Breaking

Thursday, 3 March 2022

03 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

03 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

03 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1. ಇತ್ತೀಚೆಗೆ ನಿಧನರಾದ ವಿಜ್ಞಾನಿ ಲೂಕ್ ಮಾಂಟಾಗ್ನೀರ್ ಈ ಕೆಳಗಿನ ಯಾವ ರೋಗದ ವೈರಸ್ ಪತ್ತೆ ಹಚ್ಚಿದ್ದಾರೆ?
ಎ) ಸಿಡುಬು
ಬಿ) ಕಾಲರ್
ಸಿ) ಏಡ್ಸ್
ಡಿ) ಕ್ಷಯ


ಸರಿಯಾದ ಉತ್ತರ:  ಸಿ) ಏಡ್ಸ್ 



2. ‘ವಿಶ್ವ ರೇಡಿಯೋ ದಿನ ಆಚರಣೆ’ ಮಾಡುವುದು?
ಎ) ಫೆಬ್ರುವರಿ-04
ಬಿ) ಫೆಬ್ರುವರಿ-13
ಸಿ) ಜೂನ್-14
ಡಿ) ಜನವರಿ-24

ಸರಿಯಾದ ಉತ್ತರ: ಬಿ) ಫೆಬ್ರುವರಿ-13



3. ಇತ್ತೀಚಿನ ವರದಿ ಪ್ರಕಾರ ಅಂಗಾಂಗ ದಾನಗಳ ಪಟ್ಟಿಯಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ. ಹಾಗಾದರೆ, ಮೊದಲ ಎರಡು ಸ್ಥಾನಗಳನ್ನು ಪಡೆದಿರುವ ದೇಶಗಳು ಕ್ರಮವಾಗಿ,
ಎ) ಚೀನಾ ಮತ್ತು ಅಮೆರಿಕ
ಬಿ) ಜಪಾನ್ ಮತ್ತು ಚೀನಾ
ಸಿ) ಚೀನಾ ಮತ್ತು ಅಮೆರಿಕ
ಡಿ) ಫ್ರಾನ್ಸ್ ಮತ್ತು ರಷ್ಯಾ 

ಸರಿಯಾದ ಉತ್ತರ: ಸಿ) ಚೀನಾ ಮತ್ತು ಅಮೆರಿಕ




4. ಇತ್ತೀಚೆಗೆ ನಿಧನರಾದ ಕನ್ನಡದ ಕಬೀರ ಎಂದು ಖ್ಯಾತಿ ಪಡೆದಿದ್ದ ಇಬ್ರಾಹಿಂ ಸುತಾರ ಅವರಿಗೆ ಈ ಕೆಳಗಿನ ಯಾವ ವರ್ಷ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ?
ಎ) 2014
ಬಿ) 2015
ಸಿ) 2016
ಡಿ) 2018 

ಸರಿಯಾದ ಉತ್ತರ: ಡಿ) 2018




5. 2022 ನೇ ಸಾಲಿನ ಅಂಡರ್-19 ವಿಶ್ವಕಪ್ ವಿಜೇತ ತಂಡ?
ಎ) ಭಾರತ
ಬಿ) ಇಂಗ್ಲೆಂಡ್
ಸಿ) ಪಾಕಿಸ್ತಾನ
ಡಿ) ದಕ್ಷಿಣ ಆಫ್ರಿಕಾ

ಸರಿಯಾದ ಉತ್ತರ: ಎ) ಭಾರತ 


6. ಇತ್ತೀಚೆಗೆ ನಿಧನರಾದ ಲತಾ ಮಂಗೇಶ್ಕರ್‍ರವರಿಗೆ ಈ ಕೆಳಗಿನ ಯಾವ ವರ್ಷ ಭಾರತರತ್ನ ಪ್ರಶಸ್ತಿ ನೀಡಲಾಯಿತು?
ಎ) 1989
ಬಿ) 1974
ಸಿ) 2001
ಡಿ) 2003

ಸರಿಯಾದ ಉತ್ತರ: ಸಿ) 2001



7. ಪ್ರಸ್ತುತ ಭಾರತದಲ್ಲಿರುವ ರಾಮ್ಸರ್/ತಾಣಗಳ ಸಂಖ್ಯೆ
ಎ) 45
ಬಿ) 47
ಸಿ) 46
ಡಿ) 49 

ಸರಿಯಾದ ಉತ್ತರ: ಡಿ) 49



8.  ಯಂಗ್ ಡಿಸೈನರ್ ಅವಾರ್ಡ್ ನೀಡುವ ನಿಪ್ಪಾನ್ ಪೇಂಟ್ಸ್, ಈ ಕೆಳಗಿನ ಯಾವ ದೇಶದ ಮೂಲದ್ದಾಗಿದೆ?
ಎ) ರಷ್ಯಾ
ಬಿ) ಜಪಾನ್
ಸಿ) ಚೀನಾ
ಡಿ) ಇಸ್ರೇಲ್ 

ಸರಿಯಾದ ಉತ್ತರ: ಬಿ) ಜಪಾನ್




9. ನೇತ್ರದಾನದಲ್ಲಿ ದಾನಿಯ ಕಣ್ಣಿನ ಯಾವ ಭಾಗವು ಉಪಯುಕ್ತವಾಗಿರುವುದು?
ಎ) ಐರಿಸ್
ಬಿ) ರೆಟಿನಾ
ಸಿ) ಕಾರ್ನಿಯಾ
ಡಿ) ಮಸೂರ

ಸರಿಯಾದ ಉತ್ತರ: ಸಿ) ಕಾರ್ನಿಯಾ



10. ಮಾನವನ ದೇಹದ ಉಷ್ಣತೆ ಕೆಲ್ವಿನ್ ಮಾನದಲ್ಲಿ_________.
ಎ) 280
ಬಿ) 290
ಸಿ) 300
ಡಿ) 310   

ಸರಿಯಾದ ಉತ್ತರ:  ಡಿ) 310 




No comments:

Post a Comment

Important Notes

Random Posts

Important Notes

Popular Posts