Type Here to Get Search Results !

Today Top-10 General Knowledge Question Answers with Explanation in Kannada for All Competitive Exams-03

Today Top-10 General Knowledge Question Answers with Explanation in  Kannada for All Competitive Exams-03

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಕೆಳಗಿನ ನಗರಗಳಲ್ಲಿರುವ ಯಾವುದನ್ನು 'ಭಾರತದ ಸಿಲಿಕಾನ್ ಕಣಿವೆ' ಎಂದು ಕರೆಯಲಾಗಿದೆ?
ಎ. ಬೆಂಗಳೂರು
ಬಿ. ಚೆನ್ನೈ
ಸಿ. ಹೈದರಾಬಾದ್
ಡಿ. ಮುಂಬಯಿ


ಸರಿಯಾದ ಉತ್ತರ : ಎ. ಬೆಂಗಳೂರು 

ವಿವರಣೆ : 'ಸಿಲಿಕಾನ್ ವ್ಯಾಲಿ' ಎನ್ನುವುದು ಅಮೇರಿಕದಲ್ಲಿನ ಸ್ಯಾನ್‌ಫ್ರಾನ್ಸಿಸ್ಕೋ ಸಾಫ್ಟ್‌ವೇರ್ ಕಂಪನಿಗಳ ಕಂಪ್ಯೂಟರ್‌ನ ಬಹುಮುಖ್ಯ ಭಾಗಗಳಾದ ಇಂಟಿಗ್ರೇಟೆಡ್ ಚಿಪ್‌ಗಳ ತಯಾರಿಕೆಯಲ್ಲಿ 'ಸಿಲಿಕಾನ್' ಎಂಬ ಅಲೋಹವನ್ನು ಬಳಸುತ್ತಾರೆ. ಆದ್ದರಿಂದ ಈ ಸ್ಥಳಕ್ಕೆ ಸಿಲಿಕಾನ್ ವ್ಯಾಲಿ ಎಂಬ ವಿಶೇಷ ಹೆಸರು ಬಂದಿದೆ. ಅದೇ ರೀತಿ ಕರ್ನಾಟಕದ ಬೆಂಗಳೂರನ್ನು ಭಾರತದ 'ಸಿಲಿಕಾನ್ ವ್ಯಾಲಿ', 'ಸಿಲಿಕಾನ್ ಸಿಟಿ' ಎಂದು ಕರೆಯುವರು. ಭಾರತದಲ್ಲಿ ಹೆಚ್ಚು ಸಾಫ್ಟ್‌ವೇರ್ ಕಂಪನಿಗಳು ನಮ್ಮ ಬೆಂಗಳೂರಿನಲ್ಲಿ ಸ್ಥಾಪನೆಯಾಗಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

2,  ಇವುಗಳನ್ನು ವಿಷ್ಣವ (ಈಕ್ವಿನಾಕ್ಸ್) ದಿನಗಳೆಂದು ಕರೆಯಲಾಗಿದೆ.
ಎ. ಭಾರತದಲ್ಲಿ ಹಗಲು ಮತ್ತು ರಾತ್ರಿಗಳೆರಡೂ ಸಮ ಅವಧಿಯನ್ನು ಹೊಂದಿರುವ ದಿನಗಳು
ಬಿ. ಪ್ರಪಂಚದಾದ್ಯಂತ ಹಗಲು ಮತ್ತು ರಾತ್ರಿಗಳೆರಡೂ ಸಮ ಅವಧಿಯಲ್ಲಿ ಹೊಂದಿರುವ ದಿನಗಳು
ಸಿ. ಹಗಲು ರಾತ್ರಿಗಿಂತ ಧೀರ್ಘವಾದ ಅವಧಿಯನ್ನು ಹೊಂದಿರುವ ದಿನಗಳು
ಡಿ. ರಾತ್ರಿ ಹಗಲಿಗಿಂತ ದೀರ್ಘವಾದ ಅವಧಿಯನ್ನು ಹೊಂದಿರುವ ದಿನಗಳು.


ಸರಿಯಾದ ಉತ್ತರ: ಬಿ. ಪ್ರಪಂಚದಾದ್ಯಂತ ಹಗಲು ಮತ್ತು ರಾತ್ರಿಗಳೆರಡೂ ಸಮ ಅವಧಿಯಲ್ಲಿ ಹೊಂದಿರುವ ದಿನಗಳು

ವಿವರಣೆ : ಮಾಚ್ 21 ಹಾಗೂ ಸೆಪ್ಟೆಂಬರ್ 23ರಂದು ಪ್ರಪಂಚದಾದ್ಯಂತ ಹಗಲು ಮತ್ತು ರಾತ್ರಿಗಳೆರಡೂ ಸಮವಾಗಿರುತ್ತವೆ. ಈ ದಿನದಲ್ಲಿ ಸೂರ್ಯನ ನೇರವಾದ ಕಿರಣಗಳು ಸಮಭಾಜಕ ವೃತ್ತದ ಮೇಲೆ ಬೀಳುತ್ತವೆ. ಇವುಗಳನ್ನು ಈಕ್ವಿನಾಕ್ಸ್ ಎನ್ನುವರು.

3, ಭಾರತದ ಉಪರಾಷ್ಟ್ರಪತಿಯು ಇವರುಗಳನ್ನೊಳಗೊಂಡ ನಿರ್ವಾಚಕ ಗಣ (ಎಲೆಕ್ಟ್ರರಲ್ ಕಾಲೇಜ್) ದಿಂದ ಚುನಾಯಿಸಲ್ಪಡುತ್ತಾನೆ.
ಎ. ರಾಜ್ಯಸಭೆಯ ಸದಸ್ಯರು
ಬಿ. ಲೋಕಸಭೆ ಮತ್ತು ರಾಜ್ಯಸಭೆಗಳೆರಡರ ಸದಸ್ಯರು
ಸಿ. ಲೋಕಸಭೆಯ ಸದಸ್ಯರು
ಡಿ. ರಾಜ್ಯಗಳ ವಿಧಾನಸಭೆಗಳ ಸದಸ್ಯರು.


ಸರಿಯಾದ ಉತ್ತರ : ಬಿ. ಲೋಕಸಭೆ ಮತ್ತು ರಾಜ್ಯಸಭೆಗಳೆರಡರ ಸದಸ್ಯರು

ವಿವರಣೆ : ಸಂವಿಧಾನದ ಅನುಚ್ಛೇದ 66 ಉಪರಾಷ್ಟ್ರಪತಿಯ ಆಯ್ಕೆಯ ಬಗ್ಗೆ ವಿವರಿಸುತ್ತದೆ. ಭಾರತದ ಉಪ ರಾಷ್ಟ್ರಪತಿಯು ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಸದನದ ಎಲ್ಲಾ ಸದಸ್ಯರು ಮತ ಚಲಾಯಿಸಲು ಅರ್ಹರಾಗಿರುತ್ತಾರೆ.  ಆದರೆ ರಾಷ್ಟ್ರಪತಿಯವರನ್ನು ಚುನಾಯಿಸಲು ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಸದಸ್ಯರು ಮತ್ತು ರಾಜ್ಯ ವಿಧಾನ ಸಭೆಗಳ ಚುನಾಯಿತ ಸದಸ್ಯರು ಮಾತ್ರ ಅರ್ಹರಾಗಿರುತ್ತಾರೆ.

4. "ಭಾರತೀಯ ಪ್ರಜಾಪ್ರಭುತ್ವದ ಯಶಸ್ಸಿಗೆ ಮತ್ತು ಭಾರತ ಸಂವಿಧಾನದ ಸುಗಮ ಕಾರ್ಯನಿರ್ವಹಣೆಗೆ ಸಾಮಾಜಿಕ ನ್ಯಾಯ ಅತ್ಯಗತ್ಯ" ವೆಂದು ಪ್ರತಿಪಾದಿಸಿದ ರಾಷ್ಟ್ರೀಯ ನಾಯಕರು
ಎ. ಡಾ. ರಾಜೇಂದ್ರ ಪ್ರಸಾದ್
ಬಿ. ಗಾಂಧೀಜಿ
ಸಿ. ಜವಾಹರಲಾಲ ನೆಹರು
ಡಿ. ಡಾ. ಬಿ. ಆರ್. ಅಂಬೇಡ್ಕರ್


ಸರಿಯಾದ ಉತ್ತರ : ಡಿ. ಡಾ. ಬಿ. ಆರ್. ಅಂಬೇಡ್ಕರ್

ವಿವರಣೆ : ಡಾ|| ಬಿ.ಆರ್. ಅಂಬೇಡ್ಕರ್‌ರವರು ಸಂವಿಧಾನದ ಶಿಲ್ಪಿಯೆಂದು ಖ್ಯಾತಿಯಾಗಿದ್ದಾರೆ. ಇವರು ಭಾರತದ ಪ್ರಥಮ ಕಾನೂನು ಮಂತ್ರಿ ಹಾಗೂ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು.

5. ಕರ್ನಾಟಕ ರಾಜ್ಯದ ಯೋಜನಾಮಂಡಳಿಯ ಉಪಾಧ್ಯಕ್ಷರು.
ಎ. ಡಾ. ಜಿ. ತಿಮ್ಮಯ್ಯ
ಬಿ. ಡಾ. ಡಿ. ಎಂ. ನಂಜುಂಡಪ್ಪ
ಸಿ. ಡಾ. ಅಬ್ದುಲ್ ಅಜೀಜ್
ಡಿ. ಪ್ರೊ.ಬಿ.ಕೆ. ಚಂದ್ರಶೇಖರ್


ಸರಿಯಾದ ಉತ್ತರ : ಬಿ. ಡಾ. ಡಿ. ಎಂ. ನಂಜುಂಡಪ್ಪ

ವಿವರಣೆ : ಕರ್ನಾಟಕ ರಾಜ್ಯದ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿದ್ದವರು. ಡಾ| ಡಿ.ಎಂ. ನಂಜುಂಡಪ್ಪನವರು ಇವರು ಖ್ಯಾತ ಅರ್ಥಶಾಸ್ತ್ರಜ್ಞರು ಇವರು ಸರ್ಕಾರದ ಆದೇಶದಂತೆ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಯ ಬಗ್ಗೆ ವರದಿಯನ್ನು ತಯಾರಿಸಿ 2003ರಲ್ಲಿ ಸಲ್ಲಿಸಿದರು. ಇದನ್ನೇ ಹಿಂದುಳಿದ ಪ್ರದೇಶಗಳ ಡಿ. ಎಂ. ನಂಜುಂಡಪ್ಪ ಸಮಿತಿಯ ವರದಿ ಎನ್ನುವುದು.

6. ಕರ್ನಾಟಕದಲ್ಲಿ “ನಿರ್ಮಲ ಗ್ರಾಮ” ಯೋಜನೆ ಪ್ರಾರಂಭವಾದ ವರ್ಷ.
ಎ. 1995
ಬಿ. 1996
ಸಿ. 1997
ಡಿ. 1998


ಸರಿಯಾದ ಉತ್ತರ : ಎ. 1995

ವಿವರಣೆ : ನಿರ್ಮಲ ಗ್ರಾಮ ಯೋಜನೆಯನ್ನು 1995ರಲ್ಲಿ ಪ್ರಾರಂಭಿಸಲಾಯಿತು. ಬಯಲು ಬಹಿರ್ದೆಸೆಯನ್ನು ನಿಷೇಧಿಸಿ ಶೌಚಾಲಯವನ್ನು ಕಟ್ಟಿಕೊಳ್ಳಲು ಸರ್ಕಾರವು ಅನುದಾನವನ್ನು ನೀಡುವುದಕ್ಕೆ ಸಂಬಂಧಿಸಿದ ಯೋಜನೆ ಇದಾಗಿದೆ. ಇದನ್ನು ಮೊದಲು 1995ರ ಅಕ್ಟೋಬರ್ 2 ರಂದು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದಲ್ಲಿ ಅಂದಿನ ಮುಖ್ಯ ಮಂತ್ರಿಯಾಗಿದ್ದ ಜೆ.ಎಚ್. ಪಟೇಲರು ಉದ್ಘಾಟನೆ ಮಾಡಿದರು.

7. ರಫ್ತು ಮಾರುಕಟ್ಟೆಯಲ್ಲಿ ಭಾರತದ ರಫ್ತುಗಳ ಶೇ. 63 ಭಾಗ ಇವು ಆಗಿವೆ.
ಎ. ಆಹಾರ ಧಾನ್ಯಗಳು
ಬಿ. ಎಣ್ಣೆ ಬೀಜಗಳು
ಸಿ. ಕಾಳುಗಳು (ದ್ವಿದಳ ಧಾನ್ಯಗಳು)
ಡಿ. ಹಣ್ಣು ಮತ್ತು ತರಕಾರಿಗಳು


ಸರಿಯಾದ ಉತ್ತರ : ಬಿ. ಎಣ್ಣೆ ಬೀಜಗಳು

ವಿವರಣೆ : ಭಾರತವು ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಮುಂಚೂಣಿಯಲ್ಲಿದೆ. 2013-14ನೇ ಸಾಲಿನಲ್ಲಿ ಒಟ್ಟು 26.73 ಮಿಲಿಯನ್ ಟನ್‌ಗಳಷ್ಟು ಎಣ್ಣೆ ಕಾಳುಗಳನ್ನು ಉತ್ಪಾದನೆ ಮಾಡಿದೆ.

 8. ಗದರ್ ಪಕ್ಷವೆಂಬ ಕ್ರಾಂತಿಕಾರಿ ರಾಷ್ಟ್ರೀಯ ಸಂಘಟನೆಯ ಕೇಂದ್ರ
ಎ. ಸ್ಯಾನ್ ಫ್ರಾನ್ಸಿಸ್ಕೋ
ಬಿ. ಮಾಸ್ಕೋ
ಡಿ. ಲಾಹೋರ್
ಸಿ. ಕಲ್ಕತ್ತಾ


ಸರಿಯಾದ ಉತ್ತರ : ಎ. ಸ್ಯಾನ್ ಫ್ರಾನ್ಸಿಸ್ಕೋ

ವಿವರಣೆ : 1913 ರಲ್ಲಿ ಅಮೇರಿಕಾ ಮತ್ತು ಕೆನಡಾದಲ್ಲಿ ವಾಸಿಸುತ್ತಿದ್ದ ಭಾರತೀಯ ಪಂಜಾಬಿಗಳಿಂದ ಗದರ್ ಪಕ್ಷವು ಸ್ಥಾಪಿಸಲ್ಪಟ್ಟಿತು. ಇದರ ಸ್ಥಾಪನೆಯ ಮುಖ್ಯ ಉದ್ದೇಶ ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ ಕೊಡುಸುವುದಾಗಿತ್ತು. ಈ ಪಕ್ಷದ ಪ್ರಮುಖ ಸ್ಥಾಪಕ  ಸದಸ್ಯರೆಂದರೆ ಲಾಲ ಹರ್ ದಯಾಳ್, ಸೋಹನ್ ಸಿಂಗ್ ಬಕ್ನಾ, ಕರ್ತಾರ್ ಸಿಂಗ್ ಮತ್ತು ರಾಸ್‌ಬಿಹಾರಿ ಬೋಸ್, ಪ್ರಪಂಚದ ಮೊದಲನೇ ಮಹಾ ಯುದ್ಧದ ನಂತರ ಇವರು ಭಾರತಕ್ಕೆ ಹಿಂದಿರುಗಿದ್ದರಿಂದ 1919ರಲ್ಲಿ ಈ ಪಕ್ಷವು ರದ್ದಾಯಿತು. 

9. ಭಾರತ ಮತ್ತು ಪಾಕಿಸ್ತಾನಗಳಾಗಿ ಭಾರತದ ವಿಭಜನೆ ಇದರ ಆಧಾರದ ಮೇಲೆ ಆಯಿತು
ಎ. ವೇವಲ್ ಯೋಜನೆ
ಬಿ. ಕ್ಯಾಬಿನೆಟ್ ಮಿಷನ್ ಯೋಜನೆ
ಸಿ. ಮೌಂಟ್‌ಬ್ಯಾಟನ್ ಯೋಜನೆ
ಡಿ. ರಾಡ್‌ಕ್ಲಿಫ್ ಯೋಜನೆ


ಸರಿಯಾದ ಉತ್ತರ : ಡಿ. ರಾಡ್‌ಕ್ಲಿಫ್ ಯೋಜನೆ

ವಿವರಣೆ : ಭಾರತದ ಉಪಖಂಡವನ್ನು ವಿಭಜಿಸಲು ಹಾಗೂ ಪಂಜಾಬ್ ಮತ್ತು ಬಂಗಾಳ ಪ್ರಾಂತ್ಯಗಳ ಗಡಿರೇಖೆಯನ್ನು ಗುರುತಿಸಲು ಪಂಜಾಬ್ ಮತ್ತು ಬಂಗಾಳ ಗಡಿ ಆಯೋಗಗಳೆಂಬ ಎರಡು ಗಡಿ ಆಯೋಗಗಳನ್ನು ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್‌ರು 1947ರ ಜೂನ್ 30 ರಂದು ನೇಮಿಸಿದರು. ಈ ಎರಡು ಆಯೋಗಗಳಿಗೆ ಸರ್ ಸಿರಿಲ್ ರಾಡ್‌ಕ್ಲಿಫ್ ರನ್ನು ಅಧ್ಯಕ್ಷರನ್ನಾಗಿ ನೇಮಕಮಾಡಿತು. ರಾಡ್‌ಕ್ಲಿಫ್ ನು ತನಗೆ ನಿಗದಿಗೊಳಿಸಿದ್ಧ ಕಾರ್ಯವನ್ನು 1947ರ ಆಗಸ್ಟ್ 9 ರಂದು ಬಂಗಾಳದ ವರದಿಯನ್ನು ಆಗಸ್ಟ್ 11 ರಂದು ಪಂಜಾಬ್ ವರದಿಯನ್ನು ಸಿದ್ಧಪಡಿಸಿ  ಮೌಂಟ್ ಬ್ಯಾಟನ್ ರವರ ಕೈಗೊಪ್ಪಿಸಿ ಆಗಸ್ಟ್ 15 ರಂದು ಬ್ರಿಟನ್‌ಗೆ ತೆರಳಿದ. 1947ರ ಆಗಸ್ಟ್ 17 ರಂದು ಈ ವರದಿಯನ್ನು ಪ್ರಕಟಿಸಲಾಯಿತು.

10, ವಿದ್ಯುತ್ ಬಲ್ಸ್‌ನಲ್ಲಿರುವ ಫಿಲಮೆಂಟನ್ನು ಇದರಿಂದ
ಮಾಡಲಾಗಿದೆ.
ಎ. ತಾಮ್ರ
ಬಿ. ಮೆದು ಕಬ್ಬಿಣ
ಸಿ. ಟಂಗ್‌ಸ್ಟನ್
ಡಿ. ಸತುವು


ಸರಿಯಾದ ಉತ್ತರ : ಸಿ. ಟಂಗ್‌ಸ್ಟನ್

ವಿವರಣೆ : ವಿದ್ಯುತ್ ಬಲ್ಪನ್ನು 1879ರಲ್ಲಿ ಥಾಮಸ್ ಆಲ್ವಾ ಎಡಿಸನ್ ಎಂಬ ವಿಜ್ಞಾನಿ ಕಂಡುಹಿಡಿದನು. ಇದರಲ್ಲಿ ಸಾಮಾನ್ಯವಾಗಿ ಬಳಸುವ ಅನಿಲ ನೈಟ್ರೋಜನ್ ಬಣ್ಣದ ಬಲ್ಪಗಳಲ್ಲಿ ಇದಕ್ಕೆ ಬದಲಿಯಾಗಿ ಜಡ ಅನಿಲಗಳಾದ ಆರ್ಗಾನ್, ನಿಯಾನ್‌ಗಳನ್ನು ತುಂಬಿಸಿರುತ್ತಾರೆ. ಟಂಗಸ್ಟನ್ (W) ಅಧಿಕ ವಿದ್ಯುತ್ ರೋಧಕತ್ವ ಹೊಂದಿರುವ ಲೋಹ. ಇದರ ಮೂಲಕ ವಿದ್ಯುತ್ ಸುಲಭವಾಗಿ ಹರಿಯುವುದಿಲ್ಲ. ಆಗ ಶಾಖ ಹೆಚ್ಚಾಗಿ, ಬೆಳಕು ಬಿಡುಗಡೆಯಾಗುತ್ತದೆ.

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section