ಎ) ರಾಜಸ್ಥಾನ - 5310

ಬಿ) ಉತ್ತರ ಪ್ರದೇಶ - 2769

ಸಿ) ಮಧ್ಯ ಪ್ರದೇಶ - 2339


Note : ಅತೀ ಹೆಚ್ಚು ಅತ್ಯಾಚಾರ ನಡೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 14ನೇ ಸ್ಥಾನ ಪಡೆದುಕೊಂಡಿದೆ.


3) ದಲಿತರ ಮೇಲಿನ ದೌರ್ಜನ್ಯಗಳ ವರದಿ:

ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ನಡೆದ ದೌರ್ಜನ್ಯ ಪ್ರಕರಣಗಲ್ಲಿ 2020ರಲ್ಲಿ ಹೆಚ್ಚಳವಾಗಿವೆ ಎನ್ನುವ ಅಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆ ಘಟಕ (ಎನ್‌ಸಿಆರ್‌ಬಿ) ದ 'ಭಾರತದಲ್ಲಿ ಅಪರಾಧ 2020' ವರದಿಯು ಬಿಡುಗಡೆಗೊಳಿಸಿದೆ.


2020ರಲ್ಲಿ ಪರಿಶಿಷ್ಟ ಜಾತಿಯ ಜನರ ಮೇಲಿನ ದೌರ್ಜನ್ಯದಲ್ಲಿ ಶೇ. 9.4 ರಷ್ಟು ಹೆಚ್ಚಳವಾಗಿದ್ದರೆ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯದಲ್ಲಿದೆ ಶೇ.9.3 ರಷ್ಟು ಹೆಚ್ಚಾಗಿದೆ. ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳು (12,714) ಉತ್ತರ ಪ್ರದೇಶದಲ್ಲಿ ನಡೆದಿವೆ. ಆದರೆ ಸರಾಸರಿ ದರದಲ್ಲಿ ನಾಲ್ಕನೇಯ ಸ್ಥಾನದಲ್ಲಿದೆ. ಆ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಪ್ರತಿ ಒಂದು ಲಕ್ಷ ಜನಸಂಖ್ಯೆಯ ವಿರುದ್ಧ 30.7 ಅಪರಾಧಗಳು ದಾಖಲಾಗಿವೆ.


ಮಧ್ಯಪ್ರದೇಶವು ಗರಿಷ್ಠ ದರ (60.8)ವನ್ನು ದಾಖಲಿಸಿದ್ದರೆ, ರಾಜಸ್ಥಾನ (57.4) ಮತ್ತು ಬಿಹಾರ (44.5) ನಂತರದ ಸ್ಥಾನಗಳಲ್ಲಿವೆ. 2019ರಲ್ಲಿ 45,961ರಷ್ಟಿದ್ದ. ಎಸ್.ಸಿ.ಗಳ ವಿರುದ್ಧದ ಅಪರಾಧಗಳ ಒಟ್ಟು ಸಂಖ್ಯೆಯು 2020 ರಲ್ಲಿ 50,291ಕ್ಕೆ ಏರಿಕೆಯಾಗಿದೆ ಎಂದು ವರದಿಯು ತಿಳಿಸಿದೆ.


ಪರಿಶಿಷ್ಟ ಪಂಗಡಗಳ ವಿರುದ್ಧ ಅಪರಾಧಗಳಲ್ಲಿ ಕೇರಳ  ಗರಿಷ್ಠ ದರ (26.8)ವನ್ನು ದಾಖಲಿಸಿದ್ದರೆ, ರಾಜಸ್ಥಾನ (20.3)

ಮತ್ತು ತೆಲಂಗಾಣ (17.4) ನಂತರದ ಸ್ಥಾನಗಳಲ್ಲಿವೆ.


ಅಸ್ಸಾಮ್‌ನಲ್ಲಿ ಮಹಿಳೆಯರ ಮೇಲೆ ಅಧಿಕ ದೌರ್ಜನ್ಯ


ದೇಶದಲ್ಲಿ ಮಹಿಳೆಯರ ವಿರುದ್ಧ ಅತ್ಯಧಿಕ ಅಪರಾಧ ದರವನ್ನು ಅಸ್ಸಾಂ ದಾಖಲಿಸಿದೆ. ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ದಾಖಲಾಗಿರುವ ಅಪರಾಧಗಳ ಸಂಖ್ಯೆಗೆ ಅನುಗುಣವಾಗಿ ಅಪರಾಧ ದರವನ್ನು ನಿರ್ಧರಿಸಲಾಗುತ್ತದೆ. ದೇಶದಲ್ಲಿ 2019 ರಲ್ಲಿ 4,05,326 ರಷ್ಟಿದ್ದ ಮಹಿಳೆಯರ ವಿರುದ್ಧದ ಅಪರಾಧಗಳ ಸಂಖ್ಯೆ ಕಳೆದ ವರ್ಷ 3,71,503ಕ್ಕೆ ಇಳಿದಿದೆ.


ದಾಖಲಾಗಿರುವ ಪ್ರಕರಣಗಳಲ್ಲಿ ಹೆಚ್ಚಿನವು (ಶೇ. 30) ಪತಿ ಅಥವಾ ಆತನ ಬಂಧುಗಳಿಂದ ಕ್ರೌರ್ಯಕ್ಕೆ ಸಂಬಂಧಿಸಿದ್ದರೆ, ಶೇ. 23ರಷ್ಟು ಮಹಿಳೆಯ ಗೌರವಕ್ಕೆ ಚ್ಯುತಿಯನ್ನುಂಟು ಮಾಡುವ ಉದ್ದೇಶದಿಂದ ಹಲ್ಲೆಗೆ ಮತ್ತು ಶೇ. 7.5ರಷ್ಟು ಪ್ರಕರಣಗಳು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿವೆ.


: ಪ್ರಮುಖಾಂಶಗಳು:


1. ಅಮೆರಿಕಾದ ಖಾಸಗಿ ಬಾಹ್ಯಾಕಾಶ ಕೇಂದ್ರ ಸ್ಪೇಸ್ ಎಕ್ಸ್ ತನ್ನ ಮೊದಲ ಪ್ರವಾಸೋದ್ಯಮ ಮಿಷನ್ 'ಇನ್ಸ್ಪಿರೇಷನ್- 4'ಗೆ ಚಲನೆ ನೀಡಿದೆ.- ಈ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ಕೇವಲ ಕೆಲವೇ ತಿಂಗಳ ತರಬೇತಿ ಪಡೆದಿರುವ ಶಿಫ್ಟ್-4 ಪೇಮೆಂಟ್ಸ್ ಸಂಸ್ಥೆಯ ಸ್ಥಾಪಕ ಯಾರೇಡ್ ಐಸಾಕ್ಕನ್‌ರ ಜೊತೆಗೂಡಿ 4 ಜನ ಫ್ಲಾರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಪ್ರಾಚೀನ ಉಡಾವಣಾ ಸಂಕೀರ್ಣ 39ಎ ದಿಂದ ಡ್ರಾಗನ್ ಕ್ಯಾಸ್ಟೋಲ್‌ನ್ನು ಹೊತ್ತ 'ಫಾಲ್ಕನ್-9² ರಾಕೆಟ್ ಮೂಲಕ ಮೂರು ದಿನಗಳ ಕಾಲ ಭೂಮಿಗೆ ಸುತ್ತು ಹಾಕಿ ಬೃಹತ್‌ ಪ್ಯಾರಾಚೂಟ್‌ಗಳ ಸಹಾಯದಿಂದ ಭೂಮಿಗೆ ಮರಳಲಿದ್ದಾರೆ.


ಹೈದರಾಬಾದ್ ವಿಮೋಚನಾ ದಿನ : ಸೆಪ್ಟೆಂಬರ್ - 07


17 ಸೆಂಪ್ಟೆಂಬರ್ 1948 ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ದಿನ. ಇದನ್ನು ಹೈದರಾಬಾದ್-ಕರ್ನಾಟಕ ವಿಮೋಚನಾ ದಿನ ಎಂದು ಆಚರಿಸಲಾಗುತ್ತದೆ. ಈಗ ಇದನ್ನು ಕಲ್ಯಾಣ ಕರ್ನಾಟಕ ದಿನಾಚರಣೆಯೆಂದು ಮರುನಾಮಕರಣ ಮಾಡಿ ಆಚರಿಸಲಾಗುತ್ತಿದೆ.


1947 ರ ಆಗಸ್ಟ್ 15 ರಂದು ಕರ್ನಾಟಕವು ದೇಶದ ಇತರ ಭಾಗಗಳೊಂದಿಗೆ ಸ್ವತಂತ್ರವಾದರೂ, ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದ ರಾಜ್ಯದ ಕೆಲವು ಭಾಗಗಳಲ್ಲಿ ಇದು ಸಂಭವಿಸಲಿಲ್ಲ. ಕರ್ನಾಟಕ ರಾಜ್ಯದ ಈಶಾನ್ಯ ಜಿಲ್ಲೆಗಳಾದ ಬೀದರ್, ಗುಲ್ಬರ್ಗಾ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯ ನಗರ ಹಾಗೂ ಬಳ್ಳಾರಿಗಳನ್ನೊಳಗೊಂಡ ದೊಡ್ಡ ಭೂಭಾಗ ಮಾತ್ರ ಸ್ವಾತಂತ್ರ್ಯ ಪಡೆಯಲು ವಿಫಲವಾಯಿತು. ವಿಮೋಚನೆ 1948, ಸೆ. 17 ಸಾಮಾನ್ಯ ಜನರ ಹಾಗೂ ಹೋರಾಟಗಾರರ ಮನವಿ ಆಧರಿಸಿ ಕೆ.ಎಂ.ಮುನ್ಶಿಯವರು ಸಲ್ಲಿಸಿದ ವರದಿ ಮೇರೆಗೆ ಕೊನೆಗೂ ಸಾಮಾನ್ಯ ಜನರ ಮನವಿಗೆ ಕಿವಿಗೊಟ್ಟ ಅಂದಿನ ಗೃಹಸಚಿವರಾಗಿದ್ದ ಸರ್ದಾರ ವಲ್ಲಭಭಾಯಿ ಪಟೇಲ್‌ರು “ಆಪರೇಷನ್ ಪೋಲೊ' ಎಂದು ಕರೆಯಲಾಗುವ ಪೊಲೀಸ್ ಕಾರ್ಯಾಚರಣೆ ನಡೆಸಲು ಆದೇಶ ನೀಡಿದರು. ಭಾರತವು ಹೈದರಾಬಾದ್ ನೊಂದಿಗೆ ಮಾಡಿ ಕೊಂಡಿದ್ದ 'ಸ್ಟ್ಯಾಂಡ್ ಸ್ಟೀಲ್ ಅಗ್ರಿಮೆಂಟ್‌'ನ ಅವಧಿ ಮುಗಿವ ಮುನ್ನವೇ ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆ ನೇತೃತ್ವವನ್ನು ಜನರಲ್ ಜೆ.ಎನ್.ಚೌಧರಿ ವಹಿಸಿಕೊಂಡಿದ್ದರು. ಸೆಪ್ಟೆಂಬರ್ 13 ರಂದು ಕಾರ್ಯಾಚರಣೆ ಆರಂಭವಾಯಿತು. ಈ ಕಾರ್ಯಚರಣೆಯನ್ನು ಎದುರಿಸಲಾಗಿದೆ 1948ರ ಸೆ. 17 ರಂದು ನಿಜಾಮ ಉಸ್ಮಾನ್ ಅಲಿ ಖಾನ್ ಶರಣಾದನು. ಹೈದರಾಬಾದ್ ಪ್ರಾಂತ್ಯ ಭಾರತದೊಂದಿಗೆ ವಿಲೀನವಾಯಿತು. 


ಹೈದರಾಬಾದ್ ಸಂಸ್ಥಾನ ಹೈದರಾಬಾದ್‌ನ ನವಾಬ ಅಸಫಜಹಾ ಮನೆತನದ ಮೀರ್ ಕಮರುದ್ದೀನ್ ಚಿನ್ ಖಿಲಿಚ್ ಖಾನ್ ನಿಜಾಂ ಉಲ್ ಮುಲ್ಕ್ ಆಲಿ ಖಾನ್ ಬಹದ್ದೂರ್‌ನ ಆಳ್ವಿಕೆಗೆ 1724 ರಲ್ಲೇ ಒಳಪಟ್ಟಿತ್ತು. ರೈಲು, ಅಂಚೆ ಸೇವೆ, ತನ್ನದೇ ಆದ ಕರೆನ್ಸಿ ಹೊಂದಿದ ರಾಜ್ಯವದು. ಒಟ್ಟಾರೆ 86.698 ಚದರ ಮೈಲು ವಿಸ್ತೀರ್ಣವಿತ್ತು. 1.80 ಕೋಟಿ ಜನಸಂಖ್ಯೆ ಇದ್ದ, ಕೃಷಿ ಆಧಾರಿತ ವಿಶಾಲ ರಾಜ್ಯವದು.


1947ರ ಇಂಡಿಯನ್ ಇಂಡಿಪೆಂಡೆನ್ಸ್ ಆ್ಯಕ್ಟ್ :


ಭಾರತ-ಪಾಕಿಸ್ತಾನ ವಿಭಜನೆ ನಂತರ ಬಂದ ಸ್ವಾತಂತ್ರ್ಯದ ಸಂದರ್ಭದಲ್ಲಿ ಈಗ ಭಾರತ ಅಥವಾ ಪಾಕಿಸ್ತಾನದಲ್ಲಿ ಇರುವ ಎಲ್ಲ ಪ್ರದೇಶಗಳಿಗೂ ಏಕಕಾಲಕ್ಕೆ ಸ್ವಾತಂತ್ರ್ಯ ದೊರಕಿರಲಿಲ್ಲ. ಅದಕ್ಕೆ ಕಾರಣ ಬ್ರಿಟಿಷ್ ಸರಕಾರ ರೂಪಿಸಿದ 1947ರ “ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್' ಭಾರತೀಯ ರಾಷ್ಟ್ರೀಯ ಕಾಂಗ್ರೇಸ್, ಮುಸ್ಲಿಂ ಲೀಗ್ ಹಾಗೂ ಸಿಖ್ ಸಮುದಾಯಗಳು ಆಗ ವೈಸರಾಯ್ ಆಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ ಜತೆಗೆ ಮಾಡಿಕೊಂಡ ಒಪ್ಪಂದ ಆಧರಿಸಿ 'ಮೌಂಟ್ ಬ್ಯಾಟನ್ ಪ್ಲಾನ್' ರೂಪುಗೊಂಡಿತು. ಅದರ ಪ್ರಕಾರ ಆಗ ಅಸ್ತಿತ್ವದಲ್ಲಿ ಇದ್ದ 636 ರಾಜಪ್ರಭುತ್ವ (ಪ್ರಿನ್ಸ್‌ಲಿ ಸ್ಟೇಟ್ಸ್) ಗಳ ಜತೆಗಿನ ಬ್ರಿಟಿಷರ ಒಪ್ಪಂದಗಳು ಕೊನೆಗೊಳ್ಳುವುದರಿಂದ ಅಲ್ಲಿನ ರಾಜಪ್ರಭುತ್ವಗಳ ಮುಂದೆ ಭಾರತದ ಅಥವಾ ಪಾಕಿಸ್ತಾನದ ಜತೆ ಸೇರುವುದು ಅಥವಾ ಸ್ವತಂತ್ರವಾಗಿ ಉಳಿವ ಆಯ್ಕೆಗಳ ಅವಕಾಶ ನೀಡಲಾಗಿತ್ತು.


ಆರಂಭದಲ್ಲಿ ಮೈಸೂರು ಸೇರಿದಂತೆ 565 ಪ್ರಾಂತ್ಯಗಳ ರಾಜರು ಭಾರತದ ಒಕ್ಕೂಟ ಸೇರಲು ಪ್ರತಿರೋಧಿಸಿದರು. ಪ್ರಜೆಗಳ ಒತ್ತಡದಿಂದ ಅನಿವಾರ್ಯವಾಗಿ ಒಪ್ಪಿದರು. ಆ ಪೈಕಿ ಮುಸ್ಲಿಮ್ ಸಮುದಾಯದ ಪ್ರಜೆಗಳು ಹೆಚ್ಚಾಗಿದ್ದ ಹಿಂದು ದೊರೆ ಆಳುತ್ತಿದ್ದ ಕಾಶ್ಮೀರ ಹಾಗೂ ಹಿಂದು ಪ್ರಜೆಗಳ ಹೆಚ್ಚಾಗಿದ್ದು ಮುಸ್ಲಿಮ್ ದೊರೆಗಳು ಆಡಳಿತ ನಡೆಸುತ್ತಿದ್ದ ಜುನಾಗಡ್ ಮತ್ತು ಹೈದರಾಬಾದ್‌ಗಳು ಉಭಯ ಹೊಸ ದೇಶಗಳನ್ನು ಸೇರಲು ಹಿಂದೇಟು ಹಾಕಿದವು.


ಮಾಹಿತಿ ಸೌಜನ್ಯ : ಗುರುದೇವ ಐಎಎಸ್ ಮತ್ತು ಕೆಎಎಸ್ ಅಕ್ಯಾಡೆಮಿ, ಸಪ್ತಾಪುರ, ಧಾರವಾಡ.



Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section