Type Here to Get Search Results !

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ 6. ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ (1857)

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ 6. ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ (1857) SSLC Social Science Chapterwise MCQs in Kannada for All Competitive Exams: Chapter 6. India's First War of Independence (1857) MCQs

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ 6. ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ (1857) SSLC Social Science Chapterwise MCQs in Kannada for All Competitive Exams: Chapter 6. India's First War of Independence (1857) MCQs





ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಹತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಅಧ್ಯಾಯವಾರು ಬಹು ಆಯ್ಕೆಯ ಪ್ರಶ್ನೋತ್ತರಗಳು" ಸೇರಿದಂತೆ ಇನ್ನಿತರೆ ಎಲ್ಲ ವಿಷಯಗಳ ಪ್ರಶ್ನೋತ್ತರಗಳನ್ನು ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Karnataka SSLC Chapterwise General Knowledge Multiple Choice Question Answers in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

ಇವುಗಳನ್ನೂ ಓದಿ

ಅಧ್ಯಾಯ 6. ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ


1. 1857ರ ದಂಗೆಯನ್ನು ಪ್ರಥಮ ಸ್ವಾತಂತ್ರ ಸಂಗ್ರಾಮ ಎನ್ನಲು ಕಾರಣ
a) ಸಿಪಾಯಿಗಳ ದಂಗೆ ಎದ್ದರು
b) ರಾಜರೆಲ್ಲಾ ಒಗೂಡಿದರು
c) ದೇಶದ ಹೆಚ್ಚು ಭಾಗ ದೊಡ್ಡಮಟ್ಟದಲ್ಲಿ ಮೊದಲಬಾರಿ ದಂಗೆ
d) ಎಲ್ಲರೂ ಶಾಂತಿಯುತವಾಗಿ ದೊಡ್ಡದಾಗಿ ಹೋರಾಡಿದರು.

ಸರಿಯಾದ ಉತ್ತರ : c) ದೇಶದ ಹೆಚ್ಚು ಭಾಗ ದೊಡ್ಡಮಟ್ಟದಲ್ಲಿ ಮೊದಲಬಾರಿ ದಂಗೆ 

2. ಸತಾರ, ಜೈಪುರ, ಝಾನ್ಸಿಗಳನ್ನು ಬ್ರಿಟಿಷರು ಈ ನೀತಿಯ ಮೂಲಕ ವಶಕ್ಕೆ ಪಡೆದರು
a) ಕುತಂತ್ರ /ಒಡೆದು ಆಳುವ ನೀತಿ
b) ದತ್ತು ಮಕ್ಕಳಿಗೆ ಹಕ್ಕಿಲ್ಲ
c) ರಾಜಕೀಯ ಚಾಣಾಕ್ಷತೆ
d) ಸಹಾಯಕ ಸೈನ್ಯ ಪದ್ಧತಿ

ಸರಿಯಾದ ಉತ್ತರ : b) ದತ್ತು ಮಕ್ಕಳಿಗೆ ಹಕ್ಕಿಲ್ಲ   

3. ಬ್ರಿಟಿಷರು ಮೊಘಲ್ ಚಕ್ರವರ್ತಿಯ ಸಾಮ್ರಾಜ್ಯವನ್ನು ಈ ವಿಧಾನದ ಮೂಲಕ ವಶಕ್ಕೆ ಪಡೆದರು
a) ಪದಚ್ಯುತಿ
b) ರಾಜಪದವಿ ನಾಶ
c) ಗಡಿಪಾರು
d) ಯುದ್ಧದಲ್ಲಿ ಸೋಲಿಸಿ

ಸರಿಯಾದ ಉತ್ತರ : a) ಪದಚ್ಯುತಿ 

4. ಭಾರತೀಯ ನೇಕಾರರ ನಿರುದ್ಯೋಗಕ್ಕೆ /ಕರಕುಶಲ ಕೈಗಾರಿಕೆ ನಾಶದ ಕಾರಣ
a) ಕ್ಷಾಮ ಮತ್ತು ಬರಗಾಲ
b) ಬಟ್ಟೆ ಕೈಗಾರಿಕೆಗಳ ನಷ್ಟ
c) ಆರ್ಥಿಕ ಹಿನ್ನಡೆ
d) ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿ  

ಸರಿಯಾದ ಉತ್ತರ : d) ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿ 

5. ಇದು ಪ್ರಥಮ ಸ್ವಾತಂತ್ರ ಸಂಗ್ರಾಮದ ಬೀಜಾಂಕುರಕ್ಕೆ ಮುಖ್ಯ ಕಾರಣ
a) ಸಿಪಾಯಿಗಳ ದೆಹಲಿ ಗೆಲುವು
b) ಮಂಗಲ ಪಾಂಡೆ ಅಧಿಕಾರಿಯ ಹತ್ಯೆ ಮಾಡಿದ್ದು
c) ಮೀರತ್ ಸೆರೆಮನೆ ಸೈನಿಕರ ಬಿಡುಗಡೆ
d) ಮೊಘಲ್ ರಾಜನನ್ನು ಭಾರತ ಚಕ್ರವರ್ತಿ ಎಂದು ಘೋಷಿಸಿದ್ದು,

ಸರಿಯಾದ ಉತ್ತರ : c) ಮೀರತ್ ಸೆರೆಮನೆ ಸೈನಿಕರ ಬಿಡುಗಡೆ 

6. 1857ರ ದಂಗೆಯಲ್ಲಿ ಸೈನಿಕರು ಇವರನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು
a) ಝಾನ್ಸಿ ರಾಣಿ ಲಕ್ಷ್ಮೀಬಾಯಿ.
b) ತಾತ್ಯ ಟೋಪಿ
c) ಎರಡನೇ ಬಹದೂರ್ ಷಾ
d) ಮಂಗಲಪಾಂಡೆ

ಸರಿಯಾದ ಉತ್ತರ : c) ಎರಡನೇ ಬಹದೂರ್ ಷಾ

7. 1857ರ ದಂಗೆ ಪ್ರಾರಂಭವಾದ ಸ್ಥಳ
a) ಬ್ಯಾರಕ್ ಪುರ
b) ಮೀರತ್
c) ದೆಹಲಿ
d) ಗ್ಯಾಲಿಯರ್

ಸರಿಯಾದ ಉತ್ತರ : a) ಬ್ಯಾರಕ್ ಪುರ 

8. 1857 ದಂಗೆಯಲ್ಲಿ ಕಾನ್ನುರದ ದಂಗೆಯ ನಾಯಕ
a) ಝಾನ್ಸಿ ರಾಣಿ ಲಕ್ಷ್ಮೀಬಾಯಿ
b) ತಾತ್ಯ ಟೋಪಿ
c) ಎರಡನೇ ಬಹದೂರ್ ಷಾ
d) ನಾನಾ ಸಾಹೇಬ 

ಸರಿಯಾದ ಉತ್ತರ : d) ನಾನಾ ಸಾಹೇಬ 

9. ಕಾನ್ಪುರದ ದಂಗೆಯಲ್ಲಿ ನಾನಾ ಸಾಹೇಬನಿಗೆ ಸಹಾಯಕನಾಗಿದ್ದವರು
a) ರಾಣಿ ಲಕ್ಷ್ಮೀಬಾಯಿ.
b) ತಾತ್ಯ ಟೋಪಿ
c) ಎರಡನೇ ಬಹದೂರ್ ಷಾ
d) ಮಂಗಲಪಾಂಡೆ

ಸರಿಯಾದ ಉತ್ತರ : b) ತಾತ್ಯ ಟೋಪಿ 

10. ಝಾನ್ಸಿ ರಾಣಿಯ ಬ್ರಿಟಿಷರ ವಿರುದ್ಧ ಯುದ್ದದಲ್ಲಿ ವಶಪಡಿಸಿಕೊಂಡ ಸ್ಥಳ
a) ಗ್ಯಾಲಿಯರ್
b) ಕಾನ್ನುರ
c) ದೆಹಲಿ
d) ಮೀರತ್

ಸರಿಯಾದ ಉತ್ತರ : a) ಗ್ಯಾಲಿಯರ್  

11.1857 ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು ಹೀಗೆ ಕರೆದಿದ್ದಾರೆ
a) ಸ್ವತಂತ್ರ ಸಂಗ್ರಾಮ
b) ರಾಜಕೀಯ ದಂಗೆ
c) ಸಿಪಾಯಿ ದಂಗೆ
d) ರಾಜಕೀಯ ಕ್ರಾಂತಿ. 

ಸರಿಯಾದ ಉತ್ತರ : c) ಸಿಪಾಯಿ ದಂಗೆ 

12. ತಂಜಾವೂರು ಮತ್ತು ಕರ್ನಾಟಿಕ್ ನವಾಬರು ಬ್ರಿಟಿಷರ ವಿರುದ್ಧ ಅಸಮಾಧಾನಗೊಳ್ಳಲು ಕಾರಣ
a) ಸಹಾಯಕ ಸೈನ್ಯ ಪದ್ಧತಿ
b) ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
c) ಅಧಿಕಾರದಿಂದ ಪದಚ್ಯುತಿ
d) ರಾಜ ಪದ್ದತಿಯ ರದ್ದತಿ 

ಸರಿಯಾದ ಉತ್ತರ : d) ರಾಜ ಪದ್ದತಿಯ ರದ್ದತಿ 

13. ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯಿಂದ ವಿಶೇಷವಾಗಿ ಭಾರತದ ಈ ಕೈಗಾರಿಕೆಗಳು ಅವನತಿ ಹೊಂದಿದವು
a) ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಳು
b) ಗೃಹ ಮತ್ತು ಸಣ್ಣ ಕೈಗಾರಿಕೆಗಳು
c) ಬಟ್ಟೆ ಮತ್ತು ಉಣ್ಣೆ ಕೈಗಾರಿಕೆಗಳು
d) ಸಕ್ಕರೆ ಮತ್ತು ಕಾಗದದ ಕೈಗಾರಿಕೆಗಳು.

ಸರಿಯಾದ ಉತ್ತರ : c) ಬಟ್ಟೆ ಮತ್ತು ಉಣ್ಣೆ ಕೈಗಾರಿಕೆಗಳು 

14. 1857ರ ಸಮಯದಲ್ಲಿ ಮೊಘಲ್ ಚಕ್ರವರ್ತಿ ಅವರು ಬ್ರಿಟಿಷರ ವಿರುದ್ದ ಪ್ರತಿಭಟಿಸಲು ಕಾರಣ
a) ಸಹಾಯಕ ಸೈನ್ಯ ಪದ್ಧತಿ
b) ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
c) ಅಧಿಕಾರದಿಂದ ಪದಚ್ಯುತಿ
d) ರಾಜ ಪದ್ದತಿಯ ರದ್ದತಿ.

ಸರಿಯಾದ ಉತ್ತರ : c) ಅಧಿಕಾರದಿಂದ ಪದಚ್ಯುತಿ 

15. ಪ್ರಥಮ ಸ್ವಾತಂತ್ರ ಸಂಗ್ರಾಮದ ವೇಳೆ ಸಿಪಾಯಿಗಳು ಜನಸಮಾನ್ಯರ ವಿಶ್ವಾಸ ಕಳೆದುಕೊಳ್ಳಲು ಕಾರಣ
a) ದೇಶಿಯ ರಾಜರ ಬೆಂಬಲದ ಕೊರತೆ
b) ಸೂಕ್ತ ಮಾರ್ಗದರ್ಶನದ ಕೊರತೆ
c) ಸ್ವಹಿತಾಸಕ್ತಿ ಮತ್ತು ಹಕ್ಕಿಗಾಗಿ ನಡೆದ ಹೋರಾಟ
d) ಸೈನಿಕರ ಲೂಟಿ ಮತ್ತು ದರೊಡೆಗಳು 

ಸರಿಯಾದ ಉತ್ತರ : d) ಸೈನಿಕರ ಲೂಟಿ ಮತ್ತು ದರೊಡೆಗಳು 

16. ಇವುಗಳಲ್ಲಿ ಯಾವುದು 1857 ರ ದಂಗೆಗೆ ರಾಜಕೀಯ ಕಾರಣ ಅಲ್ಲ
a) ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
b) ತಂಜಾವೂರು ಮತ್ತು ಆರ್ಕಾಟ್ ನವಾಬನ ರಾಜ ಪದ್ದತಿಯ ರದ್ದತಿ
c) ಅಪಾರ ಸೈನಿಕರ ನಿರುದ್ಯೋಗ
d) ಲಕ್ಷಾಂತರ ನೇಕಾರರ ನಿರುದ್ಯೋಗ 

ಸರಿಯಾದ ಉತ್ತರ : d) ಲಕ್ಷಾಂತರ ನೇಕಾರರ ನಿರುದ್ಯೋಗ 

17. ಇದು ಸಿಪಾಯಿದಂಗೆಯ ಸೈನಿಕ ಕಾರಣವಾಗಿದೆ
a) ಸಾಗರೋತ್ತರ ಸೇವೆಗೆ ಸೈನಿಕರ ಒತ್ತಾಯ
b) ಬ್ರಿಟಿಷರು ತಂದ ಹೊಸ ಕಾನೂನುಗಳು
c) ಇಂಗ್ಲಿಷ್ ನ್ಯಾಯಾಲಯದ ಭಾಷೆಯಾಯಿತು
d) ಇಂಗ್ಲಿಷರ ಪರವಾಗಿದ್ದ ತೀರ್ಪುಗಳು

ಸರಿಯಾದ ಉತ್ತರ : a) ಸಾಗರೋತ್ತರ ಸೇವೆಗೆ ಸೈನಿಕರ ಒತ್ತಾಯ 

18. ಬ್ರಿಟಿಷ್ ಸೈನ್ಯದ ಅಧಿಕಾರಿಯನ್ನು ಕೊಂದ ಮಂಗಲ್ ಪಾಂಡೆ ಈ ಪ್ರಾಂತ್ಯದ ಸೈನಿಕನಾಗಿದ್ದನು
a) ಬ್ಯಾರಕ್ ಪುರ
b) ಮೀರತ್
c) ದೆಹಲಿ
d) ಕಾನೂರ

ಸರಿಯಾದ ಉತ್ತರ : a) ಬ್ಯಾರಕ್ ಪುರ 

19. "Policy of assotiation/ ಒಳಗೊಳ್ಳುವ ಶಾಸನ" ಎಂದರೇ?
a) ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಭಾರತೀಯರನ್ನು ಸೇರಿಸಿಕೊಳ್ಳುವುದು
b) ಭಾರತೀಯರು ಮತ್ತು ಯುರೋಪಿಯನ್ ಒಗ್ಗಟ್ಟಾಗಿರುವುದು.
c) ಬ್ರಿಟಿಷ್ ರು ಮಾತ್ರ ಆಡಳಿತ ನಡೆಸುವುದು
d) ಭಾರತೀಯರು ಮಾತ್ರ ಆಡಳಿತ ನಡೆಸುವುದು.

ಸರಿಯಾದ ಉತ್ತರ : a) ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಭಾರತೀಯರನ್ನು ಸೇರಿಸಿಕೊಳ್ಳುವುದು 

20. ಬ್ರಿಟನ್ ರಾಣಿಯ ಘೋಷಣೆ ಹೊರಡಿಸಿದ ವರ್ಷ
a) 1857
b) 1858
c) 1859
d) 1947

ಸರಿಯಾದ ಉತ್ತರ : b) 1858 


Post a Comment

1 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section