Type Here to Get Search Results !

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ - 05 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ - 05 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು SSLC Social Science Chapterwise MCQs in Kannada for All Competitive Exams: Chapter-04. Chapter - 05 Social and Religious Reform Movements MCQs

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ - 05 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು SSLC Social Science Chapterwise MCQs in Kannada for All Competitive Exams: Chapter-04. Chapter - 05 Social and Religious Reform Movements MCQs





ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಹತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಅಧ್ಯಾಯವಾರು ಬಹು ಆಯ್ಕೆಯ ಪ್ರಶ್ನೋತ್ತರಗಳು" ಸೇರಿದಂತೆ ಇನ್ನಿತರೆ ಎಲ್ಲ ವಿಷಯಗಳ ಪ್ರಶ್ನೋತ್ತರಗಳನ್ನು ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

ಅಧ್ಯಾಯ - 05 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು


1. ಬಿಳಿಯರ ಮೇಲಿನ ಹೊರೆ ಸಿದ್ಧಾಂತದ ನೈಜ ಅರ್ಥ.
a) ಬಿಳಿಯರು ಶ್ರೇಷ್ಠ
b) ಭಾರತೀಯರನ್ನು ನಾಗರಿಕರನ್ನಾಗಿಸುವ ಹೊರೆ ಬ್ರಿಟಿಷರದು
c) ಬ್ರಿಟಿಷರು ದೇಶ ಆಳುವುದು ಕಷ್ಟ
d) ಭಾರತೀಯರನ್ನು ಆಳುವುದು ಬ್ರಿಟಿಷರಿಗೆ ಹೊರೆ

ಸರಿಯಾದ ಉತ್ತರ : a) ಬಿಳಿಯರು ಶ್ರೇಷ್ಠ 

2. ಸತಿಪದ್ಧತಿಯನ್ನು ರಾಜಾ ರಾಮ್‌ ಮೋಹನ್‌ರಾಯರು 1829ರಲ್ಲಿ ಇವರ ಬೆಂಬಲದಿಂದ ಕಾನೂನು ಮಾಡಿಸಿ ನಿಷೇಧಿಸಿದರು
a) ವಿಲಿಯಂ ಬೆಂಟಿಂಕ್
b) ಕಾರ್ನವಾಲೀಸ್
c) ಲಾರ್ಡ್ ಡಾಲ್ ಹೌಸಿ
d) ಲಾರ್ಡ್ ವೆಲ್ಲೆಸ್ಲಿ 

ಸರಿಯಾದ ಉತ್ತರ : a) ವಿಲಿಯಂ ಬೆಂಟಿಂಕ್  

3. ಇವರು ಮೂರ್ತಿ ಪೂಜೆಯನ್ನು ತಿರಸ್ಕರಿಸಲಿಲ್ಲ
a) ಸ್ವಾಮಿ ವಿವೇಕಾನಂದ
b) ರಾಮಕೃಷ್ಣ ಪರಮಹಂಸ
c) ರಾಜಾರಾಮ್ ಮೋಹನ್‌ರಾವ್
d) ಸ್ವಾಮಿ ದಯಾನಂದ ಸರಸ್ಕೃತಿ

ಸರಿಯಾದ ಉತ್ತರ : b) ರಾಮಕೃಷ್ಣ ಪರಮಹಂಸ 

4. “ವೇದಗಳಿಗೆ ಮರಳಿ' ಘೋಷಣೆ/ ಶುದ್ಧಿ ಚಳುವಳಿ ಕಾರಣ ಕರ್ತೃ.
a) ಸ್ವಾಮಿ ವಿವೇಕಾನಂದ
b) ರಾಮಕೃಷ್ಣ ಪರಮಹಂಸ
c) ರಾಜಾರಾಮ್ ಮೋಹನ್‌ರಾವ್
d) ಸ್ಮಾಮಿ ದಯಾನಂದ ಸರಸ್ವತಿ 

ಸರಿಯಾದ ಉತ್ತರ : d) ಸ್ಮಾಮಿ ದಯಾನಂದ ಸರಸ್ವತಿ 

5. ಇವರು ಭಾರತದ ಪುನರುತ್ಥಾನವಾದಿ (ರಿನೈಸನ್ಸ್ ವಾದಿ) ಎನಿಸಿದವರು.
a) ಸ್ವಾಮಿ ವಿವೇಕಾನಂದ
b) ರಾಮಕೃಷ್ಣ ಪರಮಹಂಸ
c) ರಾಜಾರಾಮ್ ಮೋಹನ್‌ರಾವ್
d) ಸ್ವಾಮಿ ದಯಾನಂದ ಸರಸ್ವತಿ  

ಸರಿಯಾದ ಉತ್ತರ : d) ಸ್ಮಾಮಿ ದಯಾನಂದ ಸರಸ್ವತಿ 

6. ಇವರು ಆರ್ಯಸಮಾಜ / ದಯಾನಂದ ಸರಸ್ವತಿಯವರಿಂದ ಪ್ರಭಾವಿತರಾಗಿದ್ದರು.
a) ಮಹಾತ್ಮಗಾಂಧಿ
b) ಲಾಲಾಲಜಪತ್ ರಾಯ್
c) ರವೀಂದ್ರನಾಥ ಠಗೂರ್
d) ಡಾ|| ಬಿ.ಆರ್ ಅಂಬೇಡ್ಕರ್

ಸರಿಯಾದ ಉತ್ತರ : b) ಲಾಲಾಲಜಪತ್ ರಾಯ್  

7. ಜೋತಿಭಾ ಫುಲೆ ಬರೆದ ಪುಸ್ತಕ
a) ಗುಲಾಮಗಿರಿ
b) ಕೌಮುದಿ ಮಹೋತ್ಸವ
c) ನೂ ಇಂಡಿಯಾ
d) ಜ್ಞಾನಯೋಗ

ಸರಿಯಾದ ಉತ್ತರ : a) ಗುಲಾಮಗಿರಿ 

8. ಸತ್ಯ ಶೋಧಕ ಸಮಾಜ/ ಜೋತಿಭಾ ಫುಲೆಯವರಿಂದ ಪ್ರೇರಣೆ ಪಡೆದವರು
a) ಮಹಾತ್ಮಗಾಂಧಿ
b) ಲಾಲಾಲಜಪತ್ ರಾಯ್
c) ರವೀಂದ್ರನಾಥ ಠಗೂರ್
d) ಡಾ. ಬಿ.ಆರ್ ಅಂಬೇಡ್ಕರ್ 

ಸರಿಯಾದ ಉತ್ತರ : d) ಡಾ. ಬಿ.ಆರ್ ಅಂಬೇಡ್ಕರ್  

9. ಭಾರತೀಯರಿಗೆ ವೈಜ್ಞಾನಿಕ ದೃಷ್ಟಿಕೋನ ಬೆಳೆಸಲು ಪಠ್ಯರಚನೆಗೆ ಪ್ರಯತ್ನಿಸಿದವರು
a) ಮಹಾತ್ಮಗಾಂಧಿ
b) ಲಾಲಾಲಜಪತ್ ರಾಯ್
c) ರಾಮಕೃಷ್ಣ ಪರಮಹಂಸ
d) ಹೆನ್ರಿ ವಿವಿಯನ್ ಡಿರೋಜಿಯೋ  

ಸರಿಯಾದ ಉತ್ತರ : d) ಹೆನ್ರಿ ವಿವಿಯನ್ ಡಿರೋಜಿಯೋ 

10. ಭಾರತ ಪುನರುಜೀವನದ ಜನಕ/ ಆಧುನಿಕ ಭಾರತದ ಹರಿಕಾರ/ ಭಾರತೀಯ ರಾಷ್ಟ್ರೀಯತೆಯ ಪ್ರಭಾವಿ/ ಇಂಗ್ಲೀಷ್ ಶಿಕ್ಷಣಕ್ಕೆ ಒತ್ತು ನೀಡಿದವರು.
a) ಸ್ವಾಮಿ ವಿವೇಕಾನಂದ
b) ರಾಮಕೃಷ್ಣ ಪರಮಹಂಸ
c) ರಾಜಾರಾಮ್ ಮೋಹನ್‌ರಾವ್
d) ಸ್ವಾಮಿ ದಯಾನಂದ ಸರಸ್ಕೃತಿ 

ಸರಿಯಾದ ಉತ್ತರ : c) ರಾಜಾರಾಮ್ ಮೋಹನ್‌ರಾವ್  

11. ಭಾರತದ ಸಾಂಸ್ಕೃತಿಕ ಹಿರಿಮೆ ವಿಶ್ವದಾದ್ಯಂತ ಹೆಚ್ಚಿಸಿ, ಯುವಕರ ಪ್ರೇರಕಶಕ್ತಿ ಎಂದೇ ಪ್ರಸಿದ್ಧರಾದವರು.
a) ಆನಿಬೆಸೆಂಟ್
b) ದಯಾನಂದ ಸರಸ್ವತಿ
c) ರಾಮಕೃಷ್ಣ ಪರಮಹಂಸ
d) ಸ್ವಾಮಿ ವಿವೇಕಾನಂದ 

ಸರಿಯಾದ ಉತ್ತರ : d) ಸ್ವಾಮಿ ವಿವೇಕಾನಂದ 

12. ಥಿಯೋಸಾಫಿಕಲ್ ಸೊಸೈಟಿಯ ಭಾರತದ ಕೇಂದ್ರ ಕಛೇರಿ
a) ಬಾಂಬೆ
b) ಅಡ್ಯಾರ್
c) ಕಲ್ಕತ್ತಾ
d) ದೆಹಲಿ

ಸರಿಯಾದ ಉತ್ತರ : b) ಅಡ್ಯಾರ್ 

13. ಅನಿಬೆಸೆಂಟರಿಗೆ 'ಶ್ವೇತ ಸರಸ್ವತಿ' ಎಂದು ಹೆಸರು ಬರಲು ಕಾರಣ
a) ನೂ ಇಂಡಿಯಾ ಪತ್ರಿಕೆ ಪ್ರಾರಂಭ
b) ಭಗವದ್ಗೀತೆ ಇಂಗ್ಲೀಷಿಗೆ ಭಾಷಾಂತರ
c) ಅವರ ಬಣ್ಣ ಬಿಳಿ
d) ಹೋಂ ರೂಲ್ ಪ್ರಾರಂಭ 

ಸರಿಯಾದ ಉತ್ತರ : b) ಭಗವದ್ಗೀತೆ ಇಂಗ್ಲೀಷಿಗೆ ಭಾಷಾಂತರ 

14. ಶ್ರೀ ನಾರಾಯಣ ಗುರು ಅವರ ಆಶಯ
a) ಮಾನವರಿಗೆ ಒಂದೇ ಜಾತಿ, ಧರ್ಮ, ಒಂದೇ ದೇವರು
b) ಭಾರತದ ಸ್ವಾತಂತ್ರ
c) ಬ್ರಿಟಿಷರಿಂದ ಮುಕ್ತಿ
d) ದೇವಾಸ್ಕಾನಗಳ ಪ್ರವೇಶ

ಸರಿಯಾದ ಉತ್ತರ : a) ಮಾನವರಿಗೆ ಒಂದೇ ಜಾತಿ, ಧರ್ಮ, ಒಂದೇ ದೇವರು  

15. ಜಸ್ಟಿಸ್ ಪಾರ್ಟಿ/ ಜಸ್ಟಿಸ್ ಪತ್ರಿಕೆ /ದ್ರಾವಿಡ ಕಳಗಂ ಸಂಘಟನೆ ಸ್ಯಾಪಕರು / ಆತ್ಮಗೌರವ ಚಳುವಳಿ/ ರಾವಣ ಪರಂಪರೆ ವೈಭವೀಕರಿಸಿದವರು.
a) ಟಿ.ಎಂ. ನಾಯರ್
b) ಶ್ರೀ ನಾರಾಯಣ ಗುರು
c) ರಾಮಕೃಷ್ಣ ಪರಮಹಂ
d) ಇ.ವಿ ರಾಮಸ್ವಾಮಿ ನಾಯರ್ (ಪೆರಿಯಾರ್)

ಸರಿಯಾದ ಉತ್ತರ : d) ಇ.ವಿ ರಾಮಸ್ವಾಮಿ ನಾಯರ್ (ಪೆರಿಯಾರ್) 

16. ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆ.
a) ಅನಿಬೆಸೆಂಟ್
b) ಮೇಡಂ ಬ್ಲವಟ್ಸ್ಕಿ
c) ಸರೋಜಿನಿ ನಾಯ್ಡು
d) ಇಂದಿರಾಗಾಂಧಿ

ಸರಿಯಾದ ಉತ್ತರ : a) ಅನಿಬೆಸೆಂಟ್ 

17. ಹೆನ್ರಿ ವಿವಿಯನ್ ಡಿರೋಜಿಯೋ ಈ ಚಳುವಳಿಯ ಆಶಯಗಳಿಂದ ಪ್ರಭಾವಿತಗೊಂಡಿದ್ದರು.
a) ಸಾಮಾಜಿಕ ಧಾರ್ಮಿಕ ಚಳುವಳಿ
b) ಯುರೋಪಿನ ಪುನರುಜ್ಜೀವನ ಚಳುವಳಿ
c) ಭಾರತದ ಸ್ವಾತಂತ್ರ್ಯ ಚಳುವಳಿ
d) ಭಾರತದ ಪುನರುಜೀವನ ಚಳುವಳಿ.

ಸರಿಯಾದ ಉತ್ತರ : b) ಯುರೋಪಿನ ಪುನರುಜ್ಜೀವನ ಚಳುವಳಿ 

18. ಬ್ರಹ್ಮಸಮಾಜದ ತಾತ್ವಿಕ ಪ್ರಭಾವದಿಂದ ರೂಪಿತಗೊಂಡ ಸಮಾಜ ಸುಧಾರಣೆ ಸಂಖ್ಯೆ.
a) ಸತ್ಯಶೋಧಕ ಸಮಾಜ
b) ಪ್ರಾರ್ಥನಾ ಸಮಾಜ
c) ಆರ್ಯಸಮಾಜ
d) ರಾಮಕೃಷ್ಣ ಮಿಷನ್

ಸರಿಯಾದ ಉತ್ತರ : b) ಪ್ರಾರ್ಥನಾ ಸಮಾಜ 

19. ಮೈಸೂರು ಸಂಸ್ಕಾನದ ಮಹಾರಾಜರಾದ ಹತ್ತನೆಯ ಚಾಮರಾಜ ಒಡೆಯರ್ ಅವರು ಸ್ವಾಮಿ ವಿವೇಕಾನಂದರ ಸಲಹೆಯಂತೆ
a) ಅಸ್ಪೃಶ್ಯತೆಯ ಆಚರಣೆಯನ್ನು ನಿಷೇಧಿಸಿದ್ದರು
b) ಪುಜೆಗಳಿಗೆ ಧಾರ್ಮಿಕ ಸ್ವಾತಂತ್ರ ನೀಡಿದರು
c) ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದರು
d) ಅಸ್ಪೃಶ್ಯ ಮಕ್ಕಳಿಗೆ ಶಾಲೆಗಳನ್ನು ಪ್ರಾರಂಭಿಸಿದರು 

ಸರಿಯಾದ ಉತ್ತರ : d) ಅಸ್ಪೃಶ್ಯ ಮಕ್ಕಳಿಗೆ ಶಾಲೆಗಳನ್ನು ಪ್ರಾರಂಭಿಸಿದರು 

20. ಪೆರಿಯಾರ್ ಚಳವಳಿಯು ಪ್ರಮುಖವಾಗಿ ಈ ಚಳುವಳಿಯಾಗಿದೆ.
a) ಬ್ರಾಹ್ಮಣೇತರ ಚಳುವಳಿ
b) ಅಸ್ಪೃಶ್ಯರ ಚಳುವಳಿ
c) ದಲಿತೇತರ ಚಳುವಳಿ
d) ಧರ್ಮೇತರ ಚಳುವಳಿ

ಸರಿಯಾದ ಉತ್ತರ : a) ಬ್ರಾಹ್ಮಣೇತರ ಚಳುವಳಿ 

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section