Type Here to Get Search Results !

03 ಜನೆವರಿ : ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ January 03: Birth Anniversary of Savitribai Phule

 03 ಜನೆವರಿ : ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ

03 ಜನೆವರಿ : ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ January 03: Birth Anniversary of Savitribai Phule



ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ


ಸಾವಿತ್ರಿಬಾಯಿ ಫುಲೆ ಅವರ ಜನನ:

> ಸಾವಿತ್ರಿಬಾಯಿ ಫುಲೆ ಅವರು ಜನವರಿ 3, 1831 ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಗಾಂವ್ ಗ್ರಾಮದಲ್ಲಿ ಜನಿಸಿದರು.


ಸಾವಿತ್ರಿಬಾಯಿ ಫುಲೆ ಪ್ರಸಿದ್ಧಿ:

> ಸಾವಿತ್ರಿಬಾಯಿ ಫುಲೆ ಅವರು ಭಾರತೀಯ ಸಾಮಾಜಿಕ ಸುಧಾರಕಿ, ಶಿಕ್ಷಣ ತಜ್ಞ ಮತ್ತು ಮಹಾರಾಷ್ಟ್ರದ ಕವಯತ್ರಿಯಾಗಿ ತಮ್ಮದೇ ಆದ ಪ್ರಸಿದ್ಧಿಪಡೆದಿದ್ದಾರೆ.

> ಸಾವಿತ್ರಿಬಾಯಿ ಫುಲೆ ಅವರು ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.

> ಇವರ ಪತಿ ಜ್ಯೋತಿರಾವ್ ಫುಲೆ ಅವರೊಂದಿಗೆ ಭಾರತದಲ್ಲಿ ಮಹಿಳೆಯರ ಹಕ್ಕುಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

> ಜ್ಯೋತಿರಾವ್ ಫುಲೆಯವರೊಂದಿಗೆ  1848 ರಲ್ಲಿ ಭೀಡೆ ವಾಡಾದಲ್ಲಿ ಪುಣೆಯಲ್ಲಿ ಮೊದಲ ಭಾರತೀಯ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು.

> ಮಹಾರಾಷ್ಟ್ರದ ಸಾಮಾಜಿಕ ಸುಧಾರಣಾ ಆಂದೋಲನದ ಪ್ರಮುಖ ವ್ಯಕ್ತಿಯೊಬ್ಬರಲ್ಲಿ ಇವರೂ ಕೂಡ ಪ್ರಮುಖರು.


ಸಾವಿತ್ರಿಬಾಯಿ ಫುಲೆ ಅವರ ವೃತ್ತಿ:

> 1848 ರಲ್ಲಿ ಪುಣೆಯಲ್ಲಿ ಭೀಡೆ ವಾಡಾದಲ್ಲಿ ಮೊದಲ ಭಾರತೀಯ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು.

> 1850 ರ ದಶಕದಲ್ಲಿ, ಸಾವಿತ್ರಿಬಾಯಿ ಮತ್ತು ಜೋತಿರಾವ್ ಫುಲೆ ಎರಡು ಶೈಕ್ಷಣಿಕ ಟ್ರಸ್ಟ್ ಗಳನ್ನು ಸ್ಥಾಪಿಸಿದರು.


ಸಾವಿತ್ರಿಬಾಯಿ ಫುಲೆ ಅವರ ಸಾಹಿತ್ಯ ಕೃಷಿ :

ಕವನ ಮತ್ತು ಇತರ ಕೃತಿಗಳು:

> 1854 ರಲ್ಲಿ ಕಾವ್ಯಾ ಫುಲೆ

> 1892 ರಲ್ಲಿ ಬವನ್ ಕಾಶಿ ಸುಬೋಧ ರತ್ನಕರ್ ಎಂಬ ಕವಿತೆಯನ್ನು ಪ್ರಕಟಿಸಿದರು.


ಪರಂಪರೆ


> 2015 ರಲ್ಲಿ, ಪುಣೆ ವಿಶ್ವವಿದ್ಯಾಲಯವನ್ನು ಇವರ ಗೌರವಾರ್ಥವಾಗಿ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಯಿತು.

> ಮಾರ್ಚ್ 10, 1998 ರಂದು ಭಾರತೀಯ ಅಂಚೆ ಇಲಾಖೆ ಫುಲೆ ಅವರ ಗೌರವಾರ್ಥವಾಗಿ ಅಂಚೆ ಚೀಟಿ ಬಿಡುಗಡೆ ಮಾಡಿತು.


ಸಾವಿತ್ರಿಬಾಯಿ ಫುಲೆ ಅವರ ನಿಧನ :

ಸಾವಿತ್ರಿಬಾಯಿ ಫುಲೆ ಅವರು 10 ಮಾರ್ಚ್ 1897 ರಂದು ಪುಣೆಯಲ್ಲಿ ನಿಧನರಾದರು.

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section