Type Here to Get Search Results !

ಜರೋಕ-ಇ-ದರ್ಶನ್ (Jarokha-i-Darshan) ಬಗ್ಗೆ ನಿಮಗೆಷ್ಟು ಗೊತ್ತು? How much you know about Jarokha-i-Darshan?

ಜರೋಕ-ಇ-ದರ್ಶನ್ (Jaroka-i-Darshan)



ಜರೋಕ-ಇ-ದರ್ಶನ್ ಎಂಬುದು ಭಾರತದ ಮಧ್ಯಕಾಲೀನ ರಾಜರುಗಳು ಕೋಟೆ ಮತ್ತು ಅರಮನೆಗಳ ಬಾಲ್ಕನಿಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರತಿನಿತ್ಯ ಭಾಷಣ ಮಾಡುವ ಪದ್ಧತಿಯಾಗಿತ್ತು. ಸಾರ್ವಜನಿಕರೊಂದಿಗೆ ನೇರವಾಗಿ ಮುಖಾಮುಖಿ ಸಂಪರ್ಕ ಸಾಧಿಸಲು ಬಳಸಿಕೊಂಡ ಪ್ರಮುಖ ವಿಧಾನವಾಗಿತ್ತು. ಇದನ್ನು ಮೊಘಲ್ ದೊರೆಗಳು ಆಚರಣೆಗೆ ತಂದಿದ್ದರು. ಈ ಪದ್ಧತಿಯು ಮೊಘಲ್ ದೊರೆ ಅಕ್ಬರನ ಪರಿಕಲ್ಪನೆಯಾಗಿದೆ. ಅಕ್ಬರನ ನಂತರ ಈ ಪದ್ಧತಿಯನ್ನು ಜಹಂಗೀರ್ ಮತ್ತು ಷೇರ್ ಷಾ ಮುಂದುವರೆಸಿದರು. ಈ ಪದ್ಧತಿಯನ್ನು ಮೊಘಲ್ ದೊರೆ ಔರಂಗಜೇಬನು ಸ್ಥಗಿತಗೊಳಿಸಿದನು. ಮೊಘಲರ ಕಾಲದಲ್ಲಿ ಜಾರಿಯಲ್ಲಿದ್ದ ತುಲಾಧನ (Tuladhan-ದೊರೆಯನ್ನು ಚಿನ್ನದಲ್ಲಿ ತೂಗುವ ಪದ್ಧತಿ) ಯನ್ನು ಔರಂಗಜೇಬನು ರದ್ದು ಮಾಡಿದನು.



ಅಕ್ಬರ್ ನ ಪ್ರಮುಖ ಕಟ್ಟಡಗಳು


ಅಕ್ಬರ್‌ನು ಕಲಾರಸಿಕನು, ಮಹಾನಿರ್ಮಾಪಕನೂ ಆಗಿದ್ದು ಮೊಗಲ್ ವಾಸ್ತುಶಿಲ್ಪಕ್ಕೆ ಭದ್ರವಾದ ಬುನಾದಿ ಹಾಕಿದನು. ಅಕ್ಟರ್‌ ತನ್ನ ಮನಸ್ಸಿನಲ್ಲಿ ಮೂಡಿದ ಕಲ್ಪನೆಯನ್ನು ಕಲ್ಲಿನಲ್ಲಿ ಅರಳಿಸಿಬಿಟ್ಟನು. ಈಗ ಕಲೆಯಲ್ಲಿ ಪ್ರಥಮಬಾರಿಗೆ ಹಿಂದೂ-ಮುಸ್ಲಿಂ ಶೈಲಿಗಳು ಸಮಾಗಮಗೊಂಡವು. ಅವನು ಅನೇಕ ಹಿಂದೂ ಶಿಲ್ಪಿಗಳನ್ನು ನೇಮಿಸಿಕೊಂಡನು. ಆತ ವಾಸ್ತುಶಿಲ್ಪಕ್ಕೆ ಕೆಂಪು ಮರಳುಕಲ್ಲನ್ನು ಬಳಸಿದನು. ಕಮಾನುಗಳು ಸುಂದರವಾಗಿವೆ. ಅವನ ಬಹುತೇಕ ಕಟ್ಟಡಗಳು ಅವರ ಕನಸಿನ ನಗರ  ಎಂದು ಕರೆಯಲಾಗಿದೆ. ಅದನ್ನು ಷೇಕ್ ಸಲೀಂ ಚಿಸ್ತಿಯ ಗೌರವ ಹಾಗೂ ಗುಜರಾತಿನ ವಿಜಯದ ನೆನಪಿಗಾಗಿ ನಿರ್ಮಿಸಿದನು. ಸಿಕ್ರಿ ನಿರ್ಮಾಣಕ್ಕೆ 11 ವರ್ಷಗಳು (1569-80) ಬೇಕಾದವು. ಫತೇಪುರ ಸಿಕ್ರಿ 2 ಮೈಲಿ ಉದ್ದ ಹಾಗೂ 1 ಮೈಲಿ ಆಗಲವಾಗಿದೆ. ಅದಕ್ಕೆ 9 ದ್ವಾರಗಳಿದ್ದವು. ಇಲ್ಲಿ ಅಕ್ಬರ್‌ ನಿರ್ಮಿಸಿದ ದಿವಾನ್-ಇ-ಖಾಸ್, ದಿವಾನ್-ಇ-ಆಮ್, ಪಂಚಮಹಲ್, ಜೋದ್ ಬಾಯ್ ಅರಮನೆ, ಬೀರ್‌ಬಲ್ ಮಹಲ್, ಖಾಸ್ ಮಹಲ್, ಹಿರಾನ್ ಮಹಲ್, ಇಬಾದತ್ ಖಾನ, ತುರ್ಕಿ ಸುಲ್ತಾನ್ ಅರಮನೆ (ವಾಸ್ತುಶಿಲ್ಪದ ಅನರ್ಘ್ಯ

ರತ್ನ), ವೈದ್ಯಾಲಯ, ಮಾರಿಯಂ ಮಹಲ್, ರಾಯಲ್ ಸ್ಕೂಲ್, ಕೋಶಗಾರ, ಬಾದಶಹ ಮಲಗುವ ಕೊಠಡಿಗಳು, ಜಾಮೀ ಮಸೀದಿ, ಷೇಕ್ ಸಲೀಂ ಚಿಸ್ತಿ ಸಮಾಧಿ, ಬುಲಂದ್ ದದ್ವಾಜ್ (ಗುಜರಾತ್ ದಿಗ್ವಿಜಯದ ನೆನಪಿಗಾಗಿ ನಿರ್ಮಿಸಿದ ವಿಜಯದ ಬಾಗಿಲು) ಮುಂತಾದ ಕಟ್ಟಡಗಳಿವೆ. ಬುಲಂದ್ ದರ್ವಾಜಾ ದ್ವಾರವು ಭಾರತದಲ್ಲೇ ಅತ್ಯಂತ ಎತ್ತರವಾದ ಬಾಗಿಲಾಗಿದೆ. ಅದು 176 ಅಡಿ ಎತ್ತರ ಹಾಗೂ 130 ಅಡಿ ಅಗಲವಾಗಿದೆ. ಅದು ಭಾರತದ ಅತ್ಯುತ್ತಮ ವಾಸ್ತುಶಿಲ್ಪ ಕೃತಿಗಳಲ್ಲಿ ಒಂದಾಗಿದೆ. ಅದಕ್ಕೆ ಜೈನ ಶೈಲಿಯ ಗುಮ್ಮಟ ಕಳಸಗಳಿವೆ. ನಡುಗುಮ್ಮಟ 41 ಅಡಿ ಎತ್ತರವಾಗಿದೆ. 288 ಅಡಿ ಉದ್ದ, 66, ಅಗಲವಾಗಿರುವ ಗುಜರಾತ್ ದಿಗ್ವಿಜಯದ ನೆನಪಿಗೆ ಅದನ್ನು ನಿರ್ಮಿಸಲಾಯಿತು. ಜಾಮೀಮಸೀದಿ ಭಾರತದ ಸುಂದರ ಮಸೀದಿಗಳಲ್ಲಿ ಒಂದಾಗಿದೆ. ಫರ್ಗ್ಯುಸನ್‌ರು ಜಾಮೀಮಸೀದಿಯನ್ನು 'ಶಿಲೆಯಲ್ಲಿನ ಕಲ್ಪನಾ ಪ್ರಪಂಚದ ವಿಹಾರವೆಂದು' 'ಸಕ್ರಿಯ ಭದ್ರತೆಯ ಸಂಕೇತ' ಎಂದು ವರ್ಣಿಸಲಾಗಿದೆ. ಅಕ್ಬರ್‌ನು ನಿರ್ಮಿಸಿದ ಸಕ್ರಿಯ ಷೇಕ್ ಸಲೀಂ ಚಿಸ್ತಿಯ ಸಮಾಧಿಯ ಬಿಳಿ ಅಮೃತಶಿಲೆಗಳಿಂದ ಕಟ್ಟಿದ್ದು ಅದರ ಗುಮ್ಮಟ ಆಕರ್ಷಣೀಯವಾಗಿದೆ.


ವಿ.ಎ. ಸ್ಮಿತ್‌ರು ಫತೇಪುರ ಸಿಕ್ರಿಯನ್ನು “ಶಿಲೆಯಲ್ಲಿನ ಅದ್ಭುತ ರಮ್ಯ ಕಾವ್ಯ” ಹಾಗೂ ವಾಸ್ತುಶಿಲ್ಪದ ವಜ್ರ, ಹಿಂದೆಂದೂ ಸೃಷ್ಟಿಯಾಗದ ಅಥವಾ ಮತ್ತೆ ಸೃಷ್ಟಿಸಲಾಗದು ಎಂತಲೂ ಫರ್ಗ್ಯುಸನ್‌ರು 'ಒಬ್ಬ ಮಹಾಶಯ ಮನಸ್ಸಿನ ದರ್ಪಣವಾಗಿದೆ' ಬಣ್ಣಿಸಿದ್ದಾರೆ. ಪಂಚಮಹಲ್ ಮಹಡಿಗಳ ಕಟ್ಟಡವಾಗಿದ್ದು, 84 ಸ್ತಂಭಗಳಿಂದ ಕೂಡಿದೆ. ಫತೇಪುರ ಸಿಕ್ರಿ 1585 ರವರೆಗೂ ರಾಜಧಾನಿಯಾಗಿದ್ದು, ಅನಂತರ ಆಗ್ರಾ ರಾಜಧಾನಿಯಾಯಿತು ಆಗ್ರದ ಕೋಟೆ 2.4 ಕಿ.ಮೀ ಉದ್ದ ಹಾಗೂ 75 ಅಡಿ ಎತ್ತರ (25 ಮೀ) ವಾಗಿತ್ತು. ಅದಕ್ಕೆ ಆನೆದ್ವಾರ ಅಥವಾ ದೆಹಲಿದ್ವಾರ ಮತ್ತು ಅಮರ್‌ಸಿಂಗ್ ದ್ವಾರ ಎಂಬ 2 ದ್ವಾರಗಳಿದ್ದವು. ಆಗ್ರದಲ್ಲಿ ಅಕ್ಬರ್‌ ನಿರ್ಮಿಸಿದ ಅಕ್ಟರ್ ಮಹಲ್, ಮೋತಿ ಮಹಲ್, ದಿವಾನ್ -ಇ-ಆಮ್, ದಿವಾನ್-ಇ-ಖಾಸ್, ನಗೀನಾ ಮಸೀದಿ, ಜನಾನ ಅರಮನೆ, ಜಹಂಗೀರ್ ಮಹಲ್ ಕಟ್ಟಡಗಳಿವೆ ಅಕ್ಬರನು ಸಿಕಂದರ್‌ನಲ್ಲಿ ತನ್ನ ಗೋರಿಯ ನಿರ್ಮಾಣ ಕಾರ್ಯ ಆರಂಭಿಸಿದನು. “ಅಕ್ಬರ್‌ನ ಗೋರಿ ಭಾರತದ ಪ್ರಸಿದ್ದ ಚಕ್ರವರ್ತಿಯ ಪ್ರಸಿದ್ಧ ಅರ್ಹ ಸ್ಮಾರಕ” ಎಂದು ಹ್ಯಾವೆಲ್ ಹೇಳಿದ್ದಾರೆ. ಅದರ ನಿರ್ಮಾಣ ವೆಚ್ಚ 15 ಲಕ್ಷ ರೂ ಇಡೀ ಏಷ್ಯಾದಲ್ಲೇ ಅತ್ಯಂತ ಸುಂದರ ಗೋರಿ ಇದಾಗಿದೆ.


ಅದರ ಮೇಲೆ ಮರಗಿಡ ಪುಷ್ಪ ಪತಂಗ ಕೆತ್ತನೆಗಳ ಅಲಂಕಾರಗಳಿವೆ. ಅದರ ಮುಂದೆ ಸುಂದರ ತೋಟವಿದೆ. ಅಕ್ಟರ್‌ ಅಲಹಾಬಾದಿನಲ್ಲಿ 40 ಸ್ತಂಭಗಳುಳ್ಳ ಅರಮನೆಯನ್ನು ನಿರ್ಮಿಸಿದನು. ಜೊತೆಗೆ ಅಜೀರ್, ಬಿಕನೀರ್, ಜೋದ್ ಪುರ ಅರಮನೆಗಳು ಆಗ್ರ, ಅಲಹಾಬಾದ್, ಅಟ್ರೋಕ್, ಲಾಹೋರ್‌ನ ಕೋಟೆಗಳು ಅಟ್ರೋಕ್ ಮಸೀದಿ, ಮೆರ್ತಾ ಮಸೀದಿ, ಅನೇಕ ಸರಾಯಿಗಳು, ಕೆರೆಗಳು, ಮದರಸಗಳು ಕೋಟೆಗಳಾದ ಅಗ್ರಮ, ಲಾಹೋರ್ ಮತ್ತು ಅಲಹಾಬಾದ್ ಕೋಟೆಗಳನ್ನು ನಿರ್ಮಿಸಿದನು.

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section