Breaking

Wednesday, 23 February 2022

23 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

23 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

23 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1. ಸಂಸತ್ತಿನ ಎರಡು ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ನಂತರವಿರಬಾರದು ಎಂಬ ನಿಬಂಧನೆ ಇರುವ ಸಂವಿಧಾನದ ವಿಧಿ ಯಾವುದು?
ಎ) ವಿಧಿ 82
ಬಿ) ವಿಧಿ 83
ಸಿ) ವಿಧಿ 84
ಡಿ) ವಿಧಿ 85 

ಸರಿಯಾದ ಉತ್ತರ:  ಡಿ) ವಿಧಿ 85 

ವಿವರಣೆ : 

ಇತ್ತೀಚೆಗೆ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನವೆಂಬರ್ 29 ರಿಂದ ಡಿಸೆಂಬರ್ 23 ರವರೆಗೆ ನಡೆಸಲು ಶಿಫಾರಸು ಮಾಡಿದೆ.

ಭಾರತೀಯ ಸಂವಿಧಾನದ 85ನೇ ವಿಧಿ ಪ್ರಕಾರ,ಸಂಸತ್ತಿನ ಎರಡು ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರವಿರಬಾರದು.

ಸಂಸತ್ತು ಯಾವಾಗ ಅಥವಾ ಎಷ್ಟು ದಿನಗಳವರೆಗೆ ಸಭೆ ಸೇರಬೇಕು ಎಂಬುದರ ಕುರಿತು ಸಂವಿಧಾನ ಸ್ಪಷ್ಟನೆ ನೀಡಿಲ್ಲ.ಅಂದರೆ,ಸಂಸತ್ತು ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ಸಭೆ ನಡೆಸುವುದು ಕಡ್ಡಾಯ.ಭಾರತದ ಸಂವಿಧಾನದ ವಿಧಿ 85 ರ ಪ್ರಕಾರ,ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ ಸಂಸತ್ತಿನ ಅಧಿವೇಶನವನ್ನು ರಾಷ್ಟ್ರಪತಿಯವರು ಕಾಲಕಾಲಕ್ಕೆ ಕರೆಯುತ್ತಾರೆ.



2. ಪ್ರಸಿದ್ಧ ಪುಸ್ತಕ "ದಾಸ್ ಕ್ಯಾಪಿಟಲ್" ಬರೆದ ಲೇಖಕರು ಯಾರು ?
ಎ) ಆಡಂ ಸ್ಮಿತ್ 
ಬಿ) ಕಾರ್ಲ್ ಮಾರ್ಕ್ಸ್
ಸಿ) ರುಸೋ 
ಡಿ) ವೊಲ್ಡ್ ರ್  

ಸರಿಯಾದ ಉತ್ತರ: ಬಿ) ಕಾರ್ಲ್ ಮಾರ್ಕ್ಸ್ 



3.  "ಬಾಹ್ಯಾಕಾಶ"ದಲ್ಲಿರುವ ಗಗನಯಾತ್ರಿ ಆಕಾಶವನ್ನು ಹೀಗೆ ಗಮನಿಸುತ್ತಾರೆ 
ಎ) ಬಿಳಿ 
ಬಿ) ಕಪ್ಪು
ಸಿ) ನೀಲಿ
ಡಿ) ಹಳದಿ 

ಸರಿಯಾದ ಉತ್ತರ: ಬಿ) ಕಪ್ಪು 




4. ಭಾರತೀಯ ರಾಜ್ಯ ಲಾಂಛನದಲ್ಲಿರುವ "ಸತ್ಯಮೇವ ಜಯತೆ" ಶಬ್ದವು ಯಾವ ಉಪನಿಷತ್ತಿನಿಂದ ಅಳವಡಿಸಿಕೊಳ್ಳಲಾಗಿದೆ?
ಎ) ಐತರೇಯ ಉಪನಿಷತ್ 
ಬಿ) ಮುಂಡಕ್ ಉಪನಿಷತ್
ಸಿ) ಆಧ್ಯಾತ್ಮ ಉಪನಿಷದ್ 
ಡಿ) ಪ್ರಸ್ತ ಉಪನಿಷತ್    

ಸರಿಯಾದ ಉತ್ತರ: ಬಿ) ಮುಂಡಕ್ ಉಪನಿಷತ್ 




5. ಡಾಕ್ಟರ್ ಎಂಎಸ್ ಸುಬ್ಬಲಕ್ಷ್ಮಿ ಅವರು ಯಾವ ಕ್ಷೇತ್ರದಲ್ಲಿ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದಾರೆ?
ಎ) ಕಥಕ್ 
ಬಿ) ಭರತನಾಟ್ಯಂ 
ಸಿ) ಪಿಟೀಲು ನುಡಿಸುವಿಕೆ 
ಡಿ) ಗಾಯನ ಸಂಗೀತ  

ಸರಿಯಾದ ಉತ್ತರ: ಡಿ) ಗಾಯನ ಸಂಗೀತ 



6. ವಿಶ್ವದ ಯಾವ ದೇಶದಲ್ಲಿ ಗರಿಷ್ಠ ಸಂಖ್ಯೆಯ ರೋಬೋಟ್ ಗಳು ಕಾರ್ಯನಿರ್ವಹಿಸುತ್ತಿವೆ?
ಎ) ದಕ್ಷಿಣ ಕೊರಿಯಾ 
ಬಿ) ಉತ್ತರ ಕೋರಿಯಾ
ಸಿ) ಯು ಎಸ್ ಎ 
ಡಿ) ಜಪಾನ್ 

ಸರಿಯಾದ ಉತ್ತರ: ಡಿ) ಜಪಾನ್ 



7. "ಕ್ಲೀನ್ ಆಫ್ ಏಷ್ಯಾ" (Queen of Asia)ಹೆಸರಿನ ಕೋರುಂಡಮ್‌ನ ದೊಡ್ಡ ಕಲ್ಲಿನ ನಿಕ್ಷೇಪ ಇತ್ತೀಚೆಗೆ ಎಲ್ಲಿ ಪತ್ತೆ ಯಾಯಿತು ?
ಎ) ಶ್ರೀಲಂಕಾ
ಬಿ) ಗ್ರೀಸ್
ಸಿ) ಇಟಲಿ
ಡಿ) ಅರ್ಜೆಂಟೈನಾ 

ಸರಿಯಾದ ಉತ್ತರ: ಎ) ಶ್ರೀಲಂಕಾ 

ಕೋರುಂಡಮ್ ಇದೊಂದು ಖನಿಜ . ಇದು ಕಲ್ಲಿನ ರೂಪದಲ್ಲಿ ಲಭ್ಯವಿರುತ್ತದೆ.ಎರಡಕ್ಕಿಂತ ಹೆಚ್ಚು ಬಣ್ಣಗಳಲ್ಲಿ ಇದನ್ನು ಕಂಡುಕೊಳ್ಳಲಾಗಿದೆ.ಇತ್ತೀಚೆಗೆ ವಿಶ್ವದಲ್ಲಿಯೇ ಅತಿ ದೊಡ್ಡದು ಎನ್ನಲಾದ "ಕ್ಲೀನ್ ಆಫ್ ಏಷ್ಯಾ"ಹೆಸರಿನ ಕೋರುಂಡಮ್ ಅನ್ನು ಶ್ರೀಲಂಕಾದ ಹೋರಾನಾದಲ್ಲಿ ಪತ್ತೆಯಾಯಿತು.ವಿಶ್ವದ ಒಟ್ಟಾರೆ ಕೋರುಂಡಮ್ ಶಿಲೆಗಳಲ್ಲಿ ಶೇಕಡಾ 90 ರಷ್ಟು ಶ್ರೀಲಂಕಾದಲ್ಲಿಯೇ ಲಭ್ಯವಿವೆ.ಶ್ರೀಲಂಕಾ ವಿಶಿಷ್ಟ ಬಗೆಯ ಈ ಶಿಲೆಗಳಿಗಾಗಿ ಹೆಸರು ಪಡೆದಿದೆ.



8.  ಭಾರತದಲ್ಲಿ ಎಷ್ಟು ರಾಜ್ಯಗಳು ಕರಾವಳಿ ಸಮುದ್ರತೀರವನ್ನು ಹಂಚಿಕೊಂಡಿದೆ
ಎ) 7 
ಬಿ) 8 
ಸಿ) 9
ಡಿ) 10  

ಸರಿಯಾದ ಉತ್ತರ: ಸಿ) 9




9. ಯಾವ ಪೊಲೀಸ್ ಸಂಘಟನೆಯ ಕಾರ್ಯ ಪ್ರದರ್ಶನದ ಸಂಕೇತವಾಗಿ ಪೊಲೀಸ್ ಸ್ಮರಣ ದಿನಾಚರಣೆಯನ್ನು ಪ್ರಾರಂಭಿಸಲಾಯಿತು? 
ಎ) ಐಟಿಬಿಪಿ 
ಬಿ) ಕರ್ನಾಟಕ ರಾಜ್ಯ ಪೊಲೀಸ್ 
ಸಿ) ಸಿಆರ್ ಪಿಎಫ್ 
ಡಿ) ಕೆಎಸ್ ಆರ್ ಪೀ   

ಸರಿಯಾದ ಉತ್ತರ: ಸಿ) ಸಿಆರ್ ಪಿಎಫ್ 



10. ಕರ್ನಾಟಕದ ರಾಜ್ಯ ಪ್ರಾಣಿ ಯಾವುದು? 
ಎ) ಭಾರತೀಯ ಆನೆ
ಬಿ) ಕರಡಿ
ಸಿ) ಜಿಂಕೆ 
ಡಿ) ಅಳಿಲು   

ಸರಿಯಾದ ಉತ್ತರ: ಎ) ಭಾರತೀಯ ಆನೆ 




No comments:

Post a Comment

Important Notes

Random Posts

Important Notes

Popular Posts