Breaking

Thursday, 20 January 2022

January 20: Birth Anniversary of Sawai Gandharva ಜನೆವರಿ 20: ಸವಾಯಿ ಗಂಧರ್ವ ಜನ್ಮದಿನಾಚರಣೆ

 ಜನೆವರಿ 20: ಸವಾಯಿ ಗಂಧರ್ವ ಜನ್ಮದಿನಾಚರಣೆ

January 20: Birth Anniversary of Sawai Gandharva  ಜನೆವರಿ 20: ಸವಾಯಿ ಗಂಧರ್ವ ಜನ್ಮದಿನಾಚರಣೆ

ಸವಾಯಿ ಗಂಧರ್ವ ಜನನ:

> ಸವಾಯಿ ಗಂಧರ್ವರವರು 19 ಜನವರಿ 1886ರಂದು ಧಾರವಾಡ ತಾಲೂಕಿನ ಕುಂದಗೋಳದಲ್ಲಿ ಜನಿಸಿದರು.

> ಹುಬ್ಬಳ್ಳಿಯಿಂದ ಸುಮಾರು 12 ಮೈಲಿ ದೂರದಲ್ಲಿರುವ ಕುಂದಗೋಳ 'ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು . ಅಧಿಕೃತ ಭಾಷೆ ಮರಾಠಿ, ಇಂತಹ ವಾತಾವರಣದಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ಮನೆಮಾತಾಗಿದ್ದ ಸವಾಯಿ ಗಂಧರ್ವರ ಜನನವಾಯಿತು.

> ಅವರ ಬಾಲ್ಯದ ಹೆಸರು ರಾಮಚಂದ್ರ ಗಣೇಶ ಕುಂದಗೋಳಕರ್.

ಸವಾಯಿ ಗಂಧರ್ವ ರವರ ಪ್ರಸಿದ್ಧ

> ಧಾರವಾಡ ಜಿಲ್ಲೆಯ ಪುಟ್ಟ ತಾಲ್ಲೂಕಾದ ಕುಂದಗೋಳ ತನ್ನೊಡಲಿನ ಸಂಗೀತದಿಂದಾಗಿ ದೇಶ ವಿದೇಶಗಳಲ್ಲಿಯೂ ಇಂದು ಪರಿಚಿತವಾಗಿದೆ. ಅಲ್ಲಿ ಬಂದು ಹಾಡುವುದು ಸಂಗೀತಗಾರರಿಗೆ ಖುಷಿ, ಭಕ್ತಿ, ಅಭಿಮಾನದ ಸಂಗತಿ. ಅಲ್ಲಿಗೆ ಹೋಗುವುದೆಂದರೆ ಸಂಗೀತಪ್ರಿಯರಿಗೆ ತೀರ್ಥಯಾತ್ರೆಗೆ ಹೋದ ಹಾಗೆ. ಏಕೆಂದರೆ ಅದು ಹಿಂದೂಸ್ತಾನಿ ಸಂಗೀತ ಕ್ಷೇತ್ರದ 'ಗಂಧರ್ವ' ಸವಾಯಿ ಗಂಧರ್ವರು ಜನಿಸಿದ ಊರು, ಮೇರು ಕಲಾವಿದರೆನಿಸಿದ ಪಂಡಿತ್ ಭೀಮಸೇನ ಜೋಷಿ ಹಾಗೂ ವಿದುಷಿ ಗಂಗೂಬಾಯಿ ಹಾನಗಲ್ ಅವರಿಗೆ ಸಂಗೀತದ ತಾಲೀಮು ಕೊಟ್ಟ ಊರು. 

ಸಂಗೀತದಲ್ಲಿ ದೀಕ್ಷೆ

> ಶಿಕ್ಷಣವನ್ನು ನಿಲ್ಲಿಸಿದ ನಂತರ, ಪಂ. ಗಂಧರ್ವನ ತಂದೆ ಅವನನ್ನು ಕುಂದಗೋಳದಲ್ಲಿ ಕಂಡುಕೊಂಡ ಬಲವಂತರಾವ್ ಕೊಲಟ್ಕರ್‌ ಅವರ ಮಾರ್ಗದರ್ಶನದಲ್ಲಿ ಇರಿಸಿದರು. ಕೊಲ್ಲಟ್ಕರ್‌ ಅವರಿಂದ ಪಂ. ಗಂಧರ್ವ 75 ದ್ರುಪದ ರಚನೆಗಳು, 25 ತರಾನಾ ಸಂಯೋಜನೆಗಳು, ನೂರು ಇತರ ಸಂಯೋಜನೆಗಳನ್ನು ಕಲಿತರು ಮತ್ತು ಕೆಲವು ತಾಳಗಳನ್ನು ಕರಗತ ಮಾಡಿಕೊಂಡರು.


ಉಸ್ತಾದ್ ಅಬ್ದುಲ್ ಕರೀಂ ಖಾನ್


> ಹೈಸ್ಕೂಲ್‌ಗೆ ಪ್ರತಿದಿನ ಹುಬ್ಬಳ್ಳಿಗೆ ಪ್ರಯಾಣಿಸುವಾಗ, ಪಂಡಿತ ಸವಾಯಿಯವರು ಹುಬ್ಬಳ್ಳಿಯಲ್ಲಿ ಪ್ರತಿನಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಗಂಧರ್ವ ನಾಟಕಗಳನ್ನು ನೋಡುತ್ತಾ, ಸಂಗೀತ ಕೇಳುತ್ತಾ ಕಾಲ ಕಳೆಯುತ್ತಿದ್ದರು.

> ಕಿರಾಣಾ ಘರಾಣೆಯ ಗಾಯಕ ಅಬ್ದುಲ್ ಕರೀಂ ಖಾನರು 'ಭೈರವಿ ರಾಗ'ದಲ್ಲಿ ಹಾಡಿದ 'ಜಮುನಾಕೆ ತೀರ್'ಎಂಬ ಗೀತೆ ಅವರ ಹೃದಯದಲ್ಲಿ ಅಷ್ಟೊತ್ತಿತು. ಕಿರಾಣಾ ಘರಾಣೆಯ ಆದ್ಯ ಪ್ರವರ್ತಕರಾದ ಉಸ್ತಾದ ಅಬ್ದುಲ್ ಕರೀಮ್ ಖಾನ್ ಸಾಹೇಬರು ಕುಂದಗೋಳಕ್ಕೆ ತಮ್ಮ ಶಿಷ್ಯರಾದ ನಾನಾಸಾಹೇಬ ನಾಡಿಗೇರರಲ್ಲಿ ಆಗಾಗ್ಗೆ ಬರುತ್ತಿದ್ದರು. ಬಾಲಕ ಸವಾಯಿ ಗಂಧರ್ವರ ಸಂಗೀತಾಸಕ್ತಿಯನ್ನು ಕಂಡ ಖಾನ್ ಸಾಹೇಬರು ಅವನನ್ನು ತಮ್ಮ ಜೊತೆಯಲ್ಲಿ ಮಿರಜ್ಜೆಗೆ ಕರೆದುಕೊಂಡು ಹೋದರು.

> ಗುರುಗಳಿಗೆ ಶೃತಿ ತಂಬೂರಿ ಮೀಟುತ್ತಾ ಗಂಟೆಗಟ್ಟಲೆ ಸಂಗೀತವನ್ನು ಅವಲೋಕಿಸುವ ಅವಕಾಶವನ್ನು ರಾಮಭಾವು ಸದುಪಯೋಗಗೊಳಿಸಿಕೊಂಡರು. ನಿಧಾನವಾಗಿ ಸ್ವರಬೆರೆಸುವ ತಾಲೀಮು ಆರಂಭವಾಯಿತು. ಹೀಗೆ ಶ್ರದ್ಧಾನಿಷ್ಠೆಗಳಿಂದ ಗುರುಸಾನ್ನಿಧ್ಯದಲ್ಲಿ ಸಂಗೀತವನ್ನು ತಮ್ಮದಾಗಿಸಿಕೊಂಡರು.

> ಅಬ್ದುಲ್ ಕರೀಂ ಖಾನರಿಗೆ ತಮ್ಮ ಶಿಷ್ಯರು ಚೆನ್ನಾಗಿ ಕಲಿತು ಒಳ್ಳೆಯ ಹೆಸರು ಪಡೆಯಬೇಕು ಎಂಬ ಇಚ್ಛೆಯಲ್ಲಿ ತಮ್ಮ ಶಿಷ್ಯರಿಗೆ ಎಂಟು ವರ್ಷಗಳ ಕರಾರು ವಿಧಿಸುತ್ತಿದ್ದರು. ಸವಾಯಿ ಗಂಧರ್ವರು ತಮ್ಮ ಗುರುಗಳ ಬಳಿಯಲ್ಲಿ ತಮ್ಮ ಶಿಕ್ಷಣದ ಅವಧಿಯನ್ನು ಪೂರ್ಣಗೊಳಿಸಲಿಲ್ಲ. ಹೊಟ್ಟೆಪಾಡಿಗಾಗಿ ಮರಾಠಿ ನಾಟಕ ಕಂಪನಿಯೊಂದನ್ನು ಸೇರಿಕೊಂಡರು. ಆ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಸಂಗೀತ ಹಾಗೂ ನಾಟಕರಂಗದಲ್ಲಿ ಪ್ರಸಿದ್ಧರಾದ ಬಾಲಗಂಧರ್ವರಿಗಿಂತಲೂ ಸಂಗೀತ ಹಾಗೂ ಅಭಿನಯದಲ್ಲಿ ಇವರು ಹೆಚ್ಚು ಎನ್ನುವ ಅರ್ಥದಲ್ಲಿ ರಾಮಭಾವು ಕುಂದಗೋಳಕರ ಅವರನ್ನು ಸವಾಯಿ ಗಂಧರ್ವ ಎಂದು ಕರೆಯಲಾಯಿತು.

ಸವಾಯಿ ಗಂಧರ್ವ ರ ಶಿಷ್ಯರು


> 1916-41 ರ ವರೆಗಿನ 25 ವರ್ಷಗಳ ಕಾಲುಶತಮಾನದಲ್ಲಿ ಮಹತ್ವದ ಶಿಷ್ಯ ಪರಂಪರೆ ಸೃಷ್ಟಿಯಾಯಿತು. ಇವರಲ್ಲಿ ವಿ. ಎ. ಕಾಗಲ್ ಕರ್, ನೀಲ ಕಂಠ ಬುವಾ, ಗಡಗೋಳಿ ವೆಂಕಟರಾವ್, ರಾಮದುರ್ಗ ಕೃಷ್ಣಾ ಬಾಯಿ, ಗಂಗೂಬಾಯಿ ಹಾನಗಲ್, ಫಿರೋಜ್ ದಸ್ತಾರ್, ಭೀಮಸೇನ್ ಜೋಷಿ, ಬಸವರಾಜ ರಾಜಗುರು ಕನ್ನಡಿಗರು.


ಸಂಗೀತ ಪರಿವಾರ:


> 20ನೆಯ ಶತಮಾನದಲ್ಲಿ ಅವಿಭಜಿತ ಧಾರವಾಡ ಜಿಲ್ಲೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ರತ್ನಪ್ರಾಯ ಸಂಗೀತಗಾರರಿಗೆ ಜನ್ಮ ನೀಡಿದ ಜಿಲ್ಲೆಯಾಗಿದೆ. ಇವರಲ್ಲಿ ಕೆಲವರು ಸಂಗೀತಗಾರರಂತೂ ಅಖಿಲ ಭಾರತದಲ್ಲಿ ಸುಪ್ರಸಿದ್ಧರಾದವರು:

೧. ಸವಾಯಿ ಗಂಧರ್ವ -1886-1952 (ಧಾರವಾಡ ಜಿಲ್ಲೆಯ ಕುಂದಗೋಳದವರು)

9. ಮಲ್ಲಿಕಾರ್ಜುನ ಮನಸೂರ -1901- 1992 (ಧಾರವಾಡ ಜಿಲ್ಲೆಯ ಮನ್ಸೂರ್ನವರು)

೩.ಗಂಗೂಬಾಯಿ ಹಾನಗಲ್ - 1913-2009 (ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವರು)

೪. ಬಸವರಾಜ ರಾಜಗುರು -1917-1991 (ಧಾರವಾಡ ಜಿಲ್ಲೆಯ ಎಳಿವಾಳ ಗ್ರಾಮದವರು)

೫. ಭೀಮಸೇನ ಜೋಷಿ - 1922-2011 (ಗದಗ ಜಿಲ್ಲೆಯ ರೋಣದವರು)

೬. ಕುಮಾರ ಗಂಧರ್ವ -1924-1992 (ಬೆಳಗಾವಿ ಜಿಲ್ಲೆಯ ಸುಳೇಬಾವಿಯವರು)

ಸವಾಯಿ ಗಂಧರ್ವರಿಗೆ ಸಂದ ಗೌರವಗಳು


> ಸವಾಯಿ ಗಂಧರ್ವರಿಗೆ ಹೈದರಾಬಾದ್ ಕರ್ನಾಟಕ ಮಂಡಳಿಯ ಮಾನಪತ್ರ,

> ಧರಪುರದ ಮಹಾರಾಜರ ಚಿನ್ನದ ಪದಕ,

> 1938ರಲ್ಲಿ ಹುಬ್ಬಳ್ಳಿ ಮ್ಯೂಜಿಕ್ ಸರ್ಕಲ್ ವಾರ್ಷಿಕ ಉತ್ಸವದ ಅಧ್ಯಕ್ಷ ಪದವಿ,

> 1939ರಲ್ಲಿ ಕಲ್ಕತ್ತಾ ಬೆಂಗಾಲ್ ಮ್ಯೂಸಿಕ್ ಕಾನ್ಸರೆ ವಿಶೇಷವಾಗಿ ಗೌರವಿಸಿದ ಸುವರ್ಣ ಪದಕ ಮಂತಾದ ಅನೇಕ ಗೌರವಗಳು ಸಂದವು. ದೇಶದ ವಿವಿಧ ಆಕಾಶವಾಣಿಗಳಲ್ಲಿ ಅವರ ಸಂಗೀತ ಕಾರ್ಯಕ್ರಮಗಳು ಬಿತ್ತರಗೊಂಡವು.


ಸವಾಯಿ ಗಂಧರ್ವರ ನಿಧನ:


> ಸವಾಯಿ ಗಂಧರ್ವರು 1952 ರ ಸೆಪ್ಟೆಂಬರ್ 12 ರಂದು ಈ ಲೋಕವನ್ನಗಲಿದರು.

> ಕುಂದಗೋಳದಲ್ಲಿ ಪ್ರತಿವರ್ಷ ಭಾದ್ರಪದ ಕೃಷ್ಣಪಕ್ಷದ ನವಮಿಯಂದು ಸವಾಯಿ ಗಂಧರ್ವ ಪುಣ್ಯತಿಥಿ ಸಂಗೀತೋತ್ಸವ ನಡೆಯುತ್ತಾ ಬಂದಿದೆ.

ಸವಾಯಿ ಗಂಧರ್ವ ಉತ್ಸವ


> ಸವಾಯಿ ಗಂಧರ್ವರ ಸ್ಮರಣಾರ್ಥ ಅವರ ಶಿಷ್ಯ ಭೀಮಸೇನ್ ಜೋಶಿಯವರು ಪುಣೆಯಲ್ಲಿ ವಾರ್ಷಿಕ ಸವಾಯಿ ಗಂಧರ್ವ ಸಂಗೀತೋತ್ಸವವನ್ನು ಪ್ರಾರಂಭಿಸಿದರು.

> ಉತ್ಸವವು ಮೊದಲ ಎರಡು ದಶಕಗಳವರೆಗೆ ಸಾಧಾರಣ ಪ್ರಮಾಣದಲ್ಲಿ ನಡೆಯಿತು, ಆದರೆ ಇದು 1970 ಮತ್ತು 1980 ರ ದಶಕಗಳಲ್ಲಿ ಜನಪ್ರಿಯವಾಯಿತು.


No comments:

Post a Comment

Important Notes

Random Posts

Important Notes

Popular Posts

Indian Constitution Most Important Question Answers in Kannada For All Competitive Exams

ಭಾರತದ ಸಂವಿಧಾನದ ಪ್ರಶ್ನೋತ್ತರಗಳು ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತದ ಸಂವಿಧಾನ ದ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಭಾರತೀಯ ಸಂವಿಧಾನದ ಜ್ಞಾನ ಇರಬೇಕಾದದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯ ಸಂವಿಧಾನ ದ ಹಲವಾರು ಮಹತ್ವದ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇವುಗಳು ನಿಮ್ಮ ಅಧ್ಯಯನಕ್ಕೆ ಸಹಕಾರಿಯಾಬಹುದೆಂಬುದು ನಮ್ಮ ಮಹದಾಶಯ..!! 1. ಸಂವಿಧಾನ ಎಂದರೇನು? > ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಮೂಲ ನಿಯಮಗಳ ದಾಖಲೆಗಳು 2. ಸಂವಿಧಾನ ಎಂಬ ಪದದ ಮೂಲ ಯಾವುದು? > ಕಾನ್ಸ್ಟಿಟ್ಯೂಟ್ 3. ‘ಕಾನ್ಸ್ಟಿಟ್ಯೂಟ್’ ಅರ್ಥವೇನು? > ನಿಯೋಜಿಸು, ಸಂಯೋಜಿಸು ಮತ್ತು ವಿಧಿವತ್ತಾಗಿ ಸ್ಥಾಪಿಸು ಎಂದರ್ಥ 4. ಸಂವಿಧಾನಾತ್ಮಕ ಆಡಳಿತವು ಮೊಟ್ಟ ...