Type Here to Get Search Results !

ನಮ್ಮ ದೇಶ ಭಾರತದ ಬಗ್ಗೆ ನಿಮಗೆಷ್ಟು ಗೊತ್ತು?

ನಮ್ಮ ದೇಶ ಭಾರತದ ಬಗ್ಗೆ ನಿಮಗೆಷ್ಟು ಗೊತ್ತು?



ನಮ್ಮ ದೇಶ ಭಾರತದ ಬಗ್ಗೆ ನಿಮಗೆಷ್ಟು ಗೊತ್ತು?

  • ಭರತ ಚಕ್ರವರ್ತಿ ಆಳಿದ್ದರಿಂದ ಈ ನೆಲವು ಭಾರತ ದೇಶವೆಂದು ಹೆಸರಾಯಿತು.
  • ಗ್ರೀಕರು ಈ ಪ್ರದೇಶವನ್ನು ಇಂಡಿಯಾ ಎಂದು ಕರೆದರು.
  • ಭಾರತದ ಒಟ್ಟು ವಿಸ್ತೀರ್ಣ 32,87,263 ಚದರ ಕಿಲೋ ಮೀಟರ್.
  • 2011ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 121 ಕೋಟಿ.
  • ಭಾರತದ ಲಿಂಗಾನುಪಾತವು 940 ಇದ್ದು, 382ರಷ್ಟು ಜನಸಾಂದ್ರತೆ ಹೊಂದಿದೆ.
  • ಭಾರತವು ಪ್ರಪಂಚದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ 2ನೇ ರಾಷ್ಟ್ರವಾಗಿದೆ.
  • ಭಾರತವು ವಿಸ್ತೀರ್ಣದಲ್ಲಿ ಜಗತ್ತಿನ 7ನೇ ದೊಡ್ಡ ರಾಷ್ಟ್ರವಾಗಿದೆ,
  • 1911ರಿಂದ ನವದೆಹಲಿ ಭಾರತದ ರಾಷ್ಟ್ರೀಯ ರಾಜಧಾನಿ ಪ್ರದೇಶವಾಗಿದೆ.
  • 1773 ರಿಂದ 1911ರವರೆಗೆ ಕೋಲ್ಕತ್ತಾ ಭಾರತದ ರಾಜಧಾನಿಯಾಗಿತ್ತು.
  • ಭಾರತದಲ್ಲಿ ಪ್ರಸ್ತುತ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳಿವೆ.
  • ಭಾರತವು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿರುವ ರಾಷ್ಟ್ರವಾಗಿದೆ.
  • ಭಾರತದ ಉತ್ತರದಲ್ಲಿ ಹಿಮಾಲಯ ಪರ್ವತ, ದಕ್ಷಿಣದಲ್ಲಿ ಹಿಂದೂಮಹಾಸಾಗರವಿದೆ.
  • ಭಾರತದ ಪೂರ್ವದಲ್ಲಿ ಬಂಗಾಳಕೊಲ್ಲಿ, ಪಶ್ಚಿಮದಲ್ಲಿ ಅರಬ್ಬಿಸಮುದ್ರವಿದೆ.
  • ಇದು ದಕ್ಷಿಣೋತ್ತರವಾಗಿ 3214 KM & ಪೂರ್ವ-ಪಶ್ಚಿಮವಾಗಿ 2933 KM ವಿಸ್ತರಿಸಿದೆ.
  • ಭಾರತದ ಸಂವಿಧಾನವು 22 ಭಾಷೆಗಳಿಗೆ ಮಾನ್ಯತೆ ನೀಡಿದೆ.
  • ರಾಷ್ಟ್ರಪತಿಯವರು ಭಾರತದ ಪ್ರಥಮ ಪ್ರಜೆ & ಆಡಳಿತ ಮುಖ್ಯಸ್ಥರಾಗಿರುತ್ತಾರೆ.
  • 2011ರ ಜನಗಣತಿಯ ಪ್ರಕಾರ ಭಾರತದ ಸಾಕ್ಷರತೆಯ ಪ್ರಮಾಣ- 74.04%
  • ಇಂದಿರಾ ಪಾಯಿಂಟ್ ದಕ್ಷಿಣದ & ಇಂದಿರಾ ಕೋಲ್ ಉತ್ತರದ ತುತ್ತತುದಿಯಾಗಿವೆ.
  • ಭಾರತವು 15200 ಕಿಮೀ ಭೂಗಡಿ ಮತ್ತು 7516.5 ಕಿಮೀ ಜಲಗಡಿಯನ್ನು ಹೊಂದಿದೆ.
  • ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ ಮಧ್ಯಭಾಗದಲ್ಲಿ ಹಾಯ್ದು ಹೋಗುತ್ತದೆ.
  • ಭಾರತವು ನೆರೆಯ 7 ರಾಷ್ಟ್ರಗಳೊಂದಿಗೆ ಭೂಗಡಿಯನ್ನು ಹೊಂದಿದೆ.
  • ಕೆ2(ಗಾಡ್ವಿನ್ ಆಸ್ಟಿನ್) ಭಾರತದ ಅತ್ಯಂತ ಎತ್ತರದ ಶಿಖರವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section