Type Here to Get Search Results !

ನಮ್ಮ ರಾಜ್ಯ ಕರ್ನಾಟಕದ ಬಗ್ಗೆ ನಿಮಗೆಷ್ಟು ಗೊತ್ತು?

 

ನಮ್ಮ ರಾಜ್ಯ ಕರ್ನಾಟಕದ ಬಗ್ಗೆ ನಿಮಗೆಷ್ಟು ಗೊತ್ತು?

ನಮ್ಮ ರಾಜ್ಯ ಕರ್ನಾಟಕದ ಬಗ್ಗೆ ನಿಮಗೆಷ್ಟು ಗೊತ್ತು? How much you know about Our Karnataka, Important information about Karnataka,




ನಮ್ಮ ರಾಜ್ಯ ಕರ್ನಾಟಕದ ಬಗ್ಗೆ ನಿಮಗೆಷ್ಟು ಗೊತ್ತು?

  • ಕಪ್ಪು ಮಣ್ಣು & ಎತ್ತರದಲ್ಲಿರುವುದರಿಂದ ಈ ನೆಲವು ಕರ್ನಾಟಕವೆಂದು ಹೆಸರಾಯಿತು.
  • ಕರ್ನಾಟಕ ರಾಜ್ಯವು 1956 ನವೆಂಬರ್ 1ರಂದು ಉದಯವಾಯಿತು.
  • 01/11/1973ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಯಿತು.
  • ಕರ್ನಾಟಕದ ಒಟ್ಟು ವಿಸ್ತೀರ್ಣ 1,91,791 ಚದರ ಕಿಲೋ ಮೀಟರ್.
  • ಎರಡು ತಲೆಯ ಗಂಡಭೇರುಂಡ ಪಕ್ಷಿಯು ಕರ್ನಾಟಕದ ರಾಜ್ಯ ಲಾಂಛನವಾಗಿದೆ.
  • 1956 ರಿಂದ ಬೆಂಗಳೂರು ಕರ್ನಾಟಕದ ರಾಜ್ಯಧಾನಿಯಾಗಿದೆ.
  • 1956 ಕ್ಕಿಂತ ಮುಂಚೆ ಸಾಂಸ್ಕೃತಿಕ ನಗರಿ ಮೈಸೂರು ನಮ್ಮ ರಾಜ್ಯಧಾನಿಯಾಗಿತ್ತು.
  • ಕರ್ನಾಟಕವು ಪ್ರಸ್ತುತ 31 ಜಿಲ್ಲೆಗಳು ಮತ್ತು 238 ತಾಲ್ಲೂಕುಗಳನ್ನು ಹೊಂದಿದೆ.
  • 2011 ರ ಜನಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ 6,11,30,704.
  • 2011 ರ ಜನಗಣತಿಯ ಪ್ರಕಾರ ಕರ್ನಾಟಕದ ಸಾಕ್ಷರತೆಯ ಪ್ರಮಾಣ 75.36%
  • ಕರ್ನಾಟಕವು 968 ಲಿಂಗಾನುಪಾತ & 319 ಜನಸಾಂದ್ರತೆಯನ್ನು ಹೊಂದಿದೆ.
  • ವಿಸ್ತೀರ್ಣದಲ್ಲಿ 7ನೇ ಮತ್ತು ಜನಸಂಖ್ಯೆಯಲ್ಲಿ 8ನೇ ದೊಡ್ಡ ರಾಜ್ಯವಾಗಿದೆ.
  • ವಿಸ್ತೀರ್ಣದಲ್ಲಿ ಬೆಳಗಾವಿ ಅತೀ ದೊಡ್ಡ ಮತ್ತು ಬೆಂಗಳೂರು (ನ) ಚಿಕ್ಕ ಜಿಲ್ಲೆಗಳಾಗಿವೆ.
  • ಜನಸಂಖ್ಯೆಯಲ್ಲಿ ಬೆಂಗಳೂರು ಅತೀ ದೊಡ್ಡ ಮತ್ತು ಕೊಡಗು ಚಿಕ್ಕ ಜಿಲ್ಲೆಗಳಾಗಿವೆ.
  • ಕರ್ನಾಟಕದಲ್ಲಿ ಅತೀ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ ದಕ್ಷಿಣ ಕನ್ನಡ,
  • ಕರ್ನಾಟಕದಲ್ಲಿ ಅತೀ ಕಡಿಮೆ ಸಾಕ್ಷರತೆ ಹೊಂದಿರುವ ಜಿಲ್ಲೆ ಯಾದಗಿರಿ.
  • ಭಾರತದಲ್ಲೇ ಅತೀ ಹೆಚ್ಚು ಚಿನ್ನ ಉತ್ಪಾದಿಸುವ ಕರ್ನಾಟಕವು ಚಿನ್ನದ ನಾಡಾಗಿದೆ.
  • ಕರ್ನಾಟಕದ ಆಡಳಿತ ಭಾಷೆ ಕನ್ನಡವು 2008ರಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದಿದೆ.
  • ಕರ್ನಾಟಕದ 4 ವಿಭಾಗಗಳು ಬೆಳಗಾವಿ,ಬೆಂಗಳೂರು, ಮೈಸೂರು & ಕಲಬುರಗಿ,
  • ಕರ್ನಾಟಕವು ಭಾರತದ ದಕ್ಷಿಣ ಭಾಗದಲ್ಲಿ ಪಶ್ಚಿಮ ಕರಾವಳಿಗೆ ಅಂಟಿಕೊಂಟಿದೆ.
  • ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ & ಉತ್ತರ ಕನ್ನಡ ಕರಾವಳಿ ತೀರ ಹೊಂದಿವೆ.
  • ಮುಳ್ಳಯ್ಯನಗಿರಿ ಕರ್ನಾಟಕದ ಅತ್ಯಂತ ಎತ್ತರದ ಶಿಖರವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section