Breaking

Monday, 4 October 2021

Top History Multiple Choice Question Answers with Explanation in Kannada for All Competitive Exams-02

 

ಇತಿಹಾಸದ ಸೂಪರ್ ಪ್ರಶ್ನೋತ್ತರಗಳು-02

Top History Multiple Choice Question Answers with Explanation in Kannada for All Competitive Exams-02

💥💥💥

ಇವುಗಳನ್ನೂ ಓದಿ 












1. “ವೇದಮಾರ್ಗ ಪ್ರತಿಷ್ಠಾಪಕ" ಎಂಬ ಬಿರುದನ್ನು ಧರಿಸಿದ್ದ ವಿಜಯನಗರದ ದೊರೆ
ಎ) ಮೊದಲನೆ ಹರಿಹರ
ಬಿ) ಮೊದಲನೆ ಬುಕ್ಕರಾಯ
ಸಿ) ಎರಡನೆ ದೇವರಾಯ
ಡಿ) ಕೃಷ್ಣದೇವರಾಯ


ಸರಿಯಾದ ಉತ್ತರ: ಬಿ) ಮೊದಲನೆ ಬುಕ್ಕರಾಯ


ವಿವರಣೆ :- ಒಂದನೇ ಹರಿಹರನ ನಂತರ ಅವನ ಕಿರಿಯ ಸೋದರ ಒಂದನೇ ಬುಕ್ಕರಾಯನು ಸಿಂಹಾಸನವನ್ನೇರಿದನು. ಇವನು ಪರಾಕ್ರಮಿಯಾಗಿದ್ದು ಅನೇಕ ದಂಗೆಗಳನ್ನು ಅಡಗಿಸಿದನು. ಅಷ್ಟೇ ಅಲ್ಲದೆ ಧರ್ಮ ಸಹಿಷ್ಣುವಾಗಿದ್ದು, ಧರ್ಮದ ಬೆಳವಣಿಗೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟನು. ಇವನ ಕಾಲದಲ್ಲಿ ವಿಜಯನಗರ ವೇದಾಧ್ಯಯನಗಳ ಕೇಂದ್ರವಾಗಿತ್ತು. ಸರ್ವಧರ್ಮಗಳ ನೆಲೆವೀಡಾಯಿತು. ಇವನ ಸಾಧನೆಗಳ ಫಲವಾಗಿ ಇವನಿಗೆ 'ವೈದಿಕ ಮಾರ್ಗ ಪ್ರವರ್ತಕ' ಎಂಬ ಪ್ರಶಸ್ತಿ ಸಂದಿತು ಎಡತೊರೆಯ ಶಾಸನವು 'ಮ್ಲೇಚ್ಛರಿಂದ ಭಾರತವನ್ನು ಉದ್ಧಾರಗೊಳಿಸಲು ಬಂದ ದೊರೆ' ಎಂಬುದಾಗಿ ವರ್ಣಿಸಿದೆ.

2. ಬೆಂಗಳೂರನ್ನು ಮೊಘಲರಿಂದ ಕೊಂಡುಕೊಂಡ ಮೈಸೂರಿನ ದೊರೆ.
ಎ) ರಾಜ ಒಡೆಯರು
ಬಿ) ಚಿಕ್ಕದೇವರಾಜ ಒಡೆಯರು
ಸಿ) ದೊಡ್ಡದೇವರಾಜ ಒಡೆಯರು
ಡಿ) ಮೂರನೆ ಕೃಷ್ಣರಾಜ ಒಡೆಯರು


ಸರಿಯಾದ ಉತ್ತರ: ಬಿ) ಚಿಕ್ಕದೇವರಾಜ ಒಡೆಯರು


ವಿವರಣೆ :- ಚಿಕ್ಕ ದೇವರಾಜ ಒಡೆಯರು ಮೈಸೂರಿನ ಮೊದಲ ಅರಸರಲ್ಲಿ ಪ್ರಮುಖರಾದವರು. ಇವರ ಕಾಲ ಕ್ರಿ.ಶ. 1672-1704. ಇವರು ಮರಾಠರ ದಾಳಿಗಳನ್ನು, 1675ರಲ್ಲಿ ಬಿಜಾಪುರದ ಜನರಲ್ ರಣದುಲ್ಲಾ ಖಾನನನ್ನು, 1679ರಲ್ಲಿ ತಿಮ್ಮಪ್ಪಗೌಡ ಮತ್ತು ರಾಮಪ್ಪಗೌಡ ಪಾಳೆಗಾರರನ್ನು ಸೋಲಿಸಿ ತನ್ನ ರಾಜ್ಯ ವಿಸ್ತರಿಸಿದನು. ನಂತರ ಶಿವಾಜಿ ಮತ್ತು ಅವನ ಮಗ ಸಂಭಾಜಿಯ ದಾಳಿಗಳನ್ನು ಹಿಮ್ಮೆಟ್ಟಿಸಿದನು. ಈ ಮಧ್ಯೆ ಔರಂಗಜೇಬ್ ಬಿಜಾಪುರ ಮತ್ತು ಶಿರಾಗಳನ್ನು ವಶಪಡಿಸಿಕೊಂಡು ಮೈಸೂರಿನ ಸಮೀಪದವರೆಗೂ ವಿಸ್ತರಿಸಿದನು. 1687ರಲ್ಲಿ ಔರಂಗಜೇಬಿನ ದಳಪತಿ ಖಾಸಿಮ್ ಖಾನ್ ಮರಾಠರಿಂದ ಬೆಂಗಳೂರನ್ನು ಗೆದ್ದುಕೊಂಡನು. ಸೇನೆಯ ಖರ್ಚು ಮೊದಲಾದ ಬಾಬ್ತುಗಳಿಂದಾಗಿ ಅವನು ಹಣದ ಅವಶ್ಯಕತೆಯಿಂದ ಬೆಂಗಳೂರನ್ನು ಚಿಕ್ಕದೇವರಾಜ ಒಡೆಯನಿಗೆ 3 ಲಕ್ಷಕ್ಕೆ ಮಾರಾಟ ಮಾಡಿದನು.

3. ಇಮ್ಮಡಿ ಪುಲಕೇಶಿ ತನ್ನ ಆಸ್ಥಾನದಲ್ಲಿ ಪರ್ಷಿಯಾದ ರಾಯಭಾರಿಗಳನ್ನು ಬರಮಾಡಿಕೊಳ್ಳುತ್ತಿರುವ ದೃಶ್ಯವನ್ನು ತೋರುವ ಚಿತ್ರ ಈ ಸ್ಥಳದಲ್ಲಿದೆ
ಎ) ಐಹೊಳೆ
ಬಿ) ಬಾದಾಮಿ
ಸಿ) ಪಟ್ಟದಕಲ್ಲು
ಡಿ) ಅಜಂತಾ


ಸರಿಯಾದ ಉತ್ತರ: ಡಿ) ಅಜಂತಾ

ವಿವರಣೆ :- ಕರ್ನಾಟಕದ ಇತಿಹಾಸದಲ್ಲಿ ಬಾದಾಮಿಯ ಚಾಲುಕ್ಯರ ಆಳ್ವಿಕೆ ತುಂಬಾ ಪ್ರಸಿದ್ಧವಾದದ್ದು ಇವರ ಸಾಮ್ರಾಜ್ಯ ಉತ್ತರದ ನರ್ಮದಾ ತೀರದಿಂದ ದಕ್ಷಿಣದ ಕಾವೇರಿ ನದಿಯವರೆಗೆ ವಿಸ್ತರಿಸಿತ್ತು. ಇವರ ಖ್ಯಾತಿ ಚೀನ, ಪರ್ಶಿಯಾಗಳವರೆಗೂ ಹರಡಿತ್ತು. ಈ ವಂಶದ ಪ್ರಸಿದ್ಧ ದೊರೆ ಇಮ್ಮಡಿ ಪುಲಕೇಶಿ ಇವನು ಕ್ರಿ.ಶ. 610 ರಿಂದ 642 ರವರೆಗೆ ಆಳಿ ಕರ್ನಾಟಕದ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಹಬ್ಬಸಿದನು. ಇವರ ಕಾಲದಲ್ಲಿ ಬಾದಾಮಿ ಮತ್ತು ಐಹೊಳೆ ಯ ದೇವಾಲಯಗಳು ನಿರ್ಮಿಸಲ್ಪಟ್ಟವು.

4. ಹರ್ಷವರ್ಧನನ ಮೊದಲ ರಾಜಧಾನಿ ಯಾವುದು?
ಎ) ಥಾನೇಶ್ವರ
ಬಿ) ಕನೋಜ್
ಸಿ) ಮಥುರಾ
ಡಿ) ಪ್ರಯಾಗ


ಸರಿಯಾದ ಉತ್ತರ: ಎ) ಥಾನೇಶ್ವರ


ವಿವರಣೆ :- ಹರ್ಷವರ್ಧನ ವರ್ಧನ ಸಾಮ್ರಾಜ್ಯದ ಪ್ರಖ್ಯಾತರಾಜ ಇವನು 16ನೇ ವಯಸ್ಸಿನಲ್ಲಿ ಸಿಂಹಾಸನವನ್ನು ಏರಿದನು. ಆಗ ಇವನ ರಾಜಧಾನಿ ಥಾನೇಶ್ವರ ಆಗಿತ್ತು. ಹರ್ಷವರ್ಧನಿಗಿಂತ ಮೊದಲು ಬಂದ ದೊರೆಗಳು ಥಾನೇಶ್ವರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಹರ್ಷವರ್ಧನನು ಸಿಂಹಾಸನವನ್ನು ಏರಿದ ನಂತರ ಅನೇಕ ಅಂತಹ ಮತ್ತು ಬಾಹ್ಯ ಸಮಸ್ಯೆಗಳನ್ನು ಎದುರಿಸಬೇಕಾಯಿತು. ದಕ್ಷಿಣದಲ್ಲಿ ನರ್ಮದಾ ನದಿಯವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಕೊನಗೆ ಕನೋಜನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು.

5. ಮಹಾಬಲಿಪುರಂನಲ್ಲಿರುವ ಕಡಲ ತೀರ ದೇವಾಲಯವನ್ನು ಕಟ್ಟಿಸಿದವನು
ಎ) ಮೊದಲನೆ ಮಹೇಂದ್ರವರ್ಮನ್
ಬಿ) ಎರಡನೆ ನರಸಿಂಹವರ್ಮನ್
ಸಿ) ಎರಡನೆ ಮಹೇಂದ್ರವರ್ಮನ್
ಡಿ) ಎರಡನೆ ನರಸಿಂಹವರ್ಮನ್

ಸರಿಯಾದ ಉತ್ತರ: ಬಿ) ಎರಡನೆ ನರಸಿಂಹವರ್ಮನ್


ವಿವರಣೆ :- ಪಲ್ಲವರು ದಕ್ಷಿಣ ಭಾರತದ ಒಂದು ಪ್ರಮುಖ ರಾಜವಂಶ, ಈ ವಂಶದ ದೊರೆ ನರಸಿಂಹವರ್ಮ, ಇವನ ಕಾಲ ಕ್ರಿ.ಶ. 630-668 ಇವನು ಬಾದಾಮಿ ಚಾಲುಕ್ಯರ ಇಮ್ಮಡಿ ಪುಲಿಕೇಶಿಯನ್ನು ಸೋಲಿಸಿ ಬಾದಾಮಿಯನ್ನು ಗೆದ್ದನು ಇವನು ಮಹಾಬಲಿಪುರಂನಲ್ಲಿ ಅನೇಕ ದೇವಾಲಯ ಹಾಗೂ ಏಕ ಶಿಲಾರಥಗಳನ್ನು ನಿರ್ಮಿಸಿದ್ದಾನೆ. ಈತನು 'ಮಹಾಮಲ್ಲ' ಎಂಬ ಬಿರುದನ್ನು ಹೊಂದಿದ್ದನು.

6 ಆಗ್ರಾ ನಗರದ ಸಂಸ್ಥಾಪಕ
ಎ) ಬಾಬರ್
ಬಿ) ಅಕ್ಟರ್‌
ಸಿ) ಷಹಜಹಾನ್
ಡಿ) ಸಿಕಂದರ್ ಲೋದಿ

ಸರಿಯಾದ ಉತ್ತರ: ಡಿ) ಸಿಕಂದರ್ ಲೋದಿ


ವಿವರಣೆ :- ಸಿಕಂದರ್ ಲೋದಿ, ಲೋದಿ ಸಂತತಿಯ ದೊರೆ. ಇವನು ತನ್ನ ರಾಜಧಾನಿಯನ್ನು ದೆಹಲಿಯಿಂದ ಆಗ್ರಾಕ್ಕೆ ವರ್ಗಾಯಿಸಿ ಆಗ್ರಾ ನಗರದ ನಿರ್ಮಾಣಕ್ಕೆ ನಾಂದಿ ಹಾಡಿದನು. ಇವನ ಆಳ್ವಿಕೆಯಲ್ಲಿ ಆಡಳಿತದಲ್ಲಿ ಅನೇಕ ಬದಲಾವಣೆಗಳನ್ನು ತಂದನು.

* ಇವನು ಭೂಮಿ ಅಳತೆ ಮಾಡರ್ 'ಘಜ್-ಇ-ಸಿಕಂದರಿ' ಎನ್ನುವ ಅಳತೆಗೋಲನ್ನು ಬಳಕೆಗೆ ತಂದನು.

• ಕೃಷಿ ಸಹಕಾರಿ ಸಂಸ್ಥೆ ಸ್ಥಾಪಿಸಿ ಇವುಗಳಿಂದ ಉತ್ತಮ ತಳಿ ಬೀಜಗಳನ್ನು ಹಂಚಿಕೆ ಮಾಡಿದನು.

* ಕಂದಾಯದ ಲೆಕ್ಕಾಚಾರಗಳನ್ನು ಕಾಲಕಾಲಕ್ಕೆ ಸರಿಯಾಗಿ ಒಪ್ಪಿಸಲು ವ್ಯವಸ್ಥೆಯನ್ನು ರೂಪಿಸಿದನು.

* ನಿರ್ಗತಿಕರಿಗೆ ಪುಕ್ಕಟೆ ಆಹಾರ ಕಾಳುಗಳನ್ನು ಒದಗಿಸಲು ವ್ಯವಸ್ಥೆ ಮಾಡಿದನು.

* ಪಡಿತರ ಮತ್ತು ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೆ ತಂದನು.

7. ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು ಯಾವುದು?
ಎ) ಅಮೀರ್ ಖುಸ್ರೋ - ಪದ್ಮಾವತಿ
ಬಿ) ಚಾಂದ್ ಬರ್ದಾಯ - ಪೃಥ್ವಿರಾಜ್ ರಾಸೊ
ಸಿ) ಅಬುಲ್ ಫಜಲ್ - ಐನ್ ಇ ಅಕ್ಷರಿ
ಡಿ) ಬಾಬರ್ ತುಜುಕ್ ಇ ಬಾಬರಿ

ಸರಿಯಾದ ಉತ್ತರ: ಎ) ಅಮೀರ್ ಖುಸ್ರೋ-ಪದ್ಮಾವತಿ


ವಿವರಣೆ :-ಪ್ರಾಚೀನ ಕವಿಗಳು ಮತ್ತು ಅವರ ಕೃತಿಗಳು

1. ಬಾಬರ್ - ಬಾಬರ್ ನಾಮ ಅಥವಾ ತುಜಕಿ-ಎ-ಬಾಬರಿ

2. ತುಳಸಿದಾಸ್ - ರಾಮಾಚರಿತ ಮಾನಸ

3. ಅಬ್ದುಲ್ ಫಜಲ್ - ಅಕ್ಬರ್‌ ನಾಮ, ಐನ್-ಇ-ಅಕ್ಟರಿ

4. ಬದೌನಿ - ಖಾಬ್ ಉಕ್ ತವಾರಿಕ್

5. ಅಯೀನಾ ಜಬ್ಬಾನಿ - ಷಹಜಹಾನ್ ನಾಮ

6. ಅಬ್ದುಲ್ ಹಮೀದ್ - ಬಾದಷಹನಾಮ

7. ಜಹಾಂಗೀರ್ -  ತಜ್-ಎ-ಜಹಾಂಗಿರಿ

8. ಗುಲ್ಬದನ್ ಬೇಗಂ - ಹುಮಾಯುನ್ ನಾಮ

9. ಅಮೀರ್ ಖುಸ್ರು - ತುಘಲಕ್ ನಾಮ, ತಾರೀಖ್-ಎ-ಅಲಾಡಿ

10. ತುಳಸಿದಾಸ್ - ರಾಮಚರಿತ ಮಾನಸ

8. ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದಸ್ಥಳ
ಎ) ಮೈಸೂರು
ಬಿ) ಧಾರವಾಡ
ಸಿ) ಬೆಳಗಾವಿ
ಡಿ) ಬೆಂಗಳೂರು 

ಸರಿಯಾದ ಉತ್ತರ: ಸಿ) ಬೆಳಗಾವಿ


ವಿವರಣೆ :-

ಬ್ರಹ್ಮ ಸಮಾಜ - ರಾಜಾರಾಮ್ ಮೋಹನ್ ರಾಯ್

ಆರ್ಯ ಸಮಾಜ - ದಯಾನಂದ ಸರಸ್ವತಿ

ಪ್ರಾರ್ಥನಾ ಸಮಾಜ - ಆತ್ಮಾರಾಂ ಪಾಂಡುರಂಗ

ಸತ್ಯಶೋಧಕ ಸಮಾಜ - ಜ್ಯೋತಿಭಾ ಫುಲೆ

ರಾಮಕೃಷ್ಣ ಮಿಷನ್ - ಸ್ವಾಮಿ ವಿವೇಕಾನಂದ

ಥಿಯಾಸಾಫಿಕಲ್ ಸೊಸೈಟಿ - ಮ್ಯಾಡಮ್ ಬ್ಲಾವಟಿ ಮತ್ತು ಕರ್ನಲ್ ಹೆಚ್.ಎಸ್. ಅಲ್ಕಾಟ್ (ಮೂಲ ಸ್ಥಾಪಕರು, ಆನಿಬೆಸೆಂಟ್ ಭಾರತದಲ್ಲಿ)

9. ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು
ಎ) ಅಸಹಕಾರ ಚಳುವಳಿ
ಬಿ) ಉಪ್ಪಿನ ಸತ್ಯಾಗ್ರಹ
ಸಿ) ಧ್ವಜ ಸತ್ಯಾಗ್ರಹ
ಡಿ) 'ಭಾರತ ಬಿಟ್ಟು ತೊಲಗಿ' ಚಳುವಳಿ

ಸರಿಯಾದ ಉತ್ತರ: ಬಿ) ಉಪ್ಪಿನ ಸತ್ಯಾಗ್ರಹ


ವಿವರಣೆ :-

ಭಾರತೀಯರು ಉಪ್ಪು ತಯಾರಿಸಬಾರದೆಂಬ ಬ್ರಿಟೀಷರ ಕಾಯ್ದೆಯನ್ನು ಮುರಿದು ಗಾಂಧೀಜಿಯವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾದಂತೆ, ಕರ್ನಾಟಕದಲ್ಲೂ ಮೈಲಾರ ಮಹದೇವಪ್ಪನವರ ನೇತೃತ್ವದಲ್ಲಿ ಹುಬ್ಬಳ್ಳಿ, ಬೆಳಗಾವಿ ಮುಂತಾದ ಕಡೆಗಳಲ್ಲಿ ಸತ್ಯಾಗ್ರಹ ಪ್ರಾರಂಭವಾಯಿತು. ಅಂಕೋಲದಲ್ಲಿ ಏಪ್ರಿಲ್ 13, 1930 ರಂದು ಉಪ್ಪು ತಯಾರಿಸಿ ಕಾಯಿದೆಯನ್ನು ಭಗ್ನಗೊಳಿಸಿದರು. 

10. ಕಾನ್ಪುರದಲ್ಲಿ 1837ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದನು
ಎ) ತಾಂತ್ಯ ಟೋಪಿ
ಬಿ) ನಾನಾ ಸಾಹೇಬ
ಸಿ) ಕುಂವರ್ ಸಿಂಗ್
ಡಿ) ಮಂಗಲ್ ಪಾಂಡೆ

ಸರಿಯಾದ ಉತ್ತರ: ಬಿ) ನಾನಾ ಸಾಹೇಬ


ವಿವರಣೆ :-

1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕತ್ವ ವಹಿಸಿದ್ದವರು

ಝಾನ್ಸಿ - ರಾಣಿ ಲಕ್ಷ್ಮಿ ಬಾಯಿ

ಔದ್ - ಅಬ್ದುಲ್ ಬೇಗಂ

ಕಾನ್ಪುರ - ನಾನಾಸಾಹೇಬ್,  ತಾತ್ಯಾಟೋಪಿ

ಜಗದೀಶಪುರ - ಕುವರ್ ಸಿಂಗ್

ಫೈರುಜಾಬಾದ್ - ಫಿರೋಜ್ ಷಾ ಮೌಲ್ವಿ ಮಹಮದ್

ಫೈಜಾಬಾದ್ - ಮಹಮದುಲ್ಲಾ

ದೆಹಲಿ - ಮಹಮದ್ ಷಾ 2



ಇವುಗಳನ್ನೂ ಓದಿ 













No comments:

Post a Comment

Important Notes

Random Posts

Important Notes

Popular Posts

Indian Constitution Most Important Question Answers in Kannada For All Competitive Exams

ಭಾರತದ ಸಂವಿಧಾನದ ಪ್ರಶ್ನೋತ್ತರಗಳು ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತದ ಸಂವಿಧಾನ ದ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಭಾರತೀಯ ಸಂವಿಧಾನದ ಜ್ಞಾನ ಇರಬೇಕಾದದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯ ಸಂವಿಧಾನ ದ ಹಲವಾರು ಮಹತ್ವದ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇವುಗಳು ನಿಮ್ಮ ಅಧ್ಯಯನಕ್ಕೆ ಸಹಕಾರಿಯಾಬಹುದೆಂಬುದು ನಮ್ಮ ಮಹದಾಶಯ..!! 1. ಸಂವಿಧಾನ ಎಂದರೇನು? > ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಮೂಲ ನಿಯಮಗಳ ದಾಖಲೆಗಳು 2. ಸಂವಿಧಾನ ಎಂಬ ಪದದ ಮೂಲ ಯಾವುದು? > ಕಾನ್ಸ್ಟಿಟ್ಯೂಟ್ 3. ‘ಕಾನ್ಸ್ಟಿಟ್ಯೂಟ್’ ಅರ್ಥವೇನು? > ನಿಯೋಜಿಸು, ಸಂಯೋಜಿಸು ಮತ್ತು ವಿಧಿವತ್ತಾಗಿ ಸ್ಥಾಪಿಸು ಎಂದರ್ಥ 4. ಸಂವಿಧಾನಾತ್ಮಕ ಆಡಳಿತವು ಮೊಟ್ಟ ...

Top History Question Answers in Kannada for All Competitive Exams-01

  ಇತಿಹಾಸದ ಸೂಪರ್ ಪ್ರಶ್ನೋತ್ತರಗಳು-01 1. ದಕ್ಷಿಣ ಪಥೇಶ್ವರ ಎಂಬ ಬಿರುದಿನಿಂದ ಯಾರನ್ನು ಕರೆಯಲಾಗುತ್ತದೆ? ಸರಿಯಾದ ಉತ್ತರ: ಇಮ್ಮಡಿ ಪುಲಿಕೇಶಿ 2. ಬಹುಮನಿ ಸಾಮ್ರಾಜ್ಯದ ಮೊದಲ ರಾಜಧಾನಿ ಯಾವುದು? ಸರಿಯಾದ ಉತ್ತರ: ಗುಲ್ಬರ್ಗ್ 3. ತಾಳಿಕೋಟೆ ಕದನ ನಡೆದದ್ದು ಯಾರ ನಡುವೆ? ಸರಿಯಾದ ಉತ್ತರ: ಬಹುಮನಿ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದವರು 4. ಮೈಸೂರು ಆಳಿದ ಯಾವ ರಾಜರ ಹೆಸರನ್ನು ಕೃಷ್ಣರಾಜಸಾಗರ ಅಣೆಕಟ್ಟಿಗೆ ಇಡಲಾಗಿದೆ? ಸರಿಯಾದ ಉತ್ತರ: ನಾಲ್ವಡಿ ಕೃಷ್ಣರಾಜ್ ಒಡೆಯರ್ 5. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಸಂಬಂಧಿಸಿದ ಆಧ್ಯಾತ್ಮಿಕ ನಾಯಕರು ಯಾರು? ಸರಿಯಾದ ಉತ್ತರ: ವಿದ್ಯಾರಣ್ಯ 6. ಸರ್ ಎಂ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿ ಯಾರ ಕಾಲದಲ್ಲಿ ಸೇವೆಯನ್ನು ಸಲ್ಲಿಸಿದರು? ಸರಿಯಾದ ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರ್ 7. ಕೃಷ್ಣರಾಜಸಾಗರದಲ್ಲಿ ಬೃಂದಾವನ ಉದ್ಯಾನಗಳ ನಿರ್ಮಾಣಕ್ಕೆ ಕಾರಣರಾದ ಮೈಸೂರಿನ ದಿವಾನರು ಯಾರು? ಸರಿಯಾದ ಉತ್ತರ: ಮಿರ್ಜಾ ಇಸ್ಮಾಯಿಲ್ 8. ನವ ಮೈಸೂರು ರಾಜ್ಯದ ಮೊದಲ ಮುಖ್ಯ ಮುಖ್ಯಮಂತ್ರಿ ಯಾರು? ಸರಿಯಾದ ಉತ್ತರ: ಕೆ.ಸಿ.ರೆಡ್ಡಿ 9. ಚಾಳುಕ್ಯರ ಸೈನ್ಯವು ಯಾವ ಹೆಸರಿನಿಂದ ಗುರುತಿಸಿಕೊಂಡಿತ್ತು? ಸರಿಯಾದ ಉತ್ತರ: ಕರ್ಣಾಟ ಬಲ 10. ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನ ನಡೆದ ವರ್ಷ ಯಾವುದು? ಸರಿಯಾದ ಉತ್ತರ: 1924 ಇವುಗಳನ್ನೂ ಓದಿ  💥  Best ...

Important Inscriptions of India : Complete details of Inscriptions of India

ಭಾರತದ ಮಹತ್ವದ ಶಾಸನಗಳು ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಾಸನಗಳ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಾಸನಗಳ ಮಾಹಿತಿ ಇರಬೇಕಾದದ್ದು ಅಗತ್ಯವೂ ಅನಿವಾರ್ಯವೂ ಆಗಿದೆ. ಆದ್ದರಿಂದ ಈ ಮುಂದೆ ಪ್ರಮುಖ ಶಾಸನಗಳು, ಶಾಸನಗಳ ಅರ್ಥ, ಶಾಸನಗಳ ಮಹತ್ವ ಹಾಗೂ ಶಾಸನಗಳ ಕುರಿತಾದ ಎಲ್ಲ ಪ್ರಮುಖ ಅಂಶಗಳನ್ನು ಚರ್ಚಿಸಲಾಗಿದೆ. ಹಾಗೂ ಎಲ್ಲ ಶಾಸನಗಳ ಕುರಿತಾದ ಪ್ರಮುಖ ಅಂಶಗಳನ್ನು ಒಂದೆಡೆ ಚರ್ಚಿಸಲಾಗಿದೆ‌. ಪೀಠಿಕೆ :  ಶಾಸನಗಳು (Inscriptions) : ಪುರಾತತ್ವಶಾಸ್ತ್ರದ ಒಂದು ಶಾಖೆಯಾಗಿರುವ ಶಾಸನಶಾಸ್ತ್ರವು ಶಾಸನಗಳ ಅಧ್ಯಯನವಾಗಿದೆ.  ಶಾಸನಗಳ ಅಧ್ಯಯನವನ್ನು Epigraphy ಎಂದು ಕರೆಯಲಾಗುತ್ತದೆ. Stduy of Inscriptions is called as Epigraphy. ಇದು ಪ್ರಾಚೀನ ಭಾರತದಇ ತಿಹಾಸದ ಅತ್ಯಂತ ಮಹತ್ವದ ಮೂಲಾಧಾರವಾಗಿದೆ. ಶಿಲಾಫಲಕ, ಬಂಡೆಗಲ್ಲು, ಶಿಲಾಸ್ಥಂಭ, ಶಿ...