Breaking

Saturday, 29 January 2022

Satya Nadella Worlds No-01 CEO ಸತ್ಯ ನಾದೆಲ್ಲಾ ವಿಶ್ವದ ನಂ.1 ಸಿಇಒ

 ಸತ್ಯ ನಾದೆಲ್ಲಾ ವಿಶ್ವದ ನಂ.1 ಸಿಇಒ

Satya Nadella Worlds No-01 CEO  ಸತ್ಯ ನಾದೆಲ್ಲಾ ವಿಶ್ವದ ನಂ.1 ಸಿಇಒ


ಮೈಕ್ರೋಸಾಫ್ಟ್ ಸಂಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಯಶಸ್ವಿಯಾಗಿರುವ ಭಾರತೀಯ ಮೂಲದ ಸತ್ಯ ನಾದೆಲ್ಲಾ, ವಿಶ್ವದ ನಂ.1 ಸಿಇಒ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 'ದ ಬ್ಯಾಂಡ್ ಫೈನಾನ್ಸ್' ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಟಾಪ್ 10 ರಲ್ಲಿ ಮೂವರು ಭಾರತೀಯ ಮೂಲದವರು ಸ್ಥಾನ ಪಡೆದುಕೊಂಡಿದ್ದಾರೆ. ಟಾಪ್ 10 ರಲ್ಲಿ ಸ್ಥಾನ ಪಡೆದ ಗೂಗಲ್‌ನ ಸಿಇಒ ಸುಂದರ ಪಿಚೈ (5ನೇ ಸ್ಥಾನ) ಮತ್ತು ಅಡೋಬ್ ನ ಸಿಇಒ ಶಂತನು ನಾರಾಯಣ್ (6ನೇ ಸ್ಥಾನ) ಡೆಲೋಯ ಪುನೀತ್ ರಂಜನ್ 14ನೇ ಸ್ಥಾನ, ಟಾಟಾ ಸಂಸ್ಥೆಯ ಸಿಇಒ ಎನ್.ಚಂದ್ರಶೇಖರ್‌ 25ನೇ ಸ್ಥಾನ, ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿಯ ಆನಂದ್ ಮಹೀಂದ್ರಾ 41, ರಿಲಯನ್ಸ್‌ನ ಮುಖೇಶ್ ಅಂಬಾನಿ 42 ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದಿನೇಶ್ ಕುಮಾರ್ ಖಾರಾ 46ನೇ ಸ್ಥಾನ ಪಡೆದುಕೊಂಡಿದ್ದಾರೆ. 500 ಸಿಇಒಗಳ ಪಟ್ಟಿಯಲ್ಲಿ ಅಮೆರಿಕ ಅತಿಹೆಚ್ಚು 101 ಸಿಇಒಗಳನ್ನು ಹೊಂದಿದೆ. 47 ಸಿಇಒಗಳನ್ನು ಹೊಂದುವ ಮೂಲಕ ಚೀನಾ ಎರಡನೇ ಸ್ಥಾನದಲ್ಲಿದೆ.

ವಿಶ್ವದ ಟಾಪ್ 5 ರ್ಯಾಂಕ್ ಸಿಇಒಗಳು


        ಸಿಇಒ           ಕಂಪನಿ
1. ಸತ್ಯ ನಾದೆಲ್ಲಾ - ಮೈಕ್ರೋಸಾಫ್ಟ್
2. ಟಿಮ್‌ಕುಕ್ - ಆಪಲ್
3. ಜಿಯಾಂಜುನ್ ವ್ಹೀ - ಗ್ರೇಟ್ ವಾಲ್
4. ಹಾವ್ ಟಿಂಗ್ ಮಾ - ಟೆನ್ಸೆಂಟ್
5, ಸುಂದರ್ ಪಿಚೈ - ಗೂಗಲ್

ಮೈಕ್ರೋಸಾಫ್ಟ್ ಸಂಸ್ಥೆ:


ಇದೊಂದು ಅಮೆರಿಕನ್ ಬಹುರಾಷ್ಟ್ರೀಯ ತಂತ್ರಜ್ಞಾನ ನಿಗಮವಾಗಿದೆ. ಇದು ಕಂಪ್ಯೂಟರ್ ಸಾಫ್ಟ್ವೇರ್ ಗ್ರಾಹಕ ಎಲೆಕ್ಟ್ರಾನಿಕ್ಸ್ ಪರ್ಸನಲ್  ಕಂಪ್ಯೂಟರ್ & ಸಂಬಂಧಿತ ಸೇವೆಗಳನ್ನು ಉತ್ಪಾದಿಸುತ್ತದೆ.

  • ಸ್ಥಾಪನೆ  - 4 ಏಪ್ರಿಲ್ 1975
  • ಪ್ರಧಾನ ಕಚೇರಿ - ರೆಡ್ಮಂಡ್ (ಯುಎಸ್ಎ)
  • ಅಧ್ಯಕ್ಷರು ಮತ್ತು ಸಿಇಒ - ಸತ್ಯ ನಾದೆಲ್ಲಾ
  • ಸ್ಥಾಪಕರು - ಬಿಲ್‌ಗೇಟ್ & ಪಾಲ್ ಅಲೆನ್

No comments:

Post a Comment

Important Notes

Random Posts

Important Notes

Popular Posts