Type Here to Get Search Results !

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ-02 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ SSLC Social Science Chapterwise MCQs in Kannada for All Competitive Exams: Chapter-2 Extension of British Rule MCQS

 

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ-02 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ SSLC Social Science Chapterwise MCQs in Kannada for All Competitive Exams: Chapter-2 Extension of British Rule MCQS

ಅಧ್ಯಾಯ - 02
ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

01. ಮರಾಠರು ಮತ್ತು ಬ್ರಿಟಿಷರ ನಡುವೆ ವೈರತ್ವಕ್ಕೆ ಮೂಲ ಕಾರಣ ಏನು?
A) ಮರಾಠರು ಮತ್ತು ಮೊಘಲರ ಸ್ನೇಹ
B) ಮರಾಠರ ಬ್ರಿಟಿಷರ ಮೇಲಿನ ದಾಳಿ
C) ಮೊಘಲರು ಕೋರ ಮತ್ತು ಅಲಹಾಬಾದ್ ಗಳನ್ನು ಮರಾಠರಿಗೆ ಕೊಟ್ಟರು
D) ಮರಾಠ ಮತ್ತು ಫ್ರೆಂಚರ ಸ್ನೇಹ

C) ಮೊಘಲರು ಕೋರ ಮತ್ತು ಅಲಹಾಬಾದ್ ಗಳನ್ನು ಮರಾಠರಿಗೆ ಕೊಟ್ಟರ

02. ಪ್ರಥಮ ಮರಾಠ ಯುದ್ಧದಲ್ಲಿ ಆದ ಒಪ್ಪಂದ?
A) ಸಾಲ್ ಬಾಯ್ ಒಪ್ಪಂದ
B) ಅಲಹಾಬಾದ್ ಒಪ್ಪಂದ
C) ಬೆಸ್ಸಿನ್ ಒಪ್ಪಂದ
D) ನಿರಂತರ ಮೈತ್ರಿ ಒಪ್ಪಂದ

A) ಸಾಲ್ ಬಾಯ್ ಒಪ್ಪಂದ

03. ಬ್ರಿಟಿಷರು ಮತ್ತು ಸಿಕ್ಕರ ರಣಜಿತ್ ಸಿಂಗನ ನಡುವಿನ ಒಪ್ಪಂದ?
A) ಸಾಲ್ ಬಾಯ್ ಒಪ್ಪಂದ
B) ಲಾಹೋರ್ ಒಪ್ಪಂದ
C) ಬೆಸ್ಸಿನ್ ಒಪ್ಪಂದ
D) ನಿರಂತರ ಮೈತ್ರಿ ಒಪ್ಪಂದ

D) ನಿರಂತರ ಮೈತ್ರಿ ಒಪ್ಪಂದ

04. 1846 ರಲ್ಲಿ ಬ್ರಿಟಿಷ್ ಮತ್ತು ಸಿಖ್ಖರ ನಡುವೆ ಆದ ಒಪ್ಪಂದ?
A) ಸಾಲ್ ಬಾಯ್ ಒಪ್ಪಂದ
B) ಲಾಹೋರ್ ಒಪ್ಪಂದ
C) ಬೆಸ್ಸಿನ್ ಒಪ್ಪಂದ
D) ನಿರಂತರ ಮೈತ್ರಿ ಒಪ್ಪಂದ

B) ಲಾಹೋರ್ ಒಪ್ಪಂದ

05. ಪೇಶ್ವೆ ಎರಡನೇ ಬಾಜಿರಾಯನು ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಒಪ್ಪಂದ?
A) ಸಾಲ್ ಬಾಯ್ ಒಪ್ಪಂದ
B) ಅಲಹಾಬಾದ್ ಒಪ್ಪಂದ
C) ಬೆಸ್ಸಿನ್ ಒಪ್ಪಂದ
D) ನಿರಂತರ ಮೈತ್ರಿ ಒಪ್ಪಂದ

C) ಬೆಸ್ಸಿನ್ ಒಪ್ಪಂದ

06. ಮರಾಠರ ಕೊನೆಯ ಪೇಶ್ವೆ ಯಾರು?
A) ರಘುನಾಥರಾಯ್
B) ಎರಡನೇ ಮಾಧವರಾವ್
C) ಎರಡನೇ ಬಾಜೀರಾವ್
D) ಬಾಲಾಜಿ ಬಾಜಿರಾವ್

C) ಎರಡನೇ ಬಾಜೀರಾವ್

07. ಮೊದಲನೇ ಆಂಗ್ಲೋ-ಮರಾಠ ಯುದ್ಧ ನಡೆದದ್ದು?
A) 1775-1782
B) 1798-1805
C) 1803-1805
D) 1817-1818

A) 1775-1782

08. ಲಾರ್ಡ್ ವೆಲ್ಲಸ್ಲಿ ಗೆ ಮರಾಠರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಅವಕಾಶ ನೀಡಿದ ಸಂಗತಿ ಯಾವುದು?
A) ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ವೇಶ್ಯೆಯ ದಾಳಿ
B) ರಘೋಬನು ಬ್ರಿಟಿಷರ ಬೆಂಬಲ ಕೋರಿದ್ದು
C) ಬ್ರಿಟಿಷರೊಂದಿಗಿನ ಸಾಲ್ ಬಾಯಿ ಒಪ್ಪಂದ
D) ಪೇಶ್ವೆ ಬ್ರಿಟಿಷರ ಸಹಾಯ ಯಾಚಿಸಿದ್ದು

D) ಪೇಶ್ವೆ ಬ್ರಿಟಿಷರ ಸಹಾಯ ಯಾಚಿಸಿದ್ದು

09. ಬ್ರಿಟಿಷರು ಶಿವಾಜಿಯ ವಂಶಸ್ಥ ಪ್ರತಾಪಸಿಂಹನನ್ನು ಸಣ್ಣ ರಾಜ್ಯ ಸತಾರದಲ್ಲಿ ಪ್ರತಿಷ್ಠಾಪಿಸಿ, ಮರಾಠರ ಸಾಂಪ್ರದಾಯಕ ಮುಖಂಡನಾಗಿಸುವ ಮೂಲಕ?
A) ಮರಾಠ ನಾಯಕರ ವಿಶ್ವಾಸವನ್ನು ಗಳಿಸಿದರು
B) ಎಲ್ಲಾ ಮರಾಠ ಮನೆತನಗಳನ್ನು ಒಗ್ಗೂಡಿಸಿದರು
C) ಮೊಗಲರ ವಿರುದ್ಧ ಮರಾಟರನ್ನು ಸಂಘಟಿಸಿದರು
D) ಮರಾಠರ ತೀವ್ರ ಪ್ರತಿರೋಧವನ್ನು ನಿಗ್ರಹಿಸಿದರು

D) ಮರಾಠರ ತೀವ್ರ ಪ್ರತಿರೋಧವನ್ನು ನಿಗ್ರಹಿಸಿದರು

10. ಇಂಗ್ಲಿಷರಿಗೆ ಬಂಗಾಳ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಲು ಸಹಾಯ ಮಾಡಿದ ಯುದ್ಧಗಳು ಯಾವವು?
A) ಕರ್ನಾಟಿಕ್ ಯುದ್ಧಗಳು
B) ಪ್ಲಾಸಿ ಮತ್ತು ಬಕ್ಸಾರ್ ಕದನಗಳು
C) ಆಂಗ್ಲೋ ಮರಾಠ ಯುದ್ಧಗಳು
D) ಆಂಗ್ಲೋ ಸಿಖ್ ಯುದ್ಧಗಳು

B) ಪ್ಲಾಸಿ ಮತ್ತು ಬಕ್ಸಾರ್ ಕದನಗಳು

11. ಭಾರತದಲ್ಲಿ ಯಾವುದೇ ಯುರೋಪಿನ ದೇಶಗಳ ಶಕ್ತಿ ಕಡಿಮೆ ಮಾಡಲು ಇಂಗ್ಲಿಷರಿಗೆ ಸಹಾಯ ಮಾಡಿದ ಯುದ್ಧಗಳು ಯಾವವು?
A) ಕರ್ನಾಟಿಕ್ ಯುದ್ಧಗಳು
B) ಪ್ಲಾಸಿ ಮತ್ತು ಬಕ್ಸಾರ್ ಕದನಗಳು
C) ಆಂಗ್ಲೋ ಮರಾಠ ಯುದ್ಧಗಳು
D) ಆಂಗ್ಲೋ ಸಿಖ್ ಯುದ್ಧಗಳು

A) ಕರ್ನಾಟಿಕ್ ಯುದ್ಧಗಳು

12. ವಾಯುವ್ಯ ಭಾರತದಲ್ಲಿ ಇಂಗ್ಲಿಷರಿಗೆ ತೀವ್ರ ಪ್ರತಿರೋಧ ತೋರಿದವರು?
A) ಹೈದರಾಲಿ ಮತ್ತು ಟಿಪ್ಪು
B) ಮರಾಠರು
C) ಸಿಖ್ಖರು
D) ಮೊಘಲರು

C) ಸಿಖ್ಖರು

13. 19 ನೇ ಶತಮಾನದಲ್ಲಿ ಸಿಖ್ಖರನ್ನು ಸಂಘಟಿಸಿದವರು?
A) ರಣಜಿತ್ ಸಿಂಗ್
B) ದುಲೀಪ್ ಸಿಂಗ್
C) ಗುಲಾಬ್ ಸಿಂಗ್
D) ಪ್ರತಾಪ್ ಸಿಂಹ

A) ರಣಜಿತ್ ಸಿಂಗ್

14. ಪಂಜಾಬನ್ನು ಬ್ರಿಟೀಷ ಸಾಮ್ರಾಜ್ಯದಲ್ಲಿ ವಿಲೀನ ಮಾಡಿಕೊಂಡವರು?
A) ಲಾರ್ಡ್ ವೆಲ್ಲೆಸ್ಲಿ
B) ಲಾರ್ಡ್ ಕಾರ್ನ್ವಾಲಿಸ್
C) ಲಾರ್ಡ್ ಡಾಲ್ ಹೌಸಿ
D) ಲಾರ್ಡ್ ಲಿಟ್ಟನ್

C) ಲಾರ್ಡ್ ಡಾಲ್ ಹೌಸಿ

15. ಎರಡನೇ ಬಾಜಿರಾಯನು ಸಹಾಯಕ ಸೈನ್ಯ ಪದ್ಧತಿಗೆ ಒಳಪಡಲು ಕಾರಣ?
A) ಹೋಳ್ಕರ್ ನ ಸೈನ್ಯ ಪೇಶ್ವೆಯನ್ನು ಸೋಲಿಸಿತು
B) ಮರಾಠ ಮನೆತನಗಳಲ್ಲಿ ಸಂಘರ್ಷವಿತ್ತು
C) ಪೇಶ್ವೆ ಸೈನ್ಯವನ್ನು ಲಾರ್ಡ್ ವೆಲ್ಲೆಸ್ಲಿ ಸೋಲಿಸಿದನು
C) ಮೊಘಲರು ಪೇಶ್ವೆಯನ್ನು ಸೋಲಿಸಿದರು

A) ಹೋಳ್ಕರ್ ನ ಸೈನ್ಯ ಪೇಶ್ವೆಯನ್ನು ಸೋಲಿಸಿತು

16. ಮರಾಠ ಮನೆತನಗಳು ತಮ್ಮ ಘನತೆಯನ್ನು ಉಳಿಸಿಕೊಳ್ಳಲು ಮಾಡಿದ ಕಾರ್ಯ?
A) ಪೇಶ್ವೆ ಸಹಾಯಕ ಸೈನ್ಯ ಪದ್ಧತಿ ಒಪ್ಪಿದನು
B) ಮರಾಠ ಮನೆತನಗಳು ಒಗ್ಗೂಡಿದವು
C) ಮೂರನೇ ಆಂಗ್ಲೋ ಮರಾಠ ಯುದ್ಧ ನಡೆಯಿತು
D) ಪ್ರತಾಪಸಿಂಹನು ಮರಾಠರ ರಾಜನಾದನು

C) ಮೂರನೇ ಆಂಗ್ಲೋ ಮರಾಠ ಯುದ್ಧ ನಡೆಯಿತು

17. ಇದು ಲಾಹೋರ್ ಒಪ್ಪಂದದ ಪರಿಣಾಮ
A) ಪಂಜಾಬ್ ಸ್ವತಂತ್ರವಾಯಿತು
B) ರೆಸಿಡೆಂಟ್ ಪಂಜಾಬಿನ ನೈಜ ಆಡಳಿತಗಾರ
C) ರಣಜಿತ್ ಸಿಂಗ್ ಸಾವು
D) ಬ್ರಿಟಿಷರಿಗೆ ಕಾಶ್ಮೀರವು ದೊರಕಿತು

B) ರೆಸಿಡೆಂಟ್ ಪಂಜಾಬಿನ ನೈಜ ಆಡಳಿತಗಾರ

18. ಹಿಂದೂ, ಮುಸಲ್ಮಾನ ಮತ್ತು ಸಿಖ್ಖರು ಎಲ್ಲರೂ ಸೇರಿ ಬ್ರಿಟಿಷರ ವಿರುದ್ಧ ಒಗ್ಗಟ್ಟಾಗಿ ಹೋರಾಡಿದ ಯುದ್ಧ?
A) ಕರ್ನಾಟಿಕ್ ಯುದ್ಧಗಳು
B) ಪ್ಲಾಸಿ ಮತ್ತು ಬಕ್ಸಾರ್ ಕದನಗಳು
C) ಆಂಗ್ಲೋ ಮರಾಠ ಯುದ್ಧಗಳು
D) ಆಂಗ್ಲೋ ಸಿಖ್ ಯುದ್ಧಗಳು

D) ಆಂಗ್ಲೋ ಸಿಖ್ ಯುದ್ಧಗಳು

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section