Breaking

Sunday, 9 January 2022

Important Achievements/Contributions Events of Governor Generals and Viceroys of British India

ಬ್ರಿಟಿಷ್ ಭಾರತದಲ್ಲಿದ್ದ ಗವರ್ನರ್ ಜನರಲ್ ಹಾಗೂ ವೈಸ್ರಾಯ್ ಅವಧಿಯ ಪ್ರಮುಖ ಸಾಧನೆಗಳು ಕೊಡುಗೆಗಳು/ಘಟನೆಗಳು
(Important Achievements/Contributions Events of Governor Generals and Viceroys of British India)

Important Achievements/Contributions Events of Governor Generals and Viceroys of British India ಬ್ರಿಟಿಷ್ ಭಾರತದಲ್ಲಿದ್ದ ಗವರ್ನರ್ ಜನರಲ್ ಹಾಗೂ ವೈಸ್ರಾಯ್ ಅವಧಿಯ ಪ್ರಮುಖ ಸಾಧನೆಗಳು ಕೊಡುಗೆಗಳು/ಘಟನೆಗಳು



1) ವಾರನ್ ಹೇಸ್ಟಿಂಗ್ಸ್ (1774 - 1785) 

  • ಮೊದಲ ಬಂಗಾಳದ ಗವರ್ನರ್ ಜನರಲ್.
  • ಈತನ ಅಧಿಕಾರಾವಧಿಯಲ್ಲಿ ರೆಗ್ಯುಲೇಟಿಂಗ್ 1773 ಕಾಯಿದೆಯನ್ನು ಪರಿಚಯಿಸಲಾಯಿತು. ಇದು ಬಂಗಾಳದಲ್ಲಿದ್ದ ದ್ವಿಮುಖ ಸರ್ಕಾರದ ಅಂತ್ಯಗೊಳಿಸಿತು,
  • ಈತನನ್ನು ಆಡಳಿತದ ಕೆಟ್ಟ ನಿರ್ವಹಣೆ ಮತ್ತು ವೈಯಕ್ತಿಕ ಭ್ರಷ್ಟಾಚಾರದ ಕಾರಣಗಳಿಂದ ವಜಾಗೊಳಿಸಲಾಯಿತು. ಆದರೆ ಅಂತಿಮವಾಗಿ ನಿರ್ದೋಷಿಯೆಂದು ತೀರ್ಮಾನಿಸಲಾಯಿತು,
  • ಕಂದಾಯ ಮಂಡಳಿ ಮತ್ತು ವ್ಯಾಪಾರ ಮಂಡಳಿಯ ರಚನೆ.
  • ಜಿಲ್ಲಾಧಿಕಾರಿ ಹುದ್ದೆ ಸೃಷ್ಟಿ.

2) ಲಾರ್ಡ್ ಕಾರ್ನ್ ವಾಲಿಸ್ (1786 -1793).

  • ಬಂಗಾಳದಲ್ಲಿ ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ (1793)
  • ಪೊಲೀಸ್ ಠಾಣೆಗಳ ಸ್ಥಾಪನೆ, ಪೊಲೀಸ್ ಸುಧಾರಣೆಗಳು ಜಾರಿಯಾದವು.
  • ಮೈಸೂರು ರಾಜ ಟಿಪ್ಪು ಸುಲ್ತಾನನನ್ನು ಸೋಲಿಸಲು ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆಗಳ ಭಾಗಿ.

Also Read: 2021 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂಪೂರ್ಣ ಮಾಹಿತಿ  

3) ಲಾರ್ಡ್ ವೆಲ್ಲೆಸ್ಲಿ (1798 - 1805)


  • ಭಾರತೀಯ ರಾಜರನ್ನು ನಿಯಂತ್ರಿಸಲು ಸಹಾಯಕ ಸೈನ್ಯ ಪದ್ಧತಿ (policy of Subsidiary Alliance) ಯನ್ನು ಪರಿಚಯಿಸಿದ.
  • ಹೈದರಾಬಾದ್ ಪ್ರಾಂತ್ಯವು ಈ ಸಹಾಯಕ ಸೈನ್ಯ ಪದ್ಧತಿಗೆ ಒಳಗಾದ ಮೊದಲ ದೇಶೀಯ ಸಂಸ್ಥಾನ.

4) ಲಾರ್ಡ್ ಮಿಂಟೋ I(1807 - 1813)


  • ಮಹಾರಾಜ ರಂಜಿತ್ ಸಿಂಗ್ ನೊಂದಿಗೆ ಅಮೃತಸರ ಒಡಂಬಡಿಕೆ,


5) ಮಾರ್ಕ್ವೆಸ್ಟ್ ಆಫ್ ಹೇಸ್ಟಿಂಗ್ (1813-1823)


  • ಉನ್ನತ ಹುದ್ದೆಗಳಿಗೆ ಭಾರತೀಯರನ್ನು ನೇಮಿಸಿದ ಮೊದಲಿಗ.
  • ಟೆನೆನ್ಸಿ ಕಾಯಿದೆ (1828)


6) ಲಾರ್ಡ್ ವಿಲಿಯಂ ಬೆಂಟಿಂಕ್ (1828 - 1835)


  • ಭಾರತದ ಮೊದಲ ಗವರ್ನರ್ ಜನರಲ್ ನಾಗಿ ನೇಮಕ. (ಈ ಮೊದಲು ಬಂಗಾಳದ ಗವರ್ನರ್ ಜನರಲ್ ಎಂಬ ಹುದ್ದೆ ಇತ್ತು).
  • ಸತಿ ಪದ್ದತಿಯ ನಿಷೇಧ.
  • ಭಾರತೀಯರನ್ನು ಮತ್ತೆ ಅಧೀನ ನ್ಯಾಯಾಧೀಶರಾಗಿ ನೇಮಕ ಜಾರಿ,
  • ಇಂಗ್ಲೀಷ್ ಉನ್ನತ ಶಿಕ್ಷಣದ ಭಾಷೆಯಾಯಿತು.
  • ಮಧ್ಯ ಭಾರತದಲ್ಲಿ ಧಗ್ಗರನ್ನು ನಿಗ್ರಹಿಸಲಾಯಿತು.
  • 1835ರಲ್ಲಿ ಕಲ್ಕತ್ತಾದಲ್ಲಿ ವೈದ್ಯಕೀಯ ಕಾಲೇಜು ಆರಂಭ.

7) ಸರ್ ಚಾರ್ಲ್ಸ್ ಮೆಟಾಕೆಫ್ (1835 - 1836)


  • ಮೊದಲ ಬಾರಿಗೆ ದೇಶೀಯ ಪತ್ರಿಕೆಗಳಿಗೆ ಸ್ವಾತಂತ್ರ್ಯ. ಎಲ್ಲಾ ನಿರ್ಬಂಧಗಳನ್ನು ರದ್ದು.
  • ಭಾರತದ ವೃತ್ತ ಪತ್ರಗಳ ನಿರ್ಬಂಧ ವಿಮೋಚಕ


8) ಲಾರ್ಡ್ ಆಕ್ಲಂಡ್ (1836 - 1842)


  • ಮೊದಲ ಅಫಘಾನ್ ಯುದ್ಧ.

Also Read: ಕರ್ನಾಟಕ ರಾಜ್ಯ ಸರ್ಕಾರ ನೀಡುವ ಪ್ರಶಸ್ತಿಗಳ ಪಟ್ಟಿ 

9) ಲಾರ್ಡ್ ಡಾಲ್ ಹೌಸಿ (1848 - 1856)


  • ಬಾಂಬೆಯಿಂದ ಥಾಣೆಯವರೆಗೆ ಮೊದಲ ಭಾರತೀಯ ರೈಲ್ವೆ ಮಾರ್ಗ ನಿರ್ಮಾಣ. (1853)
  • ಕೋಲ್ಕತ್ತಾದಿಂದ ಆಗ್ರಾದವರೆಗೆ ಟೆಲಿಗ್ರಾಫ್ ತಂತಿಯ ನಿರ್ಮಾಣ. (1853).
  • 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಪದ್ಧತಿ ಜಾರಿಗೆ, ಆ ಮೂಲಕ ಸತಾರ (1848), ಜೈಪುರ ಮತ್ತು ಸಂಬಲ್ ಪುರ್ (1849), ಉದಯ್ ಪುರ (1852), ಝಾನ್ಸಿ (1853) ಮತ್ತು ನಾಗುರ (1854) ರಾಜ್ಯಗಳನ್ನು ವಶಪಡಿಸಿಕೊಳ್ಳಲಾಯಿತು.
  • ಶಿಮ್ಲಾವನ್ನು ಬೇಸಿಗೆ ರಾಜಧಾನಿಯಾಗಿ ಮಾಡಿದ.
  • ಲೋಕೋಪಯೋಗಿ ಇಲಾಖೆ ರಚನೆ.
  • ವಿಧವಾ ಮರುವಿವಾಹ ಕಾಯಿದೆ, (1856)ಯ ಅನುಷ್ಠಾನದೊಂದಿಗೆ ವಿಧವೆಯರ ಮರು ಮದುವೆ ಕಾನೂನು ಬದ್ಧಗೊಳಿಸಲಾಯಿತು.
  • ಭಾರತೀಯ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆ ಪ್ರಾರಂಭ (1853).

10) ಲಾರ್ಡ್ ಕ್ಯಾನಿಂಗ್ (1856 - 1862)


  • 1857ರ (ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ) ಸಿಪಾಯಿ ದಂಗೆಯ ಸಮಯದಲ್ಲಿದ್ದ ಗವರ್ನರ್ ಜನರಲ್, ದಂಗೆಯ ನಂತರ ಭಾರತದ ಮೊದಲ ವೈಸ್ರಾಯ್ ನಾಗಿ ನೇಮಕ.
  • 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಪದ್ಧತಿ ರದ್ದು.
  • 1861ರಲ್ಲಿ ಭಾರತೀಯ ಕೌನ್ಸಿಲ್ ಕಾಯಿದೆ ಜಾರಿಗೆ,
  • 1854 ರ 'ವುಡ್ಸ್ ಡಿಸ್ ಪ್ಯಾಚ್' ನ ಪ್ರಕಾರ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ವಿಶ್ವವಿದ್ಯಾಲಗಳ ಆರಂಭ.
  • 1858ರ ವಿಕ್ಟೋರಿಯಾ ಮಹಾರಾಣಿಯ ಮಹಾಸನ್ನದು “ಭಾರತದ ಮ್ಯಾಗ್ನಾಕಾರ್ಟಾ” ಪ್ರಕಟ.
  • 1837ರಲ್ಲಿ ಮೆಕಾಲೆಯು ತಯಾರಿಸಿದ್ದ 'ಭಾರತೀಯ ದಂಡ ಸಂಹಿತೆಯ ಜಾರಿ.(1860)
  • ಸಿವಿಲ್ ಪ್ರೊಸೀಜರ್ ಕೋಡ್ಸ್ ಜಾರಿ (1861).

Also Read: 03 ಜನೆವರಿ : ಬಿ. ಎಂ. ಶ್ರೀಕಂಠಯ್ಯನವರ ಜನ್ಮದಿನಾಚರಣೆ

11) ಲಾರ್ಡ್ ಲಾರೆನ್ಸ್ (1864 - 1869)


  • ಎರಡನೇ ಸಿಖ್ ಯುದ್ಧದ ನಂತರ ಇತನು ಪಂಜಾಬ್ ಆಡಳಿತ ಇಲಾಖೆಯ ಸದಸ್ಯನಾದನು. ಮತ್ತು ಪಂಜಾಬಿನಲ್ಲಿ ಹಲವಾರು ಜವಾಬ್ದಾರಿಯುತ ಸುಧಾರಣೆಗಳನ್ನು ಜಾರಿಯಲ್ಲಿ ತಂದು "ಪಂಜಾಬ್ ದ ಸಂರಕ್ಷಕ" ನೆಂದು ಖ್ಯಾತನಾದನು.
  • 1865 ರಲ್ಲಿ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ಗಳಲ್ಲಿ ಹೈಕೋರ್ಟ್‌ಗಳನ್ನು ಸ್ಥಾಪಿಸಲಾಯಿತು.

12) ಲಾರ್ಡ್ ಮಾಯೊ (1869 - 1872)


  • ಭಾರತದಲ್ಲಿ ಪ್ರಥಮ ಜನಗಣತಿ (1871)
  • 1872 ರಲ್ಲಿ ಅಂಡಮಾನ್ ದ್ವೀಪಗಳ ಭೇಟಿ ಸಂದರ್ಭದಲ್ಲಿ (ಕೈದಿ ಶೇರ್ ಅಲಿಯಿಂದ) ಭಾರತದಲ್ಲಿ ಕೊಲ್ಲಲ್ಪಟ್ಟ ಏಕ ಮಾತ್ರ ವೈಸರಾಯ್.
  • ಕೃಷಿ ಇಲಾಖೆಯ ಸ್ಥಾಪನೆ.


13) ಲಾರ್ಡ್ ಲಿಟ್ಟನ್ (1876- 1880)


  • 1877 ರಲ್ಲಿ ದೆಹಲಿ ದರ್ಬಾರ್ ಆಯೋಜಿಸಿ, ರಾಣಿ ವಿಕ್ಟೋರಿಯಾಗೆ ' ಕೈಸರ್-ಇ-ಹಿಂದ್' ಬಿರುದು ಪ್ರಧಾನ.
  • ಭಾರತದ ವೃತ್ತ ಪತ್ರಗಳ ಮೇಲೆ ನಿರ್ಬಂಧ ವಿಧಿಸುವ 'ದೇಶೀಯ ಪತ್ರಿಕಾ ಕಾಯಿದೆ ಜಾರಿಗೆ (1878)
  • ಶಸ್ತ್ರಾಸ್ತ್ರ ಕಾಯಿದೆ - (1878),
  • ಸರ್.ಸಯ್ಯದ್ ಅಹ್ಮದ್ ಖಾನರಿಂದ ಅಲಿಘಡದಲ್ಲಿ ಮಹಮ್ಮದನ್ ಆಂಗ್ಲೋ ಓರಿಯಂಟಲ್ ಕಾಲೇಜು ಸ್ಥಾಪನೆ. (1877)
  • ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು 21 ರಿಂದ 19ಕ್ಕೆ ಇಳಿಸಲಾಯಿತು.

Also Read:  03 ಜನೆವರಿ : ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ

14) ಲಾರ್ಡ್ ರಿಪ್ಪನ್ (1880 - 1884)


  • ಭಾರತದ ವೃತ್ತಪತ್ರಗಳ ಮೇಲೆ ನಿರ್ಬಂಧ ವಿಧಿಸುವ 'ದೇಶೀಯ ಪತ್ರಿಕಾ ಕಾಯಿದೆ' ರದ್ದು. (1882)
  • ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು ಪುನ: 19 ರಿಂದ 21ಕ್ಕೆ ಏರಿಸಲಾಯಿತು.
  • ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಲು ಮೊದಲ ಫ್ಯಾಕ್ಟರಿ ಕಾಯಿದೆ ಅಂಗೀಕಾರ (1881)
  • 'ಭಾರತೀಯ ಸ್ಥಳೀಯ ಸರ್ಕಾರಗಳ ಪಿತಾಮಹ' - ದೇಶದಲ್ಲಿ ನಗರ ಸಭೆಗಳು, ಜಿಲ್ಲಾ ಮತ್ತು ಸ್ಥಳೀಯ ಮಂಡಳಿಗಳ ಸ್ಥಾಪನೆ. (1882)
  • ಆಲ್ಬರ್ಟ್ ಬಿಲ್ ಕಾಯಿದೆ ಜಾರಿಗೆ (1883)

15) ಲಾರ್ಡ್ ಡಫೆರಿನ್ನ (1884 - 1894)


  • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಚಿಸಲಾಯಿತು. (1885)


16) ಲಾರ್ಡ್ ಲಾನ್ಸ್ ಡೌನ್ (1888 - 1894)


  • ಭಾರತೀಯ ಕೌನ್ಸಿಲ್ ಕಾಯಿದೆ (1892)
  • ಬ್ರಿಟಿಷ್ ಭಾರತ ಮತ್ತು ಅಫ್ಘಾನಿಸ್ಥಾನ ನಡುವೆ ಗಡಿರೇಖೆ ಗುರುತಿಸಲು ಡುರಾಂಡ್ ಅಯೋಗದ ನೇಮಕ.


16) ಲಾರ್ಡ್ ಕರ್ಜನ್ (1899 - 1905)

  • ಬಂಗಾಳದ ವಿಭಜನೆ (1905)
  • ಸ್ವದೇಶಿ ಚಳವಳಿಯ ಆರಂಭ.
  • ಕೃಷಿ ಬ್ಯಾಂಕುಗಳ ಸ್ಥಾಪನೆ. ಬಂಗಾಳದ ಪೂಸಾದಲ್ಲಿ ಕೃಷಿ ಸಂಶೋಧನಾ ಸಂಸ್ಥೆ ಸ್ಥಾಪನೆ (1904)
  • ಪುರಾತನ ಸ್ಮಾರಕಗಳ ಸಂರಕ್ಷಣಾ ಕಾಯಿದೆ ಜಾರಿ, ಪುರಾತತ್ವ ಇಲಾಖೆ ರಚನೆ (1991)
  • ಸರ್. ಥಾಮಸ್ ರಾಲೆ. ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯ ಆಯೋಗ ನೇಮಕ, 'ಭಾರತೀಯ ವಿಶ್ವವಿದ್ಯಾಲಯಗಳ ಕಾಯಿದೆ ಜಾರಿ. (1904)
  • ಪೊಲೀಸ್ ಆಯೋಗ ರಚನೆ.
  • ಕ್ರಿಮಿನಲ್ ತನಿಖಾ ಇಲಾಖೆ ರಚನೆ.

Also Read: ಕರ್ನಾಟಕ ರಾಜ್ಯ ಸರ್ಕಾರ ನೀಡುವ ಪ್ರಶಸ್ತಿಗಳ ಪಟ್ಟಿ 

17) ಲಾರ್ಡ್ ಮಿಂಟೊ (1905-1910)


  • ಭಾರತೀಯ ಮಂಡಳಿ ಕಾಯಿದೆ -1909 ಅಥವಾ ಮಾರ್ಲ-ಮಿಂಟೊ ಸುಧಾರಣೆಗಳನ್ನು ಅಂಗೀಕರಿಸಿತು.
  • ಮುಸ್ಲಿಂರಿಗೆ ಪ್ರತ್ಯೇಕ ಮತಕ್ಷೇತ್ರ ಪ್ರಾತಿನಿಧ್ಯ.


18) ಲಾರ್ಡ್ ಹಾರ್ಡಿಂಗ್ (1910 - 1916)


  • ಇಂಗ್ಲೆಂಡ್ ನ ದೊರೆ Vನೇ ಜಾರ್ಜ್ನ ಪಟ್ಟಾಭಿಷೇಕ - ದೆಹಲಿ ದರ್ಬಾರ್ (1911)
  • ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು (1911).
  • ಅನ್ನಿ ಬೆಸೆಂಟ್ ರಿಂದ ಹೋಮ್ ರೂಲ್ ಚಳುವಳಿ ಆರಂಭಿಸಲಾಯಿತು. (1921).
  • ಮಹಾತ್ಮಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮನ (1915)


19) ಲಾರ್ಡ್ ಚೆಲ್ಮ್ಸ್ ಫೋರ್ಡ್ (1916 - 1921)


  • ಭಾರತ ಸರ್ಕಾರದ ಕಾಯಿದೆ -1919 (ಮೊಂಟಾಗು ಚೆಲ್ಮ್ಸ್ ಫೋರ್ಡ್ ಸುಧಾರಣೆಗಳು)
  • ರೌಲಟ್ ಕಾಯಿದೆ -1919 ಜಾರಿಗೆ.
  • ಜಲಿಯನ್ ವಾಲಾ ಬಾಗ್ ದುರಂತ. (ಏಪ್ರಿಲ್ 13, 1919)
  • ಖಿಲಾಪತ್ ಚಳುವಳಿ.
  • ಅಸಹಕಾರ ಚಳುವಳಿ,

20) ಲಾರ್ಡ್ ರೆಡಿಂಗ್ (1921 - 1926)


  • ರೌಲಟ್ ಆಕ್ಸ್ ಅನ್ನು ರದ್ದುಗೊಳಿಸಲಾಯಿತು.
  • ಸ್ವರಾಜ್ ಪಕ್ಷ ರಚಿಸಲಾಯಿತು,
  • ಚೌರಿಚೌರ ಘಟನೆ.


21) ಲಾರ್ಡ್ ಇರ್ವಿನ್ (1926 - 1931)


  • ಸೈಮನ್ ಆಯೋಗ ಭಾರತಕ್ಕೆ ಭೇಟಿ - (1928)
  • ದಂಡಿ ಸತ್ಯಾಗ್ರಹ ಪ್ರಾರಂಭಿಸಲಾಯಿತು ಭಾರತಕ್ಕೆ ಭೇಟಿ ನೀಡಿದರು.
  • ನಾಗರಿಕ ಅಸಹಕಾರ ಚಳುವಳಿಯನ್ನು 1930 ರಲ್ಲಿ ಆರಂಭಿಸಲಾಯಿತು,
  • ಗಾಂಧಿ - ಇರ್ವಿನ್ ಒಪ್ಪಂದಕ್ಕೆ ಸಹಿ
  • ಮೊದಲ ದುಂಡು ಮೇಜಿನ ಸಭೆ.


22) ಲಾರ್ಡ್ ವಿಲ್ಲಿಂಗ್ಟನ್ (1931 - 1936)


  • 1931ರಲ್ಲಿ ಎರಡನೇ ಮತ್ತು ಮೂರನೆಯ ದುಂಡು ಮೇಜಿನ ಸಭೆ
  • ಬ್ರಿಟಿಷ್ ಪ್ರಧಾನಮಂತ್ರಿ ರಾಮೈ ಮ್ಯಾಕ್ ಡೊನಾಲ್ಡ್ ರಿಂದ ಕಮ್ಯುನಲ್ ಅವಾರ್ಡ್ ಪ್ರಾರಂಭ,
  • ಪೂನಾ ಒಪ್ಪಂದದ ಸಹಿ.
  • 1935ರ ಭಾರತ ಸರಕಾರದ ಆಕ್ಸ್ ನ್ನು ಪ್ರಾಂತ್ಯಗಳಲ್ಲಿ ಜಾರಿಗೆ,


No comments:

Post a Comment

Important Notes

Random Posts

Important Notes

Popular Posts

Top-50 General Knowledge (GK) Question Answers in Kannada for All Competitive Exams-05

Top-50 General Knowledge (GK) Question Answers in  Kannada for All Competitive Exams-05 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's El...

03rd January 2025 Daily Current Affairs Quiz in Kannada for All Competitive Exams

          03rd January 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-03rd January 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

02nd January 2025 Daily Current Affairs Quiz in Kannada for All Competitive Exams

          02nd January 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-02nd January 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Top-100 General Knowledge (GK) Question Answers in Kannada for All Competitive Exams-01

Top-100 General Knowledge (GK) Question Answers in  Kannada for All Competitive Exams-01 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's E...