Breaking

Sunday, 20 February 2022

20 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

20 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

20 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1. 'ಗೀತಗೋವಿಂದ' ವನ್ನು ಬರೆದವರು ಯಾರು?
ಎ) ಜಯದೇವ 
ಬಿ) ಕಾಳಿದಾಸ  
ಸಿ) ಪುರಂದರದಾಸ    
ಡಿ) ತುಳಸಿದಾಸ

ಸರಿಯಾದ ಉತ್ತರ:  ಎ) ಜಯದೇವ  



2. ಮಾಹಿತಿ ಪ್ರಸರಣದ ವೇಗವನ್ನು ಅಳೆಯಲು ಬಳಸುವ ಯೂನಿಟ್ ಯಾವುದು?
ಎ) ಗಿಗಾ ಹರ್ಟ್ಸ್ 
ಬಿ) ಕ್ಯಾರಟ್ಕರ್ಸ್ ಪರ್ ಸೆಕೆಂಡ್ 
ಸಿ) ಫೈಲ್ಸ್ ಪರ್ ಹವರ್ 
ಡಿ) ಬಿಟ್ಸ್ ಪರ್ ಸೆಕೆಂಡ್     

ಸರಿಯಾದ ಉತ್ತರ: ಡಿ) ಬಿಟ್ಸ್ ಪರ್ ಸೆಕೆಂಡ್  



3. ದೆಹಲಿ ಸುಲ್ತಾನರುಗಳ ರಾಜವಂಶದ ಸರಿಯಾದ ಕ್ರಮ ಕೆಳಗಿನವುಗಳಲ್ಲಿ ಯಾವುದು?
ಎ) ತುಘಲಕ್ ಖಿಲ್ಡಿ ಗುಲಾಮಿ – ಲೋಧಿ 
ಬಿ) ಗುಲಾಮಿ ಲೋಧಿ ಖಿಲ್ಪಿ ತುಘಲಕ್  
ಸಿ) ಗುಲಾಮಿ ಖಿಲ್ಜಿ ತುಘಲಕ್ – ಲೋಧಿ
ಡಿ) ಗುಲಾಮಿ ತುಘಲಕ್ ಖಿಲ್ಲಿ ಲೋಧಿ 

ಸರಿಯಾದ ಉತ್ತರ: ಸಿ) ಗುಲಾಮಿ ಖಿಲ್ಜಿ ತುಘಲಕ್ – ಲೋಧಿ




4. ಅಶೋಕನ ಮೇಲೆ ಹೆಚ್ಚು ಪ್ರಭಾವ ಬೀರಿದ ಬೌದ್ಧ ಧರ್ಮದ ಸನ್ಯಾಸಿ .
ಎ) ಉಪಗುಪ್ತ 
ಬಿ) ವಸುಬಂಧು  
ಸಿ) ಅಂಭಿ  
ಡಿ) ಅಶ್ವಘೋಷ 

ಸರಿಯಾದ ಉತ್ತರ: ಎ) ಉಪಗುಪ್ತ




5. ನಾಲ್ಕು ವೇದಗಳಲ್ಲಿ ಮೊದಲನೇ ವೇದ ಯಾವುದು?
ಎ) ಋಗ್ವದ
ಬಿ) ಸಾಮವೇದ  
ಸಿ) ಯಜುರ್‌ವೇದ  
ಡಿ) ಅಥರ್ವವೇದ    

ಸರಿಯಾದ ಉತ್ತರ: ಎ) ಋಗ್ವದ 



6. ' ರೈತವಾರಿ ' ಪದ್ಧತಿಯನ್ನು ಜಾರಿಗೆ ತಂದವರು ಯಾರು?
ಎ) ಲಾರ್ಡ್ಕಾರ್ನ್ ವಾಲೀಸ್ 
ಬಿ) ಲಾರ್ಡ್ ಮಿಂಟೋ  
ಸಿ) ಲಾರ್ಡ್ ಹೇಸ್ಟಿಂಗ್ಸ್  
ಡಿ) ಥಾಮಸ್ ಮುನ್ರೋ 

ಸರಿಯಾದ ಉತ್ತರ: ಡಿ) ಥಾಮಸ್ ಮುನ್ರೋ  



7. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಾರಂಭಿಸಿದ ವರ್ಷ? 
ಎ) 2005 
ಬಿ) 2007 
ಸಿ) 2006
ಡಿ) 2008  

ಸರಿಯಾದ ಉತ್ತರ: ಸಿ) 2006



8.  ವಿಶ್ವ ವ್ಯಾಪಾರ ಸಂಸ್ಥೆಯ ಪ್ರಧಾನ ಕಚೇರಿ ಇರುವುದು . 
ಎ) ಮಾಂಟ್ರಿಯಲ್ 
ಬಿ) ಜಿನೀವಾ
ಸಿ) ನ್ಯೂಯಾರ್ಕ್ 
ಡಿ) ನ್ಯೂಜೆರ್ಸಿ 

ಸರಿಯಾದ ಉತ್ತರ: ಬಿ) ಜಿನೀವಾ 




9. ರಾಜ್ಯಗಳಿಗೆ ಅವಶ್ಯಕತೆಯ ಮೇರೆಗೆ ಹಣಕಾಸಿನ ಅನುದಾನ ( Grants in aid) ಹಂಚಿಕೆ ಮಾಡುವುದು.
ಎ) ಸಾರ್ವಜನಿಕ ಲೆಕ್ಕಪತ್ರ ಸಮಿತಿ  
ಬಿ) ಎಸ್ಟಿಮೇಟ್ ( ಅಂದಾಜು ) ಸಮಿತಿ 
ಸಿ) ಹಣಕಾಸು ಆಯೋಗ
ಡಿ) ನೀತಿ ಆಯೋಗ  

ಸರಿಯಾದ ಉತ್ತರ: ಸಿ) ಹಣಕಾಸು ಆಯೋಗ 



10. ಭಾರತದ ಸಂವಿಧಾನವನ್ನು ಅಂಗೀಕರಿಸಿದ್ದು 
ಎ) 25 ನೇ ಅಕ್ಟೋಬರ್ , 1948  
ಬಿ) 25 ನೇ ಅಕ್ಟೋಬರ್ , 1949 
ಸಿ) 26 ನೇ ನವೆಂಬರ್ , 1948  
ಡಿ) 26 ನೇ ನವೆಂಬರ್ , 1949  

ಸರಿಯಾದ ಉತ್ತರ: ಡಿ) 26 ನೇ ನವೆಂಬರ್ , 1949 




No comments:

Post a Comment

Important Notes

Random Posts

Important Notes

Popular Posts