Breaking

Saturday, 18 June 2022

18 ಜೂನ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

18 ಜೂನ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

18 ಜೂನ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ಈ ಕೆಳಗಿನ ಯಾವ ದಿನವನ್ನು ಅಂತರರಾಷ್ಟ್ರೀಯ ಹತ್ಯಾಕಾಂಡದ ಸ್ಮರಣೆಯ ದಿನ (International Holocausts Remembrance day) ವನ್ನು ಪ್ರತಿವರ್ಷ ಆಚರಿಸಲಾಗುತ್ತದೆ?

ⓐ ಜನವರಿ 27
ⓑ ಜನವರಿ 29
ⓒ ಫೆಬ್ರವರಿ 2
ⓓ ಜನವರಿ 31

2➤ ಈ ಕೆಳಗಿನ ಯಾವ ಬ್ಯಾಂಕ್ ಭಾರತದ ಮೊದಲ 'ಡಿಜಿಟಲ್ ಬ್ಯಾಂಕ್ ಆನ್ ಮೊಬೈಲ್' ಸೇವೆಯನ್ನು ಪಾಕೆಟ್ (Pocket) ಎಂಬ ಹೆಸರಿನಲ್ಲಿ ಆರಂಭಿಸಿತು?

ⓐ ಆಕ್ಸಿಸ್ ಬ್ಯಾಂಕ್
ⓑ ಎಚ್ಡಿಎಫ್ಸಿ ಬ್ಯಾಂಕ್
ⓒ ಐಸಿಐಸಿಐ ಬ್ಯಾಂಕ್
ⓓ ಕಾರ್ಪೊರೇಶನ್ ಬ್ಯಾಂಕ್

3➤ ನ್ಯಾಷನಲ್ ಬುಕ್ ಟ್ರಸ್ಟ್ (ಎನ್‌ಬಿಟಿ) ಸ್ಥಾಪನೆಗೊಂಡ ವರ್ಷ ಯಾವುದು?

ⓐ 1957
ⓑ 1947
ⓒ 1987
ⓓ 1967

4➤ ಟಾಡಾ (TADA-Terrorist and Disruptive Activities (Prevention) Act) ವಿಶೇಷ ನ್ಯಾಯಾಲಯ ಎಲ್ಲಿದೆ?

ⓐ ಚೆನ್ನೈ
ⓑ ದೆಹಲಿ
ⓒ ಹೈದರಾಬಾದ್
ⓓ ಮುಂಬೈ

5➤ ಯಾವ ದಿನವನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವಂತೆ ವಿಶ್ವಸಂಸ್ಥೆ ಸೂಚಿಸಿದೆ?

ⓐ ಜೂನ್ 20
ⓑ ಜೂನ್ 21
ⓒ ಜುಲೈ 20
ⓓ ಮಾರ್ಚ್ 20

6➤ ಬೆರ್ನಾಮ (BERNAMA) ಎಂಬುದು ಯಾವ ದೇಶದ ಸುದ್ದಿ ಸಂಸ್ಥೆಯ ಹೆಸರಾಗಿದೆ?

ⓐ ಸಿಂಗಾಪುರ್
ⓑ ಥೈಲ್ಯಾಂಡ್
ⓒ ಬ್ರೂನಿ
ⓓ ಮಲೇಷಿಯಾ

7➤ ವಿಶ್ವದಲ್ಲೇ ಅತಿದೊಡ್ಡ ಸಾರ್ವಜನಿಕ ಯೋಜನೆ ಯಾವುದು?

ⓐ ಸ್ವರ್ಣ ಜಯಂತಿ ಗ್ರಾಮ್ ಸ್ವರಾಜ್ ಯೋಜನೆ
ⓑ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಮೈತ ಖಾತರಿ ಯೋಜನೆ
ⓒ ಇಂದಿರಾ ಆವಾಸ್ ಯೋಜನೆ
ⓓ ಜವಾಹರ್ ಗ್ರಾಮ್ ಸಮೃದ್ಧಿ ಯೋಜನೆ

8➤ ಈ ಕೆಳಗಿನ ಯಾವುದರ ಅಡಿಯಲ್ಲಿ ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಸಮಿತಿಯನ್ನು ರಚಿಸಲಾಗಿದೆ?

ⓐ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006
ⓑ ಸರಕುಗಳ ಭೌಗೋಳಿಕ ತೋರ್ಪಡಿಕೆ (ನೋಂದಣಿ ಮತ್ತು ರಕ್ಷಣೆ) ಕಾಯ್ದೆ 1999
ⓒ ಪರಿಸರ (ರಕ್ಷಣಾ) ಕಾಯ್ದೆ 1986
ⓓ ವನ್ಯಪಶು (ರಕ್ಷಣಾ) ಕಾಯ್ದೆ 1972

9➤ ಪ್ರೋಟೀನ್‌ನ ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವ ಇದಾಗಿದೆ.

ⓐ ಟ್ರಿಪ್ಪಿನ
ⓑ ಲಿಪೇಸ್
ⓒ ಆಮೈಲೇಸ್
ⓓ ಪ್ರೋಟೀಸ್

10➤ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅತಿ ಎತ್ತರದವಾದ ಶಿಖರ ಯಾವುದು?

ⓐ ಮೌಂಟ್ ಕೊಯಾ
ⓑ ಮೌಂಟ್ ಡೈವೊಲೊ
ⓒ ಮೌಂಟ್ ಥ್ಯುಲರ್
ⓓ ಸ್ಯಾಡಲ್ ಪೀಕ್

No comments:

Post a Comment

Important Notes

Random Posts

Important Notes

Popular Posts