01 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
01 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1. 2022 ನೇ ಸಾಲಿನ ಅಂಡರ್-19 ವಿಶ್ವಕಪ್ ವಿಜೇತ ತಂಡ?
ಎ) ಭಾರತ
ಬಿ) ಇಂಗ್ಲೆಂಡ್
ಸಿ) ಪಾಕಿಸ್ತಾನ
ಡಿ) ದಕ್ಷಿಣ ಆಫ್ರಿಕಾ
ಸರಿಯಾದ ಉತ್ತರ: ಎ) ಭಾರತ
2. ಇತ್ತೀಚೆಗೆ ನಿಧನರಾದ ಲತಾ ಮಂಗೇಶ್ಕರ್ರವರಿಗೆ ಈ ಕೆಳಗಿನ ಯಾವ ವರ್ಷ ಭಾರತರತ್ನ ಪ್ರಶಸ್ತಿ ನೀಡಲಾಯಿತು?
ಎ) 1989
ಬಿ) 1974
ಸಿ) 2001
ಡಿ) 2003
ಸರಿಯಾದ ಉತ್ತರ: ಸಿ) 2001
3. ಪ್ರಸ್ತುತ ಭಾರತದಲ್ಲಿರುವ ರಾಮ್ಸರ್/ತಾಣಗಳ ಸಂಖ್ಯೆ
ಎ) 45
ಬಿ) 47
ಸಿ) 46
ಡಿ) 49
ಸರಿಯಾದ ಉತ್ತರ: ಡಿ) 49
4. ಯಂಗ್ ಡಿಸೈನರ್ ಅವಾರ್ಡ್ ನೀಡುವ ನಿಪ್ಪಾನ್ ಪೇಂಟ್ಸ್, ಈ ಕೆಳಗಿನ ಯಾವ ದೇಶದ ಮೂಲದ್ದಾಗಿದೆ?
ಎ) ರಷ್ಯಾ
ಬಿ) ಜಪಾನ್
ಸಿ) ಚೀನಾ
ಡಿ) ಇಸ್ರೇಲ್
ಸರಿಯಾದ ಉತ್ತರ: ಬಿ) ಜಪಾನ್
5. ನೇತ್ರದಾನದಲ್ಲಿ ದಾನಿಯ ಕಣ್ಣಿನ ಯಾವ ಭಾಗವು ಉಪಯುಕ್ತವಾಗಿರುವುದು?
ಎ) ಐರಿಸ್
ಬಿ) ರೆಟಿನಾ
ಸಿ) ಕಾರ್ನಿಯಾ
ಡಿ) ಮಸೂರ
ಸರಿಯಾದ ಉತ್ತರ: ಸಿ) ಕಾರ್ನಿಯಾ
6. ಮಾನವನ ದೇಹದ ಉಷ್ಣತೆ ಕೆಲ್ವಿನ್ ಮಾನದಲ್ಲಿ_________.
ಎ) 280
ಬಿ) 290
ಸಿ) 300
ಡಿ) 310
ಸರಿಯಾದ ಉತ್ತರ: ಡಿ) 310
7. ಕಾಸ್ಟಿಕ್ ಸೋಡಾ ತಯಾರಿಕೆಯಲ್ಲಿ ಬಳಸುವ ಮುಖ್ಯ ಕಚ್ಚಾವಸ್ತು ಯಾವುದು?
ಎ) ಕಲ್ಲಿದ್ದಲು
ಬಿ) ಸುಣ್ಣದ ಕಲ್ಲು
ಸಿ) ನೈಸರ್ಗಿಕ ಅನಿಲ
ಡಿ) ಉಪ್ಪು
ಸರಿಯಾದ ಉತ್ತರ: ಡಿ) ಉಪ್ಪು
8. ಸೋಡಿಯಂ ಮತ್ತು ಪೋಟ್ಯಾಸಿಯಂಗಳನ್ನು ಶೇಖರಿಸಿಡುವ ದ್ರವ ಯಾವುದು?
ಎ) ನೀರು
ಬಿ) ಬೆಂಜಿನ್
ಸಿ) ಸೀಮೆಎಣ್ಣೆ
ಡಿ) ಆಲ್ಕೋಹಾಲ್
ಸರಿಯಾದ ಉತ್ತರ: ಸಿ) ಸೀಮೆಎಣ್ಣೆ
9. ಮುರಿದ ಮೂಳೆಗಳ ಜೋಡಣೆಗೆ ಬಳಸುವ ಲೋಹ?
ಎ) ಕಬ್ಬಿಣ
ಬಿ) ತಾಮ್ರ
ಸಿ) ಟೈಟಾನಿಯಂ
ಡಿ) ಬೆಳ್ಳಿ
ಸರಿಯಾದ ಉತ್ತರ: ಸಿ) ಟೈಟಾನಿಯಂ
10. ದೆಹಲಿಯನ್ನು ಅತೀ ಕಡಿಮೆ ಆಳ್ವಿಕೆ ಮಾಡಿದ ಸುಲ್ತಾನರು ಯಾರು?
ಎ) ತುಘಲಕ್
ಬಿ) ಬಲ್ಬನ್
ಸಿ) ಖಿಲ್ಜಿ
ಡಿ) ಮೇಲಿನ ಯಾವುದು ಅಲ್ಲ
ಸರಿಯಾದ ಉತ್ತರ: ಸಿ) ಖಿಲ್ಜಿ